ಈ ಎಲ್ಇಡಿ 'ನಂಬರ್ ಪ್ಲೇಟ್' ಆಧಾರ್ ಸಂಖ್ಯೆಗೆ ಲಿಂಕ್ ಆದ್ರೆ ವಾಹನ ಕಳ್ಳತನಕ್ಕೆ ಬ್ರೇಕ್ ಬೀಳೋದ್ ಗ್ಯಾರಂಟಿ.

Written By:

ಎಲ್ಇಡಿ ದೀಪಗಳನ್ನು ಉಪಯೋಗಿಸಿ ಈ ನಂಬರ್ ಪ್ಲೇಟ್ ಮಾಡಲಾಗಿದ್ದು, ವಾಹನದ ಎಂಜಿನ್ ಚಲಾವಣೆಯಾದ ತಕ್ಷಣ ಈ ದೀಪಗಳನ್ನು ಹೊಂದಿರುವ ನಂಬರ್ ಪ್ಲೇಟ್ ಬೆಳಗಲು ಪ್ರಾರಂಭ ಮಾಡುತ್ತದೆ.

ಸದ್ಯ ಪ್ಲಾಸ್ಟಿಕ್ ಇಂಜಿನಿಯರ್ ಆದ ತುಷಾರ್ ಗುಹ ಹೊಸದಾಗಿ ಅನ್ವೇಷಣೆ ಮಾಡಿರುವ ಈ ತಂತ್ರಜ್ಞಾನವನ್ನು ಪೇಟೆಂಟು( ತಮ್ಮ ಹೆಸರಿಗೆ ಹಕ್ಕುಪತ್ರ) ಮಾಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಸದ್ಯ ಸರ್ಕಾರವು ವಿತರಿಸುತ್ತಿರುವ ಸೆಕ್ಯೂರಿಟಿ ಅಂಶಗಳನ್ನು ಹೊಂದಿರುವ ನಂಬರ್ ಪ್ಲೇಟ್-ಗಳಿಗಿಂತ ಈ ಎಲ್ಇಡಿ ನಂಬರ್ ಪ್ಲೇಟುಗಳು ಹೆಚ್ಚು ಸುರಕ್ಷಿತ ಎನ್ನಬಹುದು.

ಈಗಾಗಲೇ ತುಷಾರ್ ಗುಹ ಅವರು ನಾಲ್ಕು ಪೇಟೆಂಟ್-ಗಳನ್ನು ತಮ್ಮದಾಗಿಸಿಕೊಂಡ್ದಿದಾರೆ.

ಈಗ ಕಂಡುಹಿಡಿದಿರುವ ಎಲ್ಇಡಿ ದೀಪಗಳನ್ನು ಉಪಯೋಗಿಸಿ ಮಾಡಲಾದ ನಂಬರ್ ಪ್ಲೇಟ್ ಪೇಟೆಂಟ್ ಪಡೆದುಕೊಂಡರೆ, ತುಷಾರ್ ಗುಹ ಖಾತೆಗೆ ಮತ್ತೊಂದು ಪೇಟೆಂಟ್ ಸೇರ್ಪಡೆಯಾಗುತ್ತದೆ.

ದೇಶದಲ್ಲಿ ನೆಡೆಯುತ್ತಿರುವ ವಾಹನ ಕಳ್ಳತನ ಮತ್ತು ಇನ್ನಿತರ ದಂದೆಗಳಿಗೆ ಕಡಿವಾಣ ಹಾಕಲು ಈ ಎಲ್ಇಡಿ ನಂಬರ್ ಪ್ಲೇಟ್ ಅತ್ಯವಶ್ಯಕ ಎಂದು ತುಷಾರ್ ನಂಬಿದ್ದಾರೆ.

ತುಷಾರ್ ಮಾಡಿರುವ ಈ ನಂಬರ್ ಪ್ಲೇಟ್ ನ ಮತ್ತೊಂದು ಅನುಕೂಲವೇನೆಂದರೆ ಈ ನಂಬರ್ ಪ್ಲೇಟ್ ಅನ್ನು ಯಾರೂ ಕೊಡ ತೆಗೆದು ಹಾಕುವುದಾಗಲೇ, ಮುರಿದುಹಾಕಲಿಕ್ಕಾಗಲಿ ಆಗುವುದಿಲ್ಲ.

ಎಲ್ಇಡಿ ನಂಬರ್ ಪ್ಲೇಟ್ ವಾಹನದ ಮಾಲೀಕ ಆಧಾರ್ ಸಂಖ್ಯೆಗೆ ಸಂಪರ್ಕ ಮಾಡಲಾಗಿದ್ದು, ವಾಹನದ ಇಗ್ನಿಷನ್ ಸರ್ಕ್ಯೂಟ್ ನೊಂದಿಗೆ ಈ ಎಲ್ಇಡಿ ನಂಬರ್ ಪ್ಲೇಟ್ ಹೊಂದಾಣಿಕೆ ಹೊಂದಿರುವುದೇ ಈ ನಂಬರ್ ಪ್ಲೇಟ್ ವಿಶೇಷತೆ ಎನ್ನಬಹುದು.

ವಾಹನದ ಎಂಜಿನ್ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದ ತಕ್ಷಣ ಈ ಪ್ಲೇಟ್ ತನ್ನ ಕಾರ್ಯ ಪ್ರಾರಂಭಿಸುತ್ತದೆ, ಕತ್ತಲಿನ ಹೊತ್ತಿನಲ್ಲಿ ಹೆಚ್ಚು ಉಪಯುಕ್ತವೆನ್ನಿಸುವ ಈ ಪ್ಲೇಟ್, ಹಿಟ್ ಅಂಡ್ ರನ್ ನಂತಹ ಘಟನೆಗಳಲ್ಲಿ ಅಪರಾಧಿಗಳನ್ನು ಹಿಡಿಯಲು ಹೆಚ್ಚು ಪ್ರಯೋಜನ ಪಡೆದುಕೊಳ್ಳಬಹುದು.

ಈಗಾಗಲೇ ಈ ಯೋಜನೆ ಕಾರ್ಯರೂಪಕ್ಕೆ ತರಲು ತುಷಾರ್ ಹೆಚ್ಚು ಶ್ರಮ ವಹಿಸುತ್ತಿದ್ದು, ಪ್ರಧಾನ ಮಂತ್ರಿಯವರ ಕಾರ್ಯಾಲಯಕ್ಕೆ ಮತ್ತು ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಪಾತ್ರ ಬರೆಯಲಾಗಿದೆ.

ಈ ಆವಿಷ್ಕಾರ ಕಾರ್ಯರೂಪಕ್ಕೆ ಬಂದರೆ ಕಳ್ಳತನ ಮಾಡಿದ ವಾಹನಗಳನ್ನು ಮತ್ತಿತರ ಅನೈತಿಕ ಚಟುವಟಿಕೆಗಳಿಗೆ, ದೇಶದ್ರೋಹ ಕಾರ್ಯಗಳಿಗೆ ಉಪಯೋಗಿಸುವ ಕೆಲಸಗಳಿಂದ ಮುಕ್ತಿ ದೊರಕುವುದಂತೂ ಖಂಡಿತ.

ಇಂತಹ ಸಂದರ್ಭದಲ್ಲಿ ನಮಗೆ ತಟ್ಟನೆ ನೆನಪಾಗುವುದು ವೋಲ್ವೋ ಕಂಪನಿ ಯಾಕೆ ಗೊತ್ತೇ ?
ಸೀಟ್ ಬೆಲ್ಟ್ ಕಂಡುಹಿಡಿದದ್ದು ವೋಲ್ವೊ ಕಂಪನಿ, ಈ ಕಂಪನಿಯ ಎಸ್90 ಕಾರಿನ ಚಿತ್ರಗಳನ್ನು ನೋಡಿ.

English summary
Tushar Guha has invented LED Car number plates, that synchronise with the vehicle’s ignition, thus preventing thefts.
Please Wait while comments are loading...

Latest Photos