Just In
- 1 hr ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 2 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 4 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 5 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
Don't Miss!
- News ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣ: ಸಿದ್ದರಾಮಯ್ಯ ಸರ್ಕಾರವೇ ನೇರ ಹೊಣೆ ಎಂದ ಬಿಜೆಪಿ ಶಾಸಕ
- Lifestyle ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Movies Puttakkana Makkalu:ಸ್ನೇಹಾ ಕೈ ಸೇರಿಯೇ ಬಿಡ್ತು ವಿಚ್ಛೇದನದ ಪೇಪರ್; ಮುಂದೇನು?
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿಮ್ ಜಂಗ್ ತುಘಲಕ್ ದರ್ಬಾರ್- ಹೊಸ ಕಾಯ್ದೆಯಿಂದ ವಾಹನ ಸವಾರರಿಗೆ ಪೀಕಲಾಟ
ಸರ್ವಾಧಿಕಾರಿ ಧೋರಣೆ ಹಾಗೂ ಉದ್ಧಟತನದ ನಿರ್ಧಾರ ಕೈಗೊಳ್ಳುವಲ್ಲಿ ಕುಖ್ಯಾತಿ ಪಡೆದಿರುವ ಕಿಮ್ ಜಂಗ್ ಇದೀಗ ಹೊಸ ರೂಲ್ಸ್ ಜಾರಿ ತಂದಿದ್ದು, ವಾಹನ ಸವಾರರು ಸುಸ್ತಾಗಿ ಹೋಗಿದ್ದಾರೆ.
ಈ ಹಿಂದೆ ದೇಶ ವಿರೋಧಿ ಚಟುವಟಿಕೆ ಹಿನ್ನೆಲೆ ಮಿಲಿಟರಿ ಮುಖ್ಯಸ್ಥನನ್ನೇ ಗಲ್ಲಿಗೇರಿಸಿ ಭಾರೀ ಸುದ್ಧಿಯಾಗಿದ್ದು ಕಿಮ್ ಜಂಗ್, ಇದೀಗ ಹೊಸ ಕಾಯ್ದೆ ಜಾರಿ ಮಾಡುವ ಮತ್ತೊಮ್ಮೆ ತನ್ನ ಸರ್ವಾಧಿಕಾರವನ್ನು ಪ್ರದರ್ಶಿಸಿದ್ದಾನೆ.
ಸರ್ವಾಧಿಕಾರಿ ಧೋರಣೆಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿರುವ ಉತ್ತರ ಕೋರಿಯಾದ ಅಧ್ಯಕ್ಷ ಕಿಮ್ ಜಂಗ್ ಮತ್ತೊಂದು ಕಠಿಣ ಕಾಯ್ದೆ ಜಾರಿ ಮಾಡಿದ್ದಾರೆ.
ಏನದು ಹೊಸ ಕಾಯ್ದೆ?
ಕಿಮ್ ಜಂಗ್ ಉನ್ ಹೊರಡಿಸಿರುವ ಹೊಸ ಕಾಯ್ದೆ ಪ್ರಕಾರ ಪ್ರಮುಖ ರಸ್ತೆಗಳಲ್ಲಿ ನಿಲ್ಲಿಸಲಾಗಿರುವ ಕಿಮ್ ಜಂಗ್ ಹಿರಿಯರ ಪ್ರತಿಮೆಗಳ ಬಳಿ ವಾಹನ ಸವಾರರು ನಿಧಾನವಾಗಿ ವಾಹನ ಚಾಲನೆ ಮಾಡಬೇಕಂತೆ.
ಹೊಸ ಕಾಯ್ದೆ ಯಾಕೆ?
ಇಷ್ಟು ದಿನಗಳ ಕಾಲ ಕೋರಿಯಾ ನಿರ್ಮಾತೃ ಕಿಮ್ ಸಂಗ್ ಹಾಗೂ ಕಿಮ್ ಜಂಗ್ ಪುತ್ಥಳಿಗಳ ಬಳಿ ವಾಹನ ಸವಾರರು ವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದರು. ಇದನ್ನು ತಡೆಯಲು ಹೊಸ ಕಾಯ್ದೆ ಜಾರಿ ಮಾಡಲಾಗಿದೆ.
ತಪ್ಪಿದ್ರೆ ಜೈಲು ವಾಸ ಗ್ಯಾರಂಟಿ
ಹೊಸ ಕಾಯ್ದೆ ಜಾರಿ ಮಾಡಿರುವ ಕಿಮ್ ಜಂಗ್, ಪುತ್ಥಳಿಗಳ ಬಳಿ ವಾಹನಗಳನ್ನು ನಿಧಾನವಾಗಿ ಚಾಲನೆ ಮಾಡದೇ ಇದ್ದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಲಿದ್ದಿರಿ ಎಂದು ಎಚ್ಚರಿಕೆ ನೀಡಿದ್ದಾನೆ.
ಈಗಾಗಲೇ ಕೆಲವು ಕಠಿಣ ಕಾಯ್ದೆಗಳನ್ನು ಜಾರಿಗೆ ತಂದಿರುವ ಕಿಮ್ ಜಂಗ್, ತನ್ನ ಹಿರಿಯರಿಗೆ ದೇಶದ ಪ್ರತಿಯೊಬ್ಬ ಪ್ರಜೆಯು ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾನೆ.
ಇನ್ನು ಹೊಸ ಕಾಯ್ದೆ ಪ್ರಕಾರ ವಾಹನ ಸವಾರರು ಕಿಮ್ ಸಂಗ್ ಪುತ್ಥಳಿಗಳ ಬಳಿ ಪ್ರತಿ ಗಂಟೆಗೆ 5 ಕಿಮಿ ವೇಗದಲ್ಲಿ ವಾಹನ ಚಲಾವಣೆ ಮಾಡಬೇಕಿದೆ.
ಆದ್ರೆ ಕಿಮ್ ಜಂಗ್ ಆದೇಶವನ್ನು ದೇವರ ಕೊಟ್ಟ ವರ ಎಂಬುವಂತೆ ಸ್ವಿಕರಿಸಿರುವ ಅಲ್ಲಿನ ಜನ, ಕಿಮ್ ಜಂಗ್ ಸರ್ವಾಧಿಕಾರಕ್ಕೆ ತಲೆಭಾಗಿದ್ದಾರೆ.
ಹೊಸ ಕಾಯ್ದೆ ಜಾರಿಯಾದ ಬೆನ್ನಲ್ಲೆ ಇದಕ್ಕಾಗಿಯೇ ಪ್ರತ್ಯೇಕವಾಗಿ ಪೊಲೀಸ್ ವಿಂಗ್ ರಚನೆ ಮಾಡಲಾಗಿದ್ದು, ವಾಹನ ಸವಾರರ ಮೇಲೆ ಹದ್ದಿನ ಕಣ್ಣು ಇಡಲಾಗುತ್ತಿದೆ.
ಕೇವಲ ಸ್ಥಳೀಯರು ಅಷ್ಟೇ ಅಲ್ಲದೇ ಪ್ರವಾಸಿಗರಿಗೂ ಈ ಹೊಸ ರೂಲ್ಸ್ ಅನ್ವಯವಾಗುತ್ತೆ. ಒಂದು ತಪ್ಪಿದ್ರೆ ಪ್ರವಾಸಿಗರಿಗೂ ಭಾರೀ ಪ್ರಮಾಣದ ದಂಡ ತಪ್ಪಿದ್ದಲ್ಲ.
ಹೀಗೆ ವಿಚಿತ್ರ ಆಜ್ಞೆಗಳನ್ನು ಹೊರಡಿಸುವ ಈ ಮೂಲಕ ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗುವ ಕಿಮ್ ಜಂಗ್, ದೇಶದಲ್ಲಿ ಬಡತನವಿದ್ದರು ಇಂತಹ ಕಾಯ್ದೆಗಳಿಗೆ ಯಾವುದೇ ಬರವಿಲ್ಲ.
ದೇಶದಲ್ಲಿ ಬಡತನ ತಾಂಡವವಾಡುತ್ತಿದ್ದರೂ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸಿದ್ದ ಕಿಮ್ ಜಂಗ್, ಇಡೀ ವಿಶ್ವವೇ ತನ್ನತ್ತ ಆತಂಕದಿಂದ ನೋಡುವಂತೆ ಮಾಡಿದ್ದ.
ಗುಪ್ತವಾಗಿ ಭೂಗರ್ಭದಲ್ಲಿ ಜಲಜನಕ ಬಾಂಬ್ ಪರೀಕ್ಷೆ ನಡೆಸಿದ್ದ ಉತ್ತರ ಕೋರಿಯಾ,ಪರಮಾಣು ರಾಷ್ಟ್ರಗಳ ಸಾಲಿನಲ್ಲಿ ನಾವು ಕೂಡಾ ಮುಂಚೂಣಿಯಲ್ಲಿದ್ದೇವೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿತ್ತು.
ಪರಮಾಣು ಬಾಂಬ್ ಗಿಂತಲೂ ಹೈಡ್ರೋಜನ್ ಬಾಂಬ್ ಸಿಕ್ಕಾಪಟ್ಟೆ ಡೇಂಜರ್. ಹೀಗಾಗಿ ಒಂದಿಡೀ ನಗರವನ್ನೇ ಕ್ಷಣಾರ್ಧದಲ್ಲಿ ಆಪೋಶನ ಪಡೆಯುವ ಸಾಮರ್ಥ್ಯ ಜಲಜನಕ ಬಾಂಬ್'ಗೆ ಇದೆ.
ಹಾಗ್ರೆ ನೋಡಿದರೆ ಪರಮಾಣು ಬಾಂಬ್'ಗೆ ಹೋಲಿಸಿದರೆ ಹೈಡ್ರೋ ಬಾಂಬ್ ತುಂಬಾ ಅತ್ಯಾಧುನಿಕ ಹಾಗೂ ತಯಾರಿಕೆಯೂ ಬಲು ಕಷ್ಟ. ಆದ್ರೆ ಉತ್ತರ ಕೋರಿಯಾದಲ್ಲಿ ಕಿಮ್ ಜಂಗ್ ಮಾಡಿದ್ದೆ ಆಟ.
ಉತ್ತರ ಕೊರಿಯಾದ ಈ ನಡೆಯನ್ನು ನೆರೆಯ ವೈರಿ ರಾಷ್ಟ್ರ ದಕ್ಷಿಣ ಕೊರಿಯಾ ಕೂಡಾ ಖಂಡಿಸಿದ್ದು, ಜಲಜನಕ ಬಾಂಬ್ಬೆದರಿಕೆಗಳಿಗೆ ಜಗ್ಗುವುದಿಲ್ಲ ಎಂದಿದೆ.
ಇನ್ನು, ಅಮೆರಿಕಾ ಕಿಮ್ ಜಂಗ್ ವಿರುದ್ಧ ಗುಡುಗಿದ್ದು, ಉತ್ತರ ಕೊರಿಯಾವನ್ನು ಪರಮಾಣು ರಾಷ್ಟ್ರ ಎನ್ನುವುದನ್ನು ಅಮೆರಿಕಾ ಎಂದಿಗೂ ಒಪ್ಪುವುದಿಲ್ಲ ಎಂದು ಖಡಕ್ ವಾರ್ನ್ ಮಾಡಿತ್ತು.
2006 ರಿಂದನಾಲ್ಕನೆ ಬಾರಿ ಅಣ್ವಸ್ತ್ರ ಪರೀಕ್ಷೆ ನಡೆಸಿರುವ ಉತ್ತರ ಕೊರಿಯಾ, ವಿಶ್ವಶಾಂತಿಗೆ ಸೆಡ್ಡು ಹೊಡೆಯಲು ಮುಂದಾಗಿದೆ.
ಹೀಗೇ ಒಂದಲ್ಲಾ ಒಂದು ದುಸಾಹಸಕ್ಕೆ ಕೈ ಹಾಕುವ ಕಿಮ್ ಜಂಗ್, ಇದೀಗ ವಾಹನ ಸವಾರರಿಗೆ ಬ್ರೇಕ್ ಹಾಕಿದ್ದಾನೆ. ಈ ಮೂಲಕ ದೇಶದ ಜನತೆಯ ಮೇಲೆ ತನ್ನ ದರ್ಪ ಪ್ರದರ್ಶನ ಮಾಡುತ್ತಲೇ ಇರುತ್ತಾನೆ.