ಕುಣಿದು ಕುಪ್ಪಳಿಸುವ ಕಾರುಗಳನ್ನು ನೋಡಿದ್ರಾ?

By Nagaraja

ಕಾರುಗಳು ಸಂಚಾರಕ್ಕೆ ಮಾತ್ರ ಬಳಕೆ ಮಾಡಲಾಗುತ್ತಿಲ್ಲ. ಅನೇಕರ ಪಾಲಿಗಿದು ಜೀವನ ಶೈಲಿಯ ಭಾಗವಾಗಿದೆ. ಜಗತ್ತಿನಾದ್ಯಂತ ಶೋಧನೆ ಮಾಡಿ ನೋಡಿದರೆ ಅನೇಕ ಕಾರು ಕಟ್ಟುಕಥೆಗಳು ಕಾಣಸಿಗುತ್ತದೆ. ಅತ್ತ ಸಂಪನ್ನ ರಾಷ್ಟ್ರ ಅಮೆರಿಕದಲ್ಲೂ 'ಲೊರೈಡರ್‌'ಗಳೆಂಬ (lowrider) ವಿಶೇಷ ರೀತಿಯ ಕುಣಿದು ಕುಪ್ಪಳಿಸುವ ಕಾರುಗಳಿವೆ.

ಘಾಟಿ ಪ್ರದೇಶದಲ್ಲಿ ಸುರಕ್ಷಿತ ಚಾಲನೆ ಹೇಗೆ?

ಇದೇನು ಲೊರೈಡರ್? ಎದು ಸಂದೇಹಪಟ್ಟಲ್ಲಿ ನಮ್ಮಲ್ಲಿ ಉತ್ತರವಿದೆ. ಸಾಮಾನ್ಯ ಕಾರುಗಳಿಗಿಂತಲೂ ಭಿನ್ನವಾಗಿ ಲೊ ರೈಡರ್ ಕಾರುಗಳ ಗ್ರೌಂಡ್ ಕ್ಲಿಯರನ್ಸ್ ತುಂಬಾನೇ ಕಡಿಮೆಯಾಗಿದ್ದು, ನೆಲಕ್ಕೆ ತಾಗುವಂತಿದೆ. ಇದಕ್ಕೆ ವಿಶೇಷವಾಗಿ ನಿರ್ಮಿಸಲಾದ ಕಡಿಮೆ ವ್ಯಾಸದ ಚಕ್ರಗಳನ್ನು ಆಳವಡಿಸಲಾಗುತ್ತದೆ. ಹಾಗೆಯೇ ಸಸ್ಪೆಷನ್ ಸಹ ಪರಿಷ್ಕೃತಗೊಳಿಸಲಾಗುತ್ತದೆ. 1940ರ ದಶಕದಿಂದಲೇ ಲೊರೈಡರ್ ಅಮೆರಿಕದಲ್ಲಿ ಜನಪ್ರಿಯವಾಗಿತ್ತು. ವಿಶೇಷ ರೀತಿಯಲ್ಲಿ ಕುಣಿಯುವ ಇಂತಹ ಕಾರುಗಳು ಆಧುನಿಕ ಕಾಲಘಟ್ಟದಲ್ಲಿ ನಗರ ಸಂಸ್ಕೃತಿಯ ಭಾಗವಾಗಿಬಿಟ್ಟಿದೆ.

ಕುಣಿದು ಕುಪ್ಪಳಿಸುವ ಕಾರುಗಳನ್ನು ನೋಡಿದ್ರಾ?

ಪ್ರಮುಖವಾಗಿಯೂ ಹಳೆಯ ಕಾರುಗಳನ್ನು ಪರಿಷ್ಕೃತಗೊಳಿಸುವ ಮೂಲಕ ಲೊರೈಡರ್ ಕಾರುಗಳನ್ನು ತಯಾರಿಸಲಾಗುತ್ತಿದೆ. ನೆಲದಿಂದ ಮೇಲಕ್ಕೆ ಅಪ್ಪಳಿಸುವ ತಂತ್ರಗಾರಿಕೆಯೇ ಲೊರೈಡರ್ ಕಾರಿನ ವಿಶಿಷ್ಟತೆ ಕಾಪಾಡಲು ನೆರವಾಗಿದೆ.

ಕುಣಿದು ಕುಪ್ಪಳಿಸುವ ಕಾರುಗಳನ್ನು ನೋಡಿದ್ರಾ?

ಇದು ಸಂಪೂರ್ಣವಾಗಿ ಹಾರುವ ಅಥವಾ ಗಾಳಿಯಲ್ಲಿ ಒಂದು ಅಥವಾ ಎರಡು ಚಕ್ರಗಳಲ್ಲಿ ತೇಲುವ ಸಾಮರ್ಥ್ಯ ಹೊಂದಿದೆ. ಸಸ್ಪೆಷನ್‌ನಲ್ಲಿ ತರಲಾಗಿರುವ ವ್ಯಾಪಾಕವಾದ ಮಾರ್ಪಾಡಿನಿಂದಾಗಿ ಹಾರಾಡಲು ಯಶಸ್ವಿಯಾಗುತ್ತದೆ. ಇಲ್ಲಿ ಸ್ಪ್ರಿಂಗ್ಸ್ ಮತ್ತು ಶಾಕ್ಸ್‌ಗಳನ್ನು ಏರ್‌ಬ್ಯಾಗ್ಸ್ ಬದಲಾಯಿಸಿಕೊಳ್ಳಲಿದೆ. ಇದರಲ್ಲಿ ಕಸ್ಟಮ್ ಹೈಡ್ರಾಲಿಕ್ ಸಿಸ್ಟಂ ಪ್ರಮುಖವಾಗಿದ್ದು, ಚಾಲಕರಿಗೆ ಬೇಕಾದ ಹಾಗೆ ಕಾರನ್ನು ಮೇಲಕ್ಕೆ ಕೆಳಕ್ಕೆ ಮಾಡಲು ನೆರವಾಗುತ್ತದೆ.

ಕುಣಿದು ಕುಪ್ಪಳಿಸುವ ಕಾರುಗಳನ್ನು ನೋಡಿದ್ರಾ?

ಹೈಡ್ರಾಲಿಕ್ ಸಿಸ್ಟಂ ಕೆಲಸ ಇನ್ನಷ್ಟು ಕುತೂಹಲಕಾರಿಯಾಗಿದೆ. ಇದರಲ್ಲಿ ಹೈಡ್ರಾಲಿಕ್ ಎಕ್ಯೂಟರ್ ಅಥವಾ ಬ್ಲಾಡರ್ ಬಳಕೆ ಮಾಡಲಾಗುತ್ತಿದ್ದು, ಬೇಗನೇ ತುಂಬಿಸಬಹುದಾಗಿದೆ. ಹೆಚ್ಚು ಒತ್ತಡದಲ್ಲಿ ಹೀಗೆ ಮಾಡುವುದರಿಂದೆ ಇದಕ್ಕೆ ಜೋಡಣೆ ಮಾಡಲಾಗಿರುವ ಸಸ್ಪೆಷನ್ ಘಟಕ ಸ್ಪ್ರಿಂಗ್ ತರಹನೆ ಮೇಲಕ್ಕೆ ಜಿಗಿಯಲು ಆರಂಭಿಸುತ್ತದೆ.

ಕುಣಿದು ಕುಪ್ಪಳಿಸುವ ಕಾರುಗಳನ್ನು ನೋಡಿದ್ರಾ?

ಒಬ್ಬ ವ್ಯಕ್ತಿ ಯಾವ ರೀತಿ ಮೇಲಕ್ಕೆ ಹಾರಲು ಬಲ ಪ್ರಯೋಗಿಸುತ್ತಾನೋ ಇದೇ ತತ್ವವನ್ನು ಲೊರೈಡರ್ ಹೈಡ್ರಾಲಿಕ್ ಸಸ್ಪೆಷನ್‌ನಲ್ಲೂ ಅನುಸರಿಸಲಾಗಿದೆ.

ಕುಣಿದು ಕುಪ್ಪಳಿಸುವ ಕಾರುಗಳನ್ನು ನೋಡಿದ್ರಾ?

ಹೈಡ್ರಾಲಿಕ್ ಅಕ್ಯೂಟರ್‌ಗಳಿಗೆ ಹೆಚ್ಚಿನ ಶಕ್ತಿಯ ಅಗತ್ಯವಾಗಿರುವುದರಿಂದ ಇಂತಹ ಕಾರು ಅಥವಾ ಟ್ರಕ್‌ಗಳಿಗೆ ಹೆಚ್ಚಿನ ಬ್ಯಾಟರಿಗಳ ಅಗತ್ಯವಿದೆ. ಇದು ಕಾರಿನ ಭಾರವನ್ನು ವೃದ್ಧಿಸುತ್ತದೆ. ಆದರೆ ಇಂತಹ ಕಾರುಗಳು ರೇಸಿಂಗ್‌ಗೆ ಹೇಳಿ ಮಾಡಿಸಿದ್ದಲ್ಲ.

ಕುಣಿದು ಕುಪ್ಪಳಿಸುವ ಕಾರುಗಳನ್ನು ನೋಡಿದ್ರಾ?

ಹಳೆಯ ಸೇರಿದಂತೆ ಆಧುನಿಕ ಕಾರುಗಳನ್ನು ಲೊರೈಡರ್ ಆಗಿ ಪರಿವರ್ತಿಸಲಾಗುತ್ತದೆ. ಈ ಪೈಕಿ 1960ರ ಷೆವರ್ಲೆ ಇಂಪಲಾಸ್, 1970,80ರ ಮೊಂಟೆ ಕಾರ್ಲಾಸ್, ಬ್ಯೂಕ್ ರಿಗಾಲ್ಸ್, ಒಲ್ಡ್‌ಮೊಬೈಲ್ ಕಟ್ಲಾಸ್ ಸುಪ್ರೀಮ್ ಮತ್ತು ಷೆವರ್ಲೆ ಇಎಲ್ ಕ್ಯಾಮಿನೊಗಳಂತಹ ಟ್ರಕ್‌ಗಳು ಪ್ರಮುಖವಾಗಿದೆ.

ಕುಣಿದು ಕುಪ್ಪಳಿಸುವ ಕಾರುಗಳನ್ನು ನೋಡಿದ್ರಾ?

ಪ್ರಸ್ತುತ ಅಮೆರಿಕದಲ್ಲಿ ಲೊರೈಡರ್ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಇದು ನೋಡುಗರಿಗೆ ಉತ್ತಮ ಅನುಭವ ನೀಡುತ್ತದೆ. ಇಂತಹ ಪ್ರದರ್ಶನ ನಡೆಯುವ ಸಂದರ್ಭದಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗುತ್ತದೆ.

ಕುಣಿದು ಕುಪ್ಪಳಿಸುವ ಕಾರುಗಳನ್ನು ನೋಡಿದ್ರಾ?

ಆದರೆ ಸದ್ಯಕ್ಕಂತೂ ಈ ಸಂಸ್ಕೃತಿ ಭಾರತ ಪ್ರವೇಶಿಸುವುದು ದೂರದ ಮಾತು. ಆದರು ಭವಿಷ್ಯದಲ್ಲೂ ಯಾರದರೂ ಕಾರುಗಳ ರಾಜ ಅಂಬಾಸಿಡರನ್ನು ಲೊರೈಡರ್ ಆಗಿ ಪರಿವರ್ತಿಸಿದರೆ ಅಚ್ಚರಿ ಪಡಬೇಕಾಗಿಲ್ಲ.

ಕುಣಿದು ಕುಪ್ಪಳಿಸುವ ಕಾರುಗಳನ್ನು ನೋಡಿದ್ರಾ?

ನಿಮಗೂ ಲೊರೈಡರ್ ಪ್ರದರ್ಶನ ಇಷ್ಟವಾದ್ದಲ್ಲಿ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...ಸದ್ಯ ಆಕರ್ಷಕ ವೀಡಿಯೋಗಾಗಿ ಮುಂದಿನ ಸ್ಲೈಡರ್ ಕ್ಲಿಕ್ಕಿಸಿ

ಲೊರೈಡರ್ ಬಗೆಗಿನ ಈ ವೀಡಿಯೋ ನಿಮಗೆ ಎಲ್ಲವನ್ನು ಹೇಳಿಕೊಡಲಿದೆ.

ಫೋಟೊ ಕೃಪೆ: ಲೊ ರೈಡರ್ ಮ್ಯಾಗಜೀನ್

Most Read Articles

Kannada
English summary
For some, cars are not just transport, but a way of life. Across the world to the United States, to a kind of car called a ‘lowrider'.
Story first published: Saturday, April 26, 2014, 13:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X