ದೇಶದ 12 ಜನನಿಬಿಡ ರೈಲ್ವೆ ನಿಲ್ದಾಣಗಳು

By Nagaraja

ಪ್ರಪಂಚದಲ್ಲಿಯೇ ಅತಿ ದೊಡ್ಡ ಹಾಗೂ ಅತಿ ಹೆಚ್ಚು ಚಟುವಟಿಕೆಯ ರೈಲು ಜಾಲಗಳಲ್ಲಿ ಒಂದಾಗಿರುವ ಭಾರತೀಯ ರೈಲ್ವೆ, 1,15000 ಕೀ.ಮೀ. ಉದ್ದದ ಹಳಿಯಲ್ಲಿ 67,312 ಕೀ.ಮೀ. ಉದ್ದದ ರೈಲ್ವೆ ಹಾದಿ ಹಾಗೂ 7,112 ರೈಲ್ವೆ ನಿಲ್ದಾಣಗಳನ್ನು ಒಳಗೊಂಡಿದೆ. ದೇಶದ್ಯಾಂತ ದಿನವೊಂದರಲ್ಲಿ 23 ದಶಲಕ್ಷದಷ್ಟು ಪ್ರಯಾಣಿಕರು ಭಾರತೀಯ ರೈಲ್ವೆಯನ್ನು ಆಶ್ರಯಿಸಿಕೊಂಡಿದ್ದಾರೆ.

ಪ್ರಸ್ತುತ ಲೇಖನದಲ್ಲಿ ದೇಶದ 12 ಜನನಿಬಿಡ ರೈಲ್ವೆ ನಿಲ್ದಾಣಗಳ ಬಗ್ಗೆ ಮಾಹಿತಿಯನ್ನು ಕೊಡಲಾಗುವುದು. ದೈನಂದಿನ ಸಂಚರಿಸುವ ಪ್ರಯಾಣಿಕರು ಹಾಗೂ ದಿನವೊಂದರಲ್ಲಿ ಸಂಚರಿಸುವ ವಿಶಿಷ್ಟ ರೈಲುಗಳ ಆಧಾರದಲ್ಲಿ ಇದನ್ನು ವಿಂಗಡಿಸಲಾಗಿದೆ.

ಹೌರಾ ಜಂಕ್ಷನ್

ಹೌರಾ ಜಂಕ್ಷನ್

ಪಶ್ಚಿಮ ಬಂಗಾಳದಲ್ಲಿರುವ ಹೌರಾ ರೈಲ್ವೆ ನಿಲ್ದಾಣವು ದೇಶದ ಅತ್ಯಂತ ಜನನಿಬಿಡ ರೈಲ್ವೆ ನಿಲ್ದಾಣಗಳಲ್ಲಿ ಒಂದಾಗಿದೆ. ಇಲ್ಲಿ 23 ಫ್ಲ್ಯಾಟ್ ಫಾರ್ಮ್ ಗಳಿದ್ದು, ದಿನವೊಂದರಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ಜನರಿಗೆ ಸೇವೆ ಸಲ್ಲಿಸುತ್ತಿದೆ. ಫ್ಲ್ಯಾಟ್ ಫಾರ್ಮ್ ಸಂಖ್ಯೆಯಲ್ಲೂ ಮುಂಚೂಣಿಯಲ್ಲಿರುವ ಹೌರಾ, ಜನನಿಬಿಡ ರೈಲ್ವೆ ಫ್ಲ್ಯಾಟ್ ಫಾರ್ಮ್ ಗಳ ಸಾಲಿನಲ್ಲೂ ಕಾಣಿಸಿಕೊಂಡಿದೆ.

ನವದೆಹಲಿ

ನವದೆಹಲಿ

ಭಾರತೀಯ ರಾಜಧಾನಿ ನವದೆಹಲಿ ದೇಶದ ಎರಡನೇ ಅತಿ ದೊಡ್ಡ ಜನನಿಬಿಡ ರೈಲ್ವೆ ನಿಲ್ದಾಣವಾಗಿ ಗುರುತಿಸಿಕೊಂಡಿದೆ. ದಿನದಲ್ಲಿ 350ಕ್ಕೂ ಹೆಚ್ಚು ರೈಲುಗಳನ್ನು ನಿರ್ವಹಿಸುತ್ತಿರುವ ರಾಷ್ಟ್ರ ರಾಜಧಾನಿ ನಿಲ್ದಾಣವು ಐದು ಲಕ್ಷ ಹೆಚ್ಚು ಪ್ರಯಾಣಿಕರು ಆಶ್ರಯಿಸಿಕೊಂಡಿದ್ದಾರೆ. 16 ಫ್ಲ್ಯಾಟ್ ಫಾರ್ಮ್ ಗಳನ್ನು ಒಳಗಡೊಂಡಿರುವ ದೆಹಲಿಯು ವಿಶ್ವದಲ್ಲೇ ಅತಿ ಹೆಚ್ಚು ಹಾದಿಗಳನ್ನು ಬಂಧಿಸುವ ರೈಲ್ವೆ ನಿಲ್ದಾಣಗಳೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಕಾನ್ಪುರ ಸೆಂಟ್ರಲ್

ಕಾನ್ಪುರ ಸೆಂಟ್ರಲ್

ಬಿಡುವಿಲ್ಲದ ಉತ್ತರ ಕೇಂದ್ರ ರೈಲ್ವೆ ನಿಲ್ದಾಣಗಳಲ್ಲಿ ಒಂದಾಗಿರುವ ಕಾನ್ಪುರ ಸೆಂಟ್ರಲ್ ರೈಲ್ವೆ ಸ್ಟೇಷನ್, ದಿನಪ್ರತಿ 280 ರೈಲುಗಳನ್ನು ನಿರ್ವಹಿಸುತ್ತಿದೆ. ಇದು ಸಹ ದೆಹಲಿ ತರಹನೇ ವಿಶ್ವದಲ್ಲೇ ಅತಿ ಹೆಚ್ಚು ಹಾದಿಗಳ ಸಂಪರ್ಕ ಜಾಲವಾಗಿ ಕಾಣಿಸಿಕೊಂಡಿದೆ.

ಕಲ್ಯಾಣ್ ಜಂಕ್ಷನ್

ಕಲ್ಯಾಣ್ ಜಂಕ್ಷನ್

ಮುಂಬೈ ರೈಲ್ವೆ ಜಾಲದ ಭಾಗವಾಗಿರುವ ಕಲ್ಯಾಣ್ ಜಂಕ್ಷನ್, ವಾಣಿಜ್ಯ ನಗರಿಯ ಮೂರನೇ ಬಿಡುವಿಲ್ಲಜ ರೈಲ್ವೆ ನಿಲ್ದಾಣವಾಗಿದೆ. ಇಲ್ಲಿನ ಎಂಟು ಪ್ಲ್ಯಾಟ್ ಫಾರ್ಮ್ ಗಳು ಉಪನಗರ ಹಾಗೂ ದೂರ ಪ್ರಯಾಣದ ರೈಲುಗಳನ್ನು ನಿರ್ವಹಿಸುತ್ತಿದೆ.

ಪಾಟ್ನಾ ನಿಲ್ದಾಣ

ಪಾಟ್ನಾ ನಿಲ್ದಾಣ

ಬಿಹಾರದ ಪಾಟ್ನಾ ದೇಶದ ಬಿಡುವಿಲ್ಲದ ರೈಲ್ವೆ ನಿಲ್ದಾಣಗಳಲ್ಲಿ ಕಾಣಿಸಿಕೊಂಡಿರುವ ಮಗದೊಂದು ಸ್ಟೇಷನ್ ಆಗಿದೆ. ಪೂರ್ವ ಕೇಂದ್ರ ರೈಲ್ವೆಯ ಪ್ರಮುಖ ನಿಲ್ದಾಣಗಳಲ್ಲಿ ಒಂದಾಗಿರುವ ಪಾಟ್ನಾ ದೇಶದ ಪ್ರಮುಖ ನಗರಗಳಿಗೆ ರೈಲ್ವೆ ವ್ಯವಸ್ಥೆಯನ್ನು ಪಡೆದಿದೆ.

ವಿಜಯವಾಡ ನಿಲ್ದಾಣ

ವಿಜಯವಾಡ ನಿಲ್ದಾಣ

ದೇಶದ ಟಾಪ್ 10 ಬಿಡುವಿಲ್ಲದ ರೈಲ್ವೆ ನಿಲ್ದಾಣಗಳಲ್ಲಿ ಕಾಣಿಸಿಕೊಂಡಿರುವ ವಿಜಯವಾಡ, ದಿನವೊಂದರಲ್ಲಿ 400ಕ್ಕೂ ಹೆಚ್ಚು ಸರಕು ಹಾಗೂ ಪ್ರಯಾಣಿಕ ರೈಲುಗಳನ್ನು ನಿರ್ವಹಿಸುತ್ತಿದೆ.

ಅಲಹಾಬಾದ್ ಜಂಕ್ಷನ್

ಅಲಹಾಬಾದ್ ಜಂಕ್ಷನ್

ಉತ್ತರ ಪ್ರದೇಶದ ಬಿಡುವಿಲ್ಲದ ರೈಲ್ವೆ ನಿಲ್ದಾಣಗಳಲ್ಲಿ ಒಂದಾಗಿರುವ ಅಲಹಾಬಾದ್ ಸ್ಟೇಷನನ್ನು ರಾಜಧಾನಿ ಎಕ್ಸ್ ಪ್ರೆಸ್ ಹಾಗೂ ದುರಂತೊ ಎಕ್ಸ್ ಪ್ರೆಸ್ ಗಳಂತಹ ಪ್ರಮುಖ ರೈಲುಗಳು ಹಾದು ಹೋಗುತ್ತಿದೆ.

ಇತಾರ್ಸಿ ಜಂಕ್ಷನ್

ಇತಾರ್ಸಿ ಜಂಕ್ಷನ್

ಮಧ್ಯ ಪ್ರದೇಶದಲ್ಲಿ ಸ್ಥಿತಗೊಂಡಿರುವ ಇತಾರ್ಸಿ ಜಂಕ್ಷನ್ ರೈಲ್ವೆ ನಿಲ್ದಾಣವು ದಿನಂಪ್ರತಿ 330ರಷ್ಟು ರೈಲುಗಳನ್ನು ನಿರ್ವಹಿಸುತ್ತಿದೆ. ಏಳು ಫ್ಲ್ಯಾಟ್ ಫಾರ್ಮ್ ಗಳನ್ನಷ್ಟೇ ಹೊಂದಿರುವ ಇತಾರ್ಸಿ ರೈಲು ನಿಲ್ದಾಣವು ದೇಶದ ಪ್ರಮುಖ ನಗರಗಳತ್ತ ಬಂಧಿಸಲ್ಪಟ್ಟಿದೆ.

ವಡೋದರಾ ನಿಲ್ದಾಣ

ವಡೋದರಾ ನಿಲ್ದಾಣ

ಗುಜರಾತ್ ನ ಅತ್ಯಂತ ಬಿಡುವಿಲ್ಲದ ರೈಲ್ವೆ ನಿಲ್ದಾಣವಾಗಿರುವ ವಡೋದರಾದಲ್ಲಿ ಏಳು ಫ್ಲ್ಯಾಟ್ ಫಾರ್ಮ್ ಗಳಿವೆ. ಹಾಗೆಯೇ ಪಶ್ಚಿಮ ರೈಲ್ವೆ ವಲಯದಲ್ಲಿ ಎಲೆಕ್ಟ್ರಿಕ್ ರೈಲ್ವೆ ನಿಲ್ದಾಣಗಳಲ್ಲಿ ಇದೂ ಒಂದಾಗಿದೆ.

ಲಕ್ನೋ ನಿಲ್ದಾಣ

ಲಕ್ನೋ ನಿಲ್ದಾಣ

ಲಕ್ನೋದ ಚಾರ್ ಬಾಗ್ ರೈಲ್ವೆ ನಿಲ್ದಾಣದಲ್ಲಿ ದೈನಂದಿನ 300ರಷ್ಟು ರೈಲುಗಳು ಹಾದು ಹೋಗುತ್ತದೆ. ವಾಸ್ತುಶಾಸ್ತ್ರದ ಮೇರುಕೃತಿಗೆ ಪಾತ್ರವಾಗಿರುವ ಇಲ್ಲಿನ ರೈಲ್ವೆ ನಿಲ್ದಾಣವು ದೇಶದ ಅತ್ಯಂತ ಸುಂದರ ರೈಲ್ವೆ ನಿಲ್ದಾಣಗಳಲ್ಲಿ ಒಂದಾಗಿದೆ.

ಮುಘಲ್ ಸರಾಯ್ ಜಂಕ್ಷನ್

ಮುಘಲ್ ಸರಾಯ್ ಜಂಕ್ಷನ್

ಉತ್ತರ ಪ್ರದೇಶಲ್ಲಿರುವ ಮುಘಲ್ ಸರಾಯ್ ಜಂಕ್ಷನ್ ದೇಶದ ಬಿಡುವಿಲ್ಲದ ಪ್ರಯಾಣಿಕ ಹಾಗೂ ಸರಕು ನಿಲ್ದಾಣಗಳಲ್ಲಿ ಒಂದಾಗಿದೆ. ಇಲ್ಲಿನ 12.5 ಕೀ.ಮೀ. ಉದ್ದದ ಹಳಿಯು ದೈನಂದಿನ 1,500 ಸರಕು ರೈಲು ಗಾಡಿಗಳನ್ನು ನಿರ್ವಹಿಸುತ್ತಿದೆ.

ಉತ್ತರ ಪ್ರದೇಶಲ್ಲಿರುವ ಮುಘಲ್ ಸರಾಯ್ ಜಂಕ್ಷನ್ ದೇಶದ ಬಿಡುವಿಲ್ಲದ ಪ್ರಯಾಣಿಕ ಹಾಗೂ ಸರಕು ನಿಲ್ದಾಣಗಳಲ್ಲಿ ಒಂದಾಗಿದೆ. ಇಲ್ಲಿನ 12.5 ಕೀ.ಮೀ. ಉದ್ದದ ಹಳಿಯು ದೈನಂದಿನ 1,500 ಸರಕು ರೈಲು ಗಾಡಿಗಳನ್ನು ನಿರ್ವಹಿಸುತ್ತಿದೆ.

ಉತ್ತರ ಪ್ರದೇಶಲ್ಲಿರುವ ಮುಘಲ್ ಸರಾಯ್ ಜಂಕ್ಷನ್ ದೇಶದ ಬಿಡುವಿಲ್ಲದ ಪ್ರಯಾಣಿಕ ಹಾಗೂ ಸರಕು ನಿಲ್ದಾಣಗಳಲ್ಲಿ ಒಂದಾಗಿದೆ. ಇಲ್ಲಿನ 12.5 ಕೀ.ಮೀ. ಉದ್ದದ ಹಳಿಯು ದೈನಂದಿನ 1,500 ಸರಕು ರೈಲು ಗಾಡಿಗಳನ್ನು ನಿರ್ವಹಿಸುತ್ತಿದೆ.

ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಟರ್ಮಿನಸ್, ದೂರ ಹಾಗೂ ಉಪನಗರಗಳನ್ನು ಬಂಧಿಸುತ್ತದೆ. ವಿಕ್ಟೋರಿಯನ್ ಗೋಥಿಕ್ ಹಾಗೂ ಸಾಂಪ್ರದಾಯಿಕ ಶೈಲಿಯ ವಿನ್ಯಾಸವನ್ನು ಪಡೆದುಕೊಂಡಿರುವ ಇಲ್ಲಿನ ರೈಲ್ವೆ ನಿಲ್ದಾಣವು ವಿಶ್ವ ಪಂರಪರೆಯ ತಾಣವಾಗಿ ಗುರುತಿಸಿಕೊಂಡಿದೆ.

Most Read Articles

Kannada
Read more on ಭಾರತ india
English summary
List of Most Busiest Railway Stations of India
Story first published: Tuesday, August 30, 2016, 11:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X