ಮೋದಿಗೆ ಸಮವಾಗಿ ತೊಡೆ ತಟ್ಟಿ ನಿಂತ ಅಂಬಾನಿ

By Nagaraja

ದೇಶದ ಅತಿ ಶ್ರೀಮಂತ ಉದ್ಯಮಿಗಳಲ್ಲಿ ಓರ್ವರಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಮಾಲಿಕ ಮುಖೇಶ್ ಅಂಬಾನಿ, ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸಮವಾಗಿ ನಿಂತಿದ್ದಾರೆ. ಹ್ಹಾಂ ಅದೇಗೆ ಅಂತೀರಾ?

ಇವನ್ನೂ ಓದಿ: ಸ್ಕಾರ್ಪಿಯೊಗೆ ಕೈಕೊಟ್ಟ ಮೋದಿ

ಹೌದು, ತಮ್ಮ ಖಾಸಗಿ ಭದ್ರತೆಯ ವಿಚಾರದಲ್ಲಿ ಮೋದಿಗೆ ಸಮವಾಗಿ ನಿಂತಿರುವ ಮುಖೇಶ್ ಅಂಬಾನಿ, ಅತಿ ದುಬಾರಿ ಹಾಗೂ ಅಷ್ಟೇ ಗರಿಷ್ಠ ಭದ್ರತೆಯನ್ನು ನೀಡಲು ಸಮರ್ಥವಾಗಿರುವ ಬಿಎಂಡಬ್ಲ್ಯು 7 ಸಿರೀಸ್ ಹೈ ಸೆಕ್ಯೂರಿಟಿ ವಾಹನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮೋದಿಗೆ ಸಮವಾಗಿ ತೊಡೆ ತಟ್ಟಿ ನಿಂತ ಅಂಬಾನಿ

ಹಲವಾರು ವಿಚಾರಗಳಿಂದಾಗಿ ಅಂಬಾನಿಯವರ ನೂತನ ಕಾರು ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಗಿಟ್ಟಿಸಿಕೊಳ್ಳುತ್ತದೆ. ಈ ಪೈಕಿ ಮೊದಲ ಆಸಕ್ತಿದಾಯಕ ಅಂಶವೆಂದರೆ ಕಾರಿನ ನೋಂದಣಿ ಸಂಖ್ಯೆಗಾಗಿ ಬರೋಬ್ಬರಿ 1.6 ಕೋಟಿ ರುಪಾಯಿಗಳನ್ನು ಖರ್ಚು ಮಾಡಿದ್ದಾರೆ.

ಮೋದಿಗೆ ಸಮವಾಗಿ ತೊಡೆ ತಟ್ಟಿ ನಿಂತ ಅಂಬಾನಿ

ಕಾನೂನು ಪ್ರಕಾರ ವಾಹನದ ಶೇಕಡಾ 20ರಷ್ಟು ಮೊತ್ತವನ್ನು ವಾಹನ ರಿಜಿಸ್ಟರ್ ಗಾಗಿ ಪಾವತಿ ಮಾಡಬೇಕು. ಪ್ರಸ್ತುತ ತಮ್ಮ ಖಾಸಗಿ ಬಳಕೆಗಾಗಿ ವಿಶೇಷವಾಗಿ ಮಾರ್ಪಾಡುಗೊಳಿಸಿರುವ ಅಂಬಾನಿ ಅವರ ಕಾರು 8.5 ಕೋಟಿ ರು.ಗಳಷ್ಟು ಬೆಲೆ ಬಾಳುತ್ತಿದೆ.

ಮೋದಿಗೆ ಸಮವಾಗಿ ತೊಡೆ ತಟ್ಟಿ ನಿಂತ ಅಂಬಾನಿ

ಈ ಅತಿ ವಿಶೇಷ ಝಡ್ ಪ್ಲಸ್ ಭದ್ರತೆಯ ಕಾರನ್ನು ಜರ್ಮನಿಯ ಬಿಎಂಡಬ್ಲ್ಯು ಘಟಕದಲ್ಲಿ ಅತ್ಯಂತ ಜಾಗರೂಕತೆಯಿಂದ ನಿರ್ಮಿಸಲಾಗಿದೆ. ವಿಶೇಷವೆಂದರೆ ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಹ ಇದಕ್ಕೆ ಸಮಾನವಾದ ಬಿಎಂಡಬ್ಲ್ಯು 7 ಸಿರೀಸ್ ಹೈ ಸೆಕ್ಯೂಟಿರಿ ವಾಹನಗಳನ್ನು ಬಳಕೆ ಮಾಡುತ್ತಿದ್ದರು.

ಮೋದಿಗೆ ಸಮವಾಗಿ ತೊಡೆ ತಟ್ಟಿ ನಿಂತ ಅಂಬಾನಿ

ದೇಶದ ಅತ್ಯಂತ ಸುರಕ್ಷಿತ ವಾಹನ ಎಂದು ಗುರುತಿಸಿಕೊಂಡಿರುವ ಬಿಎಂಡಬ್ಲ್ಯು 7 ಸಿರೀಸ್ ಹೈ ಸೆಕ್ಯೂರಿಟಿ ಗಾಡಿ, ಬಾಂಬ್, ಗುಂಡಿನ ದಾಳಿ ಸೇರಿದಂತೆ ರಾಸಾಯನಿಕ ದಾಳಿಯನ್ನು ಎದುರಿಸುವಷ್ಟು ಶಕ್ತವಾಗಿದೆ.

ಮೋದಿಗೆ ಸಮವಾಗಿ ತೊಡೆ ತಟ್ಟಿ ನಿಂತ ಅಂಬಾನಿ

ಬಿಎಂಡಬ್ಲ್ಯು 7 ಸಿರೀಸ್ ಹೈ ಸೆಕ್ಯೂರಿಟಿ ಕಾರಿನ ಮಗದೊಂದು ವೈಶಿಷ್ಟ್ಯವೆಂದರೆ ಇದು ಫ್ಲ್ಯಾಟ್ ಟೈರ್‌ನಲ್ಲೇ (ಪಂಚರ್ ಆದರೂ ಸಹ) ಸುಮಾರು ಕೀ.ಮೀ.ಗಳಷ್ಟು ಸಂಚರಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಆಳವಡಿಸಲಾಗಿರುವ ಮುಂದುವರಿದ ಶಾಖ ಸಂದೇಕಗಳು ಕ್ಷಿಪಣಿ ಹಾಗೂ ಆ್ಯಸಿಡ್ ದಾಳಿಯನ್ನು ಎದುರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಮೋದಿಗೆ ಸಮವಾಗಿ ತೊಡೆ ತಟ್ಟಿ ನಿಂತ ಅಂಬಾನಿ

ಇನ್ನು ಇಂಧನ ಟ್ಯಾಂಕ್‌ಗಳನ್ನು ವಿಶೇಷ ಕವಚಗಳಾಗಿ ವಿನ್ಯಾಸಗೊಳಿಸಲಾಗಿದ್ದು, ಎಂತಹುದೇ ಶಕ್ತಿಶಾಲಿ ಬಾಂಬ್ ದಾಳಿಯಲ್ಲೂ ಸ್ಪೋಟಗೊಳ್ಳುವುದಿಲ್ಲ. ಅಷ್ಟೇ ಅಲ್ಲದೆ ಇದರ ಕ್ಯಾಬಿನ್‌ನಲ್ಲಿ ಆಳವಡಿಸಲಾಗಿರುವ ಗ್ಯಾಸ್ ಫ್ರೂಪ್ ಚೇಂಬರ್ ನಿರಂತರ ಆಮ್ಲಜನಕ ಒದಗಿಸುತ್ತದೆ.

ಮೋದಿಗೆ ಸಮವಾಗಿ ತೊಡೆ ತಟ್ಟಿ ನಿಂತ ಅಂಬಾನಿ

ಅಷ್ಟೇ ಅಲ್ಲದೆ ವಿಶೇಷ ಪರಣಿತಿ ಪಡೆದ ಚಾಲಕರು ಇದನ್ನು ಚಾಲನೆ ಮಾಡಲಿದ್ದಾರೆ. ಬಿಎಂಡಬ್ಲ್ಯು ಇದಕ್ಕಾಗಿ ವಿಶೇಷ 'ಟ್ರೈನಿಂಗ್ ಫಾರ್ ಫ್ರೊಫೆಷನಲ್' ಎಂಬ ತರಬೇತಿಯನ್ನು ಚಾಲಕರಿಗೆ ನೀಡುತ್ತಿದ್ದು, ಅಪಾಯ ಪರಿಸ್ಥಿತಿಯಲ್ಲೂ ಹೇಗೆ ವಾಹನ ನಿಭಾಯಿಸಬೇಕು ಎಂಬುದನ್ನು ಪಠಿಸಲಿದ್ದಾರೆ. ಅತ್ಯಂತ ನುರಿತ ಭದ್ರತಾ ಪಡೆಯ ಮಾರ್ಗದರ್ಶನದಲ್ಲಿ ದಾಳಿ ವೇಳೆಯಲ್ಲೂ ಹೇಗೆ ಪಾರು ಮಾಡಬೇಕು ಎಂಬುದನ್ನು ಚಾಲಕರಿಗೆ ಹೇಳಿಕೊಡಲಿದ್ದಾರೆ.

ಮೋದಿಗೆ ಸಮವಾಗಿ ತೊಡೆ ತಟ್ಟಿ ನಿಂತ ಅಂಬಾನಿ

ವೈಯಕ್ತಿಕರಣಗೊಳಿಸಿದ ಮೋದಿ ಕಾರು ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಈ ಪೈಕಿ ಬೆಂಗಾವಲು ಪಡೆಯಲ್ಲಿ ನಕಲಿ ಬಿಎಂಡಬ್ಲ್ಯು ಕಾರುಗಳ ಸೇರ್ಪಡೆ, ಉಪಗ್ರಹ ದೂರವಾಣಿ ಮತ್ತು ಜಾಮ್ಮರ್‌ಗಳಲ್ಲಿ ಹೊಸ ಗುಪ್ತಚರ ಹಾಗೂ ಸಂವಹನ ವೈಶಿಷ್ಟ್ಯಗಳ ಸ್ಥಾಪನೆಯಾಗಿದೆ. ಇಲ್ಲಿ ಇದಕ್ಕೆ ಸಮಾನವಾದ ವಿಶೇಷತೆಗಳನ್ನು ಅಂಬಾನಿ ಪಡೆಯಲಿದ್ದಾರೆಯೇ ಎಂಬುದು ಗುಪ್ತವಾಗಿದೆ.

ಮೋದಿಗೆ ಸಮವಾಗಿ ತೊಡೆ ತಟ್ಟಿ ನಿಂತ ಅಂಬಾನಿ

ಸಾಮಾನ್ಯವಾಗಿ ಭದ್ರತೆಯ ನಿಟ್ಟಿನಲ್ಲಿ ಕಾರಿನಲ್ಲಿ ಆಳವಡಿಸಲಾಗುವ ಭದ್ರತಾ ವೈಶಿಷ್ಟ್ಯಗಳನ್ನು ಗುಪ್ತವಾಗಿಡಲಾಗುತ್ತದೆ. ಇಲ್ಲೂ ಅಂಬಾನಿಗೆ ಏರ್ಪಡಿಸಿರುವ ಭದ್ರತೆಗಳ ವಿಚಾರಗಳನ್ನು ಬಿಎಂಡಬ್ಲ್ಯು ಗುಪ್ತವಾಗಿರಿಸಿದೆ.

ಮೋದಿಗೆ ಸಮವಾಗಿ ತೊಡೆ ತಟ್ಟಿ ನಿಂತ ಅಂಬಾನಿ

ಒಟ್ಟಿನಲ್ಲಿ ದೇಶದ ಖ್ಯಾತ ಉದ್ಯಮಿ ತಮ್ಮ ಹಣದ ಬಲದಲ್ಲೇ ಪ್ರಧಾನಿ ಮೋದಿ ಅವರಿಗೆ ಸಮವಾಗಿ ತೊಡೆ ತಟ್ಟಿ ನಿಂತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಮುಕ್ತವಾಗಿ ಚರ್ಚಿಸಿರಿ.

Most Read Articles

Kannada
English summary
Mukesh Ambani gets BMW 7 series high security edition
Story first published: Wednesday, May 20, 2015, 17:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X