90 ಲಕ್ಷ ರು. ಮೌಲ್ಯದ ನಾಣ್ಯ ನೀಡಿ ಕಾರು ಖರೀದಿಸಿದ ಅತಿ ಬುದ್ಧಿವಂತ!

By Nagaraja

ಕಾರು ಖರೀದಿ ಮಾಡುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಆದರೆ ಕನಸು ಮಿತಿ ಮೀರಿದರೆ ಹೇಗಿರಬಹುದು? ಚೀನಾದಲ್ಲಿ ಇಂತಹದೊಂದು ಪ್ರಸಂಗ ವರದಿಯಾಗಿದೆ. ಕಾರು ಉತ್ಸಾಹಿಯೊಬ್ಬರು ವರ್ಷಗಳಿಂದ ಸಂಗ್ರಹಿಸಿ ಬಂದಿದ್ದ 90 ಲಕ್ಷ ರು.ಗಳಷ್ಟು ($140,000) ಮೌಲ್ಯದ ಚಿಲ್ಲರೆ ನಾಣ್ಯಗಳನ್ನು ಹೊಸ ಕಾರು ಖರೀದಿಗಾಗಿ ಬಳಕೆ ಮಾಡಿದ್ದಾರೆ.

ಮೂಟೆಗಟ್ಟಲೆ ಚಿಲ್ಲರೆ ನಾಣ್ಯಗಳನ್ನು ನೋಡಿದ ಚೀನಾದ ಶೇನ್ಯಾಂಗ್ ವಿತರಕ ಜಾಲದ ಸಿಬ್ಬಂದಿಗಳು ದಂಗಾಗಿ ಬಿಟ್ಟಿದ್ದರು. ಯಾಕೆಂದರೆ ಬರೋಬ್ಬರಿ ನಾಲ್ಕು ಟನ್ ಗಳಷ್ಟು ತೂಕವನ್ನು ಹೊಂದಿರುವ ನಾಣ್ಯಗಳನ್ನು ಸ್ಥಳಾಂತರಿಸುವುದೇ ದೊಡ್ಡ ಸಮಸ್ಯೆಯಾಗಿ ಬಿಟ್ಟಿತ್ತು.

90 ಲಕ್ಷ ರು. ಮೌಲ್ಯದ ನಾಣ್ಯ ನೀಡಿ ಕಾರು ಖರೀದಿಸಿದ ಅತಿ ಬುದ್ಧಿವಂತ!

ಅಂದಾಜು 93 ಲಕ್ಷ ರು.ಗಳಷ್ಟು ಬೆಲೆ ಬಾಳುವ ಕಾರನ್ನು ಗ್ಯಾನ್ ಎಂಬವರು ಖರೀದಿಸಿದ್ದರು. ಈ ಪೈಕಿ 90 ಲಕ್ಷ ರು.ಗಳನ್ನು ನಾಣ್ಯದ ಮೂಲಕ ಪಾವತಿಸಿದ್ದರೆ ಉಳಿದ ಎರಡು ವರೆ ಲಕ್ಷ ರು.ಗಳನ್ನು ($4,000) ನೋಟಿನ ಮುಖಾಂತರ ಹಸ್ತಾಂತರಿಸಲಾಗಿತ್ತು.

90 ಲಕ್ಷ ರು. ಮೌಲ್ಯದ ನಾಣ್ಯ ನೀಡಿ ಕಾರು ಖರೀದಿಸಿದ ಅತಿ ಬುದ್ಧಿವಂತ!

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಗ್ಯಾನ್, ತಾನು ಪೆಟ್ರೋಲ್ ಸ್ಟೇಷನ್ ನಲ್ಲಿ ಕೆಲಸ ಮಾಡುತ್ತಿದ್ದು, ಇಂಧನ ಮರು ತುಂಬಿಸಲು ಅಲ್ಲಿಗೆ ಬರುವ ಬಸ್ಸುಗಳಿಂದ ನಾಣ್ಯಗಳನ್ನು ಸಂಗ್ರಹಿಸಿರುವುದಾಗಿ ತಿಳಇಸಿದ್ದಾರೆ.

90 ಲಕ್ಷ ರು. ಮೌಲ್ಯದ ನಾಣ್ಯ ನೀಡಿ ಕಾರು ಖರೀದಿಸಿದ ಅತಿ ಬುದ್ಧಿವಂತ!

ಎಲ್ಲರಂತೆಯೇ ಹೊಸ ಕಾರು ಖರೀದಿಸುವುದು ನನ್ನ ಕನಸಾಗಿತ್ತು. ಇದಕ್ಕಾಗಿ ಚಿಲ್ಲರೆ ನಾಣ್ಯಗಳನ್ನು ಒಟ್ಟುಗೂಡಿಸಿರುವುದಾಗಿ ವಿವರಿಸಿದ್ದಾರೆ. ಅಲ್ಲದೆ ಇದನ್ನು ಸ್ವೀಕರಿಸಲು ಡೀಲರ್ ಶಿಪ್ ನವರು ಯಾವುದೇ ತಕರಾರು ಎತ್ತಿಲ್ಲ ಎಂದಿದ್ದಾರೆ.

90 ಲಕ್ಷ ರು. ಮೌಲ್ಯದ ನಾಣ್ಯ ನೀಡಿ ಕಾರು ಖರೀದಿಸಿದ ಅತಿ ಬುದ್ಧಿವಂತ!

ಕೆಲವು ದಿನಗಳ ಹಿಂದೆಯಷ್ಟೇ ಇದಕ್ಕೆ ಸಮಾನವಾದ ವರದಿಯೊಂದು ಪ್ರಕಟಗೊಂಡಿತ್ತು. ಆದರೆ ಇವೆಲ್ಲಕ್ಕಿಂತಲೂ ಸಂಪೂರ್ಣ ವಿಭಿನ್ನವಾಗಿ ಈ ಪ್ರಕರಣದಲ್ಲಿ ನಾಣ್ಯಗಳನ್ನು ನೀಡಿರುವುದು ವಿಶೇಷವೆನಿಸಿದೆ.

90 ಲಕ್ಷ ರು. ಮೌಲ್ಯದ ನಾಣ್ಯ ನೀಡಿ ಕಾರು ಖರೀದಿಸಿದ ಅತಿ ಬುದ್ಧಿವಂತ!

ವರ್ಷಗಳಿಂದ ಸಂಗ್ರಹಿಸಿಟ್ಟು ಬಂದಿದ್ದ ಚಿಲ್ಲರೆ ನಾಣ್ಯಗಳನ್ನು 1000ಕ್ಕೂ ಚೀಲಗಳಲ್ಲಿ ತುಂಬಿಕೊಂಡಿದ್ದರು. ಇದನ್ನು ಸಾಗಿಸಲು ಬೃಹತ್ ಟ್ರಕ್ ನ ಅಗತ್ಯ ಬಂದಿತ್ತು ಎಂಬುದು ಇನ್ನು ವಿಶೇಷ.

90 ಲಕ್ಷ ರು. ಮೌಲ್ಯದ ನಾಣ್ಯ ನೀಡಿ ಕಾರು ಖರೀದಿಸಿದ ಅತಿ ಬುದ್ಧಿವಂತ!

ಒಟ್ಟಿನಲ್ಲಿ ಈ ಘಟನೆಯು ಚೀನಾದಲ್ಲಿ ಮಾತ್ರವಲ್ಲದೆ ಜಾಗತಿಕ ಮಾಧ್ಯಮದಲ್ಲೂ ಹೆಚ್ಚು ಕುತೂಹಲವನ್ನು ಕೆರಳಿಸಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

Most Read Articles

Kannada
Read more on ಕಾರು cars
English summary
Man buys new car, pays with $140,000 in coins
Story first published: Saturday, June 6, 2015, 16:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X