ಭೂಮಿ ಮೇಲೂ ಸೈ ನೀರಿನ ಅಡಿಯೂ ಸೈ- ಅಷ್ಟಿಷ್ಟಲ್ಲ ಈ ಮಾಡಿಫೈಡ್ ಜೀಪ್‌ನ ಖದರ್..!!

ಆಟೋಮೊಬೈಲ್ ಉದ್ಯಮದಲ್ಲಿ ದಿನಕ್ಕೊಂದು ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಇಂತದ್ದೇ ಒಂದು ವಿನೂತನ ಆವಿಷ್ಕಾರ ಮಾಡಲಾಗಿದ್ದು, ಆಟೋ ಮೊಬೈಲ್ ತಂತ್ರಜ್ಞರು ನೀರಿನಡಿಯಲ್ಲಿಯೂ ಚಾಲನೆ ಮಾಡಬಲ್ಲ ಜೀಪ್‌ವೊಂದನ್ನು ಸಿದ್ಧಪಡಿಸಿದ್ದಾರೆ.

Written By:

ಆಟೋ ಮೊಬೈಲ್ ಉದ್ಯಮದಲ್ಲಿ ದಿನಕ್ಕೊಂದು ವಿನೂತನ ರೀತಿಯ ಕ್ರೀಡಾ ಬಳಕೆಯ ಕಾರುಗಳು ಆವಿಷ್ಕಾರಗೊಳ್ಳುತ್ತಲೇ ಇರುತ್ತವೆ. ಆದ್ರೆ ಇದೀಗ ಆಟೋ ತಂತ್ರಜ್ಞರು ಒಂದು ಹೆಜ್ಜೆ ಮುಂದೆ ಹೋಗಿ ನೀರಿನಡಿಯೂ ಸಲೀಸಾಗಿ ಚಾಲನೆ ಮಾಡಬಲ್ಲ ಜೀಪ್‌ವೊಂದನ್ನು ಸಿದ್ಧಗೊಳಿಸಿದ್ದಾರೆ.

1997ರ ಮಾದರಿಯ ಜೀಪ್ ರ‍್ಯಾಂಗ್ಲರ್ ಕಾರನ್ನೇ ಮಾಡಿಫೈ ಮಾಡಿರುವ ಆಟೋ ಮೊಬೈಲ್ ತಂತ್ರಜ್ಞರು, ವಿನೂತನ ವೈಶಿಷ್ಟ್ಯತೆಗಳನ್ನು ನೀಡುವ ಮೂಲಕ ಅದ್ಭುತವಾದ ಜೀಪ್ ಸಿದ್ಧಗೊಳಿಸಿದ್ದಾರೆ. ಇದು ಹತ್ತಾರು ವಿಶೇಷತೆಗಳನ್ನು ಹೊಂದಿದ್ದು, ಸದ್ಯ ಆಟೋ ಮೊಬೈಲ್ ಉದ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಮಾಡಿಫೈ ಗೊಂಡಿರುವ ಜೀಪ್ ರ‍್ಯಾಂಗ್ಲರ್ ಡೀಸೆಲ್ ಕಾರನ್ನು ಸಂಪೂರ್ಣ ಬದಲಾವಣೆ ತರಲಾಗಿದ್ದು, ಜಲ ನಿರೋಧಕ ತಂತ್ರಜ್ಞಾನದೊಂದಿಗೆ ಸಿದ್ಧಗೊಳಿಸಲಾಗಿದೆ. ಹೀಗಾಗಿ ಇದು ನೀರಿನಡಿಯಲ್ಲಿ ಯಾವುದೇ ಅಡೆತಡೆ ಇಲ್ಲದೇ ಚಾಲನೆ ಮಾಡಬಹುದಾಗಿದೆ.

ಈ ಹಿಂದೆ ಹಾಲಿವುಡ್‌ನ ಜೇಮ್ಸ್ ಬಾಂಡ್ ಚಿತ್ರಗಳಲ್ಲಿ ಇಂತಹ ವಿಶೇಷ ಕಾರುಗಳ ಪರಿಕಲ್ಪನೆಗಳನ್ನು ನೋಡಲಾಗುತ್ತಿತ್ತು. ಆದ್ರೆ ಮಾಡಿಫೈ ಕಾರು ತಂತ್ರಜ್ಞರು ಅದನ್ನು ನಿಜವಾಗಿಸಿದ್ದು, ಸಾಕಷ್ಟು ಸುರಕ್ಷಾ ಕ್ರಮಗಳೊಂದಿಗೆ ಈ ಕಾರನ್ನು ಸಿದ್ಧಗೊಳಿಸಿದ್ದಾರೆ.

ನೀರಿನಲ್ಲೂ ಸಲೀಸಾಗಿ ಚಾಲನೆ ಮಾಡಬಲ್ಲ ಈ ಕಾರು ಭಾರೀ ಸಾಮರ್ಥ್ಯದ ಎಂಜಿನ್ ಹೊಂದಿದೆ. 2.5-ಲೀಟರ್ ನಾಲ್ಕು ಸಿಲಿಂಡರ್‌ನ ಎಂಜಿನ್ ವ್ಯವಸ್ಥೆ ಇದ್ದು, 150-ಪೌಂಡ್ ತಿರುಗುಬಲದಲ್ಲಿ 160-ರಷ್ಟು ಅಶ್ವಶಕ್ತಿ ಉತ್ಪಾದಿಸುವ ಶಕ್ತಿ ಹೊಂದಿದೆ.

ಇನ್ನು ನೀರಿನಡಿಯಲ್ಲಿ ಸಲೀಸಾಗಿ ಚಲಿಸುವಂತೆ ಮಾಡಿಫೈ ಕಾರನ್ನು ವಿನ್ಯಾಸಗೊಳಿಸಲಾಗಿದ್ದು, 4x4 ಚೌಕಾಕಾರದ ವಿನ್ಯಾಸ ನೀಡಲಾಗಿದೆ. ಜೊತೆಗೆ ನೀರಿನಡಿಯಿರುವ ಕೆಸರಿನಲ್ಲಿ ಸಿಕ್ಕಿಕೊಳ್ಳದಂತೆ ವಿಶೇಷ ಚಕ್ರಗಳನ್ನು ಅಳವಡಿಸಲಾಗಿದೆ.

ಆಪ್ ರೋಡಿಂಗ್‌ನಲ್ಲಿ ತನ್ನದೇ ವಿಶೇಷತೆ ಹೊಂದಿರುವ ಜೀಪ್ ರ‍್ಯಾಂಗ್ಲರ್ ಕಾರನ್ನು ಮಾಡಿಫೈ ಮಾಡಿರುವ ಆಟೋ ತಂತ್ರಜ್ಞರು, ವಿನೂತನ ಜೀಪ್‌‌ನ್ನು "tubesock" ಎಂಬ ಹೆಸರಿನೊಂದಿಗೆ ಆಟೋ ವಲಯಕ್ಕೆ ಪರಿಚಯಿಸಿದ್ದಾರೆ.

ಆಟೋ ಉದ್ಯಮದ ಕ್ರೀಡಾ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಜೀಪ್ ರ‍್ಯಾಂಗ್ಲರ್, ಬ್ರೊಂಕೋ, ಎಫ್ಜೆ, ಬ್ಲೇಜರ್ ಮತ್ತು ಸ್ಕೌಟ್ ಟ್ರಕ್‌ಗಳಿಂತಲೂ ವಿಶೇಷ ವೈಶಿಷ್ಟ್ಯತೆಗಳನ್ನು ಹೊಂದಿರುವ ಈ ಜೀಪ್, ಯಾವುದೇ ರೀತಿಯಲ್ಲೂ ಅಕ್ರಣಕಾರಿಯಾಗಿ ಮುನ್ನುಗ್ಗುವ ಶಕ್ತಿ ಹೊಂದಿದೆ.

ನೀರಿನಡಿ ಜೀಪ್ ಚಾಲನೆ ಸಂದರ್ಭದಲ್ಲಿ ಚಾಲಕನಿಗೆ ಯಾವುದೇ ತೊಂದರೆಯಾಗದಂತೆ ಸಾಕಷ್ಟು ವಿಶೇಷ ಸುರಕ್ಷಾ ಕ್ರಮಗಳನ್ನು ಅಳವಡಿಸಲಾಗಿದೆ. ಹೀಗಾಗಿ ಚಾಲಕನಿಗೆ ಕೃತಕ ಉಸಿರಾಟದ ಸಿಲಿಂಡರ್ ಒದಗಿಸಲು ಜೀಪ್ ಒಳಭಾಗದಲ್ಲಿ ವಿಶೇಷ ವಿನ್ಯಾಸ ಮಾಡಲಾಗಿದೆ.

ಈ ಜೀಪ್‌ನ ಇನ್ನೊಂದು ವಿಶೇಷತೆಯನ್ನು ನೀವು ತಿಳಿದುಕೊಳ್ಳಲೇಬೇಕು. ಒಂದು ವೇಳೆ ನೀರಿನಲ್ಲಿ ಕಾರು ಕಾರ್ಯನಿರ್ವಹಣೆ ನಿಂತು ಹೋದ್ರೆ ಯಾವುದೇ ರೀತಿಯಲ್ಲೂ ಗಾಬರಿಯಾಗಬೇಕಿಲ್ಲ. ಇದಕ್ಕೂ ಇಲ್ಲೊಂದು ವಿನೂತನ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ನೀರಿನಡಿ ಸಿಕ್ಕಿಕೊಂಡಾಗ ನೀವು ಕಾರನ್ನು ದೋಣಿಯಂತೆ ಉಪಯೋಗಿಸಬಹುದು. ನೀರನಡಿ ಕಾರು ಕೈ ಕೊಟ್ಟರೆ ಅದು ಕೆಲವೇ ಸೆಕೇಂಡುಗಳಲ್ಲಿ ನೀರಿನ ಮೇಲ್ಭಾಗಕ್ಕೆ ತೇಲಿಕೊಂಡು ಬರಲಿದ್ದು, ಇದಕ್ಕಾಗಿ ವಿಶೇಷ ತಂತ್ರಜ್ಞಾನಗಳು ಇರಿಸಲಾಗಿದೆ.

ಹೊಸ ವಿನ್ಯಾಸದ ಜೀಪ್ ಕಾರ್ಯಕ್ಷಮತೆ ಬಗ್ಗೆ ಪ್ರಾಯೋಗಿಕ ವೀಡಿಯೋ ಕೂಡಾ ಇದ್ದು, ಅದರ ಕಾರ್ಯನಿರ್ವಹಣಾ ಶಕ್ತಿ ನೀವು ಕೂಡಾ ನೋಡಬಹುದು.

ವಿನೂತನ ಜೀಪ್ ಆವಿಷ್ಕಾರದ ಕುರಿತು ಈಗಾಗಲೇ ಭಾರೀ ಚರ್ಚೆಗಳು ನಡೆಯುತ್ತಿದ್ದು, ಇದು ಸಬ್‌ಮೆರಿನ್‌ನಲ್ಲಿ ಬಳಕೆಯಾಗುತ್ತಾ ಎಂಬ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ. ಆದರೂ ಇದು ಸಂಪೂರ್ಣವಾಗಿ ಆಪ್‌ರೋಡಿಂಗ್‌ ಬಳಕೆಗಾಗಿ ಸಿದ್ಧಗೊಂಡಿದ್ದು, ಮುಂಬರುವ ದಿನಗಳಲ್ಲಿ ಯಾವ ರೀತಿಯಲ್ಲಿ ಬಳಕೆಯಾಗುತ್ತೋ ಗೊತ್ತಿಲ್ಲಾ.

ಜೀಪ್ ಕಂಪನಿಯ ಗ್ರ್ಯಾಂಡ್ ಚರೋಕಿ ಕಾರಿನ ಚಿತ್ರಗಳಿಗಾಗಿ ಕೆಳಗಿನ ಫೋಟೋ ಗ್ಯಾಲರಿಯನ್ನು ಕ್ಲಿಕ್ ಮಾಡಿ.

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳು ನಿಮಗಾಗಿ

Click to compare, buy, and renew Car Insurance online

Buy InsuranceBuy Now

Story first published: Monday, March 27, 2017, 14:42 [IST]
English summary
A Cummins-diesel powered Jeep Wrangler is pretty cool and modified for under water driving.
Please Wait while comments are loading...

Latest Photos

LIKE US ON FACEBOOK