ಕ್ಷಿಪಣಿ ಹೊಡೆದುರುಳಿಸುವ ಬಲಿಷ್ಠ ಯುದ್ಧ ನೌಕೆ 'ಮರ್ಮಗೋವಾ'

By Nagaraja

ಅತ್ಯಾಧುನಿಕ ಕ್ಷಿಪಣಿಗಳನ್ನು ಹೊಂದಿರುವ ಸಂಪೂರ್ಣ ಸ್ವದೇಶಿ ನಿರ್ಮಿತ ವಿಶ್ವ ದರ್ಜೆಯ ಯುದ್ಧ ನೌಕೆ ಮರ್ಮಗೋವಾ ವನ್ನು ಭಾರತೀಯ ನೌಕಾದಳಕ್ಕೆ ಹಸ್ತಾಂತರಿಸಲಾಗಿದೆ. ಮುಂಬೈನ ಮಝ್ ಗಾಂವ್ ಬಂದರಿನಲ್ಲಿ ನೂತನ ಯುದ್ಧನೌಕೆಗೆ ಚಾಲನೆ ನೀಡಲಾಗಿದೆ.

ಮಜುಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ (ಎಂಡಿಎಲ್) ನೂತನ ಯುದ್ಧ ಹಡಗನ್ನು ನಿರ್ಮಿಸಿದ್ದು, ಶೇಕಡಾ 60ರಷ್ಟು ಸ್ವದೇಶಿ ನಿರ್ಮಿತವಾಗಿದೆ. ಇದು ಭಾರತದಲ್ಲಿ ನಿರ್ಮಾಣವಾದ ಎರಡನೇ ಕ್ಷಿಪಣಿ ನಾಶಕ ಯುದ್ಧ ನೌಕೆಯಾಗಿದೆ.

ಕ್ಷಿಪಣಿ ಹೊಡೆದುರುಳಿಸುವ ಬಲಿಷ್ಠ ಯುದ್ಧ ನೌಕೆ 'ಮರ್ಮಗೋವಾ'

ಒಟ್ಟು 29,700 ಕೋಟಿ ರುಪಾಯಿ ವೆಚ್ಚದಲ್ಲಿ ನಾಲ್ಕು ಯುದ್ಧ ನೌಕೆಗಳು ತಯಾರಾಗಲಿದೆ. ಮರ್ಮಗೋವಾ ಒಟ್ಟು 7,300 ಟನ್ ಗಳಷ್ಟು ಭಾರವನ್ನು ಹೊಂದಿರಲಿದ್ದು, ಗಂಟೆಗೆ 56 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಕ್ಷಿಪಣಿ ಹೊಡೆದುರುಳಿಸುವ ಬಲಿಷ್ಠ ಯುದ್ಧ ನೌಕೆ 'ಮರ್ಮಗೋವಾ'

ಐಎನ್ ಎಸ್ ವಿಶಾಖಪಟ್ಟಣಂ ಶ್ರೇಣಿಗೆ ಸೇರಿದ ಈ ಹಡಗನ್ನು 15ಬಿ ಯೋಜನೆಯಡಿ ನಿರ್ಮಿಸಲಾಗಿದೆ. ಐಎನ್ ಎಸ್ ವಿಶಾಖಪಟ್ಟಣಂ 2015 ಎಪ್ರಿಲ್ 20ರಂದು ಬಿಡುಗಡೆಗೊಳಿಸಲಾಗಿತ್ತು.

ಕ್ಷಿಪಣಿ ಹೊಡೆದುರುಳಿಸುವ ಬಲಿಷ್ಠ ಯುದ್ಧ ನೌಕೆ 'ಮರ್ಮಗೋವಾ'

ಇದು ಹಡಗಿನಿಂದ ಹಡಗಿಗೆ, ಹಡಗಿನಿಂದ ವಿಮಾನಕ್ಕೆ ಹಾಗೂ ಹಡಗಿನಿಂದ ಜಲಾಂತರ್ಗಾಮಿ ಕ್ಷಿಪಣಿಗಳಿಗೆ ದಾಳಿ ಮಾಡುವ ಸಾಮರ್ಥ್ಯವನ್ನು ಪಡೆದಿದೆ. ಇದಲ್ಲದೆ ಜಲಾಂತರ್ಗಾಮಿಗಳನ್ನು ನಾಶ ಮಾಡುವ ಎರಡು ಹೆಲಿಕಾಪ್ಟರ್ ಗಳನ್ನು ಹೊತ್ತೊಯ್ಯುತ್ತದೆ.

ಕ್ಷಿಪಣಿ ಹೊಡೆದುರುಳಿಸುವ ಬಲಿಷ್ಠ ಯುದ್ಧ ನೌಕೆ 'ಮರ್ಮಗೋವಾ'

2020ರ ವೇಳೆಯಾಗುವಾಗ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವ ಗುರಿಯನ್ನು ಭಾರತೀಯ ನೌಕೆ ಹೊಂದಿದ್ದು, ಇದರಲ್ಲಿ 50 ಮಂದಿ ಅಧಿಕಾರಿಗಳ ಜೊತೆಗೆ 250 ಮಂದಿ ನೌಕಾ ಸಿಬ್ಬಂದಿಗಳಿರಲಿದ್ದಾರೆ.

ಕ್ಷಿಪಣಿ ಹೊಡೆದುರುಳಿಸುವ ಬಲಿಷ್ಠ ಯುದ್ಧ ನೌಕೆ 'ಮರ್ಮಗೋವಾ'

ಇಸ್ರೇಲ್ ತಂತ್ರಜ್ಞಾನದ ಸೂಕ್ಷ್ಮ ನಿಗಾ ಕಾರ್ಯಾಚರಣೆ ವ್ಯವಸ್ಥೆ, ಅಪಾಯ ಮುನ್ಸೂಚನೆ ನೀಡುವ ರಾಡಾರ್ ವ್ಯವಸ್ಥೆ ಇದರಲ್ಲಿದ್ದು, ಸಂಪೂರ್ಣ ಸಾಗರ ಭದ್ರತೆಯನ್ನು ಖಾತ್ರಿಪಡಿಸಲಿದೆ.

ಕ್ಷಿಪಣಿ ಹೊಡೆದುರುಳಿಸುವ ಬಲಿಷ್ಠ ಯುದ್ಧ ನೌಕೆ 'ಮರ್ಮಗೋವಾ'

ಸಾಗರದಲ್ಲಿ ಸುಮಾರು ನಾಲ್ಕು ಸಾವಿರ ನಾಟಿಕಲ್ ಮೈಲು ದೂರದಲ್ಲಿ ಕಾರ್ಯಾಚರಿಸಲು ಸಾಮರ್ಥ್ಯ ಹೊಂದಿರುವ ಹಡಗು ಇದಾಗಿದೆ. ಇದರೊಂದಿಗೆ ಭಾರತೀಯ ನೌಕಾ ಬಲವನ್ನು ಇಮ್ಮಡಿಗೊಳಿಸಿದೆ.

ಕ್ಷಿಪಣಿ ಹೊಡೆದುರುಳಿಸುವ ಬಲಿಷ್ಠ ಯುದ್ಧ ನೌಕೆ 'ಮರ್ಮಗೋವಾ'

ರಾಡಾರ್ ಗಳ ಕಣ್ತಪ್ಪಿಸಿ 100 ಕೀ.ಮೀ. ದೂರದಲ್ಲಿ ಬರುತ್ತಿರುವ ಕ್ಷಿಪಣಿ ಅಥವಾ ವೈರಿ ವಿಮಾನಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಮರ್ಮಗೋವಾ ಹೊಂದಿದೆ.

ಕ್ಷಿಪಣಿ ಹೊಡೆದುರುಳಿಸುವ ಬಲಿಷ್ಠ ಯುದ್ಧ ನೌಕೆ 'ಮರ್ಮಗೋವಾ'

ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯ ತಜ್ಞರು ಮತ್ತು ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳ ತಜ್ಞರು ನೌಕೆಯನ್ನು ವಿನ್ಯಾಸಗೊಳಿಸಲು ಅವಿರತವಾಗಿ ಪರಿಶ್ರಮಿಸಿದ್ದಾರೆ.

ಕ್ಷಿಪಣಿ ಹೊಡೆದುರುಳಿಸುವ ಬಲಿಷ್ಠ ಯುದ್ಧ ನೌಕೆ 'ಮರ್ಮಗೋವಾ'

ಈ ಒಂದು ಯುದ್ಧ ನೌಕೆಯ ವೆಚ್ಚ ಸರಿ ಸುಮಾರು 7000 ಕೋಟಿ ರುಪಾಯಿಗಳಾಗಿದ್ದು, ಇಂತಹ ನಾಲ್ಕು ಯುದ್ಧ ನೌಕೆಗಳನ್ನು 2020-24ರ ವೇಳೆಯಾಗುವಾಗ ಸಂಪೂರ್ಣವಾಗಿ ಹಸ್ತಾಂತರಿಸಲಾಗುವುದು.

ಕ್ಷಿಪಣಿ ಹೊಡೆದುರುಳಿಸುವ ಬಲಿಷ್ಠ ಯುದ್ಧ ನೌಕೆ 'ಮರ್ಮಗೋವಾ'

ಈ ನೌಕೆಗೆ ಗೋವಾ ಬಂದರಿನ ಹೆಸರು 'ಮೊರ್ಮುಗಾವೋ' ಎಂದು ನಾಮಕರಣ ಮಾಡಲಾಗಿದೆ. ಇದನ್ನು 'ಮರ್ಮಗೋವಾ' ಎಂದು ಕರೆಯಲಾಗುತ್ತದೆ.

Most Read Articles

Kannada
Read more on ಭಾರತ india
English summary
All you want to know about Indian Navy's most advanced guided missile destroyer 'Mormugao'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X