'ಫ್ಯೂರಿಯಸ್ 7' ಚಿತ್ರಕ್ಕಾಗಿ 230 ಕಾರುಗಳು ಪೀಸ್ ಪೀಸ್

By Nagaraja

ಫಾಸ್ಟ್ ಆಂಡ್ ಫ್ಯೂರಿಯಸ್ ಬಗ್ಗೆ ಹೆಚ್ಚು ಮುನ್ನುಡಿ ಬರೆಯಬೇಕಾದ ಅಗತ್ಯವಿಲ್ಲ. ಬಹುಶ: ಹಾಲಿವುಡ್ ಚಿತ್ರ ರಸಿಕರ ಮನದಲ್ಲೀಗ ಇದೇ ವಿಚಾರ ಓಡುತ್ತಿರಬಹುದು. ಈಗಷ್ಟೇ ಬಿಡುಗಡೆಯಾಗಿರುವ ಫಾಸ್ಟ್ ಆಂಡ್ ಫ್ಯೂರಿಯಸ್ ಚಿತ್ರ ಸರಣಿಯ ಏಳನೇ ಹಾಗೂ ಕೊನೆಯ ಭಾಗವಾಗಿರುವ 'ಫ್ಯೂರಿಯಸ್ 7' ಬಾಕ್ಸ್ ಆಫೀಸ್ ಗಲ್ಲ ಪೆಟ್ಟಿಗೆಯನ್ನು ದೋಚಿಕೊಳ್ಳುತ್ತಿದೆ.

ಯಾವುದೇ ಒಂದು ಚಿತ್ರದ ಯಶಸ್ಸಿನಲ್ಲಿ ಚಿತ್ರತಂಡದ ಪೂರ್ವ ತಯಾರಿಯ ಅವರಿತ ಪರಿಶ್ರಮವಿರುತ್ತದೆ. ಫ್ಯೂರಿಯಸ್ 7 ಚಿತ್ರದಲ್ಲೂ ಇದು ಪ್ರತಿಫಲಿಸಿದೆ. ನೀವು ಎಷ್ಟು ಕಷ್ಟಪಟ್ಟು ಬಹಳ ಅಪರ್ಣಾ ಮನೋಭಾವದಿಂದ ಕೆಲಸದಲ್ಲಿ ತೊಡಗುತ್ತಿರೋ ಅಷ್ಟೇ ಮಾತ್ರದ ಯಶಸ್ಸು ನಿಮ್ಮನ್ನು ಹರಸಿಕೊಂಡು ಬರಲಿದೆ ಎಂಬುದಕ್ಕೆ ಈ ಚಿತ್ರ ಉತ್ತಮ ನಿದರ್ಶನವಾಗಿದೆ.

'ಫ್ಯೂರಿಯಸ್ 7' ಚಿತ್ರಕ್ಕಾಗಿ 230 ಕಾರುಗಳು ಪೀಸ್ ಪೀಸ್

ಫಾಸ್ಟ್ ಆ್ಯಂಡ್ ಫ್ಯೂರಿಯಸ್ ಚಿತ್ರದಲ್ಲೂ ಇದು ಕಂಡುಬಂದಿದೆ. ಬೆನ್ನಟ್ಟಿಸಿಕೊಂಡು ಹೋಗುವ ಕಥೆಯನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಿರುವ ಈ ಸಿನೆಮಾದಲ್ಲಿ ಬರೋಬ್ಬರಿ 230ಗಿಂತಲೂ ಹೆಚ್ಚು ಕಾರುಗಳನ್ನು ನೂಚ್ಚುನೂರು ಮಾಡಲಾಗಿದೆ.

'ಫ್ಯೂರಿಯಸ್ 7' ಚಿತ್ರಕ್ಕಾಗಿ 230 ಕಾರುಗಳು ಪೀಸ್ ಪೀಸ್

ಭಾರತೀಯ ಚಿತ್ರರಂಗವನ್ನು ಹೋಲಿಸಿದಾಗ ಇಂತಹದೊಂದು ಸಂಖ್ಯೆಯನ್ನು ಊಹಿಸಲಸಾಧ್ಯ. ಏಕೆಂದರೆ ಬಹುಶ: ಇಷ್ಟು ದೊಡ್ಡ ಮೊತ್ತ ಹೂಡಿಕೆ ಮಾಡಲು ನಮ್ಮ ನಿರ್ಮಾಪಕರು ಧೈರ್ಯ ತೋರಲಾರರು.

'ಫ್ಯೂರಿಯಸ್ 7' ಚಿತ್ರಕ್ಕಾಗಿ 230 ಕಾರುಗಳು ಪೀಸ್ ಪೀಸ್

ಹಾಗಿರುವಾಗ ಎಲ್ಲ ತೊಡಕುಗಳನ್ನು ಮೀರಿ ನಿಂತಿರುವ ಫ್ಯೂರಿಯಸ್ 7 ಚಿತ್ರದಲ್ಲಿ ನೈಜ ದೃಶ್ಯಾವಳಿಯ ಚಿತ್ರಣಕ್ಕೆ ಮೊದಲ ಆದ್ಯತೆ ಕೊಡಲಾಗಿದೆ. ಇದು ಚಿತ್ರ ರಸಿಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.

'ಫ್ಯೂರಿಯಸ್ 7' ಚಿತ್ರಕ್ಕಾಗಿ 230 ಕಾರುಗಳು ಪೀಸ್ ಪೀಸ್

ಹಾಗಂತ ಇದರಲ್ಲಿ ಸೆಕೆಂಡ್ ಹ್ಯಾಂಡ್ ಅಥವಾ ಗುಜರಿ ಕಾರುಗಳನ್ನು ಬಳಕೆ ಮಾಡಿಲ್ಲ. ಶೋ ರೂಂನಿಂದ ನೇರವಾಗಿ ಇಳಿದಿರುವ ಐಷಾರಾಮಿ ಕಾರುಗಳನ್ನು ಪೀಸ್ ಪೀಸ್ ಮಾಡಲಾಗಿದೆ.

'ಫ್ಯೂರಿಯಸ್ 7' ಚಿತ್ರಕ್ಕಾಗಿ 230 ಕಾರುಗಳು ಪೀಸ್ ಪೀಸ್

ನಮ್ಮ ದೇಶದ ಚಿತ್ರರಂಗದಲ್ಲಿ ಕಾರನ್ನು ಬೆನ್ನಟ್ಟಿಕೊಂಡು ಹೋಗುವಂತಹ ದೃಶ್ಯಗಳು ಚಿತ್ರದ ಕ್ಲೈಮಾಕ್ಸ್ ನಲ್ಲಿ ಮಾತ್ರ ಕಾಣಸಿಗುತ್ತದೆ. ಆದರೆ ಇದನ್ನೇ ಆಧಾರವಾಗಿಟ್ಟುಕೊಂಡು ಒಂದು ಚಿತ್ರಕಥೆ ರಚಿಸಿ ಅದನ್ನು ಪ್ರೇಕ್ಷಕರನ್ನು ತಲುಪಿಸುವುದರಲ್ಲಿ ಫ್ಯೂರಿಯಸ್ ಚಿತ್ರತಂಡ ಅಕ್ಷರಶ: ಯಶ ಕಂಡಿದೆ.

'ಫ್ಯೂರಿಯಸ್ 7' ಚಿತ್ರಕ್ಕಾಗಿ 230 ಕಾರುಗಳು ಪೀಸ್ ಪೀಸ್

ಕಾರನ್ನು ನೂಚ್ಚುನೂರು ಮಾಡುವ ವಿಷಯ ಬಂದಾಗ ನಾವಿಲ್ಲಿ ಚಿತ್ರತಂಡದ ಹಿಂಭಾಗದಲ್ಲಿ ಕೆಲಸ ಮಾಡಿರುವ ಪ್ರಚಾರ ಬಯಸದ ಓರ್ವ ವ್ಯಕ್ತಿಯ ಹೆಸರನ್ನು ಹೇಳಲು ಇಚ್ಚಿಸುತ್ತೇವೆ. ಅವರೇ ಡೆನ್ನಿಸ್ ಮೆಕ್ ಕಾರ್ತಿ.

'ಫ್ಯೂರಿಯಸ್ 7' ಚಿತ್ರಕ್ಕಾಗಿ 230 ಕಾರುಗಳು ಪೀಸ್ ಪೀಸ್

2006ನೇ ಇಸವಿಯಿಂದಲೇ ಫಾಸ್ಟ್ ಆ್ಯಂಡ್ ಫ್ಯೂರಿಯಸ್ ತಂಡದೊಂದಿಗೆ ಕೆಲಸ ಮಾಡುತ್ತಿರುವ ಮೆಕ್ ಕಾರ್ತಿ ಚಿತ್ರತಂಡದ ಅಗತ್ಯಕ್ಕಾನುಸಾರವಾಗಿ ಶೂಟಿಂಗ್ ಲೋಕಷನ್ ಗೆ ಕಾರುಗಳನ್ನು ತಲುಪಿಸುತ್ತಾರೆ.

'ಫ್ಯೂರಿಯಸ್ 7' ಚಿತ್ರಕ್ಕಾಗಿ 230 ಕಾರುಗಳು ಪೀಸ್ ಪೀಸ್

ಡೆನ್ನಿಸ್ ಅವರೇ ಬಹಿರಂಗಪಡಿಸುವ ಪ್ರಕಾರ ಸ್ಕೈ ಡೈವಿಂಗ್ ಸೀನ್ ವೊಂದಕ್ಕೆ ಕನಿಷ್ಠ 34 ಕಾರುಗಳ ಅಗತ್ಯವಿರುತ್ತದೆ. ಇವುಗಳಲ್ಲಿ ಆರು ಸುಬರು ಡಬ್ಲ್ಯುಆರ್ ಎಕ್ಸ್, 8 ಡೊಡ್ಜ್ ಚಾರ್ಜರ್, 8 ಚಾಲೆಂಜರ್ಸ್ ಮತ್ತು ತಲಾ ಆರು ಜೀಪ್ ಹಾಗೂ ಕ್ಯಾಮೆರೊ ಕಾರುಗಳು ಸೇರಿಕೊಂಡಿದೆ.

'ಫ್ಯೂರಿಯಸ್ 7' ಚಿತ್ರಕ್ಕಾಗಿ 230 ಕಾರುಗಳು ಪೀಸ್ ಪೀಸ್

ಯಾವುದೇ ಕನಿಕರವಿಲ್ಲದೆ ಇಂತಹ ದುಬಾರಿ ವಾಹನಗಳನ್ನು ಚಿತ್ರದ ಅಗತ್ಯಕ್ಕಾಗಿ ಪುಡಿ ಮಾಡಲಾಗುತ್ತದೆ. ಅಷ್ಟೇ ಯಾಕೆ ಪರ್ವತ ಹೆದ್ದಾರಿಯ ಚೇಸಿಂಗ್ ದೃಶ್ಯವೊಂದಕ್ಕಾಗಿ 40ರಷ್ಟು ವಾಹನಗಳನ್ನು ಪುಡಿಗೈಯಲಾಗಿತ್ತಂತೆ.

'ಫ್ಯೂರಿಯಸ್ 7' ಚಿತ್ರಕ್ಕಾಗಿ 230 ಕಾರುಗಳು ಪೀಸ್ ಪೀಸ್

ಬಳಿಕ ಚಲ್ಲಾಪಿಲ್ಲಿಯಾಗಿ ಹರಡಿದ ಕಾರುಗಳನ್ನು ಹೆದ್ದಾರಿಯಿಂದ ತೆರವುಗೊಳಿಸಲು ಎರಡು ದಿನಗಳೇ ಬೇಕಾಯಿತು ಎಂಬುದು ನಂಬಲೇಬೇಕಾಗಿರುವ ಸತ್ಯ. ನಜ್ಜುಗುಜ್ಜಾದ ಕಾರುಗಳನ್ನು ಬಳಿಕ ರಿಚರ್ಡ್ ಜಾನ್ಸೆನ್ ಮೋನರ್ಕ್ ಸ್ಕಿ ರಿಸಾರ್ಟ್ ಗೆ ಸ್ಥಳಾಂತರಿಸಲಾಗಿತ್ತು.

'ಫ್ಯೂರಿಯಸ್ 7' ಚಿತ್ರಕ್ಕಾಗಿ 230 ಕಾರುಗಳು ಪೀಸ್ ಪೀಸ್

ಸಾಮಾನ್ಯವಾಗಿ ಚಿತ್ರಗಳಲ್ಲಿ ಬಳಕೆಯಾದ ಕಾರುಗಳನ್ನು ರಿಪೇರಿ ಮಾಡಿಕೊಂಡು ಚಿತ್ರದ ಬಿಡುಗಡೆಯ ಬಳಿಕ ಹರಾಜಿಡಲಾಗುತ್ತದೆ. ಆದರೆ ಇವೆಲ್ಲಕ್ಕಿಂತ ಭಿನ್ನವಾಗಿರುವ ಫಾಸ್ಟ್ ಆ್ಯಂಡ್ ಫ್ಯೂರಿಯಸ್ ಚಿತ್ರದಲ್ಲಿ ಎಲ್ಲ ಕಾರುಗಳನ್ನು ಸಂಪೂರ್ಣ ಸರ್ವನಾಶ ಮಾಡಲು ಚಿತ್ರಡಂದ ಆದೇಶ ನೀಡಿದೆ.

'ಫ್ಯೂರಿಯಸ್ 7' ಚಿತ್ರಕ್ಕಾಗಿ 230 ಕಾರುಗಳು ಪೀಸ್ ಪೀಸ್

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಟ್ಟಿರುವ ಚಿತ್ರತಂಡ ಇಂತಹದೊಂದು ಹೇಳಿಕೆಯನ್ನು ಕೊಟ್ಟಿದೆ. ಯಾಕೆಂದರೆ ಫ್ಯೂರಿಯಸ್ ಚಿತ್ರದಲ್ಲಿ ಪುಡಿಯಾದ ಕಾರುಗಳು ಮರು ಬಳಕೆಗೆ ಯೋಗ್ಯವಲ್ಲ ಅಥವಾ ಯಾವುದೇ ಅಪಾಯವನ್ನು ಆಹ್ವಾನಿಸಲು ಚಿತ್ರತಂಡ ತಯಾರಾಗದಿರುವುದು ಶ್ಲಾಘನೀಯವಾಗಿದೆ.

'ಫ್ಯೂರಿಯಸ್ 7' ಚಿತ್ರಕ್ಕಾಗಿ 230 ಕಾರುಗಳು ಪೀಸ್ ಪೀಸ್

ಕೇವಲ ಕಾರುಗಳು ಮಾತ್ರವಲ್ಲ. ಐಷಾರಾಮಿ ಬಸ್ ಹಾಗೂ ಟ್ರಕ್ ಹಾಗೂ ಇತರೆ ವಾಹನಗಳನ್ನು ಯಾವುದೇ ಮುಲಾಜಿಲ್ಲದೆ ಹೊಡೆದುರಳಿಸಲಾಗಿದೆ.

'ಫ್ಯೂರಿಯಸ್ 7' ಚಿತ್ರಕ್ಕಾಗಿ 230 ಕಾರುಗಳು ಪೀಸ್ ಪೀಸ್

ಅತಿ ಹೆಚ್ಚು ಅಪಾಯವನ್ನು ಆಹ್ವಾನಿಸಿಕೊಂಡು ಚಿತ್ರದ ಚಿತ್ರಿಕರಣ ನಡೆದಿದೆ. ಇದರ ಪ್ರತಿಯೊಂದು ರಂಗವನ್ನು ಅತಿ ಸೂಕ್ಷ್ಮತೆಯಿಂದ ರಚಿಸಲಾಗಿದೆ. ಯಾಕೆಂದರೆ ಒಂದೇ ಟೇಕ್ ನಲ್ಲಿ ಚಿತ್ರಣ ಯಶಸ್ಸು ಕಾಣಬೇಕಾಗಿರುವುದು ಬಹಳ ಅಗತ್ಯವಾಗಿತ್ತು.

'ಫ್ಯೂರಿಯಸ್ 7' ಚಿತ್ರಕ್ಕಾಗಿ 230 ಕಾರುಗಳು ಪೀಸ್ ಪೀಸ್

ಕಾರು ಅಪಘಾತದಲ್ಲಿ ಮೃತಪಟ್ಟಿರುವ ಪಾಲ್ ವಾಕರ್ ಅಭಿನಯನದ ಕೊನೆಯ ಚಿತ್ರ ಕೂಡಾ ಇದಾಗಿದೆ. ಒಟ್ಟಾರೆಯಾಗಿ ಫ್ಯೂರಿಯಸ್ 7 ಚಿತ್ರದಲ್ಲಿ ವಾಹನಗಳಿಗೆ ಅತಿ ಹೆಚ್ಚಿನ ಆದ್ಯತೆ ಕೊಟ್ಟಿರುವುದು ವಾಹನ ಪ್ರೇಮಿಗಳಲ್ಲೂ ಉಲ್ಲಾಸಕ್ಕೆ ಕಾರಣಾಗಿದೆ. ಅಲ್ಲದೆ ಚಿತ್ರದ ಪ್ರತಿ ಕ್ಷಣವನ್ನು ಬಹಳ ರೋಚಕತೆಯಿಂದ ಆನಂದಿಸುತ್ತಿದ್ದಾರೆ.

Most Read Articles

Kannada
English summary
More than 230 cars smashed Furious 7 Movie
Story first published: Friday, April 10, 2015, 11:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X