ತಲೆಕೆಳಗಾಗಿ ಚಲಿಸುವ ವಿಚಿತ್ರ ಪಿಕಪ್ ಟ್ರಕ್

By Nagaraja

ವಾಹನ ಜಗತ್ತಿನ ಮಗದೊಂದು ಮ್ಯಾಜಿಕ್ ಟ್ರಕ್ ಅನ್ನು ನಾವಿಂದು ಪರಿಚಯಿಸಲಿದ್ದೇವೆ. ಅದುವೇ ತಲೆಕೆಳಗಾಗಿ ಸಂಚರಿಸುವ ವಿಚಿತ್ರ ಟ್ರಕ್. ವಿಷಯ ಏನೇ ಇರಲಿ. ಇಂತಹದೊಂದು ಸೃಷ್ಟಿಯ ಹಿಂದೆ ಕೆಲಸ ಮಾಡಿದವರನ್ನು ನಾವು ಗೌರವಿಸಲೇಬೇಕಾಗುತ್ತದೆ. ಯಾಕೆಂದರೆ ಸಾಮಾನ್ಯ ರಸ್ತೆಗಳಲ್ಲಿ ಸಂಚರಿಸಲು ಮಾನ್ಯತೆಯನ್ನು ಪಡೆದ ಟ್ರಕ್ ಇದಾಗಿದೆ.

ರಿಕ್ ಸುಲ್ಲಿವ್ಯಾನ್ ಎಂಬವರೇ ಇಂತಹದೊಂದು ವಿನೂತನ ಸೃಷ್ಟಿಗೆ ಕಾರಣವಾಗಿದ್ದಾರೆ. ಆರು ತಿಂಗಳುಗಳ ಕಾಲ ನಡೆಸಿದ ಅವಿರತ ಪ್ರಯತ್ನದ ಬಳಿಕ ವಾಹನಗಳ ಸೃಷ್ಟಿಯ ಹೊಸ ಕಲ್ಪನೆಗೆ ರಿಕ್ ಚಾಲನೆ ನೀಡಿದ್ದಾರೆ. ಪ್ರಸ್ತುತ ತಲೆಕೆಳಗಾಗಿ ಕಾಣಿಸುವ ಟ್ರಕ್ ನ ಕೆಲವು ಕುತೂಹಲಕಾರಿ ಅಂಶಗಳ ಬಗ್ಗೆ ನಾವು ಪಟ್ಟಿ ಮಾಡಿ ಕೊಡಲಿದ್ದೇವೆ.

ಎರಡು ವಾಹನ ಬಳಕೆ

ಎರಡು ವಾಹನ ಬಳಕೆ

ಇಲ್ಲಿ ಮೆಕ್ಯಾನಿಕ್ ಆಗಿರುವ ರಿಕ್ ಎರಡು ಪ್ರತ್ಯೇಕ ವಾಹನಗಳನ್ನು ಒಂದುಗೂಡಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ಇದಕ್ಕಾಗಿ ವಿವಿಧ ಬಿಡಿಭಾಗಗಳನ್ನು ಸಂಗ್ರಹಿಸಿದ್ದಾರೆ.

 ಯಾವ್ಯಾವ ವಾಹನ ಬಳಕೆ ?

ಯಾವ್ಯಾವ ವಾಹನ ಬಳಕೆ ?

ಇದಕ್ಕಾಗಿ ಅವರು 1991ರ ಫೋರ್ಡ್ ರೇಂಜರ್ ಪಿಕಪ್ ಟ್ರಕ್ ಗಳನ್ನು ಬಳಕೆ ಮಾಡಿದ್ದರು. ಬಳಿಕ ಇದರ ಮೇಲೆ 1995ರ ಎಫ್ 150 ಪಿಕಪ್ ಟ್ರಕ್ ಅನ್ನು ಜೋಡಣೆ ಮಾಡಿದ್ದರು.

ಯೋಚನೆ ಹೇಗೆ ಹೊಳೆಯಿತು ?

ಯೋಚನೆ ಹೇಗೆ ಹೊಳೆಯಿತು ?

ಒಂದು ದಿನ ವರ್ಕ್ ಶಾಪ್ ನಲ್ಲಿ ಕೆಲಸ ಮಾಡುತ್ತಿರುವ ಹೊತ್ತಿಗೆ ತಲೆಕೆಳಗಾದ ಗಾಡಿಯೊಂದು ರಿಕ್ ಅವರಿಗೆ ದರ್ಶನವಾಗಿತು. ಈ ಕ್ಷಣದಲ್ಲಿ ಅವರ ಮನದಲ್ಲಿ ಇಂತಹದೊಂದು ಯೋಚನೆ ಹೊಳೆಯಿತು. ಅಲ್ಲದೆ ತಾವ್ಯಾಕೆ ಇಂತಹದೊಂದು ಕೃತ್ಯಕ್ಕೆ ಕೈ ಹಾಕಬಾರದು ಎಂಬ ಚಿಂತನೆಯಲ್ಲಿ ತೊಡಗಿದರು.

ರಸ್ತೆ ಮಾನ್ಯತೆ ಪಡೆದ ಟ್ರಕ್

ರಸ್ತೆ ಮಾನ್ಯತೆ ಪಡೆದ ಟ್ರಕ್

ವಿಶೇಷಯವೆಂದರೆ ರಸ್ತೆಯಲ್ಲಿ ಸಂಚರಿಸಲು ಪ್ರಸ್ತುತ ಟ್ರಕ್ ಮಾನ್ಯತೆ ಪಡೆದುಕೊಂಡಿದೆ. ಅಲ್ಲದೆ ಕೆಂಪು ಹಾಗೂ ಶ್ವೇತ ವರ್ಣದ ಮಿಶ್ರಣವನ್ನು ಪಡೆದುಕೊಂಡಿದೆ.

ತಲೆಕೆಳಗಾದ ಟ್ರಕ್

ತಲೆಕೆಳಗಾದ ಟ್ರಕ್

ತಲೆಕೆಳಗಾದ ಟ್ರಕ್ ಎಂಬ ರೀತಿಯಲ್ಲಿ ಬಿಂಬಿಸುವ ಹಿನ್ನೆಲಯಲ್ಲಿ ಟ್ರಕ್ ಮೇಲ್ಗಡೆಯಲ್ಲೂ ಚಕ್ರಗಳನ್ನು ಜೋಡಣೆ ಮಾಡಲಾಗಿದೆ.

ಪ್ಲಿಪ್ ಓವರ್

ಪ್ಲಿಪ್ ಓವರ್

ಪ್ರಸ್ತುತ ಟ್ರಕ್ ನಲ್ಲಿ ಪ್ಲಿಪ್ ಓವರ್ ಎಂಬ ಲೈಸನ್ಸ್ ಪ್ಲೇಟ್ ಅನ್ನು ಕಾಣಬಹುದಾಗಿದೆ. ಅಲ್ಲದೆ ಎಲ್ಲೆಡೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ರಿಕ್ ಅಭಿಪ್ರಾಯಪಡುತ್ತಾರೆ.

ಪಬ್ಲಿಸಿಟಿ ಉದ್ದೇಶವಲ್ಲ

ಪಬ್ಲಿಸಿಟಿ ಉದ್ದೇಶವಲ್ಲ

ಇದು ಯಾವುದೇ ಪ್ರಚಾರವನ್ನು ಉದ್ದೇಶವಿರಿಸಿಕೊಂಡು ತಯಾರಿಸಿದ್ದಲ್ಲ. ವಾಹನಗಳ ಮೇಲಿನ ಪ್ರೀತಿಯಿಂದಲೇ ರಿಕ್ ಇಂತಹದೊಂದು ಪ್ರಯತ್ನಕ್ಕೆ ಮುಂದಾಗಿದ್ದರು.

Most Read Articles

Kannada
Read more on ಟ್ರಕ್ truck
English summary
Mechanic Rick Sullivan Builds Upside-Down Truck
Story first published: Thursday, March 26, 2015, 15:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X