ಕ್ಯಾಶ್‌ಲೆಸ್‌ ವ್ಯವಹಾರಕ್ಕೂ ಮುನ್ನ ಎಚ್ಚರ..!! ಟೋಲ್ ಬೂತ್‌ನಲ್ಲಿ 4 ಲಕ್ಷ ಕಳೆದುಕೊಂಡ ಮೈಸೂರಿನ ವೈದ್ಯ..!!

Written By:

ಈಗ ಎಲ್ಲಿಗೆ ಹೋದ್ರು ಪ್ರತಿಯೊಂದಕ್ಕೂ ಕಾರ್ಡ್ ಮೂಲಕ ಬಿಲ್ ಪಾವತಿಸಿ ಎನ್ನುವ ನಾಮಫಲಕಗಳನ್ನು ನಾವು ದಿನನಿತ್ಯ ಶಾಪ್‌ಗಳು, ಪೆಟ್ರೋಲ್ ಬಂಕ್‌ಗಳ ಮುಂದೆ ನೋಡುವುದು ಕಾಮನ್. ಆದ್ರೆ ಕಾರ್ಡ್ ಬಳಕೆಗೂ ಮುನ್ನ ಈ ಸುದ್ದಿ ಓದಿದರೇ ಎಂತರಿಗೂ ಶಾಕ್ ಆಗದೇ ಇರಲಾರದು.

ನಿನ್ನೆ ತಡರಾತ್ರಿಯಷ್ಟೇ ಮೈಸೂರು ಮೂಲದ ವೈದ್ಯರೊಬ್ಬರು ತಮ್ಮ ಕಾರಿನಲ್ಲಿ ಕೊಚ್ಟಿನ್ ಟು ಮುಂಬೈ ಹೆದ್ದಾರಿಯಲ್ಲಿ ಪ್ರಯಾಣ ಮಾಡ್ತಾ ಇದ್ದರು. ಹೆದ್ದಾರಿಯಲ್ಲಿ ಪ್ರಯಾಣ ಅಂದರೆ ಶುಲ್ಕು ಪಾವತಿ ಮಾಡುವುದು ಸಾಮಾನ್ಯ ಅಲ್ಲವೇ, ಹೀಗಾಗಿ ಎಂದಿನಂತೆ ಅವರು ಕೂಡಾ ಟೋಲ್ ಬೂತ್‌ನಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಶುಲ್ಕ ಪಾವತಿ ಮಾಡಿದ್ದಾರೆ. ಆದ್ರೆ ನಿಮಿಷಾರ್ಧದಲ್ಲೇ ಅವರಿಗೆ ಒಂದು ಶಾಕ್ ಕಾದಿತ್ತು.

ಮುಂಬೈನಿಂದ ಬಂದಿದ್ದ ಮೈಸೂರು ವೈದ್ಯ ಡಾ. ರಾವ್ ಉಡುಪಿ ಬಳಿ ಇರುವ ಗುಂಡಮಿ ಟೋಲ್‌ನಲ್ಲಿ 40 ರೂ. ಪಾವತಿಸಲು ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದ್ದಾರೆ. ಆದ್ರೆ 40 ರೂಪಾಯಿ ಬದಲು ಅವರ ಖಾತೆಯಿಂದ ಪಾವತಿ ಎಷ್ಟು ಗೊತ್ತಾ? ಬರೋಬ್ಬರಿ 4 ಲಕ್ಷ ರೂಪಾಯಿ..!!

ಅವರ ಖಾತೆಯಿಂದ ಹಣ ಪಾವತಿಯಾಗುತ್ತಿದ್ದಂತೆ ವೈದ್ಯನ ಮೊಬೈಲ್‌ಗೆ ನೆಟ್ ಬ್ಯಾಕಿಂಗ್ ಸಂದೇಶ ಬಂದಿದೆ. ಮೊಬೈಲ್‌ನಲ್ಲಿರುವ ಸಂದೇಶ ನೋಡಿದ ವೈದ್ಯನಿಗೆ ಒಂದು ನಿಮಿಷ ಏನ್ ಮಾತನಾಡಬೇಕೇಂದು ತಿಳಿಯದೇ ಗಾಬರಿಯಾಗಿದ್ದಾರೆ.

40 ರೂಪಾಯಿ ಬದಲಿಗೆ 4 ಲಕ್ಷ ಪಾವತಿಯಾಗಿದ್ದನ್ನು ನೋಡಿದ ಮೈಸೂರು ವೈದ್ಯ, ತಕ್ಷಣವೇ ಕಾರಿನಿಂದ ಇಳಿದು ಬಂದಿದ್ದಾರೆ. 4 ಲಕ್ಷ ರೂಪಾಯಿ ಕಟ್ ಆಗಿದ್ದರ ಕುರಿತು ಟೋಲ್ ಸಿಬ್ಬಂದಿ ಬಳಿ ಮಾತಿನ ಚಕಮಕಿ ನಡೆಸಿದಾಗ 40 ರೂಪಾಯಿ ಬದಲು 4 ಲಕ್ಷ ಪಾವತಿಯಾಗಿದ್ದರ ಬಗ್ಗೆ ಸಿಬ್ಬಂದಿ ತಪ್ಪೊಪ್ಪಿಕೊಂಡಿದ್ದಾನೆ.

ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಮೈಸೂರು ಮೂಲದ ಡಾ.ರಾವ್, ಆಗಿರುವ ಘಟನೆ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾರೆ. ದೂರು ಹಿನ್ನೆಲೆ ಟೋಲ್ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಆದ ತಪ್ಪಿನ ಬಗ್ಗೆ ಕ್ಷಮೆ ಕೋರಿದ್ದು, ಚೆಕ್ ರೂಪದಲ್ಲಿ ಹಣ ವಾಪಸ್ ಮಾಡುವುದಾಗಿ ಪೊಲೀಸರಿಗೆ ಮನವಿ ಮಾಡಿದ್ದಾನೆ.

ಆದ್ರೆ ಟೋಲ್ ಸಿಬ್ಬಂದಿ ಮಾತು ಕೇಳದ ಡಾ. ರಾವ್, ತನಗೆ ಹಣ ರೂಪದಲ್ಲೇ 4 ಲಕ್ಷ ವಾಪಸ್ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದ ಟೋಲ್ ಸಿಬ್ಬಂದಿ, ಕಾರ್ಡ್ ಮೂಲಕ ಕಟ್ ಆಗಿದ್ದ ಹೆಚ್ಚುವರಿ ಮೊತ್ತವನ್ನು ಹಣ ರೂಪದಲ್ಲೇ ವಾಪಸ್ ಮಾಡಿದ್ದಾನೆ.

ಸದ್ಯ ರೂ. 3,99,960 ಹಣ ಪಡೆದಿರುವ ಡಾ.ರಾವ್ ಆದ ಘಟನೆ ಕುರಿತು ಗಾಬರಿಯಾಗಿದ್ದು ಸುಳ್ಳಲ್ಲ. ಮೊದಮೊದಲು ಹೆಚ್ಚುವರಿ ಹಣ ಕಟ್ ಆಗಿದ್ದರ ಬಗ್ಗೆ ನಿರಾಕರಿಸಿದ್ದ ಟೋಲ್ ಸಿಬ್ಬಂದಿ, ಸೂಕ್ತ ದಾಖಲೆ ತೊರಿಸಿದ ನಂತರವಷ್ಟೇ ತಪ್ಪೊಪ್ಪಿಕೊಂಡಿದ್ದ. 

ಪೊಲೀಸರ ಮಧ್ಯಪ್ರವೇಶದಿಂದ ಡಾ. ರಾವ್ ಅವರಿಗೆ 4 ಲಕ್ಷ ರೂಪಾಯಿ ವಾಪಸ್ ಏನೋ ಬಂತು. ಆದ್ರೆ ಇದೇ ಅನುಭವ ಒಬ್ಬ ಮಹಿಳೆಗೆ ಆಗಿದ್ದರೆ ಆ ರಾತ್ರಿ ವೇಳೆ ಪೊಲೀಸ್ ಠಾಣೆಗೆ ಹೋಗಿ ಬೂತ್ ಸಿಬ್ಬಂದಿಯಿಂದ ಹಣ ಪಡೆಯಲು ಸಾಧ್ಯವೇ ಎಂಬ ಅನುಮಾನ ಸೃಷ್ಠಿಯಾಗುತ್ತೆ.

ಇದಷ್ಟೇ ಅಲ್ಲಾ ಈ ಘಟನೆಯಿಂದಾಗಿ ನಮ್ಮಲ್ಲೇ ಹತ್ತಾರು ಪ್ರಶ್ನೆಗಳು ಶುರುವಾಗುತ್ತವೆ. ಕ್ಯಾಶ್‌ಲೆಸ್ ವ್ಯವಹಾರ ಎಷ್ಟು ಸೇಫ್ ಅಂತಾ. ಜೊತೆಗೆ ಟೋಲ್‌ಗಳಲ್ಲಿ ಹಗಲು ದರೋಡೆ ನಡೆಯುತ್ತಿರುವ ಬಗ್ಗೆಯೂ ಗುಮಾನಿ ಶುರುವಾಗುತ್ತಿದೆ. ಆದ್ರೆ ಅದೇನೇ ಇರಲಿ ನೀವು ಕೂಡಾ ಕ್ಯಾಶ್‌ಲೆಸ್ ವ್ಯವಹಾರಕ್ಕೂ ಇಂತವರ ಬಗ್ಗೆ ಎಚ್ಚದಿಂದ ಇರುವುದು ಒಳಿತು.

ಹೊಚ್ಚ ಹೊಸ ಮಾರುತಿ ಇಗ್ನಿಸ್ ಕಾರಿನ ಫೋಟೋಗಳನ್ನು ವೀಕ್ಷಿಸಲು ಈ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Story first published: Tuesday, March 14, 2017, 16:58 [IST]
English summary
Dr. Rao also received an SMS for the transaction from his bank which said Rs 4 lakh had been debited from his account.
Please Wait while comments are loading...

Latest Photos