ನಿಗೂಢ ರಹಸ್ಯ ಭೇದಿಸಿದ ಆಫ್ರಿಕಾದ ಹಡಗು ಸ್ಮಶಾನ

By Nagaraja

ಉತ್ತರ ಆಫ್ರಿಕಾದ ಇಸ್ಲಾಮಿಕ್ ರಾಷ್ಟ್ರವಾದ ಮೌರಿಟಾನಿಯಾದಲ್ಲಿ (Mauritania) ಭಯ, ಭೀತಿ ಹುಟ್ಟಿಸುವ ಹಡಗು ಸ್ಮಶಾನವೊಂದು ಪತ್ತೆಯಾಗಿದೆ [ಅಚ್ಚರಿ! ಬೆಲ್ಜಿಯಂ ದಟ್ಟಾರಣ್ಯದಲ್ಲಿ 70 ವರ್ಷಕ್ಕೂ ಹಳೆಯ ಕಾರು ಸ್ಮಶಾನ]. ಇದೀಗ ಇತಿಹಾಸ ತಜ್ಞರು ಈ ನಿಗೂಢ ಹಡಗು ಸ್ಮಶಾನದ ಹಿಂದಿರುವ ರಹಸ್ಯವನ್ನು ಭೇದಿಸುವ ತವಕದಲ್ಲಿದ್ದಾರೆ.

ಅನೇಕ ವರ್ಷಗಳಿಂದ ಈ ಹಡುಗಗಳಿಗೆ ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ. ಇಂತಹ ನೂರಾರು ಹಡಗುಗಳು ಇಲ್ಲಿ ಪತ್ತೆಯಾಗಿರುವುದು ನಿಜಕ್ಕೂ ಆಶ್ಚರ್ಯಕರವೇ ಸರಿ.

ನಿಗೂಢ ರಹಸ್ಯ ಭೇದಿಸಿದ ಆಫ್ರಿಕಾದ ಹಡಗು ಸ್ಮಶಾನ

ಈ ಬಗ್ಗೆ ರಹಸ್ಯ ಭೇದಿಸಲು ಹೊರಟಿರುವ ತಂಡದ ಪ್ರಕಾರ ಮೌರಿಟಾನಿಯಾದ ಎರಡನೇ ಅತಿ ದೊಡ್ಡ ನಗರವಾದ ನೌವಾಧಿಬೂ (Nouadhibou)ಎಂಬ ಪ್ರದೇಶದ ಸಮುದ್ರ ತಟದಲ್ಲಿ ಹಡಗುಗಳ ಪಳೆಯುಳಿಕೆಗಳು ಪತ್ತೆಯಾಗಿದೆ.

ನಿಗೂಢ ರಹಸ್ಯ ಭೇದಿಸಿದ ಆಫ್ರಿಕಾದ ಹಡಗು ಸ್ಮಶಾನ

ಪ್ರಸ್ತುತ ಜಗತ್ತಿನ ಅತ್ಯಂತ ದೊಡ್ಡ ಹಡಗು ಸ್ಮಶಾನಗಳ ಸಾಲಿನಲ್ಲಿ ಈ ಪ್ರದೇಶ ಗುರುತಿಸಿಕೊಂಡಿದ್ದು, ಪ್ರವಾಸಿ ತಾಣಗಳ ಪ್ರಮುಖ ಆಕರ್ಷಣೆಯಾಗಿ ಮಾರ್ಪಾಡುತ್ತಿದೆ.

ನಿಗೂಢ ರಹಸ್ಯ ಭೇದಿಸಿದ ಆಫ್ರಿಕಾದ ಹಡಗು ಸ್ಮಶಾನ

ಇಲ್ಲಿನ ಸಮುದ್ರ ತಟಕ್ಕೊಮ್ಮೆ ಕಾಲಿರಿಸಿದರೆ ಎಲ್ಲೆಡೆ ಪಾಳು ಬಿದ್ದಿರುವ ಹಳೆಯ ಹಡುಗಗಳ ಅವಶೇಷಗಳನ್ನು ಕಾಣಬಹುದಾಗಿದೆ.

ನಿಗೂಢ ರಹಸ್ಯ ಭೇದಿಸಿದ ಆಫ್ರಿಕಾದ ಹಡಗು ಸ್ಮಶಾನ

ತನಿಖೆಯ ಪ್ರಕಾರ ವರ್ಷಗಳ ಹಿಂದೆ ಇದು ಭ್ರಷ್ಟಾಚಾರದ ಕೇಂದ್ರ ಬಿಂದುವಾಗಿತ್ತು. ಇಲ್ಲಿಗೆ ಬರುತ್ತಿದ್ದ ಹಡಗುಗಳಿಂದ ಬಂದರು ಅಧಿಕಾರಿಗಳು ಲಂಚ ಪಡೆದುಕೊಳ್ಳುತ್ತಿದ್ದು.

ನಿಗೂಢ ರಹಸ್ಯ ಭೇದಿಸಿದ ಆಫ್ರಿಕಾದ ಹಡಗು ಸ್ಮಶಾನ

ಬಳಿಕ ಹಡಗುಗಳನ್ನು ಇಲ್ಲಿಯೇ ಬಿಟ್ಟು ತೆರಳುತ್ತಿದ್ದರು. ಹಾಗಿದ್ದರೂ ಇದರ ಹಿಂದಿರುವ ನೈಜ ರಹಸ್ಯ ಇನ್ನಷ್ಟೇ ಬಯಲಾಗಬೇಕಿದೆ.

ನಿಗೂಢ ರಹಸ್ಯ ಭೇದಿಸಿದ ಆಫ್ರಿಕಾದ ಹಡಗು ಸ್ಮಶಾನ

1980ರ ದಶಕದಲ್ಲಿ ಮೌರಿಟಾನಿಯಾ ಮೀನುಗಾರಿಕಾ ಉದ್ಯಮದ ರಾಷ್ಟ್ರೀಕರಣದ ಬಳಿಕ ಇಂತಹದೊಂದು ಬೆಳವಣಿಗೆ ಕಂಡುಬಂದಿತ್ತು.

ನಿಗೂಢ ರಹಸ್ಯ ಭೇದಿಸಿದ ಆಫ್ರಿಕಾದ ಹಡಗು ಸ್ಮಶಾನ

ಇಲಾಖೆಯು ಲಾಭಕರವಲ್ಲದ ಎಲ್ಲ ಹಡುಗಗಳನ್ನು ಇಲ್ಲಿನ ಬಂದಿರಿನಲ್ಲಿ ಅಮಾನತುಗೊಳಿಸಿತ್ತು.

ನಿಗೂಢ ರಹಸ್ಯ ಭೇದಿಸಿದ ಆಫ್ರಿಕಾದ ಹಡಗು ಸ್ಮಶಾನ

ವರ್ಷಗಳು ಉರುಳಿದಂತೆ ವಿದೇಶಿಗಳು ಸಹ ಕಾರ್ಯ ಕ್ಷಮತೆ ಇಲ್ಲದ ತಮ್ಮ ಹಳೆಯ ಹಡಗುಗಳನ್ನು ಇಲ್ಲಿ ಬಿಟ್ಟು ತೆರಳುತ್ತಿದ್ದರು ಎಂದು ಹೇಳಲಾಗುತ್ತಿದೆ.

ನಿಗೂಢ ರಹಸ್ಯ ಭೇದಿಸಿದ ಆಫ್ರಿಕಾದ ಹಡಗು ಸ್ಮಶಾನ

ಒಟ್ಟಿನಲ್ಲಿ ಪರಿಸರ, ಸಾಮಾಜಿಕ ಹಾಗೂ ಆರ್ಥಿಕ ವಿಪತ್ತಿಗೆ ಇಂದೊಂದು ಅತ್ಯುತ್ತಮ ಉದಾಹರಣೆ ಎಂದೇ ಹೇಳಬಹುದು.

ನಿಗೂಢ ರಹಸ್ಯ ಭೇದಿಸಿದ ಆಫ್ರಿಕಾದ ಹಡಗು ಸ್ಮಶಾನ

ಹಡಗು ಸ್ಮಶಾನ ಬಗ್ಗೆ ನಿಮ್ಮ ಮನದಲ್ಲಿ ಹೊಳೆಯುವ ಯೋಚನೆಗಳೇನು? ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಚರ್ಚಿಸಿರಿ.

ನಿಗೂಢ ರಹಸ್ಯ ಭೇದಿಸಿದ ಆಫ್ರಿಕಾದ ಹಡಗು ಸ್ಮಶಾನ

ಇಂತಹ ರೋಚಕ, ವಿಶಿಷ್ಟತೆಯನ್ನು ಕಾಪಾಡಿಕೊಂಡಿರುವ ಸುದ್ದಿಗಳಿಗಾಗಿ ಸದಾ ಡ್ರೈವ್ ಸ್ಪಾರ್ಕ್ ಓದುತ್ತಿರಿ.

ಅಮೆರಿಕದಲ್ಲಿ ವಿಮಾನಗಳಿಗೂ ಸ್ಮಶಾನ

ಅಮರಿಕದಲ್ಲಿದೆ ರಹಸ್ಯ ತಾಣ

Most Read Articles

Kannada
English summary
Largest ship graveyard in Mauritania
Story first published: Thursday, July 2, 2015, 10:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X