ಮಹಾತ್ಮ ಗಾಂಧೀಜಿ ಹಾಗೂ ಹಂತಕ ಗೋಡ್ಸೆ ಕಾರ್ ಕಲೆಕ್ಷನ್

By Manoj B.k

ಭಾರತೀಯ ಸ್ವಾತಂತ್ರ್ಯ ಆಂದೋಲನದಲ್ಲಿ ರಾಜಕೀಯ ಹಾಗೂ ಆಧ್ಯಾತ್ಮಿಕ ನಾಯಕರಾಗಿದ್ದ 'ರಾಷ್ಟ್ರಪಿತ' ಮೋಹಾನ್ ದಾಸ್ ಕರಮ್ ಚಂದ್ ಗಾಂಧಿ (ಅಕ್ಟೋಬರ್ 2, 1869 - ಜನವರಿ 30, 1948) ಅವರು ನಮ್ಮನ್ನಗಲಿ 72 ವರ್ಷಗಳೇ ಸಂದಿವೆ. ಈ ಸಂದರ್ಭದಲ್ಲಿ ಈ ಧೀರ ನಾಯಕರನ್ನು ಇಡೀ ದೇಶವೇ ನೆನಪಿಸಿಕೊಳ್ಳುತ್ತಿದೆ. ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾತ್ಮ ಗಾಂಧೀಜಿ 'ಬಾಪು' ಎಂದೇ ಚಿರಪರಿಚಿತರಾಗಿದ್ದರು.

ಮಹಾತ್ಮ ಗಾಂಧೀಜಿ ಹಾಗೂ ಹಂತಕ ಗೋಡ್ಸೆ ಕಾರ್ ಕಲೆಕ್ಷನ್

ಸತ್ಯ, ಅಹಿಂಸೆ ಹಾಗೂ ಅಸಹಕಾರ ಚಳುವಳಿ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಗಾಂಧಿ ಅವರನ್ನು 1948 ಜನವರಿ 30ರಂದು ಗುಂಡಿಕ್ಕಿ ಕೊಲ್ಲಲಾಗಿತ್ತು. ನವದೆಹಲಿಯ ಬಿರ್ಲಾ ಭವನದ ಮೈದಾನದಲ್ಲಿ ತಮ್ಮ ರಾತ್ರಿಯ ನಡಿಗೆಯಲ್ಲಿ ತೊಡಗಿದ್ದ ಬಾಪು ಅವರನ್ನು ನಾಥೂರಾಮ್ ಗೋಡ್ಸೆ ಎಂಬವನು ಗುಂಡಿಕ್ಕಿ ಕೊಂದಿದ್ದನು.

ಅಂದ ಹಾಗೆ ಐಷಾರಾಮಿ ಬದುಕನ್ನು ತ್ಯಜಿಸಿದ್ದ ಬಾಪು ಒಂದು ಧೋತಿ ತೊಟ್ಟುಕೊಂಡು ಕೈಯಲ್ಲೊಂದು ಕೋಲು ಹಿಡಿದು ನಡೆಯುವ ಚಿತ್ರವಷ್ಟೇ ಹಲವರ ನೆನಪಲ್ಲಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಗಾಂಧಿ ಕಾರಿನಲ್ಲೂ ಸಂಚರಿಸಿದ ನಿದರ್ಶನಗಳಿವೆ. 1927ನೇ ಇಸವಿಯಲ್ಲಿ ಉತ್ತರ ಪ್ರದೇಶದಲ್ಲಿ 'ಫೋರ್ಡ್ ಟಿ ಸಿರೀಸ್' ಕಾರಿನಲ್ಲಿ ಗಾಂಧಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿರುವುದು ಈಗಲೂ ಪ್ರಖ್ಯಾತಿ ಗಿಟ್ಟಿಸುತ್ತಿವೆ.

ಮಹಾತ್ಮ ಗಾಂಧೀಜಿ ಹಾಗೂ ಹಂತಕ ಗೋಡ್ಸೆ ಕಾರ್ ಕಲೆಕ್ಷನ್

ಪ್ರಸ್ತುತ ಫೋರ್ಡ್ ಟಿ ಸಿರೀಸ್ ಕಾರನ್ನು ಪುಣೆ ಮೂಲದ ಉದ್ಯಮಿ ಅಬ್ಬಾಸ್ ಜಸ್ನಾದ್‌ವಾಲಾ ಹೊಂದಿದ್ದಾರೆ. ವಿಂಟೇಜ್ ಕಾರುಗಳನ್ನು ಖರೀದಿಸುವುದನ್ನು ಹವ್ಯಾಸ ಮಾಡಿಕೊಂಡಿರುವ ಜಸ್ನಾದ್‌ವಾಲಾ ಫೋರ್ಡ್ ಟಿ ಸಿರೀಸ್ ತಮ್ಮದಾಗಿಸಿಕೊಂಡಿದ್ದರು. ಹಾಗೆಯೇ ಗಾಂಧಿ ಸಂಚರಿಸಿರುವ ಕಾರನ್ನು ಖರೀದಿಸುವುದು ತಮ್ಮ ಪಾಲಿಗೆ ಅಮೂಲ್ಯ ನಿಧಿ ಎಂದು ಪರಿಗಣಿಸಿದ್ದಾರೆ.

ಮಹಾತ್ಮ ಗಾಂಧೀಜಿ ಹಾಗೂ ಹಂತಕ ಗೋಡ್ಸೆ ಕಾರ್ ಕಲೆಕ್ಷನ್

ಉತ್ತರ ಪ್ರದೇಶದಲ್ಲಿರುವ ಬರೈಲಿ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಹೊಂದಿದ ಸಂದರ್ಭದಲ್ಲೂ ಗಾಂಧಿ ಇದೇ ಕಾರನ್ನು ಬಳಸಿದ್ದರು ಎಂಬ ಮಾಹಿತಿಯಿದೆ. ಅಂತೆಯೇ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಕೂಡಾ ಅಂದಿನ ಕಾಲದ ಪ್ರಸಿದ್ಧ ಕಾರನ್ನು ಹೊಂದಿದ್ದರು. ಗಾಂಧಿ ಹತ್ಯೆ ಸಂದರ್ಭದಲ್ಲಿ ಸ್ಟಡೆಬೇಕರ್ ಎಂಬ ಕಾರನ್ನು ಗೋಡ್ಸೆ ಬಳಸಿದ್ದರು. ಇದರಿಂದಲೇ ಈ ಕಾರಿಗೆ ಕಿಲ್ಲರ್ ಎಂಬ ಹೆಸರಿಡಲಾಗಿತ್ತು.

ಮಹಾತ್ಮ ಗಾಂಧೀಜಿ ಹಾಗೂ ಹಂತಕ ಗೋಡ್ಸೆ ಕಾರ್ ಕಲೆಕ್ಷನ್

1927ರ ಕಾಲದಲ್ಲಿ ಫೋರ್ಡ್ ಟಿ ಸೀರಿಸ್ ಕಾರಿನಲ್ಲಿ ಗಾಂಧೀಜಿ ಪ್ರಯಾಣಿಸಿದ್ದರು. ಹೀಗಾಗಿ ಈ ವಿಂಟೇಜ್ ಕಾರಿಗೆ ಸಾಕಷ್ಟು ಮಹತ್ವವಿದೆ. ಮಹಾತ್ಮ ಗಾಂಧೀಜಿ ಜತೆ ನಂಟು ಹೊಂದಿರುವ ಫೋರ್ಡ್ ಟಿ ಸಿರೀಸ್ ಕಾರಿನ ಅಪರೂಪದ ದೃಶ್ಯಗಳು ಇಲ್ಲಿವೆ ನೋಡಿ.

ಮಹಾತ್ಮ ಗಾಂಧೀಜಿ ಹಾಗೂ ಹಂತಕ ಗೋಡ್ಸೆ ಕಾರ್ ಕಲೆಕ್ಷನ್

1920ರ ದಶಕದಲ್ಲಿ ಅತಿ ಬೇಡಿಕೆಯ ಕಾರುಗಳಲ್ಲಿ ಒಂದೆನಿಸಿಕೊಂಡಿರುವ ಫೋರ್ಡ್ ಟಿ ಸೀರಿಸ್ ಅಂದಿನ ಕಾಲದಲ್ಲಿ ಅತಿ ಹೆಚ್ಚು ಮಾರಾಟವನ್ನು ಗಿಟ್ಟಿಸಿತ್ತು. ಉತ್ತರ ಪ್ರದೇಶದ ರಾಯ್ ಬರೇಲಿ ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಂಡಿದ್ದ ಮಹಾತ್ಮ ಗಾಂಧಿ ಇದೇ ಕಾರಿನಲ್ಲಿ ತೆರಳಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತಾನಾಡಿದ್ದರು.

ಮಹಾತ್ಮ ಗಾಂಧೀಜಿ ಹಾಗೂ ಹಂತಕ ಗೋಡ್ಸೆ ಕಾರ್ ಕಲೆಕ್ಷನ್

ಮಹಾತ್ಮ ಗಾಂಧಿ ಸಂಚರಿಸಿದ್ದ ಈ ಫೋರ್ಡ್ ಟಿ ಸೀರಿಸ್ ಕಾರನ್ನು ಆ ಬಳಿಕ ಪುಣೆ ಮೂಲದ ಅಬ್ಬಾಸ್ ಜಸ್ನಾದ್‌ವಾಲಾ ಖರೀದಿಸಿದ್ದರು. ಸಾಧಾರಣ ಜೀವನ ಶೈಲಿಯನ್ನು ಅನುಸರಿಸಿದ್ದ ಗಾಂಧೀಜಿ ಸತ್ಯ ಹಾಗೂ ಅಹಿಂಸೆ ಮಾರ್ಗವನ್ನು ಪಾಲಿಸಿದ್ದರು.

ಮಹಾತ್ಮ ಗಾಂಧೀಜಿ ಹಾಗೂ ಹಂತಕ ಗೋಡ್ಸೆ ಕಾರ್ ಕಲೆಕ್ಷನ್

ಹಾಗೆಯೇ ಗಾಂಧಿ ಹಂತಕನಾದ ನಾಥೂರಾಮ್ ಗೋಡ್ಸೆ ಕೂಡಾ ಅಂದಿನ ಕಾಲದಲ್ಲೇ ಜನಪ್ರಿಯ ಕಾರು ಮಾದರಿಯೊಂದ ಮಾಲೀಕ್ವತ ಹೊಂದಿದ್ದ. ಸ್ಟಡೆಬೇಕರ್ ಕಾರನ್ನು ಗಾಂಧಿ ಹತ್ಯೆಗಾಗಿ ಬಳಸಿದ್ದ ಎನ್ನಲಾಗಿತ್ತು. 1948 ಜನವರಿ 30ರಂದು ಮಹಾತ್ಮ ಗಾಂಧೀಜಿ ಹತ್ಯೆಯ ಸಂದರ್ಭದಲ್ಲೂ ಇದೇ ಕಾರನ್ನು ಬಳಸುತ್ತಿದ್ದ ಎನ್ನುವ ಹಲವು ವರದಿಗಳಿವೆ.

ಮಹಾತ್ಮ ಗಾಂಧೀಜಿ ಹಾಗೂ ಹಂತಕ ಗೋಡ್ಸೆ ಕಾರ್ ಕಲೆಕ್ಷನ್

ಪ್ರಸ್ತುತ ಗೋಡ್ಸೆ ಬಳಸಿದ್ದ ಸ್ಟಡೆಬೇಕರ್ ಕಾರನ್ನು ದೆಹಲಿ ಮೂಲದ ಮೆಕ್ಯಾನಿಕ್ ಹಾಗೂ ವಿಂಟೇಜ್ ಕಾರು ಸಂಗ್ರಹಗಾರ ಪರ್ವೇಜ್ ಜಮಾಲ್ ಸಿದ್ಧಿಕಿ ಹೊಂದಿದ್ದಾರೆ.

ಮಹಾತ್ಮ ಗಾಂಧೀಜಿ ಹಾಗೂ ಹಂತಕ ಗೋಡ್ಸೆ ಕಾರ್ ಕಲೆಕ್ಷನ್

ವಿಂಟೇಜ್ ಕಾರು ಶೋಗಳಲ್ಲಿ ಪ್ರದರ್ಶನಗೊಂಡಿರುವ ಸ್ಟಡೆಬೇಕರ್ ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ಮಹಾತ್ಮ ಗಾಂಧೀಜಿ ಹಾಗೂ ಹಂತಕ ಗೋಡ್ಸೆ ಕಾರ್ ಕಲೆಕ್ಷನ್

ಗಾಂಧೀಜಿ ಅವರ 72ನೇ ಪುಣ್ಯತಿಥಿ ಸಂದರ್ಭದಲ್ಲಿ ಡ್ರೈವ್ ಸ್ಪಾರ್ಕ್ ತಂಡವು ಈ ಲೇಖನವನ್ನು ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟಗಾರನಿಗೆ ಸಮರ್ಪಿಸುತ್ತಿದೆ.

Most Read Articles

Kannada
English summary
Gandhiji never owned a car. But here is a car in which he travelled from the Bareilly central jail in Uttar Pradesh in 1927. Even Gandhi's killer Nathuram also owned a car which is Studbucker
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X