ಮಾರುತಿ ಕಾರಲ್ಲಿ ಲಂಬೋರ್ಗಿನಿ ಬದುಕು..!

By Super Admin

ಕೆಲವು ವಾಹನ ಪ್ರೇಮಿಗಳಿಗೆ ಕಂಪನಿ ನೀಡುವ ನೈಜ ಕಾರು ಸಾಕಾಗುವುದಿಲ್ಲ. ತಮ್ಮ ಕಾರು ವಿಶಿಷ್ಟವಾಗಿ ಗುರುತಿಸಿಕೊಳ್ಳಬೇಕೆಂಬ ಗುರಿಯೊಂದಿಗೆ ಕಾರನ್ನು ವಿಶೇಷವಾಗಿ ಮಾರ್ಪಾಡುಗೊಳಿಸುತ್ತಾರೆ. ಇದಕ್ಕಾಗಿ ಕಸ್ಟಮೈಸ್ಡ್ ಸಂಸ್ಥೆಗಳ ನೆರವನ್ನು ಪಡೆಯುತ್ತಾರೆ.

Also Read: ಮಾರುತಿ ಸಣ್ಣ ಕಾರುಗಳಿಗೂ ಏರ್ ಬ್ಯಾಗ್ ಫೀಚರ್

ಭಾರತದಲ್ಲಿ ಬಜೆಟ್ ಕಾರೊಂದನ್ನು ಪಡೆದು ಅದನ್ನು ಮಾರ್ಪಾಡುಗೊಳಿಸುವುದು ಸಾಮಾನ್ಯವಾಗಿ ಕಂಡುಬರುತ್ತಿರುವ ಪ್ರವೃತ್ತಿ. ಈ ಮೂಲಕ ಕ್ರೀಡಾ ಕಾರನ್ನು ಖರೀದಿಸುವಷ್ಟು ದುಡ್ಡಿದಿಲ್ಲದಿದ್ದರೂ ತಮ್ಮ ಕಾರು ಸ್ಪೋರ್ಟ್ಸ್ ಕಾರಿಗಿಂತ ಕಮ್ಮಿಯೇನಲ್ಲ ಎಂಬುದನ್ನು ತೋರಿಸಲು ಇಷ್ಟಪಡುತ್ತಾರೆ.

ಮಾರುತಿ ಕಾರಲ್ಲಿ ಲಂಬೋರ್ಗಿನಿ ಬದುಕು..!

ನೀವು ವಿಶೇಷ ರೀತಿಯ ಶಬ್ದವನ್ನುಂಟು ಮಾಡುವ ಎಂಜಿನ್ ಟ್ಯೂನ್ ಮಾಡುವ ಬಗ್ಗೆ ಕೇಳಿರಬಹುದು. ಇದೇ ರೀತಿಯಲ್ಲಿ ದೇಶದ ಜನಪ್ರಿಯ ಮಾರುತಿ 800 ಕಾರಿಗೆ ವಿಶೇಷವಾದ ವಿನ್ಯಾಸ ಮಾರ್ಪಾಡುಗೊಳಿಸಲಾಗಿದೆ.

ಮಾರುತಿ ಕಾರಲ್ಲಿ ಲಂಬೋರ್ಗಿನಿ ಬದುಕು..!

ಲಂಬೋರ್ಗಿನಿಯಂತಹ ಕ್ರೀಡಾ ಕಾರುಗಳಲ್ಲಿ ಸೀಸರ್ ಡೋರ್ ಗಳು (scissor doors) ಸರ್ವೇ ಸಾಮಾನ್ಯವಾಗಿದೆ. ಇದು ಸಂಪ್ರಾದಾಯಿಕ ಬಾಗಿಲುಗಿಂತಲೂ ಭಿನ್ನವಾಗಿ ಮೇಲ್ಬಾಗಕ್ಕೆ ತೆರೆದುಕೊಳ್ಳುತ್ತದೆ.

ಮಾರುತಿ ಕಾರಲ್ಲಿ ಲಂಬೋರ್ಗಿನಿ ಬದುಕು..!

ಇಲ್ಲೂ ಮಾರುತಿ 800 ಮಾಲಿಕ ತಮ್ಮ ಕಾರಿನಲ್ಲಿರುವ ನಾಲ್ಕು ಡೋರ್ ಗಳ ಬದಲಿಯಾಗಿ ದೊಡ್ಡದಾದ ಎರಡು ಸೀಸರ್ ಡೋರ್ ಗಳನ್ನು ಲಗತ್ತಿಸಿದ್ದಾರೆ.

ಮಾರುತಿ ಕಾರಲ್ಲಿ ಲಂಬೋರ್ಗಿನಿ ಬದುಕು..!

ಕೆಂಪು ಹಾಗೂ ಬಿಳುಪು ಜೋಡಿ ಬಣ್ಣವನ್ನು ಇದಕ್ಕೆ ಬಳಿಯಲಾಗಿದೆ. ಅಲ್ಲದೆ ಹಿಂಭಾಗದಲ್ಲಿ ಸ್ಪಾಯ್ಲರ್, ಹಾಗೂ ಮೇಲ್ಚಾವಣಿಯಲ್ಲಿ ಸನ್ ರೂಫ್ ಸಹ ಆವಳಡಿಸಲಾಗಿದೆ.

ಮಾರುತಿ ಕಾರಲ್ಲಿ ಲಂಬೋರ್ಗಿನಿ ಬದುಕು..!

ಉಳಿದಂತೆ ಹ್ಯುಂಡೈ ಆಸೆಂಟ್ ನಿಂದ ಆಮದು ಮಾಡಲಾದ ಹೆಡ್ ಲ್ಯಾಂಪ್, ದೊಡ್ಡದಾದ ಫ್ರಂಟ್ ಗ್ರಿಲ್, ಕಾರಿನ ಸುತ್ತಲೂ ರಬ್ಬರ್ ಹೋದಿಕೆ, ಫೋಕ್ಸ್ ವ್ಯಾಗನ್ ಪೊಲೊ ಟೈಲ್ ಲ್ಯಾಂಪ್ ಮುಂತಾದ ವೈಶಿಷ್ಟ್ಯಗಳನ್ನು ನೋಡಬಹುದಾಗಿದೆ.

ಇವನ್ನೂ ಓದಿ

3.5 ಲಕ್ಷ ಮತ್ತು ಮಾರುತಿ ಇದ್ದರೆ ಸಾಕು, ನಿಮ್ಮದು ಆಗಲಿದೆ ಸೂಪರ್ ಕಾರ್..! ಮುಂದಕ್ಕೆ ಓದಿ

Most Read Articles

Kannada
English summary
Maruti 800 modified with scissor doors
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X