ಡ್ರೋನಿಯರ್ ವಿಮಾನ ನಾಪತ್ತೆ ಪ್ರಕರಣದ ಹಿಂದಿರುವ ನಿಗೂಢತೆ

By Nagaraja

ಭಾರತೀಯ ಸೇನೆಗೆ ಸೇರಿದ ಹಗುರ ಯುದ್ಧ ವಿಮಾನಗಳು ಪದೇ ಪದೇ ಪತನಗೊಳ್ಳುತ್ತಿರುವುದು ತೀವ್ರ ಆಂತಕಕ್ಕೆ ಕಾರಣವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಪತನಗೊಳ್ಳುವ ವಿಮಾನಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಈ ಪಟ್ಟಿಯಲ್ಲಿ ಚೆನ್ನೈ ಕೋಸ್ಟಲ್ ಗಾರ್ಡ್‌ನ ಡ್ರೋನಿಯರ್ ಲಘು ಯುದ್ಧ ವಿಮಾನ ಕೂಡಾ ಸೇರ್ಪಡೆಯಾಗಿದೆ.

Also Read : ಮೃತ್ಯುಕೂಪದಿಂದ ನೇಪಾಳಿಯರನ್ನು ರಕ್ಷಿಸಿದ ಧ್ರುವ ತಾರೆ

2015 ಜೂನ್ 08ರಂದು ಚೆನ್ನೈ ಕರಾವಳಿ ರಕ್ಷಣಾ ಪಡೆಗೆ ಸೇರಿದ ಡ್ರೋನಿಯರ್ ವಿಮಾನ ನಾಪತ್ತೆಯಾಗಿತ್ತು. ಇಬ್ಬರು ಪೈಲಟ್ ಸೇರಿ ಮೂವರು ಸಿಬ್ಬಂದಿಗಳನ್ನು ಹೊತ್ತುಕೊಂಡು ಬಾನತ್ತೆರಕ್ಕೆ ಹಾರಿದ ವಿಮಾನವು ಬಳಿಕ ರಾಡಾರ್ ಸಂಪರ್ಕವನ್ನು ಕಡಿತುಕೊಂಡಿತ್ತು. ತದಾ ಬಳಿಕ ಭಾರತೀಯ ವಾಯುಸೇನೆ, ನೌಕಾದಳ ವ್ಯಾಪಕ ಶೋಧ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಆದರೆ ಈಗ ಒಂದು ತಿಂಗಳ ಬಳಿಕ ಡ್ರೋನಿಯರ್ ಅವಶೇಷಗಳು ಚೆನ್ನೈ ಕರಾವಳಿ ತೀರದಲ್ಲಿ ಪತ್ತೆಯಾಗಿದೆ. ಇದು ಮತ್ತಷ್ಟು ನಿಗೂಢತೆಗೆ ಎಡೆಮಾಡಿಕೊಟ್ಟಿದೆ.

ಡ್ರೋನಿಯರ್ ವಿಮಾನ ನಾಪತ್ತೆ ಪ್ರಕರಣದ ಹಿಂದಿರುವ ನಿಗೂಢತೆ

ಈ ಬಗ್ಗೆ ಹೇಳಿಕೆ ಕೊಟ್ಟಿರುವ ತಮಿಳುನಾಡುವ ಕೋಸ್ಟ್ ಲೈನ್ ಅಧಿಕಾರಿಗಳು, ಡ್ರೋನಿಯರ್ ವಿಮಾನದ ಫ್ಲೈಟ್ ಡಾಟಾ ರೆಕಾರ್ಡರ್ (ಬ್ಲ್ಯಾಕ್ ಬಾಕ್ಸ್) ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವುದಾಗಿ ತಿಳಿಸಿದ್ದಾರೆ.

ಡ್ರೋನಿಯರ್ ವಿಮಾನ ನಾಪತ್ತೆ ಪ್ರಕರಣದ ಹಿಂದಿರುವ ನಿಗೂಢತೆ

ಈ ಸಂಬಂಧ ರಕ್ಷಣಾ ಸಚಿವಾಲಯವು ಸಹ ತಮ್ಮ ಟ್ವೀಟ್ ನಲ್ಲಿ ಬಂಗಾಳ ಕೊಲ್ಲಿಯಲ್ಲಿ ಪತ್ತೆ ಹಚ್ಚಲಾಗಿರುವ ಡ್ರೋನಿಯರ್ ವಿಮಾನದ ಅವಶೇಷಗಳ ಚಿತ್ರವನ್ನು ಬಹಿರಂಗಪಡಿಸಿದ್ದರು. ಇವೆಲ್ಲವೂ ಮತ್ತಷ್ಟು ಕಳವಳವನ್ನುಂಟು ಮಾಡಿದೆ.

ಡ್ರೋನಿಯರ್ ವಿಮಾನ ನಾಪತ್ತೆ ಪ್ರಕರಣದ ಹಿಂದಿರುವ ನಿಗೂಢತೆ

ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ ಹಚ್ಚಿರುವ ಹಿನ್ನೆಲೆಯಲ್ಲಿ ಅಪಘಾತದ ನಿಗೂಢತೆಗೆ ಸಂಬಂಧಪಟ್ಟಂತೆ ಹೆಚ್ಚಿನ ಕಾರಣಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಲಿದೆ.

ಡ್ರೋನಿಯರ್ ವಿಮಾನ ನಾಪತ್ತೆ ಪ್ರಕರಣದ ಹಿಂದಿರುವ ನಿಗೂಢತೆ

ಮತ್ತಷ್ಟು ಕುತೂಹಲಕಾರಿ ಅಂಶವೆಂದರೆ ತಜ್ಞರ ಪ್ರಕಾರ ಡ್ರೋನಿಯರ್ ಯುದ್ಧ ವಿಮಾನವು ನೀರಿನಲ್ಲಿ ಮುಳುಗಿದರೂ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ರಚನೆಯನ್ನು ಹೊಂದಿದೆ. ಆದರೆ ಈ ಪ್ರಕರಣದಲ್ಲಿ ತದ್ವಿರುದ್ಧವಾಗಿದೆ.

ಡ್ರೋನಿಯರ್ ವಿಮಾನ ನಾಪತ್ತೆ ಪ್ರಕರಣದ ಹಿಂದಿರುವ ನಿಗೂಢತೆ

ಜರ್ಮನಿ ಮೂಲದ ಡ್ರೋನಿಯರ್ ಲಘು ಯುದ್ಧ ವಿಮಾನ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಪರವಾನಗಿ ಗಿಟ್ಟಿಸಿಕೊಂಡಿದ್ದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್) ಸಂಸ್ಥೆಯು ಭಾರತೀಯ ವಾಯುಸೇನೆ, ಭಾರತೀಯ ನೌಕಾದಳ ಹಾಗೂ ತೀರಾ ಪ್ರದೇಶ ರಕ್ಷಣಾ ಪಡೆಗೆ ಇದರ ವಿತರಣೆ ಪ್ರಕ್ರಿಯೆ ನಡೆಸುತ್ತಿದೆ.

ಸಾಮರ್ಥ್ಯ

ಸಾಮರ್ಥ್ಯ

ಭಾರ ಹೊತ್ತೊಯ್ಯುವ ಸಾಮರ್ಥ್ಯ: 2,340 ಕೆ.ಜಿ

ಉದ್ದ: 16.56 ಮೀಟರ್

ರೆಕ್ಕೆ ಅಗಲ: 16.97 ಮೀಟರ್

ಎತ್ತರ: 4.86 ಮೀಟರ್

ಖಾಲಿ ತೂಕ: 3,739 ಕೆ.ಜಿ

ನಿರ್ವಹಣೆ

ನಿರ್ವಹಣೆ

ಸಿಬ್ಬಂದಿ: ಇಬ್ಬರು ಪೈಲಟ್

ಸಾಮರ್ಥ್ಯ: 19 ಪ್ರಯಾಣಿಕರು

ವ್ಯಾಪ್ತಿ: 1111 ಕೀ.ಮೀ.

ಗರಿಷ್ಠ ವೇಗ: 413 ಕೀ.ಮೀ.

ಡ್ರೋನಿಯರ್ ವಿಮಾನ ನಾಪತ್ತೆ ಪ್ರಕರಣದ ಹಿಂದಿರುವ ನಿಗೂಢತೆ

ಪದೇ ಪದೇ ಡ್ರೋನಿಯರ್ ಯುದ್ಧ ವಿಮಾನಗಳು ಪತನಗೊಳ್ಳುವ ಪ್ರಕರಣಗಳು ಜಾಸ್ತಿಯಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಈ ಸಂಬಂಧ ಫ್ಲೈಟ್ ಡಾಟಾ ರೆಕಾರ್ಡರ್ ನಿಂದ ನಿಖರ ಕಾರಣ ತಿಳಿಯುವ ನಂಬಿಕೆಯಿದೆ.

ಡ್ರೋನಿಯರ್ ವಿಮಾನ ನಾಪತ್ತೆ ಪ್ರಕರಣದ ಹಿಂದಿರುವ ನಿಗೂಢತೆ

ಹವಾಮಾನ ವೈಪರೀತ್ಯದಿಂದಾಗಿ ಅಪಘಾತ ಸಂಭವಿಸಿರಬಹುದೇ? ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ತಿಳಿಸಿರಿ.

ಇವನ್ನೂ ಓದಿ

ಭಾರತೀಯ ವಾಯುಸೇನೆ ನಿಮಗೆ ಗೊತ್ತಿರದ 15 ಸತ್ಯಗಳು

Most Read Articles

Kannada
Read more on ವಿಮಾನ plane
English summary
missing Dornier aircraft debris found off Tamil Nadu coast
Story first published: Tuesday, July 14, 2015, 9:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X