ಬಲೆನೊ ಕಾರಿನ ಸುರಕ್ಷತೆ ಬಗ್ಗೆ ಅನುಮಾನ ಇರೋರು ಈ ಲೇಖನ ಓದಲೇ ಬೇಕು

Written By:

ವಾಹನಗಳ ಅತಿಯಾದ ವೇಗ ಹಾಗೂ ಪಾನಮತ್ತ ಚಾಲನೆಯೇ ಅಪಘಾತಗಳ ಸಂಖ್ಯೆ ಹೆಚ್ಚಲು ಪ್ರಮುಖ ಕಾರಣಗಳು ಎನ್ನಬಹುದು, ಇವುಗಳ ಜೊತೆ ರಸ್ತೆ ಮಧ್ಯೆ ನಾಯಿ ಅಡ್ಡ ಬಂದು ಎಷ್ಟೋ ಮಂದಿ ಪ್ರಾಣ ಕಳೆದುಕೊಂಡ ಘಟನೆ ಹಲವಾರು ಬಾರಿ ನೆಡೆದಿದೆ.

ಕೆಲವೇ ದಿನಗಳ ಹಿಂದೆ ಬಿಡುಗಡೆಗೊಂಡ ಹೊಚ್ಚ ಹೊಸ ಮಾರುತಿ ಬಲೆನೊ ಆರ್‌ಎಸ್ ಕಾರು ಪಲ್ಟಿಯಾಗಿದ್ದು, ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಅಪಾಯವಾಗದೆ ಇರುವುದು ಸಂತೋಷಕರ ಸಂಗತಿಯಾಗಿದೆ. ಕಾರಿಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಕೇರಳದಲ್ಲಿ ಈ ಘಟನೆ ಸಂಭವಿಸಿದ್ದು, ಕಾರಿನ ಚಾಲಕ ನಾಯಿ ಪ್ರಾಣ ಉಳಿಸಲು ತನ್ನ ಪ್ರಾಣವನ್ನೇ ಒತ್ತೆ ಇಟ್ಟಿರುವ ಅಪರೂಪದ ಘಟನೆ ನೆಡೆದಿದೆ. ಕಾರಿನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ದಿಬ್ಬಕ್ಕೆ ಹೊಡಿದು ಪಲ್ಟಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬಲೆನೊ ಆರ್.ಎಸ್ ಬಿಡುಗಡೆಯ ನಂತರ ಇದೇ ಮೊದಲ ಬಾರಿಗೆ ಈ ಕಾರಿನ ಅಫಘಾತ ಸಂಭವಿಸಿದೆ ಎನ್ನಲಾಗಿದ್ದು, ಕಾರು ಪಲ್ಟಿಯಾದರೂ ಸಹ ಯಾವುದೇ ರೀತಿಯ ಅಪಾಯವಾಗದೆ ಇರುವುದು ಕಾರಿನ ನಿರ್ಮಾಣ ಶ್ರೇಷ್ಠತೆಗೆ ಹಿಡಿದ ಕೈಗನ್ನಡಿಯಾಗಿದೆ.

ವೇಗವಾಗಿ ಚಲಿಸುತ್ತಿದ್ದ ಕಾರನ್ನು ಬ್ರೇಕ್ ಮೂಲಕ ಎಷ್ಟೇ ನಿಯಂತ್ರಣಕ್ಕೆ ತರಲು ಚಾಲಕ ಪ್ರಯತ್ನ ಪಟ್ಟರೂ ಆಗದೆ ಇರುವುದನ್ನು ನಾವಿಲ್ಲಿ ಗಮನಿಸಬಹುದಾಗಿದೆ.ನಾಯಿ ಅಡ್ಡ ಬಂದ ತಕ್ಷಣ ಎಬಿಎಸ್ ಕಾರ್ಯಾಚರಣೆಗೆ ಬಂದಿದ್ದು, ತದನಂತರ ಡಿವೈಡರ್‌ಗೆ ಅಪ್ಪಳಿಸಿ ಪಕ್ಕದ ರಸ್ತೆಯಲ್ಲಿ ಪಲ್ಟಿ ಹೊಡಿದಿದೆ.

ಹೊಚ್ಚ ಹೊಸ ಕಾರಿನ ಮುಂಭಾಗದ ಬಂಪರ್‌ಗೆ ಹೆಚ್ಚಿನ ಮಟ್ಟದ ಹಾನಿ ಸಂಭವಿಸಿದ್ದು, ಹಿಂಬದಿಯ ಎರಡೂ ಭಾಗದ ಟೈಲ್ ಲ್ಯಾಂಪ್ ಜಾಗ ನಜ್ಜುಗುಜ್ಜಾಗಿದೆ.

ಕಾರು ಪಲ್ಟಿಯಾದ ಪರಿಣಾಮ ಮುಂಭಾಗದ ಚಕ್ರಗಳ ನಡುವಿನ ಸಲಾಕೆ ಮುರಿದಿದ್ದು, ಹಿಂಭಾಗದ ಬಂಪರ್ ಹಾಳಾಗಿದೆ, ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀವು ಚಿತ್ರದಲ್ಲಿ ಕಾಣಬಹುದಾಗಿದೆ.

ಚಿತ್ರದಲ್ಲಿ ಗಮನಿಸಬಹುದಾಗ ಮತ್ತೊಂದು ಅಂಶವೆಂದರೆ ಪ್ರಯಾಣಿಕರು ಕುಳಿತುಕೊಳ್ಳುವ ಕ್ಯಾಬಿನ್ ಕಿಂಚಿತ್ತೂ ಕೂಡ ಹಾಳಾಗದೆ ಇರುವುದನ್ನು ನೀವು ನೋಡಬಹುದಾಗಿದ್ದು, ಈ ಮೂಲಕ ಕಾರಿನ ಬಲಿಷ್ಠತೆಯ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

ದೇಶದ ಪ್ರಮುಖ ಕಾರು ಉತ್ಪಾದಕ ಕಂಪೆನಿಯಾಗಿರುವ ಮಾರುತಿ, ಕಾರು ಮಾರುಕಟ್ಟೆಯಲ್ಲಿ ಶೇಕಡಾ 50 ರಷ್ಟು ಪಾಲುದಾರಿಕೆ ಹೊಂದಿದ್ದು, ಅತ್ಯಂತ ವಿಶ್ವಾಸ ಇಡಬಹುದಾದ ಕಾರು ಕಂಪನಿಯಾಗಿದೆ.

ಕಳೆದ ತಿಂಗಳು ಬಿಡುಗಡೆಗೊಂಡ ಈ ಹೊಸ ಬಲೆನೊ ಆರ್‌ಎಸ್ ಕಾರು ಮೂರು ಸಿಲಿಂಡರ್ ಹೊಂದಿರುವ 1.0 ಲೀಟರ್ ಬೂಸ್ಟರ್ ಜೆಟ್ ಎಂಜಿನ್ ಹೊಂದಿದ್ದು, ಸಾಮಾನ್ಯ ಮಾದರಿಯ ಬಲೆನೊ ಕಾರಿಗಿಂತ 60 ಕೆ.ಜಿ ಹೆಚ್ಚು ಭಾರ ಹೊಂದಿದೆ.

Story first published: Wednesday, April 12, 2017, 13:30 [IST]
English summary
Read in Kannada about Maruti baleno RS First crash report. Get more details about Maruti baleno RS First crash, accident details, car damage, reason for car crash and more.
Please Wait while comments are loading...

Latest Photos