ಕೊಚ್ಚಿಯಲ್ಲಿ ದೇಶದ ಮೊತ್ತ ಮೊದಲ ಬಂದರು ರಕ್ಷಣಾ ವ್ಯವಸ್ಥೆ

By Nagaraja

"ನವ ಭಾರತ, ಶಕ್ತಿಯುತ ಭಾರತ" ಎಂಬುದಕ್ಕೆ ನಿದರ್ಶನವಾಗಿ ಕೇರಳದ ಕೊಚ್ಚಿಯಲ್ಲಿ ಭಾರತದ ಚೊಚ್ಚಲ 'ಬಂದರು ರಕ್ಷಣಾ ವ್ಯವಸ್ಥೆ' ರೂಪುಗೊಂಡಿದೆ. ಇದರಂತೆ ನೀರಿನಡಿಯಲ್ಲೂ ಬಂದರು ರಕ್ಷಣಾ ಮತ್ತು ಕಣ್ಗಾವಲು ವ್ಯವಸ್ಥೆ ( Integrated Underwater Harbour Defence and Surveillance System) ಖಾತ್ರಿಪಡಿಸಲಾಗುವುದು.

Also Read : ಸಾಗರದೊಳಗೆ ಮುಳುಗಿರುವ 18 ಅವಿಶ್ವಸನೀಯ ಹಡಗುಗಳು

ಅಲ್ಲದೆ ಮುಂದಿನ ದಿನಗಳಲ್ಲಿ ಕೊಚ್ಚಿಗೆ ಸಮಾನವಾದ ರೀತಿಯಲ್ಲಿ ಮುಂಬೈ, ವಿಶಾಖಪಟ್ಟಣ ಹಾಗೂ ಅಂಡಾಮಾನ್‌ನ ಪೋರ್ಟ್ ಬ್ಲೇರ್ ನಲ್ಲೂ ಬಂದರು ರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸುವ ಯೋಜನೆಯನ್ನು ನೌಕಾಪಡೆ ಹೊಂದಿದೆ.

ಕೊಚ್ಚಿಯಲ್ಲಿ ದೇಶದ ಮೊತ್ತ ಮೊದಲ ಬಂದರು ರಕ್ಷಣಾ ವ್ಯವಸ್ಥೆ

ಇನ್ನು ಮುಂದೆ ನೀರಿನಡಿಯಿಂದ ಯಾವುದೇ ಆತಂಕ ಎದುರಾದರೂ ಅವನ್ನು ಸ್ವಯಂಚಾಲಿತವಾಗಿ ಪತ್ತೆ ಹಚ್ಚುವ ಹಾಗೂ ತಕ್ಷಣ ಪ್ರತಿದಾಳಿ ಹಡಗನ್ನು ನಿಯೋಜಿಸಲು ನೌಕಾಪಡೆಗೆ ಸಾಧ್ಯವಾಗಲಿದೆ.

ಕೊಚ್ಚಿಯಲ್ಲಿ ದೇಶದ ಮೊತ್ತ ಮೊದಲ ಬಂದರು ರಕ್ಷಣಾ ವ್ಯವಸ್ಥೆ

ಈ ಮಹತ್ತರ ಯೋಜನೆಯನ್ನು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ವಿನ್ಯಾಸಗೊಳಿಸಿದೆ.

ಕೊಚ್ಚಿಯಲ್ಲಿ ದೇಶದ ಮೊತ್ತ ಮೊದಲ ಬಂದರು ರಕ್ಷಣಾ ವ್ಯವಸ್ಥೆ

ಪ್ರಸ್ತುತ ವ್ಯವಸ್ಥೆಯು ಕಣ್ಗಾವಲು ರಾಡಾರ್, ಶಕ್ತಿಯುತ ಅಂಡರ್ ವಾಟರ್ ಸೆನ್ಸಾರ್, ಡೈವರ್ ಪತ್ತೆ ಹಚ್ಚುವಿಕೆ ಸೋನಾರ್ ಮುಂತಾದ ಆಧುನಿಕ ತಂತ್ರಗಾರಿಕೆಗಳನ್ನು ಒಳಗೊಂಡಿರಲಿದೆ.

ಕೊಚ್ಚಿಯಲ್ಲಿ ದೇಶದ ಮೊತ್ತ ಮೊದಲ ಬಂದರು ರಕ್ಷಣಾ ವ್ಯವಸ್ಥೆ

ಮೇಲೆ ಸೂಚಿಸಲಾದ ಬಂದರುಗಳಲ್ಲಿ ಜಂಟಿ ಕಾರ್ಯಾಚರಣೆ ಕೇಂದ್ರ (ಜೆಯುಸಿ) ರೂಪುಕೊಳ್ಳಲಿದ್ದು, ಕರಾವಳಿ ಭದ್ರತಾ ಕಾರ್ಯಾಚರಣೆಯೊಂದಿಗೆ ಜಂಟಿಯಾಗಿ ಕಾರ್ಯಾಚರಿಸಲಿದೆ.

ಕೊಚ್ಚಿಯಲ್ಲಿ ದೇಶದ ಮೊತ್ತ ಮೊದಲ ಬಂದರು ರಕ್ಷಣಾ ವ್ಯವಸ್ಥೆ

270 ಕೋಟಿ ದುಬಾರಿಯ ಈ ಯೋಜನೆಯಡಿಯಲ್ಲಿ ಆಳವಡಿಸಲಾಗಿರುವ ಹೈ ಡೆಫಿನಿಷನ್ ಸೆನ್ಸಾರ್ ಗಳು ರಿಯಲ್ ಟೈಮ್ ಚಿತ್ರಗಳನ್ನು ಹಂಚಿಕೊಳ್ಳಲಿದೆ.

ಕೊಚ್ಚಿಯಲ್ಲಿ ದೇಶದ ಮೊತ್ತ ಮೊದಲ ಬಂದರು ರಕ್ಷಣಾ ವ್ಯವಸ್ಥೆ

ವರದಿಗಳ ಪ್ರಕಾರ ಜಗತ್ತಿನ 150 ಕೇಂದ್ರಗಳಲ್ಲಿ ಮಾತ್ರ ಇದಕ್ಕೆ ಸಮಾನವಾದ ಕರಾವಳಿ ರಕ್ಷಣಾ ವ್ಯವಸ್ಥೆ ಹೊಂದಿದೆ. ಈಗ ಭಾರತಕ್ಕೂ ಮುಂಬೈ ಮಾದರಿಯ ಉಗ್ರರ ದಾಳಿಯನ್ನು ತಡೆಯಲು ಸಾಧ್ಯವಾಗಲಿದೆ.

ಕೊಚ್ಚಿಯಲ್ಲಿ ದೇಶದ ಮೊತ್ತ ಮೊದಲ ಬಂದರು ರಕ್ಷಣಾ ವ್ಯವಸ್ಥೆ

ಒಟ್ಟಿನಲ್ಲಿ ಭಾರತ ರಕ್ಷಣಾ ವ್ಯವಸ್ಥೆ ಮತ್ತಷ್ಟು ಬಲವರ್ಧಿಸಿಕೊಂಡಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

ಮತ್ತಷ್ಟು ವೈವಿಧ್ಯಮಯ ಸುದ್ದಿಗಳು

ದೇಶದ ಮೊದಲ ದೇಶೀಯ ವಿಮಾನ ವಾಹಕ ಹಡಗು ಐಎನ್‌ಎಸ್ ವಿಕ್ರಾಂತ್

ಸಾಗರವೆಂಬ ಮಾಯಾಲೋಕದಲ್ಲಿ ಜಲಾಂತರ್ಗಾಮಿ ಪ್ರವಾಸ

ಜಗತ್ತಿನ 25 ಅತಿದೊಡ್ಡ ವಿಹಾರ ನೌಕೆಗಳು

Most Read Articles

Kannada
Read more on ಭಾರತ
English summary
Kochi gets India’s first harbour defence system
Story first published: Monday, August 3, 2015, 11:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X