2020 ಜಪಾನ್ ಒಲಿಂಪಿಕ್ಸ್‌ಗೆ ತೆರಳಲು ಚಾಲಕ ರಹಿತ ರೊಬೊಟ್ ಟ್ಯಾಕ್ಸಿ!

By Nagaraja

ಆಟೋಮೊಬೈಲ್ ಕ್ಷೇತ್ರದಲ್ಲಿ ನಿರಂತರ ಅಧ್ಯಯನ ನಡೆಯುತ್ತಲೇ ಇದೆ. ಇನ್ನು ಒಂದು ಹೆಜ್ಜೆ ಮುಂದಿಟ್ಟಿರುವ ಎಲೆಕ್ಟ್ರಾನಿಕ್ ದೈತ್ಯ ಜಪಾನ್ ಚಾಲಕ ರಹಿತ ರೊಬೊಟ್ ಟ್ಯಾಕ್ಸಿಯೊಂದನ್ನು ಅಭಿವೃದ್ಧಿಪಡಿಸಿದೆ.

ಇದರ ಪ್ರಮುಖ ಉದ್ದೇಶ 2020ನೇ ಇಸವಿಯಲ್ಲಿ ಟೊಕಿಯೋದಲ್ಲಿ ನಡೆಯಲಿರುವ ವಿಶ್ವದ ಅತಿ ದೊಡ್ಡ ಕ್ರೀಡಾಕೂಟ ಟೊಕಿಯೋ ಒಲಿಂಪಿಕ್ಸ್‌ಗೆ ತೆರಳಲು ಇಚ್ಛಿಸುವ ಪ್ರೇಕ್ಷಕರಿಗೆ ಸಾರಿಗೆ ವ್ಯವಸ್ಥೆ ಒದಗಿಸುವುದಾಗಿದೆ.

2020 ಜಪಾನ್ ಒಲಿಂಪಿಕ್ಸ್‌ಗೆ ತೆರಳಲು ಚಾಲಕ ರಹಿತ ರೊಬೊಟ್ ಟ್ಯಾಕ್ಸಿ!

ನಿಮಗೆಲ್ಲರಿಗೂ ತಿಳಿದಿರುವಂತೆಯೇ ರೊಬೊಟ್ ತಂತ್ರಗಾರಿಕೆ ಜಪಾನ್ ನಲ್ಲಿ ಅತಿ ಹೆಚ್ಚು ಮುಂದುವರಿದಿದೆ. ಅಲ್ಲದೆ ಮುಂದಿನ ವರ್ಷ ಚಾಲಕ ರಹಿತ ಸ್ವಯಂಚಾಲಿತ ರೊಬೊಟ್ ಟ್ಯಾಕ್ಸಿಗಳ ಪ್ರಾಯೋಗಿಕ ಸಂಚಾರ ಪರೀಕ್ಷೆ ನಡೆಸುವ ಇರಾದೆ ಹೊಂದಿದೆ.

2020 ಜಪಾನ್ ಒಲಿಂಪಿಕ್ಸ್‌ಗೆ ತೆರಳಲು ಚಾಲಕ ರಹಿತ ರೊಬೊಟ್ ಟ್ಯಾಕ್ಸಿ!

ಆಯೋಜಕರ ಪ್ರಕಾರ ಟೊಕಿಯೋ ಹತ್ತಿರದ ನಗರವಾಗಿರುವ ಫ್ಯೂಜಿಸಾವಾದಲ್ಲಿ ಮುಂದಿನ ವರ್ಷ 50ರಷ್ಟು ನಿವಾಸಿಗಳನ್ನು ಚಾಲಕರಹಿತ ರೊಬೊಟ್ ಟ್ಯಾಕ್ಸಿಗಳಲ್ಲಿ ಮೂರು ಕೀ.ಮೀ. ದೂರದಲ್ಲಿರುವ ನಗರದ ಪ್ರಮುಖ ರಸ್ತೆಗಳ ಮುಖಾಂತರವಾಗಿ ಸೂಪರ್ ಮಾರ್ಕೆಟ್ ವರೆಗೂ ಸಂಚರಿಸಲಿದೆ.

2020 ಜಪಾನ್ ಒಲಿಂಪಿಕ್ಸ್‌ಗೆ ತೆರಳಲು ಚಾಲಕ ರಹಿತ ರೊಬೊಟ್ ಟ್ಯಾಕ್ಸಿ!

ಸ್ವಯಂಚಾಲಿಕ ವಾಹನ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆ ಝಡ್‌ಎಂಪಿ ಹಾಗೂ ಮೊಬೈಲ್ ಇಂಟರ್ ನೆಟ್ ಡೆನಾ ಸಹಯೋಗದಲ್ಲಿ ಈ ರೊಬೊಟ್ ಟ್ಯಾಕ್ಸಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಸರ್ಚ್ ಎಂಜಿನ್ ದೈತ್ಯ ಗೂಗಲ್ ನ ಮಹತ್ತರ ಯೋಜನೆಯಾಗಿರುವ ಗೂಗಲ್ ಕಾರ್ ಸೇರಿದಂತೆ ಫೋರ್ಡ್, ಬಿಎಂಡಬ್ಲ್ಯು ಯೋಜನೆಗಳಿಗೂ ಪ್ರತಿಸ್ಪರ್ಧಿಯಾಗಲಿದೆ.

2020 ಜಪಾನ್ ಒಲಿಂಪಿಕ್ಸ್‌ಗೆ ತೆರಳಲು ಚಾಲಕ ರಹಿತ ರೊಬೊಟ್ ಟ್ಯಾಕ್ಸಿ!

ಅತ್ಯಾಧುನಿಕ ಜಿಪಿಎಸ್, ರಾಡಾರ್, ಸ್ಟೀರಿಯೋವಿಷನ್ ಕ್ಯಾಮೆರಾ ಮುಂತಾದ ತಂತ್ರಜ್ಞಾನಗಳ ನೆರವಿನಿಂದ ರೊಬೊಟ್ ಟ್ಯಾಕ್ಸಿ ಕಾರಿನ ಕನಸನ್ನು ನನಸಾಗಿಸಲಾಗುವುದು.

2020 ಜಪಾನ್ ಒಲಿಂಪಿಕ್ಸ್‌ಗೆ ತೆರಳಲು ಚಾಲಕ ರಹಿತ ರೊಬೊಟ್ ಟ್ಯಾಕ್ಸಿ!

ಹಾಗೊಂದು ವೇಳೆ ಫ್ಯೂಜಿಸಾವಾ ಪ್ರಾಯೋಗಿಕ ಸಂಚಾರ ಯೋಜನೆ ಯಶಸ್ಸು ಕಂಡಲ್ಲಿ 2020 ಟೊಕಿಯೋ ಒಲಿಂಪಿಕ್ಸ್ ನಲ್ಲೂ ಕ್ರೀಡಾ ಪ್ರೇಮಿಗಳ ಸಾರಿಗೆ ವ್ಯವಸ್ಥೆಗಾಗಿಯೂ ಇದರ ನೆರವು ಪಡೆಯಲಾಗುವುದು.

2020 ಜಪಾನ್ ಒಲಿಂಪಿಕ್ಸ್‌ಗೆ ತೆರಳಲು ಚಾಲಕ ರಹಿತ ರೊಬೊಟ್ ಟ್ಯಾಕ್ಸಿ!

ಜಪಾನ್ ನ ಈ ಮಹತ್ತರ ಯೋಜನೆಯ ಹಿಂದೆ ಮಗದೊಂದು ಕಾರಣವಿದೆ. ವಿಶ್ವದಲ್ಲಿ ಅತಿ ವೇಗದ ವಯಸ್ಸಾದ ಸಮೂಹವನ್ನು ಹೊಂದಿರುವ ಜಪಾನ್ ನಲ್ಲಿ 2013ರ ಲೆಕ್ಕಾಚಾರ ಪ್ರಕಾರ 4.25 ದಶಲಕ್ಷ ಮಂದಿ 75 ವರ್ಷ ಪ್ರಾಯ ಪರಿಧಿಯನ್ನು ದಾಟಿದ್ದಾರೆ. ಪ್ರಸ್ತುತ ಈ ಸಂಖ್ಯೆ ಐದು ದಶಲಕ್ಷವನ್ನು ಮೀರುವ ಸಾಧ್ಯತೆಯಿದೆ.

2020 ಜಪಾನ್ ಒಲಿಂಪಿಕ್ಸ್‌ಗೆ ತೆರಳಲು ಚಾಲಕ ರಹಿತ ರೊಬೊಟ್ ಟ್ಯಾಕ್ಸಿ!

ಜಪಾನ್ ನಲ್ಲಿ 2013ರಲ್ಲಿ 458 ಅಪಘಾತ ಪ್ರಕರಣಗಳು 75 ವರ್ಷ ದಾಟಿದ ಪ್ರಾಯ ವರ್ಗದವರಿಂದ ನಡೆದು ಹೋಗಿತ್ತು. ಇದು ಕಳೆದ ದಶಕಗಿಂತಲೂ ಶೇಕಡಾ 20ರಷ್ಟು ಹೆಚ್ಚಾಗಿತ್ತು. ಇದರಿಂದಾಗಿ ನಿಯಮವನ್ನು ಬಿಗುಗೊಳಿಸಿದ್ದ ಪೊಲೀಸರು, 74 ವರ್ಷವನ್ನು ಮೀರಿದ ಚಾಲಕರು ವೈದ್ಯರಿಂದ ಚಾಲನಾ ಸಮರ್ಥ ಮಾನ್ಯತಾ ಪತ್ರವನ್ನು ಪಡೆಯುವಂತೆ ಕಡ್ಡಾಯಗೊಳಿಸಿತ್ತು.

2020 ಜಪಾನ್ ಒಲಿಂಪಿಕ್ಸ್‌ಗೆ ತೆರಳಲು ಚಾಲಕ ರಹಿತ ರೊಬೊಟ್ ಟ್ಯಾಕ್ಸಿ!

ಈಗ ಈ ಎಲ್ಲ ಸಮಸ್ಯೆಗಳಿಗೂ ಪರಿಹಾರವಾಗಿ ಡ್ರೈವರ್ ಲೆಸ್ ಕಾರುಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಅಲ್ಲದೆ ಈ ಮಹತ್ತರ ಯೋಜನೆ ಉದ್ದೇಶಿತ ಅವಧಿಗಿಂತಲೂ ಬೇಗನೇ ನನಸಾಗಲಿ ಎಂದು ಹಿರಿಯ ನಾಗರಿಕರು ಆಶಿಸುತ್ತಿದ್ದಾರೆ.

Most Read Articles

Kannada
English summary
Robot Taxis to transport spectators for the 2020 Tokyo Olympics
Story first published: Friday, October 9, 2015, 12:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X