ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಅಂತೂ ಸಿಗ್ಲಿಲ್ಲ !! ಈ ಹೊಸ ತಂತ್ರಜ್ಞಾನ ಏನ್ ಆದ್ರೂ ಮಾಡುತ್ತಾ ನೋಡ್ಬೇಕು.

Written By:

ಇತ್ತೀಚಿಗೆ ವೇರಿಯೇಬಲ್ ಮೆಸೇಜಿಂಗ್ ಸಿಸ್ಟಮ್( ವಿ.ಎಂ.ಎಸ್) ಎಂಬ ಟ್ರಾಫಿಕ್ ವಿವರಣೆಯನ್ನು ನೀಡುವ ಅತ್ಯದ್ಭುತ ಸಾಧನವನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಡುಗಡೆ ಮಾಡಲಾಯಿತು.

ಕ್ಲೌಡ್ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ತಂತ್ರಾಂಶ ಇದಾಗಿದ್ದು, ಯಾವ ರಸ್ತೆಯಲ್ಲಿ ಎಷ್ಟು ಟ್ರಾಫಿಕ್ ಹೊಂದಿದೆ, ಯಾವ ರಸ್ತೆ ಆಯ್ದುಕೊಂಡರೆ ಉತ್ತಮ, ಹೋಗಬೇಕಾಗಿರುವ ಸ್ಥಳಕ್ಕೆ ಎಷ್ಟು ಗಂಟೆಗೆ ನಾವು ತಲುಪುತ್ತೇವೆ, ಎಂಬಿತ್ಯಾದಿ ವಿಚಾರಗಳನ್ನು ಈ ಡಿಜಿಟಲ್ ಸಾಧನ ಮಾರ್ಗದರ್ಶನ ಮಾಡುತ್ತದೆ.

ಈ ವಿದ್ಯುಚ್ಛಕ್ತಿಯ ಸಹಾಯದಿಂದ ಕಾರ್ಯನಿರ್ವಹಿಸುವ ಸೂಚನಾ ಪಾಲಕ ಇದಾಗಿದ್ದು, ವಿಮಾನ ನಿಲ್ದಾಣ ತಲುಪಲು ಎಷ್ಟು ಗಂಟೆ ಬೇಕಾಗುತ್ತದೆ ಎಂಬ ನಿಖರ ಮಾಹಿತಿ ನೀಡುತ್ತದೆ.

ನೇರ ಮಾಹಿತಿ ನೀಡುವ ತಂತಜ್ಞಾನ ಹೊಂದಿರುವ ಕಾರಣ ಮಾಹಿತಿ ನೂರಕ್ಕೆ ನೂರರಷ್ಟು ಸರಿಯಾಗಿರುತ್ತದೆ.

ಸಮಯದ ಜೊತೆ ರಸ್ತೆ ಹೆಚ್ಚು ಟ್ರಾಫಿಕ್ ನಿಂದ ಕೂಡಿದ್ದರೆ, ಮತ್ತೊಂದು ಪರ್ಯಾಯವಾದ ರಸ್ತೆ ಯಾವುದು ಎಂಬ ಸೂಚನೆಯನ್ನೂ ಸಹ ನೀಡುತ್ತದೆ ಈ ಸಾಧನ.

ಅತಿ ಹೆಚ್ಚು ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವ ಹೆಬ್ಬಾಳದಲ್ಲಿ 3ಎಂ ಸೂಚನಾ ಫಲಕಗಳ ಜೊತೆ ಈ ಹೊಚ್ಚ ಹೊಸ ವಿದ್ಯುತ್ ಚಾಲಿತ ಸೂಚನಾ ಫಲಕ ಇರಿಸಲಾಗಿದ್ದು, ಈ ಭಾಗದಲ್ಲಿ ಸಂಚರಿಸುವ ಮಂದಿಗೆ ಖಂಡಿತವಾಗಿಯೂ ಈ ಸೂಚನಾ ಫಲಕ ದಾರಿ ದೀಪವಾಗುವುದರಲ್ಲಿ ಸಂಶಯವಿಲ್ಲ.

ಪರ್ಯಾಯವಾದ ರಸ್ತೆ ಜೊತೆಗೆ ವಾಹನವನ್ನು ನಿಲುಗಡೆ ಮಾಡಲು ಸ್ಥಳಾವಕಾಶ ಇದೆಯೇ ಎಂಬ ಮಾಹಿತಿಯನ್ನು ನೀಡಲಿರುವುದು ಜನರಿಗೆ ತಮ್ಮ ರಸ್ತೆಯಲ್ಲಿ ಹೋಗುವಾಗ ಆಗುವ ಗೊಂದಲಗಳನ್ನು ಪರಿಹಾರ ಮಾಡುತ್ತದೆ.

ನೇರ ಮಾಹಿತಿ ನೀಡುವ ನಿಟ್ಟಿನಲ್ಲಿ ರಸ್ತೆ ಬದಿಯಲ್ಲಿ ಮಾಹಿತಿ ನೀಡುವ ಸೆನ್ಸರ್-ಗಳನ್ನು ಇರಿಸಲಾಗಿದ್ದು, ಇದರಿಂದಾಗಿ ಇವುಗಳಿಂದ ಬರುವ ಮಾಹಿತಿಯನ್ನು ನೇರ ಸೂಚನಾ ಫಲಕದಲ್ಲಿ ಬಿತ್ತರಿಸುವ ವ್ಯವಸ್ಥೆ ಮಾಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಟ್ರಾಫಿಕ್), ಆರ್ ಹಿತೇಂದ್ರ " ಈ ಸೂಚನಾ ಫಲಕಗಳ ಬಗ್ಗೆ ನಮಗೆ ಒಳ್ಳೆ ರೀತಿಯ ಪ್ರತಿಕ್ರಿಯೆ ಬಂದಲ್ಲಿ, ಬೆಂಗಳೂರಿನ ಟ್ರಾಫಿಕ್ ಹೊಂದಿರುವ 40 ಹೆಚ್ಚು ಸ್ಥಳಗಳನ್ನು ಗುರುತಿಸಿ ಈ ರೀತಿಯ ಸೂಚನಾ ಫಲಕಗಳನ್ನು ಹಾಕಲಾಗುತ್ತದೆ" ಎಂದು ಹೇಳಿದರು.

ಎಲ್ಲಾ ಕೆಲಸವೂ ಸ್ವಯಂಚಾಲಿತವಾಗಿದ್ದು, ಮಾನವನ ಅಸ್ತಕ್ಷೇಪವಿಲ್ಲದೆ ಸ್ಯಾಟಲೈಟ್ ಸಹಾಯದಿಂದ ನಡೆಯುವುದರಿಂದ ಮಾಹಿತಿಯನ್ನು ಪಡೆಯುವ ಜನತೆಗೆ ನಿಖರ ಮತ್ತು ನೇರ ಮಾಹಿತಿ ಲಭಿಸಿದಂತಾಗುತ್ತದೆ.

ಎಷ್ಟೇ ಟ್ರಾಫಿಕ್ ಇದ್ದರೂ ಬೈಕ್ ಸವಾರರಿಗೆ ಟ್ರಾಫಿಕ್ ಬಿಸಿ ತಟ್ಟುವುದು ಕಡಿಮೆ. ಇಂತಹ ಬೈಕ್ ಕೊಳ್ಳುವವರಿಗೆ ಈ ಬಜಾಜ್ ಕಂಪನಿಯ ಡೊಮಿನರ್ 400 ಅತ್ಯದ್ಭುತ ಆಯ್ಕೆ ಕೂಡ. ಡೊಮಿನರ್ 400 ಬೈಕಿನ ಚಿತ್ರಗಳನ್ನು ಈಗಲೇ ವೀಕ್ಷಿಸಿ.

Click to compare, buy, and renew Car Insurance online

Buy InsuranceBuy Now

Story first published: Monday, February 20, 2017, 12:21 [IST]
English summary
Live traffic update system has been launched in Bangalore, which uses road-side sensors to give users details about traffic.
Please Wait while comments are loading...

Latest Photos