ಟಾಪ್ 10: ಯಾವ ಸೆಲೆಬ್ರೆಟಿ ಬಳಿ ಯಾವೆಲ್ಲಾ ದುಬಾರಿ ಬೈಕ್‌ಗಳಿವೆ ಗೊತ್ತಾ?

ಭಾರತದ ಟಾಪ್ ಸೆಲೆಬ್ರೆಟಿಗಳ ಬೈಕ್ಸ್ ಕಲೆಕ್ಷನ್ ಕುರಿತು ಇಲ್ಲಿದೆ ವಿಶೇಷ ಮಾಹಿತಿ.

Written By:

ಸಾಮಾನ್ಯವಾಗಿ ಸೆಲೆಬ್ರೆಟಿಗಳ ಬಗೆಗೆ ಜನಸಾಮಾನ್ಯರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಕುತೂಹಲ ಇದ್ದೇ ಇರುತ್ತೆ. ಅವರ ಜೀವನ ಶೈಲಿ ಕುರಿತು ವಿಶೇಷ ಆಸಕ್ತಿ ಹೊಂದಿರುತ್ತೇವೆ. ಅವರ ಇಷ್ಟದ ಬ್ರ್ಯಾಂಡ್ ವಾಹನ ಯಾವುದು, ಹೀಗೆ ಹತ್ತಾರು ವಿಚಾರಗಳು ಬಗೆಗೆ ಮಾತನಾಡುತ್ತಲೇ ಇರುತ್ತೇವೆ. ನಮಗೂ ಕೂಡಾ ಅಂತದ್ದೇ ಕುತೂಹಲವಿದ್ದು, ಟಾಪ್ ಹತ್ತು ಸೆಲೆಬೆಟ್ರಿಗಳ ಲಗ್ಷುರಿ ಬೈಕ್ ಕಲೆಕ್ಷನ್ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗಿದೆ.

10.ರನ್ ವಿಜಯ್ ಸಿಂಗ್
ಪ್ರಖ್ಯಾತ್ ರಿಯಾಲಿಟಿ ಟಿವಿ ಸ್ಟಾರ್ ರಣ್ ವಿಜಯ್ ಸಿಂಗ್ ನಮ್ಮ ಟಾಪ್ ಹತ್ತರ ಸ್ಥಾನದಲ್ಲಿರುವ ಬೆಸ್ಟ್ ಸೆಲೆಬ್ರೆಟಿ. ದುಬಾರಿ ಬೈಕ್‌ಗಳಲ್ಲಿ ಒಂದಾಗಿರುವ ಕವಾಸಕಿ ನಿಂಜಾ ZX-7 ಹೊಂದಿರುವ ವಿಜಯ್ ಸಿಂಗ್,ಆಪ್-ರೋಡಿಂಗ್ ಬಗ್ಗೆ ಅತಿಹೆಚ್ಚು ಆಸಕ್ತಿ ಹೊಂದಿರೋ ನಟ. 11 ಲಕ್ಷ ರೂಪಾಯಿ ದುಬಾರಿ ಕವಾಸಕಿ ನಿಂಜಾ ಅಲ್ಲದೇ ಹತ್ತಾರು ವಿವಿಧ ಬೈಕ್ಸ್ ಇವರ ಕಲೆಕ್ಷನ್‌ನಲ್ಲಿವೆ.

09.ಉದಯ್ ಚೋಪ್ರಾ
ಧೂಮ್ ಚಿತ್ರ ಸರಣಿಯಲ್ಲಿ ಮಿಂಚಿರುವ ನಟ ಉದಯ್ ಚೋಪ್ರಾ ಕೂಡಾ ಟಾಪ್ ಹತ್ತರ ಸ್ಥಾನದಲ್ಲಿದ್ದಾರೆ. ಅವರ ಬಳಿಯೂ ಹತ್ತಾರು ಬ್ರ್ಯಾಂಡೆಡ್ ಬೈಕ್‌ಗಳಿದ್ದು, ಸುಜುಕಿ ಬಂದಿತ್ ಅವರ ಅಚ್ಚುಮೆಚ್ಚಿನ ಬೈಕ್. ಇದರ ಪ್ರಾರಂಭಿಕ ಬೆಲೆಯೇ 16 ಲಕ್ಷ ರೂಪಾಯಿ.

08.ಸಲ್ಮಾನ್ ಖಾನ್
ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಸದ್ಯ ಬಾಲಿವುಡ್‌ನ ಓಡುವ ಕುದುರೆ ಎಂದರೇ ತಪ್ಪಾಗಲಾರದು. ಅಲ್ಲದೇ ಆಪ್-ರೋಡಿಂಗ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ಸಲ್ಮಾನ್ ಖಾನ್, ವಿವಿಧ ರೀತಿಯ ಬೈಕ್ ಕಲೆಕ್ಷನ್ ಹೊಂದಿದ್ದಾರೆ. ಅವರ ಬಳಿ ಅತಿ ದುಬಾಕಿ ಬೈಕ್ ಸುಜುಕಿ ಇಂಟ್ರುಡರ್ ಇದ್ದು, ಇದರ ಪ್ರಾರಂಭಿಕ ಬೆಲೆ 16 ಲಕ್ಷಕ್ಕೆ ಹೆಚ್ಚಿದೆ. ಇದರ ಜೊತೆಗೆ ದುಬಾರಿ ಬೆಲೆ ಸುಜಕಿ ಮೋಟಾರ್ ಸೈಕಲ್ ಕೂಡಾ ಇವರ ಬಳಿಯಿದೆ. 

07.ಸಂಜಯ್ ದತ್ತ
ಬಾಲಿವುಡ್ ಹಿರಿಯ ನಟ ಸಂಜಯ್ ದತ್ತ ಕೂಡಾ ಬೈಕ್‌ಗಳ ಬಗೆಗೆ ಅತಿಯಾದ ಕ್ರೇಜ್ ಹೊಂದಿದ್ದಾರೆ. ಇವರ ಬಳಿಯೂ 18 ಲಕ್ಷ ರೂಪಾಯಿ ಬೆಳೆಬಾಳುವ ಹಾರ್ಲೆ ಡೇವಿಡ್ಸನ್ ಬೈಕ್ ಇದೆ. ಇದರ ಜೊತೆಗೆ ಕಸ್ಟಮ್ ಮೇಡ್ ಇಟಾಲಿಯನ್ ಬೈಕ್ ಕೂಡಾ ಇದ್ದು, ಆಪ್-ರೋಡಿಂಗ್ ಬಗೆಗೆ ಕ್ರೇಜ್ ಹೊಂದಿದ್ದಾರೆ.

06.ಶಾಹೀದ್ ಕಪೂರ್
ಹೈದರ್ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಮಿಂಚಿದ ಶಾಹೀದ್ ಕಪೂರ್ ಕೂಡಾ ನಮ್ಮ ಟಾಪ್ ಹತ್ತರ ಸೆಲೆಬ್ರೆಟಿ. ಇವರ ಬಳಿಯೂ ಹತ್ತಾರು ನಮೂನೆಯ ಬೈಕ್‌ ಕಲೆಕ್ಷನ್ ಇದ್ದು, 1690 ಸಿಸಿ ಸಾಮರ್ಥ್ಯದ ಹಾರ್ಲೆ ಡೇಲಿಡ್ಸನ್ ಬೈಕ್ ಕೂಡಾ ಇದೆ.

05.ಜಾನ್ ಅಬ್ರಾಹಂ
ಬಾಲಿವುಡ್‌ನ ಅಜಾನುಬಾಹು ನಟ ಜಾನ್ ಅಬ್ರಾಹಂ, ಆಪ್ ರೋಡಿಂಗ್ ಪ್ರೇಮಿ ಕೂಡಾ ಹೌದು. ಇವರ ಬಳಿ ಸುಮಾರು 20ಕ್ಕೂ ಹೆಚ್ಚು ಬೈಕ್‌ಗಳಿದ್ದೂ, ಸುಜುಕಿ ಜಿಎಸ್ಎಕ್ಸ್-1300ಆರ್ ಇವರ ಇಷ್ಟದ ಬೈಕ್. ಇದರ ಬೆಲೆ 18 ಲಕ್ಷ ರೂಪಾಯಿ.

04.ಆರ್.ಮಾಧವನ್
ಕಾಲಿವುಡ್ ಮತ್ತು ಬಾಲಿವುಡ್‌ನಲ್ಲಿ ತಮ್ಮದೇ ಸ್ಥಾನ ಕಂಡುಕೊಂಡಿರುವ ಆರ್.ಮಾಧವನ್ ಅಪ್ಪಟ ಬೈಕ್ ಪ್ರೇಮಿ. ಆಪ್-ರೋಡಿಂಗ್ ಬಗ್ಗೆ ಕುತೂಹಲ ಇಟ್ಟುಕೊಂಡಿರುವ ನಟ ಮಾಧವನ್, 26 ಲಕ್ಷ ರೂಪಾಯಿ ಬೆಲೆಬಾಳುವ ಬಿಎಂಡಬ್ಲ್ಯು ಕೆ1600 ಜಿಟಿಎಲ್ ಬೈಕ್ ಖರೀದಿ ಮಾಡಿದ್ದಾರೆ.

03.ರೋಹಿತ್ ರಾಯ್
ಸದ್ಯ ಬಾಲಿವುಡ್‌ನಲ್ಲಿ ಸಹನಟನಾಗಿ ಮಿಂಚುತ್ತಿರುವ ರೋಹಿತ್ ರಾಯ್, ಅಪ್ಪಟ ಆಪ್-ರೋಡಿಂಗ್ ಪ್ರೇಮಿ. ಇವರು ಬಳಿ 28ಲಕ್ಷ ರೂ. ಮೌಲ್ಯದ ಹೋಂಡಾ ರೂನ್ ಬೈಕ್ ಇದೆ. ಇದು 1900ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿದ್ದು, 400ಕಿಮಿ ವೇಗದ ಶಕ್ತಿ ಹೊಂದಿರೋ ಅದ್ಭುತ ಬೈಕ್. 

02.ವಿವೇಕ್ ಒಬೇರಾಯ್
ಬಾಲಿವುಡ್‌ನಲ್ಲಿ ತಮ್ಮದೇ ವಿಭಿನ್ನ ಪಾತ್ರಗಳ ಮೂಲಕ ಮಿಂಚುತ್ತಿರುವ ನಟ ವಿವೇಕ್ ಒಬೇರಾಯ್, ಬೈಕ್‌ಗಳ ಬಗೆಗೆ ವಿಶೇಷ ಆಸಕ್ತಿ ಹೊಂದಿದ್ದಾರೆ. ಇವರ ಬಳಿ ಕೂಡಾ ಹಳದಿ ಬಣ್ಣದ ಡುಕಾಟಿ 1098 ಸೂಪರ್ ಬೈಕ್ ಇದ್ದು, ಇದರ ಬೆಲೆ 48 ಲಕ್ಷ ರೂಪಾಯಿ.

01.ಎಂ.ಎಸ್.ಧೋನಿ
ಇನ್ನು ನಂಬರ್.1 ಸ್ಥಾನಕ್ಕೆ ಬಂದರೆ ಟೀಂ ಇಂಡಿಯಾದ ಯಶಸ್ವಿ ಆಟಗಾರ ಎಂ.ಎಸ್.ಧೋನಿ ಹೆಸರು ಕೇಳಿಬರುತ್ತೆ. ಯಾಕೇಂದ್ರೆ ಇವರು ಕ್ರಿಕೆಟ್‌ನಷ್ಟೇ ಬೈಕ್‌ಗಳ ಬಗೆಗೆಗೂ ವಿಶೇಷ ಆಸಕ್ತಿ ಹೊಂದಿದ್ದಾರೆ. ಧೋನಿ ಲಗ್ಷುರಿ ಕಲೆಕ್ಷನ್‌ನಲ್ಲಿ ಹತ್ತಾರು ಅತ್ಯುತ್ತಮ ಬ್ರ್ಯಾಂಡೆಡ್ ಬೈಕ್‌ಗಳಿದ್ದು, ಆಪ್-ರೋಡಿಂಗ್ ಬಗ್ಗೆ ಎಲ್ಲಿಲ್ಲದ ಹುಚ್ಚು ಅವರಿಗೆ. ಹೀಗಾಗಿಯೇ 65ಲಕ್ಷ ರೂಪಾಯಿ ಖರ್ಚು ಮಾಡಿ ಅತಿ ದುಬಾರಿ ಹೆಲ್ ಕ್ಯಾಟ್ ಎಕ್ಸ್-132 ಬೈಕ್ ಖರೀದಿ ಮಾಡಿದ್ದಾರೆ. 2163 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿರುವ ಈ ಬೈಕ್, ಕಳೆದ ವರ್ಷ ಭಾರೀ ಸದ್ದು ಮಾಡಿತ್ತು.

ಬಿಎಂಡಬ್ಲ್ಯು ಎಸ್ 1000 ಆರ್‌ಆರ್ ಸೂಪರ್ ಬೈಕ್ ಚಿತ್ರಗಳ ವೀಕ್ಷಣೆಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Click to compare, buy, and renew Car Insurance online

Buy InsuranceBuy Now

Story first published: Tuesday, February 28, 2017, 17:26 [IST]
English summary
this are Most Expensive Celebrity Bikes in India.
Please Wait while comments are loading...

Latest Photos