ಯಾವ ರೈಲಿಗೂ ಕಮ್ಮಿಯೇನಲ್ಲ; ಇದುವೇ ಜಗತ್ತಿನ ಅತಿ ಉದ್ದದ ಸೈಕಲ್

By Nagaraja

ಜನಸಾಮಾನ್ಯರ ಸೈಕಲ್‌ನಲ್ಲೂ ದಾಖಲೆ ಸೃಷ್ಟಿ ಮಾಡಬಹುದೇ? ಇದಕ್ಕೊಂದು ತಾಜಾ ಉದಾಹರಣೆ ನಾವಿಂದು ಪರಿಚಯಿಸಲಿರುವ ಜಗತ್ತಿನ ಅತಿ ಉದ್ದದ ಸೈಕಲ್.

Also Read: ಅಬುದಾಬಿ ಶೇಖ್ ಬಳಿಯಿದೆ ವಿಶ್ವದ ಅತಿ ದೊಡ್ಡ ಟ್ರಕ್

ಇದು ಯಾವ ರೈಲಿಗೂ ಕಮ್ಮಿಯೇನಲ್ಲ. ಎಲ್ಲ ಸೈಕಲ್ ಗಳಲ್ಲೂ ಇರುವಂತಹ ಎರಡು ಚಕ್ರಗಳು ಇದರಲ್ಲೂ ಇದೆ. ಇನ್ನು ಸೈಕಲ್ ತುಳಿಯಲು ಎರಡು ಪೆಡಲುಗಳಿವೆ. ಮತ್ತೆ ಹೇಗೆ ಇಂತಹದೊಂದು ದಾಖಲೆ ಸೃಷ್ಟಿಯಾಗಲು ಸಾಧ್ಯ ಅಂತೀರಾ? ಬನ್ನಿ ಚಿತ್ರಪುಟದಲ್ಲಿ ಈ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕೋಣ.

ಜಗತ್ತಿನ ಅತಿ ಉದ್ದದ ಸೈಕಲ್ ಗಿನ್ನೆಸ್ ದಾಖಲೆ

ಹಾಲೆಂಡ್‌ನ Mijl Van Mares Werkploeg ಸೈಕ್ಲಿಂಗ್ ಸಂಸ್ಥೆಯ ಸದಸ್ಯರು ಇಂತಹದೊಂದು ವಿನೂತನ ದಾಖಲೆ ಸ್ಥಾಪಿಸಿದ್ದಾರೆ.

ಜಗತ್ತಿನ ಅತಿ ಉದ್ದದ ಸೈಕಲ್ ಗಿನ್ನೆಸ್ ದಾಖಲೆ

ಪ್ರಸ್ತುತ ಗಿನ್ನೆಸ್ ದಾಖಲೆಗೆ ಪಾತ್ರವಾಗಿರುವ ಜಗತ್ತಿನ ಅತಿ ಉದ್ದದ ಸೈಕಲ್ 35.79 ಮೀಟರ್ ಉದ್ದವನ್ನು (117 ಅಡಿ ಹಾಗೂ 5 ಇಂಚು) ಹೊಂದಿದೆ.

ಜಗತ್ತಿನ ಅತಿ ಉದ್ದದ ಸೈಕಲ್ ಗಿನ್ನೆಸ್ ದಾಖಲೆ

ಇದಕ್ಕಾಗಿ ಏಳು ಅಲ್ಯೂಮಿನಿಯಂ ಕಟ್ಟುಗಳನ್ನು ಇದರ ದೇಹಕ್ಕೆ ಜೋಡಣೆ ಮಾಡಲಾಗಿದೆ.

ಜಗತ್ತಿನ ಅತಿ ಉದ್ದದ ಸೈಕಲ್ ಗಿನ್ನೆಸ್ ದಾಖಲೆ

ಈ ಸೈಕಲ್ ಓರ್ವನಿಂದ ಮಾತ್ರ ನಿಭಾಯಿಸಲು ಸಾಧ್ಯವಿಲ್ಲ. ಇಲ್ಲಿ ಮುಂದುಗಡೆ ಕುಳಿತುಕೊಂಡವನ್ನು ಸ್ಟೀರಿಂಗ್ ಬಾಲನ್ಸ್ ಮಾಡುವುದಾದ್ದಲ್ಲಿ ಹಿಂಬದಿಯವ ಪೆಡಲು ತುಳಿಯಬೇಕಾಗುತ್ತದೆ.

ಜಗತ್ತಿನ ಅತಿ ಉದ್ದದ ಸೈಕಲ್ ಗಿನ್ನೆಸ್ ದಾಖಲೆ

ಭಾರಿ ಗಾತ್ರದ ಈ ಸೈಕಲ್‌ನಲ್ಲೂ ಎಲ್ಲ ಸಾಮಾನ್ಯ ಸೈಕಲ್ ನಂತೆ ಎರಡು ಚಕ್ರಗಳನ್ನು ಮಾತ್ರ ಆಳವಡಿಸಲಾಗಿದೆ.

ಜಗತ್ತಿನ ಅತಿ ಉದ್ದದ ಸೈಕಲ್ ಗಿನ್ನೆಸ್ ದಾಖಲೆ

ಇಂತಹದೊಂದು ದಾಖಲೆಯ ಹಿಂದಿರುವ ಉದ್ದೇಶವಾದರೂ ಏನು ? ಈ ಬಗ್ಗೆ ಪ್ರತಿಕ್ರಿಯಿಸಿರುವ ಡಚ್ ಸೈಕಲ್ ಸಂಸ್ಥೆಯ ನಾಯಕ ಫ್ರಾಂಕ್ ಪೆಲ್ಟ್, "ಇದೊಂದು ಸವಾಲಿನ ಕೆಲಸವಾಗಿತ್ತು. ಸವಾಲನ್ನು ಸ್ವೀಕರಿಸಲು ನಾವು ಇಷ್ಟಪಡುತ್ತಿದ್ದೇವೆ" ಎಂದಿದ್ದಾರೆ.

ಜಗತ್ತಿನ ಅತಿ ಉದ್ದದ ಸೈಕಲ್ ಗಿನ್ನೆಸ್ ದಾಖಲೆ

ನೇರವಾಗಿ ಹರಡಿರುವ ರಸ್ತೆಯಲ್ಲಿ ಎಷ್ಟು ದೂರದ ವೆರಗೂ ಬೇಕಾದರೂ ಈ ಸೈಕಲನ್ನು ತುಳಿಯಬಹುದಾಗಿದೆ. ಒಮ್ಮೆ ನೋಡ್ತೀರಾ ಹೇಗೆ ?

ಇವನ್ನೂ ಓದಿ

ವಿಶ್ವದ ಅತಿ ದೊಡ್ಡ ಸೈಕಲ್ ನಿಮ್ಮ ಗಮನ ಸೆಳೆಯಿತೇ

Most Read Articles

Kannada
English summary
Setting themselves a challenge to get into the Guinness World Records book, members of the Mijl Van Mares Werkploeg (Netherlands) built an incredibly long bicycle that measured 35.79 m (117 ft 5 in) in length.
Story first published: Wednesday, November 18, 2015, 10:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X