ಉಲ್ಲಾಸ ಯಾತ್ರೆಗಾಗಿ ಜಗತ್ತಿನ 9 ಪ್ರಥಮ ದರ್ಜೆ ಲಗ್ಷುರಿ ವಿಮಾನ ಸೇವೆಗಳು

By Nagaraja

ಜಾಗತಿಕ ವಿಮಾನಯಾನ ಕ್ಷೇತ್ರ ಬದಲಾವಣೆಯ ಪರ್ವದಲ್ಲಿದ್ದು, ಬೇಡಿಕೆ ಜಾಸ್ತಿಯಾದಂತೆ ಮುಂಚೂಣಿಯ ಸಂಸ್ಥೆಗಳು ಗರಿಷ್ಠ ವೈಶಿಷ್ಟ್ಯಗಳಿಗೆ ಆದ್ಯತೆಯನ್ನು ಕೊಟ್ಟಿದೆ. ನೆಲ, ಜಲ ಮಾರ್ಗವನ್ನು ಹೋಲಿಸಿದಾಗ ಅತ್ಯಂತ ಸೇಫ್ ಎನಿಸಿಕೊಂಡಿರುವ ವಾಯು ಮಾರ್ಗದಲ್ಲೂ ಗಮನಾರ್ಹ ಬದಲಾವಣೆಗಳು ಕಂಡುಬರುತ್ತಿದೆ.

ಕಡಿಮೆ ಸಮಯದಲ್ಲಿ ವಿಶ್ವದ ಯಾವುದೇ ಅಂಚಿಗೂ ಬೇಕಾದರೂ ತಲುಪಲು ಸಾಧ್ಯವಾಗುವುದರೊಂದಿಗೆ ವಾಣಿಜ್ಯ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಭಾರಿ ವ್ಯವಹಾರವನ್ನು ವಿಮಾನಯಾನ ಸೃಷ್ಟಿ ಮಾಡಿದೆ. ಇದರೊಂದಿಗೆ ಪ್ರಯಾಣಿಕರಿಗೆ ಸುಖ ಪ್ರಯಾಣವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಐಷಾರಾಮಿ ಸೌಲಭ್ಯಗಳನ್ನು ಒದಗಿಸುತ್ತಿದೆ. ಹೀಗೆ ಪಟ್ಟಿ ಮಾಡಿದಾಗ ಸದ್ಯ ಸೇವೆಯಲ್ಲಿರುವ ಒಂಬತ್ತು ಐಷಾರಾಮಿ ಫಸ್ಟ್ ಕ್ಲಾಸ್ ವಿಮಾನ ಸೇವೆಗಳನ್ನು ನಿಮ್ಮ ಮುಂದಿಡಲಿದ್ದೇವೆ.

09. ಬ್ರಿಟಿಷ್ ಏರ್ ವೇಸ್

09. ಬ್ರಿಟಿಷ್ ಏರ್ ವೇಸ್

ಬ್ರಿಟಿಷ್ ಏರ್ ವೇಸ್ ತನ್ನ ಜನಪ್ರಿಯ 787-9 ಡ್ರೀಮ್ ಲೈನರ್ ವಿಮಾನದಲ್ಲಿ ಐಷಾರಾಮಿ ಸೌಲಭ್ಯಗಳಿಗೆ ಆದ್ಯತೆ ಕೊಟ್ಟಿದೆ. ಇದರ ಫಸ್ಟ್ ಕ್ಲಾಸ್ ಕ್ಯಾಬಿನ್ ನಲ್ಲಿ ಸ್ಮಾರ್ಟ್ ಫೋನ್ ನಿಯಂತ್ರಿತ 23 ಇಂಚುಗಳ ದೊಡ್ಡದಾದ ಪರದೆಯಿರಲಿದೆ. ಇದನ್ನು ಸೀಟು ಮುಂಭಾಗದಲ್ಲಿ ಲಗತ್ತಿಸಲಾಗಿದೆ.

ಬ್ರಿಟಿಷ್ ಏರ್ ವೇಸ್

ಬ್ರಿಟಿಷ್ ಏರ್ ವೇಸ್

ಪ್ರತಿ ಸೀಟುಗಳು ಎರಡು ಯುಎಸ್ ಬಿ ಪೋರ್ಟ್ ಗಳನ್ನು ಪಡೆದಿದ್ದು, ನಿಮ್ಮ ಕಚೇರಿ ಚಟುವಟಿಕೆಗಳನ್ನು ನಡೆಸಬಹುದಾಗಿದೆ. ಇದರ ಜೊತೆಗೆ ವೈಯಕ್ತಿಕ ಲಾಕರ್ ಸೌಲಭ್ಯವನ್ನು ಕೊಡಲಾಗುತ್ತದೆ. ಇವೆಲ್ಲದಕ್ಕಾಗಿ ನವದೆಹಲಿಯಿಂದ ಲಂಡನ್ ಸಂಚರಿಸಲು ಸರಿ ಸುಮಾರು 5000 ಅಮೆರಿಕನ್ ಡಾಲರ್ ಖರ್ಚು ತಗುಲಲಿದೆ.

08. ಏರ್ ಫ್ರಾನ್ಸ್

08. ಏರ್ ಫ್ರಾನ್ಸ್

ಏರ್ ಫ್ರಾನ್ಸ್ ಒದಗಿಸುತ್ತಿರುವ ಲಾ ಪ್ರೀಮಿಯರ್ ವೈಶಿಷ್ಟ್ಯಗಳಿಗಾಗಿ 10,000 ಅಮೆರಿಕನ್ ಡಾಲರುಗಳನ್ನು ವ್ಯಯ ಮಾಡಬೇಕಾಗುತ್ತದೆ. ಇದು ಸಂಪೂರ್ಣ ಖಾಸಗಿತನವನ್ನು ಒದಗಿಸಲಿದ್ದು, ಆರಾಮದಾಯಕ ಸೀಟನ್ನು ಒದಗಿಸುತ್ತಿದೆ. ಇದರ ಹೊರತಾಗಿ ಮಲಗುವ ವ್ಯವಸ್ಥೆಯೂ ಇರುತ್ತದೆ.

ಏರ್ ಫ್ರಾನ್ಸ್

ಏರ್ ಫ್ರಾನ್ಸ್

ಮನರಂಜನೆಗೂ ಗರಿಷ್ಠ ಆದ್ಯತೆಯನ್ನು ಏರ್ ಫ್ರಾನ್ಸ್ ನೀಡುತ್ತಿದ್ದು, ಟಿ.ವಿ ವೀಕ್ಷಣೆ ಅಥವಾ ಇತರೆ ಪ್ರಯಾಣಿಕರ ಕಿರಿಕಿರಿಯಿಲ್ಲದೆ ಮ್ಯಾಗಜಿನ್ ಗಳನ್ನು ನಿಶ್ಚಿಂತತೆಯಿಂದ ಓದಬಹುದಾಗಿದೆ.

07. ಖತಾರ್ ಏರ್ ವೇಸ್

07. ಖತಾರ್ ಏರ್ ವೇಸ್

ಏಷ್ಯಾದಲ್ಲೇ ಮುಂಚೂಣಿಯ ಸಾಲಿನಲ್ಲಿ ಗುರುತಿಸಿಕೊಂಡಿರುವ ಖತಾರ್ ಏರ್ ವೇಸ್ ಸಹ ಲಗ್ಷುರಿ ಫಸ್ಟ್ ಕ್ಲಾಸ್ ಸೌಲಭ್ಯಗಳನ್ನು ಓದಗಿಸುತ್ತಿದೆ.

ಖತಾರ್ ಏರ್ ವೇಸ್

ಖತಾರ್ ಏರ್ ವೇಸ್

ಖತಾರ್ ಏರ್ ವೇಸ್ ಬ್ಯುಸಿನೆಸ್ ಹಾಗೂ ಫಸ್ಟ್ ಕ್ಲಾಸ್ ಪ್ರಯಾಣಿಕರು, ಸ್ಕೈ ಲಾಂಜ್ ಸೇವೆಯನ್ನು ಪಡೆಯಬಹುದಾಗಿದ್ದು, ಇದರಂತೆ ಬಾರ್ ಸೇವೆಯು ಲಭ್ಯವಾಗುತ್ತದೆ.

06. ಕ್ವಾಂಟಸ್ ಏರ್ ವೇಸ್

06. ಕ್ವಾಂಟಸ್ ಏರ್ ವೇಸ್

ಆಸ್ಟ್ರೇಲಿಯಾ ಮೂಲದ ಕ್ವಾಂಟಸ್ ಏರ್ ವೇಸ್ ಸಹ 15,000 ಅಮೆರಿಕನ್ ಡಾಲರ್ ವೆಚ್ಚಕ್ಕೆ ಸಂಪೂರ್ಣ ಖಾಸಗಿತನವನ್ನು ಕಾಪಾಡಿಕೊಳ್ಳಲಿದೆ. ಒರಗು ಕುರ್ಚಿಗಳ ಜೊತೆಗೆ ಗ್ರಾಹಕರು ಐ ಕ್ರೀಮ್ ಹಾಗೂ ಪೈಜಾಮಾ ಪಡೆಯಲಿದ್ದಾರೆ.

ಕ್ವಾಂಟಸ್ ಏರ್ ವೇಸ್

ಕ್ವಾಂಟಸ್ ಏರ್ ವೇಸ್

ಕ್ವಾಂಟಸ್ ಏರ್ ವೇಸ್ ಪ್ರಥಮ ದರ್ಜೆಯ ಪ್ರಯಾಣಿಕರು ನೈಜ ವಿಮಾನ ಹಾರಾಟದ ಮನರಂಜನೆಯನ್ನು ಗಿಟ್ಟಿಸಿಕೊಳ್ಳಬಹುದಾಗಿದೆ.

ಕ್ವಾಂಟಸ್ ಏರ್ ವೇಸ್

ಕ್ವಾಂಟಸ್ ಏರ್ ವೇಸ್

ಕ್ವಾಂಟಸ್ ಏರ್ ವೇಸ್ ತನ್ನ ಗ್ರಾಹಕರಿಗಾಗಿ ವಿಮಾನ ಹಾರಾಟಕ್ಕೂ ಮುನ್ನ ಮಸ್ಸಾಜ್ ಗಾಗಿ ವಿಶಿಷ್ಟ ಸ್ಪಾ ಕೋಣೆಯನ್ನು ನೀಡಲಾಗುವುದು.

05. ಥಾಯ್ ಏರ್ ವೇಸ್

05. ಥಾಯ್ ಏರ್ ವೇಸ್

ಥಾಯ್ ಏರ್ ವೇಸ್ ರಾಯಲ್ ಪ್ರಥಮ ದರ್ಜೆ ಸೇವೆಯು 21 ಇಂಚುಗಳ ಖಾಸಗಿ ಪೊಡ್ ಮತ್ತು ಫ್ಲ್ಯಾಟ್ ಸ್ಕ್ರೀನ್ ಟಿವಿ ವೈಶಿಷ್ಟ್ಯಗಳನ್ನು ಪಡೆದಿರಲಿದೆ. ನ್ಯೂಯಾರ್ಕ್ ನಿಂದ ಬ್ಯಾಂಕಾಕ್ ವರೆಗಿನ ಒಂದು ಹಾದಿಯ ಪ್ರಯಾಣಕ್ಕಾಗಿ ಸುಮಾರು 6000 ಅಮೆರಿಕನ್ ಡಾಲರ್ ವ್ಯಯ ಮಾಡಬೇಕಾಗುತ್ತದೆ.

ಥಾಯ್ ಏರ್ ವೇಸ್

ಥಾಯ್ ಏರ್ ವೇಸ್

ನಿಮ್ಮ ಪ್ರೇಯಸಿ ಜೊತೆಗೆ ಉಲ್ಲಾಸದಾಯಕ ಆಕಾಶ ಪ್ರಯಾಣ ಹಮ್ಮಿಕೊಳ್ಳಲು ಥಾಯ್ ಏರ್ ವೇಸ್ ಅತ್ಯುತ್ತಮ ಆಯ್ಕೆಯಾಗಿರಲಿದೆ.

04. ಕ್ಯಾಥೆ ಫೆಸಿಫಿಕ್ ಏರ್ ವೇಸ್

04. ಕ್ಯಾಥೆ ಫೆಸಿಫಿಕ್ ಏರ್ ವೇಸ್

ತಾವೇನು ಕಮ್ಮಿಯೇನಲ್ಲ ಎಂಬ ರೀತಿಯಲ್ಲಿ ಹಾಂಕಾಂಗ್‌ನ ಕ್ಯಾಥೆ ಫೆಸಿಫಿಕ್ ಏರ್ ವೇಸ್ ಗ್ರಾಹಕರಿಗೆ ಐಷಾರಾಮಿ ಪ್ರಥಮ ದರ್ಜೆಯ ಪ್ರಯಾಣವನ್ನು ಖಾತ್ರಿಪಡಿಸುತ್ತಿದೆ.

ಕ್ಯಾಥೆ ಫೆಸಿಫಿಕ್ ಏರ್ ವೇಸ್

ಕ್ಯಾಥೆ ಫೆಸಿಫಿಕ್ ಏರ್ ವೇಸ್

ಖಾಸಗಿ ಟಿ.ವಿ, ಪೈಜಾಮಾ, ಎಲ್ ಸಿಡಿ ಟಚ್ ಸ್ಕ್ರೀನ್ ಇತ್ಯಾದಿ ವ್ಯವಸ್ಥೆಗಳು ನಿಮ್ಮ ಆಕರ್ಷಕಣೆಗೆ ಪಾತ್ರವಾಗಲಿದೆ.

03. ಎಮಿರೇಟ್ಸ್

03. ಎಮಿರೇಟ್ಸ್

ಖಾಸಗಿ ಕೋಣೆ ಹಾಗೂ ಸ್ನಾನ ಗೃಹ ಇದಕ್ಕಿಂತಲೂ ಮಿಗಿಲಾಗಿ ಇನ್ನೇನು ಬೇಕು? ಹೌದು, ಅಬುದಾಬಿಯಿಂದ ನ್ಯೂಯಾರ್ಕ್ ವರೆಗಿನ 18 ತಾಸುಗಳ ಯಾತ್ರೆಯಲ್ಲಿ ಎಮಿರೇಟ್ಸ್ ಫಸ್ಟ್ ಕ್ಲಾಸ್ ಯಾತ್ರೆಯು ಮೆಚ್ಚುಗೆಗೆ ಪಾತ್ರವಾಗಿದೆ.

ಎಮಿರೇಟ್ಸ್

ಎಮಿರೇಟ್ಸ್

ಅಷ್ಟೇ ಯಾಕೆ ನಿಮ್ಮದೇ ಆದ ಖಾಸಗಿ ಮಿನಿ ಬಾರ್ ಸೇವೆಯನ್ನು ನೀವು ಪಡೆಯಬಹುದಾಗಿದೆ.

ಎಮಿರೇಟ್ಸ್

ಎಮಿರೇಟ್ಸ್

ಎಮಿರೇಟ್ಸ್ ಪ್ರಥಮ ದರ್ಜೆ ಕ್ಯಾಬಿನ್ ನಲ್ಲಿರುವ ಸ್ಪಾ ಗೃಹದಲ್ಲಿ ಸ್ನಾ ಮಾಡಬೇಕೇ ಬೇಡವೋ ಎಂದು ಎರಡೆರಡು ಬಾರಿ ಯೋಚಿಸುವಂತೆ ಮಾಡಲಿದೆ.

ಎಮಿರೇಟ್ಸ್

ಎಮಿರೇಟ್ಸ್

ಸ್ನಾನ ಗೃಹದಿಂದ ಹೊರ ಬಂದ ಬಳಿಕ ಪ್ರಯಾಣಿಕರನ್ನು ತಂಪಾದ ತಾಜಾ ಜ್ಯೂಸ್ ಬರಮಾಡಿಕೊಳ್ಳಲಿದೆ.

02. ಸಿಂಗಾಪುರ ಏರ್ ಲೈನ್ಸ್

02. ಸಿಂಗಾಪುರ ಏರ್ ಲೈನ್ಸ್

ಇನ್ನು ಒಂದು ಹೆಜ್ಜೆ ಮುಂದಿಟ್ಟಿರುವ ಸಿಂಗಾಪುರ ಏರ್ ಲೈನ್ಸ್ ಮಗಲುಕೋಣೆ ಸೌಲಭ್ಯವನ್ನೇ ನೀಡುತ್ತಿದೆ. ಇದರಲ್ಲಿ 35 ಇಂಚು ಅಗಲ ಮತ್ತು 82 ಇಂಚು ಉದ್ದವಾದ ಮೆತ್ತನೆಯ ಹಾಸಿಗೆಯನ್ನು ನೀಡುತ್ತದೆ.

ಸಿಂಗಾಪುರ ಏರ್ ಲೈನ್ಸ್

ಸಿಂಗಾಪುರ ಏರ್ ಲೈನ್ಸ್

ಇನ್ನು ನಿಮಗೆ ಮಲಗಲು ಇಷ್ಟವಿಲ್ಲದಿದ್ದಲ್ಲಿ ಒರಗು ವ್ಯವಸ್ಥೆಯ ಉದ್ದವಾದ ಸೀಟುಗಳಲ್ಲಿ ಕುಳಿತುಕೊಂಡು ನಿಮ್ಮಿಷ್ಟವಾದ ಕಾದಂಬರಿ, ಪತ್ರಿಕೆಗಳನ್ನು ಓದಬಹುದಾಗಿದೆ.

ಸಿಂಗಾಪುರ ಏರ್ ಲೈನ್ಸ್

ಸಿಂಗಾಪುರ ಏರ್ ಲೈನ್ಸ್

ಸಿಂಗಾಪುರ ಏರ್ ಲೈನ್ಸ್ ಸಹ ಪ್ರೇಮಿ ಜೋಡಿಗಳಿಗೆ ಮಹತ್ವವನ್ನು ಕೊಡುತ್ತಿದ್ದು, ಖಾಸಗಿ ಕೋಣೆಯ ಸೇವೆಯೂ ಲಭ್ಯವಾಗುತ್ತದೆ.

01. ಎತಿಹಾಡ್ ಏರ್ ವೇಸ್

01. ಎತಿಹಾಡ್ ಏರ್ ವೇಸ್

ಯುನೈಟೈಡ್ ಅರಬ್ ಎಮಿರೇಟ್ಸ್ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾಗಿರುವ ಎತಿಹಾಡ್ ಏರ್ ವೇಸ್, ಆಕಾಶದಲ್ಲಿ ಐಷಾರಾಮಿ ಹಾರುವ ಬಂಗಲೆಯ ಸೇವೆಯನ್ನು ಒದಗಿಸಲಿದೆ.

ಎತಿಹಾಡ್ ಏರ್ ವೇಸ್

ಎತಿಹಾಡ್ ಏರ್ ವೇಸ್

ಖಾಸಗಿ ಕೋಣೆ, ಲಿವಿಂಗ್ ರೂಂ, ಶೌಚಾಲಯ, ಮಲಗುಕೋಣೆ ಹೀಗೆ ಎಲ್ಲ ವಿವಿಧ ಐಷಾರಾಮಿ ಸೌಲಭ್ಯಗಳು ನಿಮ್ಮನ್ನು ಹರಸಿಕೊಂಡು ಬರಲಿದೆ.

ಎತಿಹಾಡ್ ಏರ್ ವೇಸ್

ಎತಿಹಾಡ್ ಏರ್ ವೇಸ್

ಒಟ್ಟಿನಲ್ಲಿ ಎತಿಹಾಡ್ ಏರ್ ವೇಸ್ ಪ್ರಯಾಣಿಕರ ಖಾಸಗಿತನಕ್ಕೆ ಅತಿ ಹೆಚ್ಚಿನ ಆದ್ಯತೆ ಕೊಡುತ್ತಿದ್ದು, ಜಗತ್ತಿನಲ್ಲೇ ಪ್ರಥಮ ದರ್ಜೆಯ ಐಷಾರಾಮಿ ಪ್ರಯಾಣ ಸೇವೆ ನೀಡುವುದರಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ.

Most Read Articles

Kannada
Read more on ವಿಮಾನ plane
English summary
Most luxurious first class filght journeys in the world
Story first published: Tuesday, July 26, 2016, 13:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X