ಜಗತ್ತಿನ ಅತಿದೊಡ್ಡ ವಿಹಾರ ನೌಕೆ 'ಲಾರ್ಸೆನ್ ಅಜಾಮ್'

'ಅಜಾಮ್' (Azzam) ಎಂಬ ಪದದ ಅರ್ಥ ಯಶಸ್ಸು. ಪ್ರಸ್ತುತ ಹಡಗು ವಿಶ್ವದ ಅತಿದೊಡ್ಡ ವಿಹಾರ ನೌಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜರ್ಮನಿ ಮೂಲದ ಲಾರ್ಸೆನ್ (Lurssen) ಹಡಗು ಕಂಪನಿಯು ಅಜಾಮ್ ಖಾಸಗಿ ವಿಹಾರ ನೌಕೆಯನ್ನು ತಯಾರಿಸಿದೆ.

ಎರಡು ಫುಟ್ಬಾಲ್ ಮೈದಾನದಷ್ಟು ಉದ್ದವಿರುವ ಅಜಾಮ್ ವಿಹಾರ ನೌಕೆ 2 ಗ್ಯಾಸ್ ಟರ್ಬೈನ್ಸ್ ಹಾಗೂ 2 ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಬರೋಬ್ಬರಿ 94,000 ಹಾರ್ಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಎಲ್ಲ ಐಷಾರಾಮಿ ಸೌಲಭ್ಯಗಳು ಈ ವಿಹಾರ ನೌಕೆಯಲ್ಲಿ ಲಭ್ಯವಾಗಲಿದೆ. ಹಾಗಿದ್ದರೂ ಈ ದುಬಾರಿ ಖಾಸಗಿ ವಿಹಾರ ನೌಕೆಯನ್ನು ಯಾರು ಖರೀದಿಸಿದ್ದಾರೆ ಎಂಬ ವಿಚಾರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಮೂಲಗಳ ಪ್ರಕಾರ ದುಬೈ ತಲಹದಿಯ ರಾಜಮನೆತನದವರು ಈ ಲಗ್ಷುರಿ ವಿಹಾರ ನೌಕೆಯನ್ನು ಖರೀದಿಸಿದೆ.

ಜಗತ್ತಿನ ಅತಿದೊಡ್ಡ ವಿಹಾರ ನೌಕೆ 'ಲಾರ್ಸೆನ್ ಅಜಾಮ್'

ಲಾರ್ಸೆನ್ ವಿಹಾರ ನೌಕೆಯ ಪ್ರಕಾರ ಅಜಾಮ್ ಹಡಗು ನಿರ್ಮಿಸವುದು ತುಂಬಾನೇ ಸವಾಲಿನಿಂದ ಕೂಡಿದ್ದಾಗಿತ್ತು. ಎಂಜಿನಿಯರ್‌ಗಳ ಮೂರು ವರ್ಷಗಳ ಕಠಿಣ ಪರಿಶ್ರಮದ ಬಳಿಕ ಸುರಕ್ಷಿತವಾಗಿ ನೀರಿಗಿಳಿಸಲಾಯಿತು.

ಜಗತ್ತಿನ ಅತಿದೊಡ್ಡ ವಿಹಾರ ನೌಕೆ 'ಲಾರ್ಸೆನ್ ಅಜಾಮ್'

ಅಜಾಮ್ ಹಡಗು 30 ನಾಟಿಕಲ್ ಮೈಲ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಅಂದರೆ ಇದು ಪ್ರತಿ ಗಂಟೆಗೆ 55.5 ಕೀ.ಮೀ. ಆಗಿದೆ. ಹಾಗೆಯೇ ಸಾಮಾನ್ಯ ಮೆಗಾ ವಿಹಾರ ನೌಕೆಗಿಂತಲೂ ಶೇಕಡಾ 30ರಷ್ಟು ವೇಗತೆಯಲ್ಲಿ ಚಲಿಸಲಿದೆ.

ಜಗತ್ತಿನ ಅತಿದೊಡ್ಡ ವಿಹಾರ ನೌಕೆ 'ಲಾರ್ಸೆನ್ ಅಜಾಮ್'

ಹಾಗಿದ್ದರೂ ಅಜಾಮ್ ವಿಹಾರ ನೌಕೆಯ ಎಕ್ಸ್‌ಟೀರಿಯರ್ ಚಿತ್ರಗಳು ಮಾತ್ರವೇ ಲಭ್ಯವಿದ್ದು, ಇಂಟಿರಿಯರ್ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಸಿಎನ್‌ಬಿಸಿ ವರದಿ ಪ್ರಕಾರ ಫ್ರಾನ್ಸ್‌ನ ವಿನ್ಯಾಸಕಾರ ಕ್ರಿಸ್ಟೊಪೆ ಲಿಯೊನಿ (christophe leoni) ಹಡಗಿನ ಇಂಟಿರಿಯರ್ ಭಾಗಗಳನ್ನು ವಿನ್ಯಾಸಗೊಳಿಸಿದ್ದಾರೆ.

ಜಗತ್ತಿನ ಅತಿದೊಡ್ಡ ವಿಹಾರ ನೌಕೆ 'ಲಾರ್ಸೆನ್ ಅಜಾಮ್'

ಪ್ರಸ್ತುತ ನೌಕೆಯು 60 ಅಡಿ ಉಗಲ, 95 ಅಡಿ ಉದ್ದವಿದೆ. ಹಾಗೆಯೇ ಹೆಲಿಕಾಪ್ಟರ್‌ ಲ್ಯಾಂಡ್ ಮಾಡಲು ಹೆಲಿಪ್ಯಾಡ್ ವ್ಯವಸ್ಥೆ ಕೂಡಾ ಮಾಡಲಾಗಿದೆ.

ಜಗತ್ತಿನ ಅತಿದೊಡ್ಡ ವಿಹಾರ ನೌಕೆ 'ಲಾರ್ಸೆನ್ ಅಜಾಮ್'

ಅಂದ ಹಾಗೆ 2013 ಎಪ್ರಿಲ್ 5ರಂದು ಜಗತ್ತಿನ ಅತಿದೊಡ್ಡ ವಿಹಾನ ನೌಕೆಯು ಲೋಕರ್ಪಣೆಯಾಗಿದೆ.

ಜಗತ್ತಿನ ಅತಿದೊಡ್ಡ ವಿಹಾರ ನೌಕೆ 'ಲಾರ್ಸೆನ್ ಅಜಾಮ್'
ಜಗತ್ತಿನ ಅತಿದೊಡ್ಡ ವಿಹಾರ ನೌಕೆ 'ಲಾರ್ಸೆನ್ ಅಜಾಮ್'
ಜಗತ್ತಿನ ಅತಿದೊಡ್ಡ ವಿಹಾರ ನೌಕೆ 'ಲಾರ್ಸೆನ್ ಅಜಾಮ್'
ಜಗತ್ತಿನ ಅತಿದೊಡ್ಡ ವಿಹಾರ ನೌಕೆ 'ಲಾರ್ಸೆನ್ ಅಜಾಮ್'
ಜಗತ್ತಿನ ಅತಿದೊಡ್ಡ ವಿಹಾರ ನೌಕೆ 'ಲಾರ್ಸೆನ್ ಅಜಾಮ್'
ಜಗತ್ತಿನ ಅತಿದೊಡ್ಡ ವಿಹಾರ ನೌಕೆ 'ಲಾರ್ಸೆನ್ ಅಜಾಮ್'
Saint Nicolas

Saint Nicolas

ಲಾರ್ಸೆನ್‌ನಿಂದ ನಿರ್ಮಿಸಲ್ಪಟ್ಟಿರುವ ಇತರ ವಿಹಾರ ನೌಕೆಗಳು

Solemates

Solemates

Titania Ex Apoise

Titania Ex Apoise

Katara

Katara

Ice

Ice

Lady Kathryn V

Lady Kathryn V

Most Read Articles

Kannada
English summary
On 5th of April, 2013, the world's largest private yacht made its way into open water from the ship building yard. The Lurssen Azzam measures 180 meters long, which makes it look more like a cruise ship than a yacht.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X