ವಿಶ್ವದ ಅತಿ ದುಬಾರಿ ಐಷಾರಾಮಿ ರೈಲು - 'ಮಹಾರಾಜಾ ಎಕ್ಸ್ ಪ್ರೆಸ್'

By Nagaraja

ವಿಶ್ವದ ಅತಿ ದುಬಾರಿ ಐಷಾರಾಮಿ ರೈಲು ಖ್ಯಾತಿಯನ್ನು ಭಾರತದ 'ಮಹಾರಾಜಾ ಎಕ್ಸ್ ಪ್ರೆಸ್' (Maharaja Express) ಪಡೆದುಕೊಂಡಿದೆ. ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ಕಾರ್ಪೊರೇಶನ್ (ಐಆರ್‌ಸಿಟಿಸಿ) ಒಡೆತನದಲ್ಲಿರುವ ಮಹಾರಾಜಾ ಎಕ್ಸ್ ಪ್ರೆಸ್ ಎಲ್ಲ ರೀತಿಯ ಐಷಾರಾಮಿ ಸೌಲಭ್ಯಗಳನ್ನು ಹೊಂದಿದ್ದು, ಈಗಾಗಲೇ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರವಾಗಿದೆ.

ಆಗ್ನೇಯ ಹಾಗೂ ಮಧ್ಯ ಭಾರತದ 12 ಪ್ರವಾಸಿ ತಾಣಗಳನ್ನು ಅದರಲ್ಲೂ ಪ್ರಮುಖವಾಗಿಯೂ ರಾಜಸ್ತಾನವನ್ನು ಕೇಂದ್ರಿಕರಿಸಿರುವ ಮಹಾರಾಜಾನ ಎಕ್ಸ್ ಪ್ರೆಸ್ ಅಕ್ಟೋಬರ್‌ನಿಂದ ಎಪ್ರಿಲ್ ತಿಂಗಳ ಅವಧಿಯಲ್ಲಿ ಸಂಚರಿಸುತ್ತದೆ.

ವಿಶ್ವದ ಅತಿ ದುಬಾರಿ ಐಷಾರಾಮಿ ರೈಲು - 'ಮಹಾರಾಜಾ ಎಕ್ಸ್ ಪ್ರೆಸ್'

ಏಷ್ಯಾದಷ್ಟೇ ಅಲ್ಲದೆ ವಿಶ್ವದ ಅತಿ ದುಬಾರಿ ಐಷಾರಾಮಿ ರೈಲು ಎಂಬ ಖ್ಯಾತಿಗೆ ಪಾತ್ರವಾಗಿರುವ ಮಾಹಾರಾಜಾಸ್ ಎಕ್ಸ್ ಪ್ರೆಸ್ ಸತತವಾಗಿ ಮೂರು ಬಾರಿ 2012, 2013 ಹಾಗೂ 2014ನೇ ಇಸವಿಗಳಲ್ಲಿ 'ವಿಶ್ವ ಪ್ರವಾಸ ಪ್ರಶಸ್ತಿ'ಯನ್ನು ಬಾಚಿಕೊಂಡಿತ್ತು.

ವಿಶ್ವದ ಅತಿ ದುಬಾರಿ ಐಷಾರಾಮಿ ರೈಲು - 'ಮಹಾರಾಜಾ ಎಕ್ಸ್ ಪ್ರೆಸ್'

2011 ಅಂತರಾಷ್ಟ್ರೀಯ ರೈಲ್ವೆ ಟ್ರಾವೆಲ್ ಸೊಸೈಟಿಯ ವಿಶ್ವದ ಅಗ್ರ 25 ರೈಲುಗಳಲ್ಲೂ ಗುರುತಿಸಿಕೊಂಡಿರುವ ಮಹಾರಾಜಾ ಎಕ್ಸ್ ಪ್ರೆಸ್, ಯಾತ್ರೆಯ ವೇಳೆ ನೀಡುವ ಐಷಾರಾಮಿ (ವಸತಿ ಸೌಕರ್ಯ, ಭೋಜನ ಮತ್ತು ಇತರೆ ಸೇವೆ) ಸೌಲಭ್ಯಗಳಿಗಾಗಿ ಮೆಚ್ಚುಗೆಗೆ ಪಾತ್ರವಾಗಿದೆ.

ವಿಶ್ವದ ಅತಿ ದುಬಾರಿ ಐಷಾರಾಮಿ ರೈಲು - 'ಮಹಾರಾಜಾ ಎಕ್ಸ್ ಪ್ರೆಸ್'

2010ರ ಮಾರ್ಚ್ ತಿಂಗಳಲ್ಲಿ ಐಆರ್‌‌ಸಿಟಿಸಿ ಹಾಗೂ ಕಾಕ್ಸ್ ಆಂಡ್ ಕಿಂಗ್ಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಜಂಟಿಯಾಗಿ ಮಾಹಾರಾಜಾ ರೈಲು ಮೊದಲ ಬಾರಿಗೆ ಆರಂಭಿಸಿತ್ತು. ಆದರೆ ಕಾರಣಾಂತರಗಳಿಂದಾಗಿ 2011ರಲ್ಲಿ ಬಾಂಧವ್ಯ ಕಡಿದುಕೊಂಡ ಬಳಿಕ ಈ ದುಬಾರಿ ರೈಲು ಐಆರ್ ಸಿಟಿಸಿ ಒಡತನದಲ್ಲಿದ್ದು, ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಿದೆ.

ವಿಶ್ವದ ಅತಿ ದುಬಾರಿ ಐಷಾರಾಮಿ ರೈಲು - 'ಮಹಾರಾಜಾ ಎಕ್ಸ್ ಪ್ರೆಸ್'

ಎಲ್ಲ ಕ್ಯಾಬಿನ್ ಗಳಲ್ಲೂ ಐಷಾರಾಮಿ ಸೌಲಭ್ಯಗಳನ್ನು ನೀಡುತ್ತಿರುವ ದೇಶದ ಏಕಮಾತ್ರ ರೈಲು ಇದಾಗಿದೆ. ಇದರಲ್ಲಿ ಆಧುನಿಕತೆಗೆ ತಕ್ಕಂತೆ ಆತಿಥಿಗಳ ಅರಾಮದಾಯಕತೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ.

ವಿಶ್ವದ ಅತಿ ದುಬಾರಿ ಐಷಾರಾಮಿ ರೈಲು - 'ಮಹಾರಾಜಾ ಎಕ್ಸ್ ಪ್ರೆಸ್'

ಮಹಾರಾಜಾ ಎಕ್ಸ್ ಪ್ರೆಸ್ ನಲ್ಲಿ ಟಿ.ವಿ ನೇರ ಪ್ರಸಾರ, ಶೌಚಾಲಯ, ಭೋಜನಾಲಯ, ಬಾರ್, ಕೋಣೆ ಹಾಗೂ ವಿಸ್ತಾರವಾದ ಕುಳಿತುಕೊಳ್ಳುವ ಕೊಠಡಿಗಳನ್ನು ಪಡೆದುಕೊಂಡಿದೆ.

ವಿಶ್ವದ ಅತಿ ದುಬಾರಿ ಐಷಾರಾಮಿ ರೈಲು - 'ಮಹಾರಾಜಾ ಎಕ್ಸ್ ಪ್ರೆಸ್'

ಪ್ರಸ್ತುತ ರೈಲಿನಲ್ಲಿ 23 ಬೋಗಿಗಳಿಗಿದ್ದು, ಆತಿಥಿಗಳು ಸೇರಿದಂತೆ ಒಟ್ಟು 88 ಮಂದಿಗೆ ಆರಾಮದಾಯಕವಾಗಿ ಸಂಚರಿಸಬಹುದಾಗಿದೆ.

ವಿಶ್ವದ ಅತಿ ದುಬಾರಿ ಐಷಾರಾಮಿ ರೈಲು - 'ಮಹಾರಾಜಾ ಎಕ್ಸ್ ಪ್ರೆಸ್'

ಇನ್ನು ಕ್ಯಾಬಿನ್ ಗಳನ್ನು ಡಿಲಕ್ಸ್ ಕಾರ್ಸ್(5), ಜೂನಿಯರ್ ಸೂಟ್ ಕಾರ್ಸ್ (6), ಸೂಟ್ ಕಾರ್ಸ್ (2), ಅಧ್ಯಕ್ಷೀಯ ಸೂಟ್ ಕಾರ್ (1), ಬಾರ್ ಕಾರ್ (1), ಲಾಂಗ್ ಕಾರ್ (1), ರೆಸ್ಟೋರೆಂಟ್ ಕಾರ್ (2), ಕಿಚನ್ ಕಾರ್ (1), ಸ್ಟಾಪ್ ಕೋಚ್ (1) ಹಾಗೂ ಎಕ್ಸಿಕ್ಲೂಟಿವ್ ಮ್ಯಾನೇಜರ್ ಮತ್ತು ಟೂರ್ ಮ್ಯಾನೇಜರ್ ಕೋಚ್ (1) ದರ್ಜೆಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ದರ್ಜೆಯು ವ್ಯತ್ಯಸ್ತ ಪ್ರಯಾಣಿಕ ಶುಲ್ಕವನ್ನು ಹೊಂದಿರಲಿದೆ.

ವಿಶ್ವದ ಅತಿ ದುಬಾರಿ ಐಷಾರಾಮಿ ರೈಲು - 'ಮಹಾರಾಜಾ ಎಕ್ಸ್ ಪ್ರೆಸ್'

ಈ ಪೈಕಿ ಅಧ್ಯಕ್ಷೀಯ ಸೂಟ್ ಫೈವ್ ಸ್ಟಾರ್ ವಸತಿ ಸೇವೆಗೆ ಸಮಾನವಾಗಿದೆ. ಉಳಿದಂತೆ ಪ್ರತಿ ಆತಿಥಿ ಕೋಣೆಯಲ್ಲೂ ಎಲ್‌ಸಿಡಿ ಟೆಲಿವಿಷನ್, ಪರಿಸರ ಸ್ನೇಹಿ ಶೌಚಾಲಯ, ನೇರ ಸಂಪರ್ಕಿಸುವ ಫೋನ್, ಡಿವಿಡಿ ಪ್ಲೇಯರ್, ಅಂತರ್ಜಾಲ, ವೈಯಕ್ತಿಕ ಹವಾಮಾನ ನಿಯಂತ್ರಣ ಸೇವೆಯಿರಲಿದೆ.

ಮಹಾರಾಜಾ ಎಕ್ಸ್ ಪ್ರೆಸ್ ರೈಲು ಸೇವೆಗಳು

ಮಹಾರಾಜಾ ಎಕ್ಸ್ ಪ್ರೆಸ್ ರೈಲು ಸೇವೆಗಳು

ಭಾರತದ ಪರಂಪರೆ (Heritage of India)

ಅವಧಿ: 7 ರಾತ್ರಿ/8 ದಿನ

ತಲಪುದಾಣ: ಮುಂಬೈ-ಅಜಂತಾ-ಉದಯ್‌ಪುರ್-ಜೋಧ್‌ಪುರ-ಬಿಕಾನರ್-ಜೈಪುರ-ರಣತಂಬೋರ್-ಆಗ್ರಾ-ದೆಹಲಿ

ಮಹಾರಾಜಾ ಎಕ್ಸ್ ಪ್ರೆಸ್ ರೈಲು ಸೇವೆಗಳು

ಮಹಾರಾಜಾ ಎಕ್ಸ್ ಪ್ರೆಸ್ ರೈಲು ಸೇವೆಗಳು

ಭಾರತದ ಸಂಪತ್ತು (Treasures of India)

ಅವಧಿ: 3 ರಾತ್ರಿ/4 ದಿನ

ತಲಪುದಾಣ: ದೆಹಲಿ-ಆಗ್ರಾ-ರಣತಂಬೋರ್-ಜೈಪುರ-ದೆಹಲಿ

ಮಹಾರಾಜಾ ಎಕ್ಸ್ ಪ್ರೆಸ್ ರೈಲು ಸೇವೆಗಳು

ಮಹಾರಾಜಾ ಎಕ್ಸ್ ಪ್ರೆಸ್ ರೈಲು ಸೇವೆಗಳು

ಭಾರತದ ರತ್ನ (Gems of India)

ಅವಧಿ: 3 ರಾತ್ರಿ/4 ದಿನ

ತಲಪುದಾಣ: ದೆಹಲಿ- ಆಗ್ರಾ- ರಣತಂಬೋರ್-ಜೈಪುರ-ಹೆಹಲಿ

ಮಹಾರಾಜಾ ಎಕ್ಸ್ ಪ್ರೆಸ್ ರೈಲು ಸೇವೆಗಳು

ಮಹಾರಾಜಾ ಎಕ್ಸ್ ಪ್ರೆಸ್ ರೈಲು ಸೇವೆಗಳು

ಇಂಡಿಯನ್ ಪನರೋಮ (Indian Panorama)

ಅವಧಿ: 7 ರಾತ್ರಿ/8 ದಿನ

ತಲಪುದಾಣ: ದೆಹಲಿ-ಜೈಪುರ-ರಣತಂಬೋರ್-ಫಾತೇಪುರ್ ಸಿಕ್ರಿ-ಆಗ್ರಾ-ಗ್ವಾಲಿಯರ್-ಖಜುರಾಹೊ-ವಾರಣಾಸಿ-ಲಕ್ನೋ-ದೆಹಲಿ

ಮಹಾರಾಜಾ ಎಕ್ಸ್ ಪ್ರೆಸ್ ರೈಲು ಸೇವೆಗಳು

ಮಹಾರಾಜಾ ಎಕ್ಸ್ ಪ್ರೆಸ್ ರೈಲು ಸೇವೆಗಳು

ದಿ ಇಂಡಿಯನ್ ಸ್ಪ್ಲೆಂಡರ್ (The Indian Splendor)

ಅವಧಿ: 7 ರಾತ್ರಿ/8 ದಿನ

ತಲಪುದಾಣ: ದೆಹಲಿ-ಆಗ್ರಾ-ರಣತಂಬೋರ್-ಜೈಪುರ-ಬಿಕಾನರ್-ಜೋಧ್ ಪುರ-ಉದಯ್ ಪುರ್- ಬಾಲಸಿನೊರ್-ಮುಂಬೈ

Most Read Articles

Kannada
English summary
Maharajas Express the most expensive luxury train in the world
Story first published: Friday, June 5, 2015, 10:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X