ಕ್ರೆಟಾ ಆಯ್ತು; ಈಗ ಬಿಡುಗಡೆಗೂ ಮೊದಲೇ ಎಸ್‌-ಕ್ರಾಸ್ ನಜ್ಜುಗುಜ್ಜು

By Nagaraja

ಕೆಲವು ದಿನಗಳ ಹಿಂದಯಷ್ಟೇ ನಡು ರಸ್ತೆಯಲ್ಲಿ ಹೊಚ್ಚ ಹೊಸ ಹ್ಯುಂಡೈ ಕ್ರೆಟಾ ಪಲ್ಟಿ ಹೊಡೆದಿರುವುದರ ಬಗ್ಗೆ ವರದಿ ಮಾಡಿರುತ್ತೇವೆ. ಇದರ ಬೆನ್ನಲ್ಲೇ ಲಭ್ಯವಾಗಿರುವ ಮಗದೊಂದು ಆಶ್ಚರ್ಯಕರ ಸುದ್ದಿಯಲ್ಲಿ ಬಿಡುಗಡೆಗೂ ಮೊದಲೇ ಮಾರುತಿ ಸುಜುಕಿ ಎಸ್-ಕ್ರಾಸ್ ಅಪಘಾತವೊಂದರಲ್ಲಿ ಸಂಪೂರ್ಣವಾಗಿ ನಜ್ಜುಗುಜ್ಜುಗೊಂಡಿದೆ.

Also Read : ಮಾರುತಿ ಎಸ್-ಕ್ರಾಸ್; ಬಿಡುಗಡೆಗೂ ಮೊದಲೇ ಫುಲ್ ಬಾಡಿ ಸ್ಕ್ಯಾನಿಂಗ್

ನಿಮ್ಮಲ್ಲೆರ ಮಾಹಿತಿಗಾಗಿ, ಮಾರುತಿ ಸುಜುಕಿ ಎಸ್-ಕ್ರಾಸ್ 2015 ಆಗಸ್ಟ್ 05ರಂದು ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಬಿಡುಗಡೆ ಕಾಣಲಿದೆ. ಈ ನಡುವೆ ಅಪಘಾತಕ್ಕೆ ಸಿಲುಕಿರುವುದು ಹಲವಾರು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.

ಬಿಡುಗಡೆಗೂ ಮೊದಲೇ ಎಸ್‌-ಕ್ರಾಸ್ ಸಂಪೂರ್ಣ ನಜ್ಜುಗುಜ್ಜು

ಬಲ್ಲ ಮೂಲಗಳ ಪ್ರಕಾರ, ಮಾರುತಿ ಸುಜುಕಿ ಎಸ್-ಕ್ರಾಸ್ ಟೆಸ್ಟ್ ಡ್ರೈವ್ ಕಾರು ಅಪಘಾತಕ್ಕೀಡಾಗಿದೆ. ಈ ಮೂಲಕ ಶೋ ರೂಂಗೆ ಪ್ರವೇಶಿಸುವ ಮೊದಲೇ ಈ ಬಹುನಿರೀಕ್ಷಿತ ಕಾರು ಗ್ಯಾರೇಜ್ ಸೇರಿಕೊಂಡಿದೆ.

ಬಿಡುಗಡೆಗೂ ಮೊದಲೇ ಎಸ್‌-ಕ್ರಾಸ್ ಸಂಪೂರ್ಣ ನಜ್ಜುಗುಜ್ಜು

ಮಾರುತಿ ಸುಜುಕಿ ಎಸ್-ಕ್ರಾಸ್ ಢಿಕ್ಕಿ ಪ್ರಸಂಗ ಎಲ್ಲಿ ನಡೆಯಿತು? ಅಪಘಾತದ ಹಿಂದಿರುವ ಕಾರಣಗಳೇನು? ಎಂಬುದರ ಬಗೆಗಿನ ಮಾಹಿತಿಯೂ ಸದ್ಯಕ್ಕೆ ಲಭ್ಯವಿಲ್ಲ. ಈ ಸಂಬಂಧ ಮಾಹಿತಿಯನ್ನು ಕಲೆ ಹಾಕುವ ಪ್ರಯತ್ನದಲ್ಲಿದ್ದೇವೆ.

ಬಿಡುಗಡೆಗೂ ಮೊದಲೇ ಎಸ್‌-ಕ್ರಾಸ್ ಸಂಪೂರ್ಣ ನಜ್ಜುಗುಜ್ಜು

ಪ್ರಸ್ತುತ ಚಿತ್ರದಲ್ಲಿ ನೋಡುತ್ತಿರುವಂತೆಯೇ ಮಾರುತಿ ಎಸ್-ಕ್ರಾಸ್ ಕ್ರಾಸೋವರ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಇದರಲ್ಲಿ ಸಂಚರಿಸಿರುವ ಪ್ರಯಾಣಿಕರಿಗೆ ತೀವ್ರತರಹದ ಗಾಯಗಾಳಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಬಿಡುಗಡೆಗೂ ಮೊದಲೇ ಎಸ್‌-ಕ್ರಾಸ್ ಸಂಪೂರ್ಣ ನಜ್ಜುಗುಜ್ಜು

ಇನ್ನು ಸುರಕ್ಷತೆಯ ವಿಚಾರಕ್ಕೆ ಬಂದರೆ ನೂತನ ಎಸ್ ಕ್ರಾಸ್ ಕಾರಿನಲ್ಲಿ ಸುಜುಕಿಯ ಟೋಟಲ್ ಎಫೆಕ್ಟಿವ್ ಕಂಟ್ರೋಲ್ ತಂತ್ರಜ್ಞಾನ (ಟಿಇಸಿಟಿ) ಆಳವಡಿಸಲಾಗಿದೆ. ಇವೆಲ್ಲದರ ಜೊತೆಗೆ ಕಂಪ್ಯೂಟರ್ ಏಡಡ್ ಎಂಜಿನಿಯರಿಂಗ್ (ಸಿಎಇ), ಏರೋಡೈನಾಮಿಕ್ ವಿನ್ಯಾಸ, ಏರ್ ಬ್ಯಾಗ್ ಸೌಲಭ್ಯ ಮತ್ತು ಕಡಿಮೆ ತೂಕದ ಜೊತೆಗೆ ಸುಪೀರಿಯರ್ ಇಂಪಾಕ್ಟ್ ಸೇಫ್ಟಿ ವ್ಯವಸ್ಥೆಗಳಿದೆ.

ಬಿಡುಗಡೆಗೂ ಮೊದಲೇ ಎಸ್‌-ಕ್ರಾಸ್ ಸಂಪೂರ್ಣ ನಜ್ಜುಗುಜ್ಜು

ಈಗ ಬಿಡುಗಡೆಗೂ ಮೊದಲೇ ಮಾರುತಿ ಸುಜುಕಿ ಎಸ್-ಕ್ರಾಸ್ ಅಪಘಾತ ಪ್ರಸಂಗದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

ಇವನ್ನೂ ಓದಿ

ರಸ್ತೆ ಮಧ್ಯ ಪಲ್ಟಿ ಹೊಡೆದ ಹೊಚ್ಚ ಹೊಸ ಹ್ಯುಂಡೈ ಕ್ರೆಟಾ

Most Read Articles

Kannada
English summary
Pictures of what is believed to be the first reported crash of Maruti S Cross have emerged on Facebook.
Story first published: Saturday, August 1, 2015, 11:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X