ಮನೆಯಲ್ಲಿ ನಿರ್ಮಿತ ಬೈಕ್ ನಿಂದ ವಿಶ್ವ ಗೆದ್ದು ಬಂದ ರೇಸರ್!

By Nagaraja

ಆತ ಛಲವಾದಿ, ಪರಿಶ್ರಮಿ, ಸೋಲೊಪ್ಪಿಕೊಳ್ಳುವುದು ಆತನಿಗೆ ಇಷ್ಟವೇ ಇಲ್ಲ. ತನ್ನ ಗುರಿ ಮುಟ್ಟಿಯೇ ಸಿದ್ಧ ಎಂಬ ಅಚಲ ವಿಶ್ವಾಸ ಹೊಂದಿರುವ ಐಸ್ಲ್ ಆಫ್ ಮ್ಯಾನ್ ರೇಸರ್ ಖ್ಯಾತಿಯ ಪಾಲ್ ಹಡ್ಗ್‌ಸನ್, ಮನೆಯಿಂದಲೇ ನಿರ್ಮಿತ ಬೈಕ್ ನಿಂದ ವಿಶ್ವ ಗೆದ್ದು ಬಂದಿದ್ದಾರೆ.

ಅಮೆರಿಕದ ಉಟಾಹದಲ್ಲಿ ಆಗಸ್ಟ್ 13ರಿಂದ 19ರ ವರೆಗೆ ಸಾಗಿದ ಬೊನ್ ವಿಲ್ ಸ್ಪೀಡ್ ವೀಕ್ ನಲ್ಲಿ ಭಾಗವಹಿಸಿರುವ ಈತ, ಪ್ರತಿ ಗಂಟೆಗೆ 291 ಕೀ.ಮೀ. ವೇಗದಲ್ಲಿ ಸಂಚರಿಸುವ ಬೈಕ್ ನಿರ್ಮಿಸುವ ಮೂಲಕ ಕೀರ್ತಿಗೆ ಪಾತ್ರವಾಗಿದ್ದಾರೆ.

ಮನೆಯಲ್ಲಿ ನಿರ್ಮಿತ ಬೈಕ್ ನಿಂದ ವಿಶ್ವ ಗೆದ್ದು ಬಂದ ರೇಸರ್!

ಬ್ರಿಟನ್ ನ ಲೋನನ್ ನಲ್ಲಿ ಸ್ಥಿತಗೊಂಡಿರುವ ಮನೆಯ ನೆಲ ಮಹಡಿಯಲ್ಲಿ ಬೈಕ್ ನ ವಿನ್ಯಾಸ ಹಾಗೂ ಎಂಜಿನಿಯರಿಂಗ್ ಕೆಲಸವನ್ನು ಸ್ವತ: ತಾವೇ ನಿರ್ವಹಿಸಿದ್ದರು.

ಮನೆಯಲ್ಲಿ ನಿರ್ಮಿತ ಬೈಕ್ ನಿಂದ ವಿಶ್ವ ಗೆದ್ದು ಬಂದ ರೇಸರ್!

2012ರಲ್ಲಿ ಲ್ಯಾಂಡ್ ಸ್ಪೀಡ್ ದಾಖಲೆ ಬರೆದಿರುವ ಮ್ಯಾನ್ಸ್ ಬೈಕ್ ಗೆ ಎಂಜಿನಿಯರಿಂಗ್ ಮಾಡುವ ಮೂಲಕ ಜನಪ್ರಿಯವಾಗಿರುವ ಪಾಲ್, ಮಗದೊಮ್ಮೆ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.

ಮನೆಯಲ್ಲಿ ನಿರ್ಮಿತ ಬೈಕ್ ನಿಂದ ವಿಶ್ವ ಗೆದ್ದು ಬಂದ ರೇಸರ್!

ಕಳೆದ ವರ್ಷ ಅಮೆರಿಕಕ್ಕೆ ಬೈಕ್ ರವಾನಿಸಿದ್ದರೂ ಸ್ಪೀಡ್ ವೀಕ್ ಸ್ಪರ್ಧೆ ಕ್ಯಾನ್ಸಲ್ ಆಗಿದ್ದರಿಂದ ಸಾಕಷ್ಟು ನೊಂದಿದ್ದರು. ಹಾಗಾಗಿ ತಾವಾಗಿಯೇ ಬೈಕ್ ಅಭಿವೃದ್ಧಿಯಲ್ಲಿ ಮಗ್ನವಾಗಿದ್ದರು.

ಮನೆಯಲ್ಲಿ ನಿರ್ಮಿತ ಬೈಕ್ ನಿಂದ ವಿಶ್ವ ಗೆದ್ದು ಬಂದ ರೇಸರ್!

ಪಾಲ್ ತಮ್ಮ ಮಾತುಗಳಲ್ಲೇ ವಿವರಿಸುವ ಪ್ರಕಾರ ನೂತನ ಬೈಕ್ ಸುರಕ್ಷಿತವಾಗಿ ಪರೀಕ್ಷೆ ನಡೆಸುವುದು ಸವಾಲಿನ ವಿಷಯವಾಗಿತ್ತು. ಇದಕ್ಕಾಗಿ ಸಾಲ್ಟ್ ಫ್ಲ್ಯಾಟ್ಸ್ ಆಯ್ಕೆ ಮಾಡಿಕೊಂಡಿರುವುದಾಗಿ ವಿವರಿಸುತ್ತಾರೆ.

ಮನೆಯಲ್ಲಿ ನಿರ್ಮಿತ ಬೈಕ್ ನಿಂದ ವಿಶ್ವ ಗೆದ್ದು ಬಂದ ರೇಸರ್!

ಸ್ಪೀಡ್ ವೀಕ್ ನಲ್ಲಿ ಅಸ್ತಿತ್ವದಲ್ಲಿದ್ದ ನಾಲ್ಕು ದಾಖಲೆಗಳನ್ನು ಪಾಲ್ ಅಳಿಸಿ ಹಾಕಿದ್ದಾರೆ. ಅವುಗಳೆಂದರೆ ಪರಿಷ್ಕೃತ 500 ಸಿಸಿ ವಿಭಾಗ, ಇಂಧನ ವಿಧ, ಫ್ರೇಮ್ ಮತ್ತು ಸ್ಟ್ರೀಮ್ ಲೈನಿಂಗ್ ನಲ್ಲಿ ದಾಖಲೆ ಬರೆದಿದ್ದಾರೆ.

ಮನೆಯಲ್ಲಿ ನಿರ್ಮಿತ ಬೈಕ್ ನಿಂದ ವಿಶ್ವ ಗೆದ್ದು ಬಂದ ರೇಸರ್!

ತಮ್ಮ ಮನದಲ್ಲಿ ಅನೇಕ ಹೊಸ ಹೊಸ ಯೋಜನೆ ಹೊಳೆದಿದ್ದು, ಇನ್ನು ಹೆಚ್ಚಿನ ಸಮಯ ವ್ಯಯ ಮಾಡಿದ್ದಲ್ಲಿ ಮತ್ತಷ್ಟು ದಾಖಲೆಗಳನ್ನು ಬರೆಯಬಹುದಾಗಿತ್ತು ಎಂಬ ಆತ್ಮವಿಶ್ವಾಸದ ಮಾತುಗಳನ್ನಾಡುತ್ತಾರೆ.

Most Read Articles

Kannada
Read more on ಬೈಕ್ motorcycle
English summary
This Man Just Broke World Speed Records On A Homemade Motorcycle
Story first published: Saturday, August 27, 2016, 15:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X