ಮಾದಕ ನಟಿ ಮಲ್ಲಿಕಾಗೆ ದುಬಾರಿ ಉಡುಗೊರೆ ಕೊಟ್ಟವರು ಯಾರು?

Written By:

ಹಸಿ ಬಿಸಿ ದೃಶ್ಯಗಳ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಹಾಟ್ ಸುಂದರಿ ಮಲ್ಲಿಕಾ ಶೆರಾವತ್ ಅವರಿಗೆ ಕೋಟಿ ಬೆಲೆ ಬಾಳುವ ಉಡುಗೊರೆಯೊಂದು ಲಭಿಸಿದೆ. ಅದುವೇ ನಾಲ್ಕು ಕೋಟಿ ರು.ಗಿಂತಲೂ ಹೆಚ್ಚು ಬೆಲೆ ಬಾಳುವ ಲಂಬೋರ್ಗಿನಿ ಅವೆಂಟಡೊರ್ ಕಾರಾಗಿದೆ.

ಬಾಲಿವುಡ್ ನಲ್ಲಿ ಹೊಸಬರ ಆಗಮನದೊಂದಿಗೆ ಈ ತಳುಕು ಬಳುಕು ಸೊಂಟದ ನಟಿಗೆ ಡಿಮ್ಯಾಂಡ್ ಸ್ವಲ್ಪ ಕಡಿಮೆಯಾಗಿತ್ತು. ಆದರೂ ಅಭಿಮಾನಿಗಳ ಪ್ರೀತಿಗೆ ಮಾತ್ರ ಯಾವುದೇ ಕುತ್ತು ಸಂಭವಿಸಿಲ್ಲ.

ಸ್ವತ: ಮಲ್ಲಿಕಾ ಅವರೇ ತಮ್ಮ ಅಧಿಕೃತ ಫೇಸ್ ಬುಕ್, ಟ್ವಿಟರ್ ಗಳಂತಹ ಜಾಲತಾಣ ಪುಟಗಳಲ್ಲಿ ನೂತನ ಲಂಬೋರ್ಗಿನಿ ಕಾರಿನ ಜೊತೆಗಿನ ಚಿತ್ರವನ್ನು ಪ್ರಕಟಿಸಿದ್ದಾರೆ. ಅಲ್ಲದೆ 'ಲವ್ ಮೈ ನ್ಯೂ ಲಂಬೋರ್ಗಿನಿ' ಎಂದುದಾಗಿಯೂ ತಿಳಿಸಿದ್ದಾರೆ.

ಇದಕ್ಕೂ ಮೊದಲು ಟ್ವಿಟರ್ ನಲ್ಲಿ 'ನನಗೆ ಲಭಿಸಿದ ಉಡುಗೊರೆಯಿದು' ಎಂದು ಮಲ್ಲಿಕಾ ಟ್ವೀಟಿಸಿದ್ದರು. ಇದಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವ್ಯಾಪಕ ಗಾಸಿಪ್ ಹರಿದಾಡಿತ್ತು.

ಇದನ್ನು ಹಿಂಬಾಲಿಸಿದ್ದ ಮಗದೊಂದು ಟ್ವೀಟ್ ನಲ್ಲಿ ಮಲ್ಲಿಕಾ ಅವರು 'ಅದರಲ್ಲೇನಿದೆ, ಇಂದೊಂದು ಕಾರು ಮಾತ್ರ' ಎಂದು ಪ್ರತ್ಯುತ್ತರ ನೀಡಿದ್ದರು.

ಟ್ವಿಟರ್ ನಲ್ಲಿ ಲಂಬೋರ್ಗಿನಿ ಅವೆಂಟಡೊರ್ ಎಸ್ ವಿ ಎಂದು ನಮೂದಿಸಿದ್ದ ಮಲ್ಲಿಕಾ ಅವರಿಗೆ ಕಾರನ್ನು ಯಾರು ಉಡುಗೊರೆಯಾಗಿ ನೀಡಿದ್ದಾರೆ ಎಂಬುದು ಹೆಚ್ಚಿನ ಗಾಸಿಪ್ ಗೆ ಕಾರಣವಾಗಿದೆ.

ಕಾರಿನ ಮೇಲೆ ಕುಳಿತುಕೊಂಡಿರುವ ಮಲ್ಲಿಕಾ, ಸ್ವಚ್ಛಂದವಾಗಿ ವಿಹರಿಸುವ ಹಕ್ಕಿಯಂತೆ ಫೋಸ್ ಕೊಟ್ಟಿದ್ದಾರೆ. ಅಲ್ಲದೆ ಈ ಸಂಬಂಧ ಇಸ್ಟಾಗ್ರಾಂನಲ್ಲಿ ವೀಡಿಯೋವನ್ನು ಅಪ್ ಲೋಡ್ ಮಾಡಿದ್ದಾರೆ.

ಇನ್ನು ಕಾರಿನ ಬಗ್ಗೆ ಮಾತನಾಡುವುದಾದ್ದಲ್ಲಿ ಲಂಬೋರ್ಗಿನಿ ಅವೆಂಡಡೊರ್ ಎಸ್ ವಿ ಅಥವಾ ಸೂಪರ್ ವೆಲೊಸ್ ಕಾರು 2015 ಜಿನೆವಾ ಮೋಟಾರು ಶೋದಲ್ಲಿ ಭರ್ಜರಿ ಅನಾವರಣ ಕಂಡಿತ್ತು.

ಇದರಲ್ಲಿ ಬೃಹತ್ 6.51 ವಿ12 ಎಂಜಿನ್ ಆಳವಡಿಸಾಗಿದ್ದು, 700 ಅಶ್ವಶಕ್ತಿ (690 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಹಗುರ ಭಾರ, ಗರಿಷ್ಠ ವೇಗ ಹಾಗೂ ಆಕರ್ಷಕ ಮೈ ಬಣ್ಣಕ್ಕೆ ಹೆಸರು ಮಾಡಿರುವ ಈ ಇಟಲಿಯ ಸೂಪರ್ ಕಾರು 3.75 ಕೋಟಿ ರು.ಗಿಂತಲೂ (ಎಕ್ಸ್ ಶೋ ರೂಂ ಬೆಲೆ) ಹೆಚ್ಚು ದುಬಾರಿಯೆನಿಸಿದೆ.

ನೂತನ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಏರ್ ಬ್ಯಾಗ್, ಎಬಿಎಸ್, ಇಬಿಡಿ, ಕ್ರೂಸ್ ಕಂಟ್ರೋಲ್ ಮುಂತಾದ ವ್ಯವಸ್ಥೆಗಳು ಇದರಲ್ಲಿದೆ.

ಅಂದ ಹಾಗೆ ಲಂಬೋರ್ಗಿನಿ ಇಟಲಿಯ ಐಕಾನಿಕ್ ಐಷಾರಾಮಿ ಕ್ರೀಡಾ ಕಾರು ಬ್ರಾಂಡ್ ಆಗಿದ್ದು, ಫೋಕ್ಸ್ ವ್ಯಾಗನ್ ಸಂಸ್ಥೆಯ ಅಧೀನತೆಯಲ್ಲಿದೆ.

ಲಂಬೋರ್ಗಿನಿ ಪೂರ್ಣ ರೂಪವಾದ ಆಟೋಮೊಬೈಲ್ ಫೆರುಸ್ಸಿಯೊ ಲಂಬೋರ್ಗಿನಿಯನ್ನು (Automobili Ferruccio Lamborghini ) 1963ನೇ ಇಸವಿಯಲ್ಲಿ ಫೆರುಸ್ಸಿಯೊ ಲಂಬೋರ್ಗಿನಿ ಎಂಬವರು ಸ್ಥಾಪಿಸಿದ್ದರು. ಇದು ಫೆರಾರಿಯಂತಹ ಕಾರು ಬ್ರಾಂಡ್‌ಗಳಿಗೆ ಪ್ರತಿಸ್ಪರ್ಧಿಯಾಗಿ ತಲೆಯೆತ್ತಿ ನಿಂತಿತ್ತು.

ಈಗ ಲಂಬೋರ್ಗಿನಿ ಹಾಗೂ ಮಲ್ಲಿಕಾ ಶೆರಾವತ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

Click to compare, buy, and renew Car Insurance online

Buy InsuranceBuy Now

English summary
mallika sherawat's new love - lamborghini aventador
Please Wait while comments are loading...

Latest Photos