ಕೊನೆಗೂ ಕಷ್ಟದಲ್ಲಿರುವವರ ಕೈಹಿಡಿಯಲಿದೆ 'ಕಿರಿಕ್ ಕಾರು' !!

Written By:

'ಕಿರಿಕ್ ಪಾರ್ಟಿ' ಸಿನಿಮಾ ಬಿಡುಗಡೆ ನಂತರ ಯಾರ ಬಾಯಲ್ಲಿ ಕೇಳಿದರೂ ಕರ್ಣ, ಸಾನ್ವಿ, ಆರ್ಯ ಮತ್ತು ಕಾರು ಎಂಬ ಶಬ್ದಗಳೇ ಹರಿದಾಡುತ್ತಿದ್ದವು. ಈಗ ಸುದ್ದೆ ಏನಪ್ಪಾ ಅಂದ್ರೆ, ಇಷ್ಟೆಲ್ಲಾ ದೊಡ್ಡ ಹೆಸರು, ಖ್ಯಾತಿಗಳಿಸಿರುವ ಕಾರನ್ನು ಹರಾಜು ಕೂಗಲು ಚಿತ್ರತಂಡ ನಿರ್ಧರಿಸಿದೆ.

ಅಯೋ, ಈ ಹಳೆ ಕಾರು ಕೊಳ್ಳಲು ಜನ ಮುಂದೆ ಬರುತ್ತಾರೆಯೇ? ಎಂಬ ಪ್ರೆಶ್ನೆ ನಿಮ್ಮಲ್ಲಿದ್ದರೆ ಖಂಡಿತ ಸಂದೇಹ ಬೇಡ. ಸದ್ಯ ಈ ಕಾರು ಎಷ್ಟು ಫೇಮಸ್ ಆಗಿದೆ ಅಂದ್ರೆ, ಸಾಮಾಜಿಕ ಜಾಲತಾಣದಲ್ಲಿ ಈ ಕಾರಿಗಾಗಿಯೇ ಪ್ರತ್ಯೇಕ ಪೇಜ್ ಓಪನ್ ಆಗಿದೆ ಎಂದರೆ ನೀವೇ ಈ ಕಾರಿನ ಖ್ಯಾತಿಯ ಬಗ್ಗೆ ಊಹಿಸಿಕೊಳ್ಳಬಹುದು.

ರಕ್ಷಿತ್ ಶೆಟ್ಟಿ ನಾಯಕತ್ವದ ‘ಕಿರಿಕ್ ಪಾರ್ಟಿ' ಚಿತ್ರದಲ್ಲಿ ಕಾರು ಕೂಡ ಒಂದು ಪಾತ್ರವಾಗಿದೆ. ಕಿರಿಕ್ ಕಾರ್ ಎಂಬ ಹೆಸರಿನಿಂದ ಪ್ರತಿಯೊಬ್ಬರ ಮನಸ್ಸು ಗೆದ್ದಿರುವ ಈ ಕಾರು ಕಾರು ಇಡೀ ಚಿತ್ರದಲ್ಲಿ ಪ್ರಮುಖ ಪಾತ್ರವನ್ನೇ ವಹಿಸಿತ್ತು.

ಸಿನಿಮಾದಲ್ಲಿ ಆ ಕಾರನ್ನು ನಾಲ್ಕೈದು ಮಂದಿ ಸ್ನೇಹಿತರು ಹಣ ಶೇರ್‌ ಮಾಡಿ ಖರೀದಿ ಮಾಡಿರುತ್ತಾರೆ. ಈ ಗೆಳೆಯರ ನಡುವಿನ ಸ್ಪರ್ಧೆಯಲ್ಲಿ, ಹುಡುಗಿಯನ್ನು ಪಟಾಯಿಸುವಲ್ಲಿ ಈ ಕಾರಿಗೇ ಪ್ರಮುಖ ಆದ್ಯತೆ ನೀಡಲಾಗಿದೆ.

ಈ ಸಿನಿಮಾದಲ್ಲಿ ರಕ್ಷಿತ್‌ ಶೆಟ್ಟಿ ಮತ್ತು ಸಹ ನಟರು ಬಳಸಿದ್ದ ಓಪನ್‌ ಕಾರು ಚಿತ್ರದ ಮುಖ್ಯ ಆಕರ್ಷಣೆಯೂ ಆಗಿತ್ತು. ಅದನ್ನು ಚಿತ್ರಕ್ಕಾಗಿ ವಿಶೇಷವಾಗಿ 13 ದಿನಗಳಲ್ಲಿ ಸಿದ್ಧಪಡಿಸಲಾಗಿತ್ತು.

ಆದ್ರೆ ಚಿತ್ರದ ಕೊನೆಯಲ್ಲಿ ಕರ್ಣ ಈ ಕಾರನ್ನು ಹರಾಜು ಹಾಕಿ ಅದರಿಂದ ಬಂದ ಹಣದಲ್ಲಿ ಒಳ್ಳೆ ಕೆಲಸ ಮಾಡ್ತಾನೆ .ಅದೇ ರೀತಿ ರಿಯಲ್ ಲೈಫಲ್ಲೂ ಇದನ್ನೇ ಮಾಡೋಕೆ ಹೊರಟಿದ್ದಾರೆ ರಕ್ಷಿತ್ ಶೆಟ್ಟಿ.

ಹೌದು, ರಕ್ಷಿತ್ ಶೆಟ್ಟಿ ಇದೀಗ ಈ ಕಿರಿಕ್ ಕಾರನ್ನು ಹರಾಜು ಹಾಕಲು ನಿರ್ಧರಿಸಿದ್ದು, ಆ ಹರಾಜಿನಲ್ಲಿ ಬರುವ ಹಣವನ್ನು ಒಂದು ಉತ್ತಮ ಕೆಲಸಕ್ಕೆ ವಿನಿಯೋಗಿಸಲು ಪರಂವಾ ಸ್ಟುಡಿಯೋಸ್ ನಿರ್ಧರಿಸಿದೆ.

ಹರಾಜು ಹೇಗೆ ?

ಈ ಕಾರಿಗಾಗಿ ವಿಶೇಷ ಸಾಫ್ಟ್‌ವೇರ್‌ ಅಭಿವೃದ್ಧಿ ಪಡಿಸಿರುವ ರಿಷಭ್‌ ಸ್ನೇಹಿತ, ಸದ್ಯದಲ್ಲೇ ಅದರ ಮೂಲಕ ಬಿಡ್ಡಿಂಗ್‌ ಆರಂಭಿಸುತ್ತಾರೆ. ಯಾರು ಅತಿ ಹೆಚ್ಚು ಹಣಕ್ಕೆ ಬಿಡ್‌ ಮಾಡುತ್ತಾರೋ ಅವರಿಗೆ ಕಾರು ಸೇರುತ್ತದೆ.

ಸಾನ್ವಿಯಷ್ಟೇ ಅಭಿಮಾನಿಗಳು ಈ ಹಳದಿ ಕಾರಿಗೂ ಇರೋದ್ರಿಂದ ಹರಾಜಿನಲ್ಲಿ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆಯಿದ್ದು, ಇದಕ್ಕೊಂದು ಫೇಸ್ಬುಕ್ ಪೇಜ್ ಕೂಡಾ ಕ್ರಿಯೆಟ್ ಮಾಡಲಾಗಿದ್ದು, ಈ ಪೇಜ್ ಮೂಲಕ ಹೆಚ್ಚಿನ ಮಾಹಿತಿ ಅಂಚಿಕೊಳ್ಳಲು ಚಿತ್ರತಂಡ ತೀರ್ಮಾನಿಸಿದೆ.

ಸಾನ್ವಿಯಷ್ಟೇ ಅಭಿಮಾನಿಗಳು ಈ ಹಳದಿ ಕಾರಿಗೂ ಇರೋದ್ರಿಂದ ಹರಾಜಿನಲ್ಲಿ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆಯಿದ್ದು, ಇದಕ್ಕೊಂದು ಫೇಸ್ಬುಕ್ ಪೇಜ್ ಕೂಡಾ ಕ್ರಿಯೆಟ್ ಮಾಡಲಾಗಿದ್ದು, ಈ ಪೇಜ್ ಮೂಲಕ ಹೆಚ್ಚಿನ ಮಾಹಿತಿ ಅಂಚಿಕೊಳ್ಳಲು ಚಿತ್ರತಂಡ ತೀರ್ಮಾನಿಸಿದೆ.

ಕಿರಿಕ್ ಕಾರ್ ಆದ ಬಗೆ ಹೇಗೆ ?

‘ಕಿರಿಕ್ ಪಾರ್ಟಿ' ಸಿನಿಮಾ ಮಾಡಲು ನಿರ್ಧರಿಸಿದ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಾಯಕ ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುವ ಕಾರಿನ ವಿನ್ಯಾಸವನ್ನು ತಲೆಯಲಿಟ್ಟುಕೊಂಡಿದ್ದರು.

 

ಇದನ್ನು ಕಾರ್ಯರೂಪಕ್ಕೆ ತರಲು ಉಡುಪಿ ಮೂಲದ ಮೋಟಾರು ವಾಹನ ವಿನ್ಯಾಸಕ ದಿಲೀಪ್ ರಾಜ್ ಅವರನ್ನು ಸಂಪರ್ಕಿಸಿ ತಮ್ಮ ಚಿತ್ರಕ್ಕಾಗಿ 10 ದಿನಗಳಲ್ಲಿ ಚಿತ್ರಕಥೆಗೆ ಸರಿ ಹೊಂದುವಂತಹ ಹಳೆಯ ಕಾರ್ ಬೇಕು ಎಂದು ಕೋರಿದ್ದರು.

ಕೊನೆಗೂ ಕೆಲ ದಿನಗಳ ನಂತರ ಪಾಚಿ ಬಣ್ಣದ ಕಾಂಟೆಸ್ಸಾ ಕಾರು ಹುಡುಕಿದ ದಿಲೀಪ್ ರಾಜ್ 40 ಸಾವಿರ ರೂ.ಗೆ ಅದನ್ನು ಖರೀದಿಸಿ ಸಿನೆಮಾಗೆ ಬೇಕಾಗುವಂತೆ ವಿನ್ಯಾಸ ಮಾಡಿ ಕೊಡುತ್ತಾರೆ.

‘ಬುಲ್​ಬುಲ್', ‘ಉಪ್ಪಿ 2' ಹಾಗೂ ‘ಅಣ್ಣಾಬಾಂಡ್' ಸಿನಿಮಾದಲ್ಲಿ ಬರುವ ಚಿತ್ರವಿಚಿತ್ರ ವಿನ್ಯಾಸದ ಬೈಕ್​ಗಳನ್ನು ವಿನ್ಯಾಸಗೊಳಿಸಿದ್ದು ದಿಲೀಪ್ ರಾಜ್, ಈ ಮೇಲ್ಚಾವಣಿ ಇಲ್ಲದೆ ಇರುವ ಓಪನ್ ಕಾರಿನ ಬದಲಾವಣೆಗೆ ತೆಗೆದುಕೊಂಡಿದ್ದು ಕೇವಲ 13 ದಿನ.

ತಡರಾತ್ರಿ 2.30ಕ್ಕೆ ಬದಲಾದ ವಿನ್ಯಾಸದ ಕಾರ್ ನೋಡಿದ ರಕ್ಷಿತ್ ಶೆಟ್ಟಿ ತಮ್ಮ ಕಲ್ಪನೆಯಂತೆಯೇ ಕಾರ್ ವಿನ್ಯಾಸಗೊಂಡಿರುವುದನ್ನು ಕಂಡು ಸಂತೋಷಪಟ್ಟಿದ್ದರು.

ಚಿತ್ರದ ಇಂಟರ್​ವಲ್ ನಂತರ ಕಾರ್ ವಿನ್ಯಾಸ ಮತ್ತೆ ಬದಲು ಮಾಡಲು ತೀರ್ಮಾನಿಸಿದ ತಂಡ, ಚಕ್ರದ ಬದಲಾವಣೆ ಸೇರಿ ಇನ್ನಿತರ ಹೊಸ ವಿನ್ಯಾಸ ಸೇರ್ಪಡೆ ಮಾಡಿದೆ.

Read more on ಕಾರು car
Story first published: Friday, April 21, 2017, 17:46 [IST]
English summary
Read in kannada about Kirik Party movie producers have decided to auction a vintage car used in the film to fund education of children of sex workers.
Please Wait while comments are loading...

Latest Photos