ಟ್ರಕ್‌ ಉರುಳಿ ಮಾರುತಿ ಕಾರು ಅಪ್ಪಚ್ಚಿ: ಭೀಕರ ಅಪಘಾತದಲ್ಲಿ ಐವರು ದುರ್ಮರಣ

Written By:

ರಾಜಸ್ತಾನದ ಜೈಪುರನಲ್ಲಿ ಈ ದುರಂತ ಘಟನೆ ನಡೆದಿದ್ದು, ನಸುಕಿನ ಜಾವ 4ರ ವೇಳೆ ಈ ಅವಘಡ ಸಂಭವಿಸಿದೆ. ಕಾರಿನ ಮೇಲೆ ಟ್ರಕ್ ಉರುಳಿಬಿದ್ದ ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ದುರ್ಮಣಕ್ಕಿಡಾಗಿದ್ದಾರೆ.

ಜೈಪುರದ ಚೋಮು ಹೌಸ್‌ ಸರ್ಕಲ್‌ ಬಳಿಯೇ ಈ ಘಟನೆ ನಡೆದಿದ್ದು, ಅತಿಯಾಗಿ ಸರಕು ತುಂಬಿಕೊಂಡಿದ್ದ ಟ್ರಕ್‌ ನಿಯಂತ್ರಣ ತಪ್ಪಿದ ಪರಿಣಾಮ ಕಾರಿ ಮೇಲೆ ಉರುಳಿ ಬಿದ್ದಿದೆ.

ಟ್ರಕ್‌ನಲ್ಲಿ ಅತಿಯಾದ ಸರಕು ಇದ್ದ ಪರಿಣಾಮ ಕಾರು ಅಪ್ಪಚ್ಚಿಯಾಗಿದ್ದು, ಮಾರುತಿ ಸುಜುಕಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ.

ಭಾರೀ ಪ್ರಮಾಣದ ಸರಕು ತುಂಬಿದ್ದ ಟ್ರಕ್ ಸರಿಸಿದ ಬಳಿಕವಷ್ಟೇ ಅಪ್ಪಚ್ಚಿಯಾಗಿದ್ದ ಕಾರು ಪತ್ತೆಯಾಗಿದ್ದು, ಕಾರಿನಲ್ಲಿದ್ದವರನ್ನು ಪತ್ತೆ ಹಚ್ಚಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ಕಾರಿನಲ್ಲಿ ಸಿಕ್ಕ ಕೆಲವು ದಾಖಲೆಗಳ ಆಧಾರದ ಮೇಲೆ ಮೃತಪಟ್ಟ ಐವರನ್ನು ರಾಹುಲ್‌, ರೋಶ್‌ಣಿ, ಜ್ಯೋತಿ, ನಿತೇಶ್‌ ಮತ್ತು ಸ್ವೀಟಿ ಎಂದು ಗುರುತಿಸಲಾಗಿದೆ.

ಅಪಘಾತಕ್ಕಿಡಾದ ಕಾರು ಜೈಪುರದ ಸ್ಟ್ಯಾಚು ಸರ್ಕಲ್ ಕಡೆಗೆ ಹೋಗುತ್ತಿದ್ದಾಗ ಈ ಅವಘಡ ನಡೆದಿದ್ದು, ಘಟನೆ ಕುರಿತಂತೆ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದಾರೆ.

ಸದ್ಯ ಅಪಘಾತ ಸ್ಥಳದಿಂದ ಕಾರು ತೆರವುಗೊಳಿಸಲಾಗಿದ್ದು, ಉರುಳಿ ಬಿದ್ದ ಟ್ರಕ್‌ನಲ್ಲಿ 46 ಟ್ರನ್ ಸರಕು ತುಂಬಲಾಗಿತ್ತು ಎನ್ನಲಾಗಿದೆ.

ಇನ್ನು ಅಪಘಾತದಲ್ಲಿ ಸಿಲುಕಿರುವ ಕಾರು ಮದುವೆ ಔತಣಕೂಟ ಮುಗಿಸಿಕೊಂಡು ಹಿಂದಿರುವಾಗ ಈ ದುರಂತ ಸಂಭವಿಸಿದ್ದು, ಸಂಬಂಧಿಕರ ಆಕ್ರಂದನ ಮುಗಿಲುಮಟ್ಟಿತ್ತು.

ಅಪಘಾತ ನಡೆದ ಸ್ಥಳದಲ್ಲಿ ತೆರವು ಕಾರ್ಯಾಚರಣೆಯ ವಿಡಿಯೋ ಇಲ್ಲಿದೆ ನೋಡಿ.

Story first published: Wednesday, June 7, 2017, 16:29 [IST]
English summary
Read in kannada about maruti swift crushed beyond recognition in a freak accident.
Please Wait while comments are loading...

Latest Photos