ಬುಲೆಟ್ ರೈಲು ಮೀರಿಸಿದ ಮ್ಯಾಗ್ಲೆವ್ ರೈಲು - ಗಂಟೆಗೆ 500 ಕೀ.ಮೀ. ವೇಗ

By Nagaraja

ಕೊನೆಗೂ ಜಪಾನ್ ಮ್ಯಾಗ್ಲೆವ್ ರೈಲು ಯಾನ ಯಶಸ್ವಿ ಪರೀಕ್ಷೆಯನ್ನು ಕಂಡಿದೆ. ಪ್ರತಿ ಗಂಟೆಗೆ 500 ಕೀ.ಮೀ. ವೇಗದಲ್ಲಿ ಸಂಚರಿಸಲು ಸಾಮರ್ಥ್ಯ ಇರುವ ಈ ಆಯಸ್ಕಾಂತೀಕ ತೇಲುವಿಕೆ ರೈಲ್ವೇ ಲೈನ್‌ ಜಪಾನ್‌ನ ಸಾರಿಗೆ ವ್ಯವಸ್ಥೆಯ ಮಹತ್ತರ ಯೋಜನೆಗಳಲ್ಲಿ ಒಂದಾಗಿದೆ.

ಮುಖ್ಯಾಂಶಗಳು:

  • ಗಂಟೆಗೆ 500 ಕೀ.ಮೀ. ವೇಗ
  • ಮ್ಯಾಗ್ಲೆವ್ ಚೊಚ್ಚಲ ಪಯಣಕ್ಕೆ 100 ಯಾತ್ರಿಕರು ಸಾಕ್ಷಿ,
  • ಮೊದಲ ಹಂತದಲ್ಲಿ 42.8 ಕೀ.ಮೀ.ಗಳ ಪಯಣ,
  • ಆಯಸ್ಕಾಂತೀಯ ತೇಲುವಿಕೆ ರೈಲ್ವೆ ಲೈನ್

100 ಅದೃಷ್ಟವಂತ ಯಾತ್ರಿಕರು ಜಪಾನ್‌ನ ಮೊದಲ ಮ್ಯಾಗ್ಲೆವ್ ರೈಲು ಪಯಣಕ್ಕೆ ಸಾಕ್ಷಿಯಾಗಿದ್ದರು. ಅಂತೆಯೇ 42.8 ಕೀ.ಮೀ. ದೂರದ ಯಾತ್ರೆಯಲ್ಲಿ ಮ್ಯಾಗ್ಲೆವ್ ರೈಲು ಗಂಟೆಗೆ 500 ಕೀ.ಮೀ. ವೇಗವನ್ನು (311 ಮೈಲ್) ಕ್ರಮಿಸುವಲ್ಲಿ ಯಶಸ್ವಿಯಾಗಿತ್ತು.

ಏನಿದು ಮ್ಯಾಗ್ಲೆವ್ ರೈಲು ?

ಏನಿದು ಮ್ಯಾಗ್ಲೆವ್ ರೈಲು ?

ಮ್ಯಾಗ್ಲೆವ್ ಅಥವಾ ಮ್ಯಾಗ್ನೆಟಿಕ್ ಲೀವಿಟೇಷನ್ , ವಾಹನಗಳನ್ನು, ಅದರಲ್ಲೂ ಹೆಚ್ಚಾಗಿ ಟ್ರೈನ್ ಗಳನ್ನು, ತೂಗುಹಾಕಿಕೊಂಡು, ಗತಿದೋರಿ, ಮುಂತಳ್ಳುವ ಸಾರಿಗೆ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯು ವಾಹನಗಳನ್ನು ಎತ್ತಲು ಮತ್ತು ಮುಂದಕ್ಕೆ ಚಲಾಯಿಸಲು ಬೃಹತ್ ಸಂಖ್ಯೆಯ ಆಯಸ್ಕಾಂತಗಳಿಂದ ಉಂಟಾದ ಆಯಸ್ಕಾಂತೀಯ ತೇಲುವಿಕೆ ಯನ್ನು ಬಳಸುತ್ತವೆ. ಈ ವ್ಯವಸ್ಥೆಯು ಚಕ್ರಾಧಾರಿತ ಸಮೂಹ ಸಾರಿಗೆ ವ್ಯವಸ್ಥೆಗಳಿಗಿಂತಲೂ ಹೆಚ್ಚಿನ ವೇಗ, ಕಡಿಮೆ ಸದ್ದು ಹಾಗೂ ಸುಗಮತೆಯನ್ನು ನೀಡಲು ಸಮರ್ಥವಾಗಿದೆ.

ಮಾಹಿತಿ ಕೃಪೆ: ವಿಕೀಪೀಡಿಯಾ

ಬುಲೆಟ್ ರೈಲು ಮೀರಿಸಿದ ಮ್ಯಾಗ್ಲೆವ್ ರೈಲು - ಗಂಟೆಗೆ 500 ಕೀ.ಮೀ. ವೇಗ

ಅದೃಷ್ಟ ಚೀಟಿಯಲ್ಲಿ ವಿಜೇತರಾದ 2,400ರಷ್ಟು ಪ್ರಯಾಣಿಕರಿಗೆ ಮ್ಯಾಗ್ಲೆವ್ ರೈಲು ಸಂಚಾರ ಅನುಭವಕ್ಕೆ ಆಯ್ಕೆ ಮಾಡಲಾಗಿದೆ. ಇವೆರೆಲ್ಲರೂ ಡಿಸೆಂಬರ್‌ನಲ್ಲಿ ಎಂಟು ದಿನಗಳ ಪರ್ಯಂತ ನಡೆಯಲಿರುವ ಹೈ ಸ್ಪೀಡ್ ಪಯಣದಲ್ಲಿ ಸಂಚರಿಸಲಿದ್ದಾರೆ. ಒಟ್ಟು ಮೂರು ಲಕ್ಷಕ್ಕೂ ಹೆಚ್ಚು ಮಂದಿ ಇದಕ್ಕಾಗಿ ಬೇಡಿಕೆ ಸಲ್ಲಿಸಿದ್ದರು.

ಬುಲೆಟ್ ರೈಲು ಮೀರಿಸಿದ ಮ್ಯಾಗ್ಲೆವ್ ರೈಲು - ಗಂಟೆಗೆ 500 ಕೀ.ಮೀ. ವೇಗ

ರೈಲಿನೊಳಗೆ ಪಯಣಿಸುವ ಯಾತ್ರಿಕರಿಗೆ ಚಲಿಸುವ ರೈಲಿನ ವೇಗವನ್ನು ಪತ್ತೆ ಹಚ್ಚುವ ಅವಕಾಶವನ್ನು ಒದಗಿಸಲಾಗಿದೆ. ಇದು ದೊಡ್ಡ ಸ್ಕ್ರೀನ್ ಮೇಲೆ ದಾಖಲಾಗಿತ್ತು. ಈ ಅವಿಸ್ಮರಣೀಯ ಕ್ಷಣವನ್ನು ಫೋಟೊಗಳನ್ನು ಕ್ಲಿಕ್ಕಿಸುವ ಮೂಲಕ ಯಾತ್ರಿಕರು ಹಂಚಿಕೊಂಡರು.

ಬುಲೆಟ್ ರೈಲು ಮೀರಿಸಿದ ಮ್ಯಾಗ್ಲೆವ್ ರೈಲು - ಗಂಟೆಗೆ 500 ಕೀ.ಮೀ. ವೇಗ

ಸೆಂಟ್ರಲ್ ಜಪಾನ್ ರೈಲ್ವೇ ಕಂಪನಿಯು ಯಮನಾಶಿ ಪ್ರೆಫೆಕ್ಚರ್ ಟೆಸ್ಟ್ ಟ್ರ್ಯಾಕ್‌ನಲ್ಲಿ ಪರೀಕ್ಷಾರ್ಥ ಪಯಣವನ್ನು ಹಮ್ಮಿಕೊಂಡಿತ್ತು. ಇದರಲ್ಲಿ ಸಾಮಾನ್ಯ ಚಕ್ರಗಳ ಬದಲು ಆಯಸ್ಕಾಂತೀಯ ತೇಲುವಿಕೆ ವ್ಯವಸ್ಥೆಯನ್ನು ಬಳಕೆ ಮಾಡಲಾಗಿದೆ.

ಬುಲೆಟ್ ರೈಲು ಮೀರಿಸಿದ ಮ್ಯಾಗ್ಲೆವ್ ರೈಲು - ಗಂಟೆಗೆ 500 ಕೀ.ಮೀ. ವೇಗ

ಇಲ್ಲಿ ಗಮನಾರ್ಹ ವಿಷಯವೆಂದರೆ ಮ್ಯಾಗ್ಲೆವ್ ರೈಲುಗಳು ಜಪಾನ್‌ನದ್ದೇ ಆವಿಷ್ಕಾರವಾಗಿರುವ ಬುಲೆಟ್ ರೈಲಿಗಿಂತಲೂ ಹೆಚ್ಚಿನ ವೇಗವನ್ನು ಹೊಂದಿರುತ್ತದೆ.

ಬುಲೆಟ್ ರೈಲು ಮೀರಿಸಿದ ಮ್ಯಾಗ್ಲೆವ್ ರೈಲು - ಗಂಟೆಗೆ 500 ಕೀ.ಮೀ. ವೇಗ

ನಿಮ್ಮ ಮಾಹಿತಿಗಾಗಿ ಜಪಾನ್ ಬುಲೆಟ್ ರೈಲುಗಳು ಗಂಟೆಗೆ 320 ಕೀ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಇನ್ನೊಂದೆಡೆ ಮ್ಯಾಗ್ಲೆವ್ ರೈಲಿನಲ್ಲಿರುವ 16 ಬಂಡಿಗಳಲ್ಲಾಗಿ ಒಂದೇ ಸಮಯಕ್ಕೆ 1,000 ಯಾತ್ರಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರಲಿದೆ.

ಬುಲೆಟ್ ರೈಲು ಮೀರಿಸಿದ ಮ್ಯಾಗ್ಲೆವ್ ರೈಲು - ಗಂಟೆಗೆ 500 ಕೀ.ಮೀ. ವೇಗ

2027ನೇ ಇಸವಿಯಲ್ಲಿ ಸಂಪೂರ್ಣಗೊಳ್ಳಲಿರುವ ಈ ಮಹತ್ತರ ಯೋಜನೆಯು ಟೊಕಿಯೊದ ಶಿನಗಾವ ಸ್ಟೇಷನ್‌ನಿಂದ ನಗೋಯಾ ನಗರವನ್ನು 40 ನಿಮಿಷಗಳಲ್ಲೇ ಬಂಧಿಸಲಿದೆ. ಪ್ರಸ್ತುತ ಈ ನಗರವನ್ನು ತಲುಪಲು 80 ನಿಮಿಷ ಬೇಕಾಗುತ್ತದೆ.

ಬುಲೆಟ್ ರೈಲು ಮೀರಿಸಿದ ಮ್ಯಾಗ್ಲೆವ್ ರೈಲು - ಗಂಟೆಗೆ 500 ಕೀ.ಮೀ. ವೇಗ

ಈ ಹಿಂದೆ Uenohara ಮತ್ತು Fuefuki ನಡುವಣ ಯಶಸ್ವಿ ಪ್ರಯೋಗಾರ್ಥ ಪಯಣವನ್ನು ಹಮ್ಮಿಕೊಂಡಿದ್ದ ಮ್ಯಾಗ್ಲೆವ್ ರೈಲು ಇದೇ ಮೊದಲ ಬಾರಿಗೆ ಪ್ರಯಾಣಿಕರನ್ನು ಹೊತ್ತುಕೊಂಡು ಸಾಗಿದೆ.


Most Read Articles

Kannada
English summary
The first passengers Japanese maglev train have travelled at an incredible 311 mph on a hovering bullet train in Japan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X