ಭಾರತ ಅಶ್ವಶಕ್ತಿಯಾಗಲು ಸಹಕಾರಿಯಾದ ಯುದ್ಧ ಟ್ಯಾಂಕರ್ ಗಳು

By Nagaraja

ಕ್ಷಿಪ್ರ ಗತಿಯಲ್ಲಿ ಅಭಿವೃದ್ಧಿ ಸಾಧಿಸುತ್ತಿರುವ ಭಾರತ ಇಡೀ ಜಗತ್ತಿನಲ್ಲೇ ಪ್ರಮುಖ ಅಶ್ವ ಶಕ್ತಿಯಾಗಿ ಬೆಳೆದು ಬರುತ್ತಿದೆ. ನೂರು ಕೋಟಿಗಿಂತಲೂ ಹೆಚ್ಚಿನ ಜನಸಂಖ್ಯೆಯಿರುವ ಭಾರತವು ಮುಂದಿನ 20 ವರ್ಷದೊಳಗೆ ಪ್ರಮುಖ ಅಶ್ವಶಕ್ತಿಯಾಗಿ ರೂಪುಗೊಳ್ಳಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

Also Read : ಭಾರತದ ವಾಯುವಲಯದಲ್ಲಿ ರಕ್ಷಣೆ ಕಾಯುವ ಯುದ್ಧ ವಿಮಾನಗಳು

ಭಾರತದ ಅಭಿವೃದ್ದಿಯಲ್ಲಿ ರಕ್ಷಣಾ ವಿಭಾಗದ ಪಾತ್ರ ದೊಡ್ಡದ್ದು. ಯುದ್ಧದಂತಹ ತುರ್ತು ಕಾಲ ಪರಿಸ್ಥಿತಿಯಲ್ಲಿ ದೇಶದ ಗಡಿ ರಕ್ಷಣೆಗೆ ನೆರವಾಗುವ ಮೂಲಕ ಯುದ್ಧ ಟ್ಯಾಂಕರ್ ಗಳು ಈಗಾಗಲೇ ಚೀನಾ ಹಾಗೂ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ತನ್ನ ಸಾಮರ್ಥ್ಯವನ್ನು ತೋರ್ಪಡಿಸಿದೆ. ಹೀಗೆ ಭಾರತಕ್ಕೆ ಬಲ ತುಂಬಿರುವ ಕೆಲವು ಯುದ್ಧ ಟ್ಯಾಂಕರ್ ಗಳ ಪರಿಚಯವನ್ನು ನಾವಿಲ್ಲಿ ಮಾಡಲಿದ್ದೇವೆ.

ಅರ್ಜುನ್

ಅರ್ಜುನ್

ಮೂರನೇ ತಲೆಮಾರಿನ ಯುದ್ಧ ಟ್ಯಾಂಕರ್ ಆಗಿರುವ ಅರ್ಜುನ್ ಅನ್ನು ಭಾರತದ ರಕ್ಷಣಾ ಅಧ್ಯಯನ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ತಯಾರಿಸಿದೆ. ಇದರಲ್ಲಿ 120 ಎಂಎಂ ರೈಫಲ್ ಗನ್ ಹಾಗೂ 2 ಮೆಷಿನ್ ಗನ್ ಬಳಕೆ ಮಾಡುವ ಶಕ್ತಿ ಹೊಂದಿದೆ. ಅಲ್ಲದೆ ಇದರ 1400 ಅಶ್ವಶಕ್ತಿಯ ಎಂಜಿನ್ ಗಂಟೆಗೆ ಗರಿಷ್ಠ 70 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಟಿ-90

ಟಿ-90

ಟಿ-90 ಒಂದು ರಷ್ಯಾ ನಿರ್ಮಿತ ಯುದ್ಧ ಟ್ಯಾಂಕರ್ ಆಗಿದೆ. 47.5 ಟನ್ ತೂಕದ ಈ ಯುದ್ಧ ಟ್ಯಾಂಕರ್, 125 ಎಂಎಂ ನಯವಾದ ರಂಧ್ರ ಫಿರಂಗಿಗಳನ್ನು ಬಳಕೆ ಮಾಡಬಹುದಾಗಿದೆ. ಅಲ್ಲದೆ ಗಂಟೆಗೆ 60ರಿಂದ 65 ಕೀ.ಮೀ. ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿದೆ.

ಟಿ-72

ಟಿ-72

ಟಿ-72 ಮಗದೊಂದು ರಷ್ಯಾ ನಿರ್ಮಿತ ಯುದ್ಧ ಟ್ಯಾಂಕರ್ ಆಗಿದೆ. ಬಹಳ ಹಿಂದಿನಿಂದಲೇ ರಷ್ಯಾ ಜೊತೆಗಿನ ಉತ್ತಮ ಸ್ನೇಹ ಬಾಂಧವ್ಯವನ್ನು ಬೆಳೆಸಿಕೊಂಡು ಬಂದಿರುವುದೇ ಭಾರತದಲ್ಲೂ ಇದರ ಸೇವೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಇದರ ತಹಳದಿಯಲ್ಲಿ ಅಜೇಯ ಎಂಕೆ1 ಹಾಗೂ ಅಜೇಯ ಎಂಕೆ2 ಅಭಿವೃದ್ಧಿಪಡಿಸಲಾಗಿತ್ತು.

ಟಿ-55

ಟಿ-55

ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಟಿ-55 ಯುದ್ಧ ಟ್ಯಾಂಕರ್ 2011ರಲ್ಲಿ ತನ್ನ ಸೇವೆಯಿಂದ ವಿಮುಕ್ತಿ ಪಡೆದಿತ್ತು. ಇದರಲ್ಲಿ 100ಎಂಎಂ ಮತ್ತು 2 ಮೆಷಿನ್ ಗನ್ ಆಳವಡಿಸುವ ಸಾಮರ್ಥ್ಯ ಹೊಂದಿದೆ. 36 ಟನ್ ತೂಕದ ಈ ಯುದ್ಧ ಟ್ಯಾಂಕರ್ ಗರಿಷ್ಠ 581 ಅಶ್ವಶಕ್ತಿ ಉತ್ಪಾದಿಸುತ್ತದೆ.

ವಿಜಯಂತ

ವಿಜಯಂತ

ಭಾರತದಲ್ಲೇ ಸ್ಥಳೀಯವಾಗಿ ನಿರ್ಮಿಸಲಾದ ಮೊದಲ ಯುದ್ಧ ಟ್ಯಾಂಕರ್ ಇದಾಗಿದೆ. ಬ್ರಿಟನ್ ನ ವಿಕೆರ್ಸ್ ಎಂಕೆ1 ಟ್ಯಾಂಕರ್ ನಿಂದ ಪರವಾನಗಿ ಪಡೆದು ಇದನ್ನು ಅಭಿವೃದ್ಧಿಪಡಿಸಲಾಗಿದೆ. ಬಳಿಕ 2008ರಲ್ಲಿ ನಿವೃತ್ತಿ ಹೊಂದಿರುವ ವಿಜಯಂತ 1971ರಲ್ಲಿ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಮುಖ್ಯ ಪಾಲುದಾರಿಕೆ ವಹಿಸಿತ್ತು.

ಪಿಟಿ-76

ಪಿಟಿ-76

ಸೋವಿಯತ್ ಒಕ್ಕೂಟಕ್ಕೆ ಸೇರಿದ ಹಗುರ ಭಾರದ ಯುದ್ಧ ಟ್ಯಾಂಕರ್ ಇದಾಗಿದ್ದು, 1965 ಹಾಗೂ 1971ರ ಇಂಡೋ-ಪಾಕ್ ಯುದ್ಧದಲ್ಲಿ ತನ್ನ ಸೇವೆಯನ್ನು ಸಲ್ಸಿಸಿತ್ತು. ಬಳಿಕ 2009ರಲ್ಲಿ ನಿವೃತ್ತಿ ಹೊಂದಿರುವ ಇದನ್ನು ಭಾರತೀಯ ಸೇನೆಯು ಗುರಿ ಅಭ್ಯಾಸಿಸಲು ಬಳಕೆ ಮಾಡುತ್ತಿದೆ.

 ಬಿಎಂಪಿ-2 ಶರತ್

ಬಿಎಂಪಿ-2 ಶರತ್

ರಷ್ಯಾ ನಿರ್ಮಿತ ಎರಡನೇ ತಲೆಮಾರಿನ ಯುದ್ಧ ಟ್ಯಾಂಕರ್ ಇದಾಗಿದೆ. ರಕ್ಷಣಾ ಉದ್ದೇಶಕ್ಕಾಗಿ ಈ ಯುದ್ಧ ವಾಹನದ ಹಲವಾರು ಆವೃತ್ತಿಗಳನ್ನು ದೇಶದಲ್ಲಿ ಬಳಕೆ ಮಾಡಲಾಗಿದೆ.

ಬಿಎಂಪಿ-1

ಬಿಎಂಪಿ-1

ರಷ್ಯಾದ ಕಾಲಾಳು ಪಡೆ ಯುದ್ಧ ವಾಹನವಾಗಿರುವ ಬಿಎಂಪಿ-1 ಶೀತ ಕಾಲ ಸಮರದ ಸಂದರ್ಭದಲ್ಲಿ ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕದ ರೂಪದಲ್ಲಿ ಸೇವೆ ಸಲ್ಲಿಸಿತ್ತು. ಭಾರತದಲ್ಲಿ ಇಂತಹ 800ರಷ್ಟು ಮಾದರಿಗಳು ಸೇವೆ ಸಲ್ಲಿಸುತ್ತಿದೆ.

ಬಿಎಂಡಿ-1 ಮತ್ತು ಬಿಎಂಡಿ-2

ಬಿಎಂಡಿ-1 ಮತ್ತು ಬಿಎಂಡಿ-2

ವಾಯುಗಾಮಿ ಕಾಲಾಳುಪಡೆ ಹೋರಾಟ ವಾಹನವಾಗಿರುವ ಬಿಎಂಡಿ-1 ಮತ್ತು ಬಿಎಂಡಿ-2 ಸೋವಿಯತ್ ಒಕ್ಕೂಟ ಅಧಪತನದ ಅಂತಿಮ ಕಾಲಘಟ್ಟದಲ್ಲಿ ಅಭಿವೃದ್ಧಿಗೊಳಿಸಲಾಗಿತ್ತು.

ನಮಿಕ (NAMICA)

ನಮಿಕ (NAMICA)

ನ್ಯಾಗ್ ಮಿಸೈಲ್ ಕ್ಯಾರಿಯರ್ ಅಥವಾ ನಮಿಕ ಎಂದರಿಯಲ್ಪಡುವ ಈ ಯುದ್ಧ ಟ್ಯಾಂಕರ್, ಬಿಎಂಪಿ-2 ಶರತ್‌ರ ಆಧುನಿಕ ಮಾದರಿಯಾಗಿದೆ. ಶತ್ರು ಪಾಳೇಯದ ಟ್ಯಾಂಕರ್ ಗಳನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿರುವ ಈ ಯುದ್ಧ ಟ್ಯಾಂಕರ್ 14.5 ಟನ್ ಭಾರವನ್ನು ಹೊಂದಿದ್ದು, ಗಂಟೆಗೆ 7 ಕೀ.ಮೀ.ಗಳಷ್ಟೇ ವೇಗದಲ್ಲಿ ಸಾಗಬಲ್ಲದ್ದು. ಇದರಲ್ಲಿ 12 ಮಿಸೈಲ್ ಗಳನ್ನು ಹೊತ್ತೊಯ್ಯಬಹುದಾಗಿದೆ.

ಎಫ್‌ವಿ432

ಎಫ್‌ವಿ432

ಬ್ರಿಟನ್ ನಿಂದ ಅಭಿವೃದ್ಧಿಯಾಗಿರುವ ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕ ಇದಾಗಿದ್ದು, 240 ಅಶ್ವಶಕ್ತಿ ಉತ್ಪಾದಿಸಬಲ್ಲ ರೋಲ್ಸ್ ರಾಯ್ಸ್ ಕೆ-60 ಎಂಜಿನ್ ಬಳಕೆಯಾಗಿದೆ. ಅಲ್ಲದೆ 12.7 ಎಂಎಂ ದಪ್ಪದ ಸುರಕ್ಷಾ ಕವಚ ಇದನ್ನು ಆವರಿಸಿದೆ.

ಒಟಿ-62 ಟಿಒಪಿಎಎಸ್ ( OT-62 TOPAS)

ಒಟಿ-62 ಟಿಒಪಿಎಎಸ್ ( OT-62 TOPAS)

ಪೊಲೆಂಡ್ ಹಾಗೂ ಹಾಲಿ ಚೆಕೊಸ್ಲೊವೇಕಿಯಾ ಜಂಟಿಯಾಗಿ ನಿರ್ಮಿಸಿರುವ ಯುದ್ಧ ಟ್ಯಾಂಕರ್ ಇದಾಗಿದೆ. ಇದರ ಪರಿಷ್ಕೃತ ಮಾದರಿ ಫಾರ್ವಡ್ ರಿಪೈರ್ ಟೈಮ್ ವೆಹಿಕಲ್ (FRT TOPAS) ಮತ್ತು ಟಿಒಪಿಎಎಸ್ 2ಎ (TOPAS 2A ) ಅನ್ನು ಭಾರತ ಅಭಿವೃದ್ಧಿಪಡಿಸಿತ್ತು.

ಬಿಟಿಆರ್ ಶ್ರೇಣಿ

ಬಿಟಿಆರ್ ಶ್ರೇಣಿ

ರಷ್ಯಾದ ಶಸ್ತ್ರಸಜ್ಜಿತ ಸಾರಿಗೆ ಯುದ್ಧ ಟ್ಯಾಂಕರ್ ಆಗಿರುವ ಬಿಟಿಆರ್ ಶ್ರೇಣಿಯು 1950ರ ದಶಕದಲ್ಲಿ ಸೇವೆಯಲ್ಲಿತ್ತು. ವಿಶೇಷವೆಂದರೆ ಇದು ಈಗಲೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದೆ.

ಬಿಆರ್‌ಡಿಎಂ

ಬಿಆರ್‌ಡಿಎಂ

ರಷ್ಯಾ ನಿರ್ಮಿತ ಆರ್ಮರ್ಡ್ ಪೆಟ್ರೋಲ್ ಕಾರು ಇದಾಗಿದ್ದು, 7.7 ಟನ್ ತೂಕವನ್ನು ಹೊಂದಿದೆ. ಇದು 14.5 ಎಂಎಂ ಹೆವಿ ಮೆಷಿನ್ ಗನ್ ಜೋಡಣೆ ಮಾಡುವ ಸಾಮರ್ಥ್ಯ ಹೊಂದಿದೆ.

 ಫೆರೆಟ್ ಸ್ಕೌಟ್ ಕಾರು

ಫೆರೆಟ್ ಸ್ಕೌಟ್ ಕಾರು

ಫೆರೆಟ್ ಸ್ಕೌಟ್ ಕಾರು ಬ್ರಿಟನ್ ನಿರ್ಮಿತ ಯುದ್ಧ ವಾಹನವಾಗಿದ್ದು ವಿಶೇಷವಾಗಿ ಸ್ಥಳಾನ್ವೇಷಣೆಗಾಗಿ ಬಳಕೆ ಮಾಡಲಾಗುತ್ತಿತ್ತು. ಭಾರತ ಸೇರಿದಂತೆ ಅನೇಕ ಕಾಮನ್ ವೆಲ್ತ್ ರಾಷ್ಟ್ರಗಳು ಇದರ ಪ್ರಯೋಜನ ಪಡೆಯುತ್ತಿದೆ.

ಭಾರತ ಅಶ್ವಶಕ್ತಿಯಾಗಲು ಸಹಕಾರಿಯಾದ ಯುದ್ಧ ಟ್ಯಾಂಕರ್ ಗಳು

ಶತ್ರು ಪಾಳಯದಲ್ಲಿ ನಡುಕ ಸೃಷ್ಟಿಸಬಲ್ಲ 10 ಅಪಾಯಕಾರಿ ಯುದ್ಧ ಟ್ಯಾಂಕರ್

Most Read Articles

Kannada
Read more on ಭಾರತ
English summary
List Of Battle Tanks Used By The Indian Military
Story first published: Friday, July 31, 2015, 11:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X