ಎಚ್ಚರ; ಇಂಥ ಬೈಕ್ ಸ್ಟಂಟ್ ಗಳನ್ನು ಪ್ರಯತ್ನಿಸದಿರಿ!

By Nagaraja

ಎಲ್ಲೆಡೆಗಳಲ್ಲಿ ಮೋಟಾರ್ ಸೈಕಲ್ ಸ್ಟಂಟ್ ಶೋ ಈಗ ಸಾಮಾನ್ಯ ದೃಶ್ಯವಾಗಿಬಿಟ್ಟಿದೆ. ಅಷ್ಟಕ್ಕೂ ಮೋಟಾರ್ ಸೈಕಲ್ ಸ್ಟಂಟ್ ಶೋಗಳಲ್ಲಿ ಎಷ್ಟು ವಿಧಗಳಿವೆ? ಎಂಬುದರ ಬಗ್ಗೆ ವಿವರವಾಗಿ ಮಾಹಿತಿಯನ್ನು ಕೊಡುವ ಪ್ರಯತ್ನವನ್ನು ನಾವಿಲ್ಲಿ ಮಾಡಲಿದ್ದೇವೆ.

ಎಚ್ಚರ! ಇಲ್ಲಿ ಹೇಳಿಕೊಡಲಾಗುವ ಸ್ಟಂಟ್ ಶೋಗಳನ್ನು ಅನುಕರಿಸಲು ಯಾವುದೇ ಕಾರಣಕ್ಕೂ ಮುಂದಾಗದಿರಿ. ಯಾಕೆಂದರೆ ಕೇವಲ ನುರಿತ ತರಬೇತಿ ಪಡೆದ ವೃತ್ತಿಪರ ಸ್ಟಂಟರ್ ಗಳಿಂದ ಮಾತ್ರ ಇಂತಹ ಪ್ರದರ್ಶನವನ್ನು ನಡೆಸಿಕೊಡಲು ಸಾಧ್ಯ.

ವೀಲಿಂಗ್ (Basic Wheelie)

ವೀಲಿಂಗ್ (Basic Wheelie)

ವೀಲಿಂಗ್ ಜನಪ್ರಿಯ ಮೋಟಾರ್ ಸೈಕಲ್ ಸ್ಟಂಟ್ ಶೋಗಳಲ್ಲಿ ಒಂದಾಗಿದೆ. ವಿಶೇಷವೆಂದರೆ ಈಗಿನ ಕಾಲದ ಮಕ್ಕಳು ಸಹ ಇದನ್ನು ಚಿಕ್ಕ ವಯಸ್ಸಿನಲ್ಲೇ ಅನುಕರಿಸಲು ಪ್ರಯತ್ನಿಸುತ್ತಾರೆ. ಇಲ್ಲಿ ಮುಂಭಾಗದ ಚಕ್ರವನ್ನು ಮೇಲೆತ್ತುವ ಮೂಲಕ ಸ್ಟಂಟ್ ಪ್ರದರ್ಶಿಸಲಾಗುತ್ತದೆ.

ಸ್ಟೋಪಿ (The Stoppie)

ಸ್ಟೋಪಿ (The Stoppie)

ಸ್ಟೋಪಿ ಅಥವಾ ಹಿಂಭಾಗದ ಚಕ್ರವನ್ನು ಮೇಲೆಕ್ಕೆತ್ತುವ ಮೂಲಕ ನಿಲ್ಲುವ ಪ್ರಯತ್ನ ಮಾಡುವ ಈ ಸ್ಟಂಟ್ ಶೋ ಅತ್ಯಂತ ಅಪಾಯಕಾರಿಯೆನಿಸಿಕೊಂಡಿದೆ.

ಸುಸೈಡ್ ಬರ್ನೌಟ್ (The Suicide Burnout)

ಸುಸೈಡ್ ಬರ್ನೌಟ್ (The Suicide Burnout)

ಹೆಸರಲ್ಲೇ ಸೂಚಿಸಿರುವಂತೆಯೇ ಸುಸೈಡ್ ಬರ್ನೌಟ್ ಶೋ ನೋಡುಗರಿಗೆ ಎಷ್ಟು ರೋಚಕತೆ ಸೃಷ್ಟಿ ಮಾಡುತ್ತದೆಯೋ ಅಷ್ಟೇ ಅಪಾಯಕಾರಿಯಾಗಿದೆ. ಇಲ್ಲಿ ನೆಲದಲ್ಲಿ ನಿಂತುಕೆಂಡು ಸ್ಟಂಟರ್ ಬೈಕಿನ ಹಿಂಬದಿ ಚಕ್ರವನ್ನು ಸರ್ರನೆ ವೃತ್ತಾಕಾರಾದಲ್ಲಿ ತಿರುಗಿಸುವ ಪ್ರಯತ್ನದಲ್ಲಿ ಮುಂದುವರಿಯುತ್ತಾರೆ.

 ಜೀಸಸ್ ಕ್ರೈಸ್ಟ್ (The Jesus Christ)

ಜೀಸಸ್ ಕ್ರೈಸ್ಟ್ (The Jesus Christ)

ಹೌದು, ಜೀಸಸ್ ಕ್ರೈಸ್ಟ್ ತರಹನೇ ಮುಂದಕ್ಕೆ ಸಂಚರಿಸುವ ಬೈಕ್ ಮೇಲೆ ನಿಂತುಕೊಳ್ಳುವ ಪ್ರಯತ್ನ ನಿಜಕ್ಕೂ ಸಾಹಸ ಪ್ರಿಯರಿಂದ ಮಾತ್ರ ಮಾಡಲು ಸಾಧ್ಯ.

ಬ್ಯಾಕ್ ಫ್ಲಿಪ್ (The Backflip)

ಬ್ಯಾಕ್ ಫ್ಲಿಪ್ (The Backflip)

ಇಂದೊಂದು ಸಾಂಪ್ರಾದಾಯಿಕ ಅಥವಾ ಕ್ಲಾಸಿಕ್ ಮೋಟಾರ್ ಸೈಕಲ್ ಸ್ಟಂಟ್ ವಿಧವಾಗಿದ್ದು, ಬೈಕ್ ನಿಂದ ಉಲ್ಟಾ ಹೊಡೆಯುವ ಪ್ರಯತ್ನ ಮಾಡಲಾಗುತ್ತದೆ.

ಕಿಸ್ ಆಫ್ ಡೆತ್ (The Kiss of Death)

ಕಿಸ್ ಆಫ್ ಡೆತ್ (The Kiss of Death)

ಸೂಪರ್ ಮ್ಯಾನ್ ತಳಹದಿಯಲ್ಲಿ ಕಿಸ್ ಆಫ್ ಡೆತ್ ಸ್ಟಂಟ್ ಶೋ ಅಭ್ಯಾಸಿಸಲಾಗುತ್ತದೆ. ಆದರೆ ಇದರಲ್ಲಿ ಕಂಡುಬರುವ ಅಪಾಯ ಸಾಧ್ಯತೆಯನ್ನು ಮನಗಂಡೇ ಇದಕ್ಕೆ ಕಿಸ್ ಆಫ್ ಡೆತ್ ಎಂದು ಹೇಳಲಾಗುತ್ತದೆ.

ಹೈ ಚೇರ್ (High Chair)

ಹೈ ಚೇರ್ (High Chair)

ಕುರ್ಚಿಯಲ್ಲಿ ನೀವು ಹೇಗೆ ಕುಳಿತುಕೊಳ್ಳುವೀರಾ? ಅದೇ ರೀತಿ ಸ್ಟಂಟರ್ ಗಳು ಹ್ಯಾಂಡಲ್ ಬಾರ್ ಮೇಲೆ ಕುಳಿತುಕೊಂಡು ಸ್ಟಂಟ್ ಪ್ರದರ್ಶಿಸುತ್ತಾರೆ. ಇಲ್ಲಿ ಗಮನಾರ್ಹ ಸಂಗತಿಯೆಂದರೆ ಈ ಸಂದರ್ಭದಲ್ಲಿ ಮುಂಭಾಗದ ಚಕ್ರಗಳು ಆಕಾಶದಲ್ಲಿ ತೇಲುತ್ತದೆ.

ಸ್ಪ್ರೆಡರ್ (Spreader)

ಸ್ಪ್ರೆಡರ್ (Spreader)

ಹೈ ಚೇರ್ ತರಹದ ಮುಂದುವರಿದ ಭಾಗವೆಂಬಂತೆ ವೀಲಿಂಗ್ ಬೈಕ್ ನ ಟ್ಯಾಂಕ್ ಮೇಲೆ ಕುಳಿತುಕೊಂಡು ಕಾಲನ್ನು ಅಗಲವಾಗಿ ಹರಿಯಬಿಡಲಾಗುತ್ತದೆ.

ಡಬಲ್ ಬ್ಯಾಕ್ ಫ್ಲಿಪ್ (The Double Back Flip)

ಡಬಲ್ ಬ್ಯಾಕ್ ಫ್ಲಿಪ್ (The Double Back Flip)

ಸಾಮಾನ್ಯವಾಗಿ ಸ್ಟಂಟ್ ಶೋಗಳಲ್ಲಿ ಡಬಲ್ ಬ್ಯಾಕ್ ಫ್ಲಿಪ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಮಾತಿದೆ. ಆದರೆ ಇಂತಹದೊಂದು ಸಾಧನೆ ಮಾಡುವಲ್ಲಿ ವೃತ್ತಿಪರ ಸ್ಟಂಟರ್ ಯಶಸ್ವಿಯಾಗಿರುವುದು ರೋಚಕತೆಗೆ ಸಾಕ್ಷಿಯಾಗಿದೆ.

Most Read Articles

Kannada
Read more on ಬೈಕ್ motorcycle
English summary
Most Insane Motorcycle Stunts
Story first published: Friday, March 20, 2015, 18:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X