ಜೆಸ್ಸಿಕಾ ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ

By Nagaraja

ಆಕೆ ಜೆಸ್ಸಿಕಾ ಕಾಕ್ಸ್ (Jessica Cox).ಹುಟ್ಟೂರು ಅಮೆರಿಕಾದ ಅರಿಝೋನಾದ ಟಸ್ಕನ್ ಎಂಬಲ್ಲಿ. ಹುಟ್ಟಿನಿಂದಲೇ ಆಕೆ ಅಂಗವೈಕಲ್ಯವಾಗಿದ್ದು, ಎರಡು ಕೈಗಳನ್ನು ಕಳೆದುಕೊಂಡಿದ್ದರು. ಆದರೆ ಸಾಧನೆಗೆ ಅಂಗವೈಕಲ್ಯ ಎಂದೂ ಅಡ್ಡಿಯಾಗದು ಎಂಬುದನ್ನು ಈ 32ರ ಹರೆಯದ ಯುವತಿ ತೋರಿಸಿಕೊಟ್ಟಿದ್ದಾರೆ.

ನಮ್ಮಲ್ಲಿ ಹಲವರು ಇನ್ನೂ ವಿಮಾನವನ್ನು ಏರಿರಲಾರದು. ಹಾಗಿರುವಾಗ ಜೆಸ್ಸಿಕಾ ತನ್ನ ಕಾಲಿನಲ್ಲೇ ಇಂತಹದೊಂದು ಸಾಧನೆಯನ್ನು ಮಾಡಿರುತ್ತಾರೆ ಅಂದರೆ ನಂಬಬಹುದೇ? ಜೆಸ್ಸಿಕಾಗಳ ಈ ಆಸಕ್ತಿದಾಯಕ ಲೇಖನ ಓದಲು ಹಾಗೂ ಇದಕ್ಕೆ ಸಂಬಂಧಿಸಿದ ರೋಚಕ ಚಿತ್ರಗಳನ್ನು ವೀಕ್ಷಿಸಲು ಮುಂದುವರಿಯರಿ.

ಜೆಸ್ಸಿಕಾ ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ

ಹುಟ್ಟುವಾಗಲೇ ತನ್ನ ಎರಡು ಹಸ್ತಗಳನ್ನು ಕಳೆದುಕೊಂಡಿರುವ ಜೆಸ್ಸಿಕಾ ತನ್ನ ಕಾಲಿನಿಂದಲೇ ವಿಮಾನ ಹಾಗೂ ಕಾರನ್ನು ಚಲಾಯಿಸುತ್ತಾರೆ. ಅಲ್ಲದೆ ವಿಮಾನ ಪರವಾನಗಿ ಪಡೆದ ವಿಶ್ವದ ಮೊತ್ತ ಮೊದಲ ಕೈಗಳಿಲ್ಲದ ಪೈಲಟ್ (world's first licensed armless pilot) ಎಂಬ ಗಿನ್ನೆಸ್ ದಾಖಲೆಗೂ ಪಾತ್ರವಾಗಿದ್ದಾರೆ.

ಜೆಸ್ಸಿಕಾ ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ

ಅಷ್ಟೇ ಯಾಕೆ ಈಕೆ ಎಟಿಎ ( American Taekwondo Association) ದಿಂದ ಬ್ಲ್ಯಾಕ್ ಬೆಲ್ಟ್ ಗಿಟ್ಟಿಸಿಕೊಂಡ ಮೊದಲ ಮಹಿಳೆ ಎಂಬ ಗೌರವಕ್ಕೂ ಪಾತ್ರವಾಗಿದ್ದಾರೆ. ಇನ್ನು ಹೆಚ್ಚು ಯಾಕೆ ಹೇಳಬೇಕು ಈಗಾಗಲೇ ಎಟಿಎದಿಂದ ಎರಡು ಬಾರಿ ಬ್ಲ್ಯಾಕ್ ಬೆಲ್ಟ್ ತಮ್ಮದಾಗಿಸಿಕೊಂಡಿದ್ದಾರೆ.

ಜೆಸ್ಸಿಕಾ ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ

ಮೂರು ವರ್ಷಗಳ ನಿರಂತರ ಅಭ್ಯಾಸದ ಬಳಿಕ 2008 ಅಕ್ಟೋಬರ್ 10ರಂದು ಜೆಸ್ಸಿಕಾ ವಿಮಾನ ಪರವಾನಗಿ ಗಿಟ್ಟಿಸಿಕೊಂಡಿದ್ದರು. ಅಲ್ಲದೆ 10,000 ಅಡಿ ಎತ್ತರದಲ್ಲಿ ಲೈಟ್ ಸ್ಪೋರ್ಟ್ ವಿಮಾನಗಳನ್ನು ಬಹಳ ಸರಾಗವಾಗಿ ಓಡಿಸಿ ಬರುತ್ತಾರೆ.

ಜೆಸ್ಸಿಕಾ ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ

ತಮ್ಮ ದೈನಂದಿನ ಚಟುವಟಿಕೆಗಾಗಿ ಕಾಲನ್ನೇ ಆಶ್ರಯಿಸಿಕೊಂಡಿರುವ ಜೆಸ್ಸಿಕಾ, ಯಾವುದೇ ಬದಲಾವಣೆಯಿಲ್ಲದೆ ಸಾಮಾನ್ಯ ಜನರಂತೆ ಕಾರನ್ನು ಓಡಿಸಲು ಶಕ್ತವಾಗಿದ್ದಾರೆ.

ಜೆಸ್ಸಿಕಾ ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ

ಜೆಸ್ಸಿಕಾ ಬಗ್ಗೆ ಹೇಳೋಕೆ ಇನ್ನು ತುಂಬಾ ವಿಚಾರಗಳಿವೆ. ಆಕೆ ಕಂಪ್ಯೂಟರ್ ಕೀಬೋರ್ಡ್ ನಲ್ಲಿ ನಿಮಿಷಕ್ಕೆ 25 ಅಕ್ಷರಗಳನ್ನು ಟೈಪ್ ಮಾಡಬಲ್ಲಳು. ತನ್ನ ಕಣ್ಣಿನ ಲೆನ್ಸ್ ಗಳನ್ನು ತಾನೇ ಬದಲಾಯಿಸಬಲ್ಲಳು. ಇವೆಲ್ಲದಕ್ಕೂ ಮಿಗಿಲಾಗಿ ಸ್ಕೂಬಾ ಡೈವಿಂಗ್ ಗಾಗಿ (SCUBA diver) ಮಾನ್ಯತೆಯನ್ನು ಪಡೆದಿದ್ದಾರೆ. ಸ್ಕೂಬಾ ಡೈವರ್ ಎಂಬುದು ನೀರಿನಡಿಯ ಡೈವಿಂಗ್ ಅಭ್ಯಾಸವಾಗಿದೆ.

ಜೆಸ್ಸಿಕಾ ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ

ಅರಿಝೋನಾ ವಿಶ್ವ ವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಪದವಿ ಸ್ವೀಕರಿಸಿರುವ ಜೆಸ್ಸಿಕಾ ಸ್ಪೂರ್ತಿದಾಯಕ ಭಾಷಣಗಾರರಾಗಿ ತಮ್ಮ ವೃತ್ತಿಯನ್ನು ತೊಡಗಿಸಿಕೊಂಡಿದ್ದಾರೆ. ಅಲ್ಲದೆ ತಮ್ಮ ಸಂದೇಶವನ್ನು 20 ರಾಷ್ಟ್ರಗಳಿಗೆ ತೆರಳಿ ಹಂಚಿಕೊಂಡಿದ್ದಾರೆ.

ಜೆಸ್ಸಿಕಾ ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ

2012ರಲ್ಲಿ ಅತ್ಯಂತ ಸ್ಪೂರ್ತಿದಾಯಕ ಮಹಿಳೆ ಎಂಬ ಪ್ರಶಸ್ತಿಗೂ ಪಾತ್ರವಾಗಿರುವ ಜೆಸ್ಸಿಕಾ ಇತರರಂತೆ ಸಾಮಾನ್ಯ ಜೀವನ ನಡೆಸುತ್ತಾರೆ. ಆದರೆ ಪ್ರತಿಯೊಂದಕ್ಕೂ ತಮ್ಮ ಕಾಲುಗಳನ್ನೇ ಆಶ್ರಯಿಸಿಕೊಂಡಿದ್ದಾರೆ. ಭೋಜನ ಸ್ವೀಕರಿಸುವುದರಿಂದ ಹಿಡಿದು, ಪಿಯಾನೊ ಬಾರಿಸಲು, ಕಂಪ್ಯೂಟರ್ ಬ್ರೌಸ್ ಮಾಡಲು ಕೀ ಬೋರ್ಡ್ ಟೈಪಿಂಗ್ ಮಾಡಲು, ಮೇಕಪ್ ಮಾಡಲು, ಕೂದಲು ಬಾಚಲು, ಲಿಫ್ಟಿಕ್ ಹಚ್ಚಲು ಹಾಗೂ ಕಾರುಗಳನ್ನು ಓಡಿಸಲು ಹೀಗೆ ದೈನಂದಿನ ಎಲ್ಲ ಕೆಲಸ ಕಾರ್ಯಗಳಿಗೂ ತಮ್ಮ ಕಾಲುಗಳನ್ನೇ ಆಶ್ರಯಿಸಿಕೊಂಡಿದ್ದಾರೆ.

ಜೆಸ್ಸಿಕಾ ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ

ತಮ್ಮದೇ ಆದ ಜೆಸ್ಸಿಕಾ ಕಾಕ್ಸ್ ಮೋಟಿವೇಷನಲ್ ಸರ್ವಿಸಸ್ ಹುಟ್ಟು ಹಾಕಿರುವ ಈಕೆ ವಿದೇಶಗಳಿಗೆ ತೆರಳಿ ಸ್ಪೂರ್ತಿದಾಯಕ ಭಾಷಣಗಳನ್ನು ಮಾಡುವುದನ್ನು ಹವ್ಯಾಸ ಮಾಡಿಕೊಂಡಿದ್ದಾರೆ. ಇದು ಇತರ ಅಂಗವಿಕಲರಿಗೂ ಸ್ಪೂರ್ತಿದಾಯಕವೆನಿಸಿದೆ.

ಜೆಸ್ಸಿಕಾ ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ

ಆರಂಭದಲ್ಲಿ ಜನ್ಮನಾ ಕೈಗಳಿಲ್ಲದ ಜೆಸ್ಸಿಕಾ ಸಾಧಾರಣ ಜೀವನ ನಡೆಸಲು ಸಾಧ್ಯವೇ ಎಂಬುದು ಹೆತ್ತವರಿಗೆ ಅನುಮಾನವುಂಟಾಗಿತ್ತು. ಆದರೆ ಈಗ ಓರ್ವ ಸಾಮಾನ್ಯ ಜನರು ಕನಸಿನಲ್ಲೂ ಯೋಚಿಸಲಾಗದಂತಹ ಸಾಧನೆಯನ್ನು ಮಾಡಿ ತೋರಿಸಿರುವುದು ಹೆತ್ತವರಲ್ಲೂ ಹೆಮ್ಮೆ ತಂದಿದೆ.

ಜೆಸ್ಸಿಕಾ ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ

ತಾನು ಯಾವತ್ತೂ ತನ್ನ ಹುಟ್ಟಿನ ಬಗ್ಗೆ ಬೇಸರಪಟ್ಟುಕೊಂಡವಳಲ್ಲ ಎಂದು ಜೆಸ್ಸಿಕಾ ಅಭಿಮಾನದಿಂದಲೇ ನುಡಿಯುತ್ತಾಳೆ. ಚಿಕ್ಕವನಿಂದಲೇ ನೃತ್ಯ ಕಲೆಯನ್ನು ಕರಗತ ಮಾಡಿಕೊಂಡಿರುವ ಈಕೆ ನೃತ್ಯ ಮಾಡಿದಾಗಲೆಲ್ಲ ವೇದಿಕೆಯ ಮುಂಭಾಗದಲ್ಲಿ ಚಪ್ಪಾಳೆಯ ಸುರಿಮಳೆಯಾಗುತ್ತಿತ್ತು.

ಜೆಸ್ಸಿಕಾ ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ

ಒಟ್ಟಿನಲ್ಲಿ ತಮ್ಮೆಲ್ಲ ತೊಡಕುಗಳನ್ನು ಕಾಲಿನಿಂದಲೇ ಭೇದಿಸಿರುವ ಜೆಸ್ಸಿಕಾ ಅವರಿಗೆ ಲೈಕ್ ಗಳೆಷ್ಟು ? ಈ ಲೇಖನ ನಿಮಗೂ ಇಷ್ಟವಾದ್ದಲ್ಲಿ ನಿಮ್ಮ ಸ್ನೇಹಿತರ ಜೊತೆಗೂ ಹಂಚಿಕೊಳ್ಳಲು ಮರೆಯದಿರಿ.

ರೋಚಕ ವೀಡಿಯೋ ವೀಕ್ಷಿಸಿ - ಈಕೆ ಬರಿಗಾಲಲ್ಲೇ ಕಾರು ಓಡಿಸ್ತಾರೆ, ವಿಮಾನ ಹಾರಿಸ್ತಾರೆ!

Most Read Articles

Kannada
English summary
Born without arms, Jessica Cox flies planes and drives cars with her feet and is the first person sans arms to be an ATA black belt. She is a motivational speaker.
Story first published: Thursday, May 28, 2015, 10:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X