ಭಾರತೀಯನ ಪಾಲಾದ ಅಮೆರಿಕದ ಚೊಚ್ಚಲ ಕೊಯಿನಿಕ್ಸೆಗ್ ಆರ್‌ಎಸ್ ಸೂಪರ್ ಕಾರು!

By Nagaraja

ಭಾರತದಲ್ಲಿ ಸೂಪರ್ ಕಾರುಗಳು ಕಾಣಸಿಗುವುದು ಅತಿ ವಿರಳ. ಸೂಪರ್ ಕಾರುಗಳಿಗೆ ಬೇಕಾದ ಅಗತ್ಯ ರಸ್ತೆ ಮೂಲ ಸೌಕರ್ಯಗಳು ನಮ್ಮ ರಸ್ತೆಯಲ್ಲಿಲ್ಲ ಎಂಬುದು ಅಷ್ಟೇ ಸತ್ಯ. ಹಾಗಿರುವಾಗ ಅತ್ತ ದೂರದ ಅಮೆರಿಕದಲ್ಲಿ ಚೊಚ್ಚಲ ಕೊಯಿನಿಕ್ಸೆಗ್ ಅಗೆರಾ ಆರ್‌ಎಸ್ ಕಾರಿನ ಹೆಮ್ಮೆಯ ಮಾಲಿಕ ಎಂಬ ಗೌರವಕ್ಕೆ ಅನಿವಾಸಿ ಭಾರತೀಯರೊಬ್ಬರು ಪಾತ್ರವಾಗಿದ್ದಾರೆ.

ಅಮೆರಿಕದ ಫ್ಲೋರಿಡಾದಲ್ಲಿ ವಾಸಿಸುವ ಅನಿವಾಸಿ ಭಾರತೀಯ ಉದ್ಯಮಿ ಕ್ರಿಸ್ ಸಿಂಗ್ ಎಂಬವರ ವಿಶೇಷ ಬೇಡಿಕೆಯ ಮೆರೆಗೆ ಪ್ರಸ್ತುತ ಸೂಪರ್ ಕಾರಿಗೆ 'ಅಗೆರಾ ಆರ್ ಎಸ್' ಎಂಬ ಹೆಸರನ್ನಿಡಲಾಗಿದೆ. ಇದನ್ನು ಅಮೆರಿಕದಲ್ಲಿ ನಡೆದ ಮಾನಿಟರಿ ವೀಕ್ ನಲ್ಲಿ ಹಸ್ತಾಂತರಿಸಲಾಗಿದೆ.

ಭಾರತೀಯನ ಪಾಲಾದ ಅಮೆರಿಕದ ಚೊಚ್ಚಲ ಕೊಯಿನಿಕ್ಸೆಗ್ ಆರ್‌ಎಸ್ ಸೂಪರ್ ಕಾರು!

ಇತರೆ ಅಗೆರಾ ಕಾರುಗಳಿಗೆ ಹೋಲಿಸಿದಾಗ ಇದರಲ್ಲಿ ಎಲ್ಲವೂ ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿರುವುದು ಪ್ರಸ್ತುತ ಕಾರಿಗೆ 'ಎಕ್ಸ್ ಎಸ್' ಎಂಬ ಹೆಸರನ್ನಿಡಲು ಕಾರಣವಾಗಿದೆ.

ಭಾರತೀಯನ ಪಾಲಾದ ಅಮೆರಿಕದ ಚೊಚ್ಚಲ ಕೊಯಿನಿಕ್ಸೆಗ್ ಆರ್‌ಎಸ್ ಸೂಪರ್ ಕಾರು!

ಉದಾಹರಣೆಗೆ ಹಿಂದುಗಡೆ ವಿಶಿಷ್ಟವಾದ ರಿಯರ್ ವಿಂಗ್ ರಚಿಸಲಾಗಿದೆ. ಇದು ಇದುವರೆಗೆ ಕೊಯಿನಿಕ್ಸೆಗ್ ನಿರ್ಮಿಸಿರುವ ಅತಿ ದೊಡ್ಡ ರಿಯರ್ ವಿಂಗ್ ಕೂಡಾ ಆಗಿದೆ.

ಭಾರತೀಯನ ಪಾಲಾದ ಅಮೆರಿಕದ ಚೊಚ್ಚಲ ಕೊಯಿನಿಕ್ಸೆಗ್ ಆರ್‌ಎಸ್ ಸೂಪರ್ ಕಾರು!

ಸ್ವಿಡನ್ ತಳಹದಿಯ ಕೊಯಿನಿಕ್ಸೆಗ್ ಸಂಸ್ಥೆಯು ನಿರ್ಮಿಸಿರುವ ಅಗೆರಾ ಎಕ್ಸ್ ಎಸ್ ಆವೃತ್ತಿಯು ಏರೋಡೈನಾಮಿಕ್ ಪ್ಯಾಕೇಜುಗಳನ್ನು ಒಳಗೊಂಡಿರಲಿದೆ.

ಭಾರತೀಯನ ಪಾಲಾದ ಅಮೆರಿಕದ ಚೊಚ್ಚಲ ಕೊಯಿನಿಕ್ಸೆಗ್ ಆರ್‌ಎಸ್ ಸೂಪರ್ ಕಾರು!

ಎಂಜಿನ್ ಬಗ್ಗೆ ಮಾತನಾಡುವುದಾದ್ದಲ್ಲಿ ಇದರಲ್ಲಿರುವ 5.8 ಲೀಟರ್ ವಿ8 ಎಂಜಿನ್ 1280 ಎನ್ ಎಂ ತಿರುಗುಬಲದಲ್ಲಿ 1160 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಭಾರತೀಯನ ಪಾಲಾದ ಅಮೆರಿಕದ ಚೊಚ್ಚಲ ಕೊಯಿನಿಕ್ಸೆಗ್ ಆರ್‌ಎಸ್ ಸೂಪರ್ ಕಾರು!

ಹಾಗೆಯೇ ಏಳು ಸ್ಪೀಡ್ ಸಿಕ್ವೇನ್ಸಿಯಲ್ ಗೇರ್ ಬಾಕ್ಸ್ ಇದರಲ್ಲಿದೆ. ಇನ್ನು ಅತಿ ವಿಶಿಷ್ಟವಾದ ಕ್ಯಾರೊಸ್ಸರಿ ಆರೆಂಜ್ ಬಣ್ಣವನ್ನು ಬಳಿಯಲಾಗಿದೆ.

ಭಾರತೀಯನ ಪಾಲಾದ ಅಮೆರಿಕದ ಚೊಚ್ಚಲ ಕೊಯಿನಿಕ್ಸೆಗ್ ಆರ್‌ಎಸ್ ಸೂಪರ್ ಕಾರು!

ಕೇವಲ ಸೀಮಿತ ಸಂಖ್ಯೆಯ 25 ಯುನಿಟ್ ಗಳನ್ನು ಮಾತ್ರ ಅಗೆರಾ ಆರ್ ಎಸ್ ನಿರ್ಮಿಸುವ ಇರಾದೆಯನ್ನು ಕೊಯಿನಿಕ್ಸೆಗ್ ಹೊಂದಿದೆ. ಇದಾದ ಬಳಿಕ ರೆಗೆರಾ ಹೈಪರ್ ಕಾರು ನಿರ್ಮಾಣಕ್ಕೆ ಮುಂದಾಗಲಿದೆ.

ಭಾರತೀಯನ ಪಾಲಾದ ಅಮೆರಿಕದ ಚೊಚ್ಚಲ ಕೊಯಿನಿಕ್ಸೆಗ್ ಆರ್‌ಎಸ್ ಸೂಪರ್ ಕಾರು!

ಅಂದ ಹಾಗೆ ಕ್ರಿಸ್ ಸಿಂಗ್ ಅವರಿಗೆ ದುಬಾರಿ ಕಾರುಗಳ ಮೇಲಿನ ಪ್ರೇಮ ಇದು ಮೊದಲ ಬಾರಿಯೇನಲ್ಲ. ಅವರ ಗ್ಯಾರೇಜ್ ನಲ್ಲಿ ಲಂಬೋರ್ಗಿನಿ ವೆನೊನೊ ಹೈಪರ್ ಕಾರು ಹಾಗೂ ದುಬಾರಿ ಪಗನಿ ಹ್ಯುಯರಾ ಲಾ ಮೊನ್ಜಾ ಲಿಸಾ ಎಡಿಷನ್ ಸಹ ನಿಲುಗಡೆಗೊಳಿಸಲಾಗಿದೆ.

ಭಾರತೀಯನ ಪಾಲಾದ ಅಮೆರಿಕದ ಚೊಚ್ಚಲ ಕೊಯಿನಿಕ್ಸೆಗ್ ಆರ್‌ಎಸ್ ಸೂಪರ್ ಕಾರು!

ಇದಕ್ಕೂ ಮೊದಲು ಲಂಬೋರ್ಗಿನಿ ವೆನೊನೊ ಹೈಪರ್ ಕಾರು ಹೊಂದಿದ ಮೊದಲ ಅಮೆರಿಕನ್ ಎಂಬ ಗೌರವಕ್ಕೂ ಪಾತ್ರವಾಗಿದ್ದರು. ಇದನ್ನು ಕೇವಲ ಮೂರು ಯುನಿಟ್ ಗಳಷ್ಟೇ ನಿರ್ಮಿಸಲಾಗಿತ್ತು.

Most Read Articles

Kannada
English summary
King Of Supercar Collection, Kris Singh Owns ‘One Off’ Koenigsegg Agera XS
Story first published: Wednesday, August 24, 2016, 16:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X