ಮಗು ಬೇಡ, ಕಾರು ಸಾಕು; ಎಂಥ ಕಾಲ ಬಂತು ನೋಡಿ!

By Nagaraja

ಎಂಥ ಕಾಲ ಬಂತು ನೋಡಿ. ತನ್ನ ಕರುಳ ಕುಡಿಗೆ ಹಗಲು ರಾತ್ರಿಯೆನ್ನದೇ ಪರಿತಪಿಸುವ ತಾಯಿಂದರ ಕಾಲ ಹೋಗಿ ಬಿಟ್ಟಿದೆ. ಈಗ ಎಲ್ಲವೂ ಯಾಂತ್ರಿಕ ಯುಗ. ಇಲ್ಲಿ ಪ್ರೀತಿ, ವಾತ್ಸಲ್ಯಕ್ಕೆ ಬೆಲೆಯಿಲ್ಲ ಎಂಬುದು ಮಗದೊಮ್ಮೆ ಸಾಬೀತಾಗಿದೆ.

ಹೌದು, ಚೀನಾದ ಹೆತ್ತ ತಾಯಿಯೊಬ್ಬಾಕೆ ತನ್ನ ಕಾರಿನಲ್ಲಿ ಸಿಕ್ಕಿ ಹಾಕಿಕೊಂಡಿರುವ ಮಗವನ್ನು ರಕ್ಷಿಸುವ ಬದಲು ಕರುಳ ಕುಡಿಯ ಜೀವವನ್ನೇ ಪಣತೊಟ್ಟಿದ್ದಾರೆ. ಮಗುವಿಗೆ ಏನಾದರೂ ಸಂಭವಿಸಿದರೂ ಪರವಾಗಿಲ್ಲ. ಆದರೆ ದುಬಾರಿ ಕಾರಿಗೆ ಮಾತ್ರ ಏನಾಗಬಾರದು ಎಂಬ ರೀತಿಯಲ್ಲಿ ವರ್ತಿಸಿರುವುದು ನೆರೆದಿದ್ದವರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಕಾರು

ಚೀನಾದ ಝೆಜಿಯಾಂಗ್ ಪ್ರಾಂತ್ಯದಲ್ಲಿ ಘಟನೆ ನಡೆದಿದ್ದು, ಡೋರ್ ಲಾಕ್ ಆಗಿದ್ದರಿಂದ ಕಾರಿನೊಳಗೆ ಸಿಕ್ಕಿ ಹಾಕಿಕೊಂಡಿದ್ದ ಮೂರು ವರ್ಷದ ಮಗು ಕಿರುಚಾಟ ಅಕ್ಕಪಕ್ಕದ ಎಲ್ಲರಿಗೂ ಕೇಳಬಹುದಿತ್ತು. ಆದರೆ ಕಾರಿನ ಬಳಿಯಿದ್ದ ತಾಯಿ ಮಾತ್ರ ಈ ಬಗ್ಗೆ ಕ್ಯಾರೇ ಎನ್ನುತ್ತಿರಲಿಲ್ಲ.

ಇನ್ನೇನು ಸಾರ್ವಜನಿಕರು ಒಟ್ಟು ಸೇರಿದಾಗ ಕಾರನ್ನು ಒಡೆದು ಮಗುವನ್ನು ಹೊರ ತೆಗೆಯುವ ಪ್ರಯತ್ನಕ್ಕೆ ಮುಂದಾದಾಗ ಆಕೆ ನಿರಾಕರಿಸುತ್ತಿದ್ದರು. ಅಲ್ಲದೆ ನಕಲಿ ಕೀ ಮಾಡಿಸಲು ಸಂಬಂಧಪಟ್ಟವರಿಗೆ ಕರೆ ಮಾಡಿರುವುದಾಗಿ ತಿಳಿಸುತ್ತಿದ್ದರು.

ಆದರೆ ತಕ್ಷಣಕ್ಕೆ ಆಗಮಿಸಿದ ಆಗ್ನಿಶಾಮಕ ಸಿಬ್ಬಂದಿಗಳು ಕಾರನ್ನು ಒಡೆದು ಮಗುವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಈ ಗರಿಷ್ಠ ತಾಪಮಾನದಲ್ಲಿ ಮಕ್ಕಳನ್ನು ಕಾರಿನೊಳಗೆ ಬಿಟ್ಟು ಕಾರು ಲಾಕ್ ಮಾಡಿ ತೆರಳುವ ಅಪಾಯದ ಬಗ್ಗೆಯೂ ತಾಯಿಗೆ ಉಪದೇಶ ನೀಡಿ ಕಳುಹಿಸಿಕೊಟ್ಟಿದ್ದಾರೆ.

Most Read Articles

Kannada
Read more on ಕಾರು car
English summary
Bizarre things happen around the world and this incident in China is the list topper! A mom refuses to break the window of her BMW to rescue her little toddler who is stuck inside.
Story first published: Wednesday, July 15, 2015, 14:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X