ಮೋದಿ ಬಿಎಂಡಬ್ಲ್ಯು vs ಒಬಾಮಾ ಬೀಸ್ಟ್; ಫುಲ್ ಬಾಡಿ ಸ್ಕ್ಯಾನಿಂಗ್

By Nagaraja

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಐತಿಹಾಸಿಕ ಭೇಟಿಗೆ ಇಡೀ ವಿಶ್ವವೇ ಸಾಕ್ಷಿಯಾಗಿದೆ. ಉಭಯ ದೇಶಗಳ ನಡುವಣ ವ್ಯವಹಾರಿಕ ಬಾಂಧವ್ಯದಲ್ಲಿ ಈ ಭೇಟಿ ಅತಿ ಪ್ರಾಮುಖ್ಯವೆನಿಸಿತ್ತು ಎಂದು ರಾಜತಾಂತ್ರಿಕ ವಿಶ್ಲೇಷರು ಅಭಿಪ್ರಾಯಪಟ್ಟಿದ್ದಾರೆ.

ಇವನ್ನೂ ಓದಿ: ಸ್ಕಾರ್ಪಿಯೊಗೆ ಕೈಕೊಟ್ಟ ಮೋದಿ

ರಾಷ್ಟ್ರರಾಜಧಾನಿ ನವದೆಹಲಿಯ ರಾಜಪಥದಲ್ಲಿ 2015 ಜನವರಿ 26ರಂದು ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ್ದ ಅಮೆರಿಕ ಅಧ್ಯಕ್ಷ ಒಬಾಮಾ ಅವರು ಉಭಯ ದೇಶಗಳ ಸ್ನೇಹ ಬಾಂಧ್ಯವ್ಯವನ್ನು ಇನ್ನಷ್ಟು ಭದ್ರವಾಗಿಸಿದ್ದರು. ಅಮೆರಿಕ ಅಧ್ಯಕ್ಷರೋರ್ವರು ಇದೇ ಮೊದಲ ಬಾರಿಗೆ ಭಾಗವಹಿಸಿದ ಗಣರಾಜ್ಯೋತ್ಸವ ಪರೇಡ್‌ ಇದಾಗಿತ್ತು.

ಇವನ್ನೂ ಓದಿ: 2000 ಕೋಟಿ ದುಬಾರಿಯ ಒಬಾಮಾ ವಿಮಾನ

ಮಾಧ್ಯಮಗಳಂತೂ ಮೋದಿ-ಒಬಾಮಾ ಬೇಟಿಗೆ ಸಂಬಂಧಿಸಿದ ನಿರಂತರ ಸುದ್ದಿಗಳನ್ನು ಬಿತ್ತರಿಸುವ ಮೂಲಕ ಹಬ್ಬದ ವಾತಾವರಣವನ್ನು ಆಚರಿಸಿಕೊಂಡಿತ್ತು. ಅಂದ ಹಾಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭದ್ರತೆಗಾಗಿ ಕೋಟಿಗಟ್ಟಲೆ ರುಪಾಯಿ ಖರ್ಚು ಮಾಡಲಾಗಿದೆ. ಅವರು ತಮ್ಮ ಅಧಿಕೃತ ಬೀಸ್ಟ್ ವಾಹನದಲ್ಲಿ ಸಂಚರಿಸಲಿದ್ದಾರೆಯೇ ಎಂಬುದು ಬಹಳ ಕುತೂಹಲ ಮೂಡಿಸಿತ್ತು. ಹಾಗಿರುವಾಗ ಈ ಲೇಖನದಲ್ಲಿ ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಕಾರುಗಳನ್ನು ಹೋಲಿಕೆ ಮಾಡುವ ಪ್ರಯತ್ನ ಮಾಡಲಿದ್ದೇವೆ.

ಮೋದಿ ಬಿಎಂಡಬ್ಲ್ಯು vs ಒಬಾಮಾ ಬೀಸ್ಟ್; ಫುಲ್ ಬಾಡಿ ಸ್ಕ್ಯಾನಿಂಗ್

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಪ್ರಧಾನಿಯಾದ ಬಳಿಕ ಭದ್ರತೆಯ ಹಿನ್ನೆಲೆಯಲ್ಲಿ ಸ್ವದೇಶಿ ನಿರ್ಮಿತ ಮಹೀಂದ್ರ ಸ್ಕಾರ್ಪಿಯೊಗೆ ಕೈಕೊಟ್ಟಿದ್ದ ಮೋದಿ, ಬಿಎಂಡಬ್ಲ್ಯು 7 ಸಿರೀಸ್ ಹೈ ಸೆಕ್ಯೂರಿಟಿ ಕಾರಿನಲ್ಲಿ ತಮ್ಮ ಪಯಣ ಆರಂಭಿಸಿದ್ದರು. ಇನ್ನೊಂದೆಡೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಷೆವರ್ಲೆ ಸಂಸ್ಥೆಯ ಮೋಡಿಫೈಡ್ ಕ್ಯಾಡಿಲಾಕ್ ಕಾರಿನಲ್ಲಿ ಸಂಚರಿಸುತ್ತಿದ್ದು, ಈ ಲಿಮೊಸಿನ್ ಕಾರನ್ನು ಅಕ್ಕರೆಯಿಂದ 'ದಿ ಬೀಸ್ಟ್' ಎಂದು ಕರೆಯಲಾಗುತ್ತದೆ.

ಒಬಾಮಾ ಬೀಸ್ಟ್ - 1. ಇಂಧನ ಟ್ಯಾಂಕ್

ಒಬಾಮಾ ಬೀಸ್ಟ್ - 1. ಇಂಧನ ಟ್ಯಾಂಕ್

ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿರುವ ಒಬಾಮಾ ಅವರ ಬೀಸ್ಟ್ ಕಾರಿನಲ್ಲಿ ಆಳವಡಿಸಲಾಗಿರುವ ಇಂಧನ ಟ್ಯಾಂಕ್‌ಗಳು ತನ್ನನ್ನೇ ತಾನೇ ರಕ್ಷಿಸುವ ಸಾಮರ್ಥ್ಯ ಹೊಂದಿದ್ದು, ಎಂತಹುದೇ ದಾಳಿಯಲ್ಲೂ ಸ್ಫೋಟಗೊಳ್ಳುವುದಿಲ್ಲ.

ಮೋದಿ ಬಿಎಂಡಬ್ಲ್ಯು - 1. ಇಂಧನ ಟ್ಯಾಂಕ್

ಮೋದಿ ಬಿಎಂಡಬ್ಲ್ಯು - 1. ಇಂಧನ ಟ್ಯಾಂಕ್

ಒಬಾಮಾ ಅವರ ಬೀಸ್ಟ್ ಕಾರು ತರಹನೇ ಮೋದಿ ಬಿಎಂಡಬ್ಲ್ಯು ಇಂಧನ ಟ್ಯಾಂಕ್‌ಗಳನ್ನು ವಿಶೇಷ ಕವಚಗಳಾಗಿ ವಿನ್ಯಾಸಗೊಳಿಸಲಾಗಿದ್ದು, ಶಕ್ತಿಶಾಲಿ ಬಾಂಬ್ ದಾಳಿಯಲ್ಲೂ ಸ್ಪೋಟಿಸುವುದಿಲ್ಲ.

ಒಬಾಮಾ ಬೀಸ್ಟ್ - 2. ಬಾಗಿಲು

ಒಬಾಮಾ ಬೀಸ್ಟ್ - 2. ಬಾಗಿಲು

ಎಂಟು ಇಂಚುಗಳಷ್ಟು ದಪ್ಪವಾಗಿರುವ ಬೀಸ್ಟ್ ಕಾರಿನ ಆರ್ಮರ್ಡ್ ಬಾಗಿಲು ಒಬಾಮಾ ಅವರಿಗೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತದೆ. ಅಂದರೆ ಇದು ಬೋಯಿಂಗ್ 757 ವಿಮಾನದ ಕ್ಯಾಬಿನ್ ಡೋರ್‌ಗೆ ಸಮವಾಗಿದೆ. ಇದು ಎಕೆ 47 ರೈಫಲ್ ಆಗಿರಲಿ ಗ್ರೇನೆಡ್ ಅಥವಾ ಇನ್ನಿತರ ಗುಂಡಿನ ದಾಳಿಯನ್ನು ನಿಭಾಯಿಸುವಷ್ಟು ಶಕ್ತಿಯುತವಾಗಿದೆ.

ಮೋದಿ ಬಿಎಂಡಬ್ಲ್ಯು - 2. ಬಾಗಿಲು

ಮೋದಿ ಬಿಎಂಡಬ್ಲ್ಯು - 2. ಬಾಗಿಲು

ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಮೋದಿ ಅವರ ಬಿಎಂಡಬ್ಲ್ಯು ಕ್ಲಾಸ್ ವಿಆರ್7 ಗುಂಡೆದೆರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ರಕ್ಷಣಾ ಕವಚವನ್ನು ಎಲ್ಲ ಕೋನದಿಂದಲೂ 7.62x51ಎಂಎಂ ಮತ್ತು 5.56x45ಎಂಎಂ ಗುಂಡಿನ ದಾಳಿ ಮಾಡುವ ಮೂಲಕ ಪರೀಕ್ಷೆ ಮಾಡಲಾಗಿತ್ತು. ಅಲ್ಲದೆ ಕಾರಿನ ಬಲಹೀನ ಭಾಗವೆಂದು ಪರಿಗಣಿಸಲ್ಪಡುವ ಡೋರ್ ಹ್ಯಾಂಡಲ್ ಬಾರ್, ಪಿಲ್ಲರ್‌ಗಳಿಗೂ ನಡೆಸಿದ ಗುಂಡಿನ ದಾಳಿ ಪರೀಕ್ಷೆಯಲ್ಲೂ ಗೆದ್ದು ಬಂದಿದೆ.

ಒಬಾಮಾ ಬೀಸ್ಟ್ - 3. ಬಾಡಿ

ಒಬಾಮಾ ಬೀಸ್ಟ್ - 3. ಬಾಡಿ

ಮಿಲಿಟರಿ ದರ್ಜೆಯ ಆರ್ಮರ್ಡ್ ಪ್ಲೇಟಿಂಗ್ ಅನ್ನು ಒಬಾಮಾ ಕಾರಿನಲ್ಲಿ ಕಾಣಬಹುದಾಗಿದೆ. ಇದನ್ನು ಸ್ಟೀಲ್, ಅಲ್ಯೂಮಿನಿಯಂ, ಟೈಟಾನಿಯಂ ಹಾಗೂ ಸೆರಾಮಿಕ್ ಮಿಶ್ರಣದಿಂದ ನಿರ್ಮಿಸಲಾಗಿದೆ. ಇದರ ಚಾಸೀ ಎಷ್ಟು ಪವರ್‌ಫುಲ್ ಅಂದರೆ ನೆಲಬಾಂಬ್ ದಾಳಿಯನ್ನು ಎದುರಿಸುವಷ್ಟು ಶಕ್ತವಾಗಿದೆ.

ಮೋದಿ ಬಿಎಂಡಬ್ಲ್ಯು - 3. ಬಾಡಿ

ಮೋದಿ ಬಿಎಂಡಬ್ಲ್ಯು - 3. ಬಾಡಿ

ಒಬಾಮಾ ತರಹನೇ ಮೋದಿ ಕಾರು ಸಹ ಆರು ಇಂಚಿನ ಸದೃಢ ದೇಹ ಹೊಂದಿದ್ದು ಎಕೆ 47 ಗುಂಡಿನ ದಾಳಿ, ನೆಲಬಾಂಬ್ ಹಾಗೂ ಗ್ರನೇಡ್ ದಾಳಿಯನ್ನು ಎದುರಿಸುವ ಸಾಮರ್ಥ್ಯ ಹೊಂದಿದೆ.

ಒಬಾಮಾ ಬೀಸ್ಟ್ - 4. ಬೂಟ್

ಒಬಾಮಾ ಬೀಸ್ಟ್ - 4. ಬೂಟ್

ಕಾರಿನ ಹಿಂಭಾಗದ ಲಗ್ಗೇಜ್ ಜಾಗದಲ್ಲಿ ತುರ್ತು ಸಂದರ್ಭದಲ್ಲಿ ಉಸಿರಾಡಲು ಓಕ್ಸಿಜನ್, ಇತರ ಆಗ್ನಿಶಾಮಕ ಯಂತ್ರಗಳು, ಔಷಧಗಳು ಹಾಗೂ ಒಬಾಮಾ ಜೊತೆಗೆ ಕುಟುಂಬದ ರಕ್ತ ಗುಂಪನ್ನು ಸಾಗಿಸಲಾಗುತ್ತದೆ.

ಮೋದಿ ಬಿಎಂಡಬ್ಲ್ಯು - 4. ಬೂಟ್

ಮೋದಿ ಬಿಎಂಡಬ್ಲ್ಯು - 4. ಬೂಟ್

ಅದೇ ರೀತಿ ಮೋದಿ ಕಾರಿನಲ್ಲೂ ಆಮ್ಲಜನಕ ಸಾಗಣೆ, ಆಗ್ನಿಶಾಮಕ ಉಪಕರಣ ಹಾಗೂ ಮೋದಿ ರಕ್ತ ಗುಂಪನ್ನು ಸಾಗಿಸಲಾಗುತ್ತದೆ.

ಒಬಾಮಾ ಬೀಸ್ಟ್ - 5. ಆಸನ

ಒಬಾಮಾ ಬೀಸ್ಟ್ - 5. ಆಸನ

ಅಧ್ಯಕ್ಷರ ಆರಾಮದಾಯಕ ಹಾಗೂ ಅನುಕೂಲಕರ ಪಯಣಕ್ಕಾಗಿ ಗರಿಷ್ಠ ಆದ್ಯತೆಯನ್ನು ಕೊಡಲಾಗಿದೆ. ಅಲ್ಲದೆ ಸದಾ ಸಮಯ ಸ್ಯಾಟಲೆಟ್ ಫೋನ್ ಸಂಪರ್ಕ ಇದರಲ್ಲಿರುತ್ತದೆ. ಅಷ್ಟೇ ಅಲ್ಲದೆ ಅಮೆರಿಕ ಮಿಲಿಟರಿ ಕೇಂದ್ರ ಕಚೇರಿ, ಉಪಾಧ್ಯಕ್ಷರ ಕಚೇರಿ ಹಾಗೂ ಅಮೆರಿಕ ರಕ್ಷಣಾ ಇಲಾಖೆಯಾಗಿರುವ ಪೆಂಟಗನ್‌ಗೆ ನೇರ ಸಂಪರ್ಕ ಇರುತ್ತದೆ. ಇನ್ನು ಕ್ಯಾಬಿನ್ ಅನ್ನು ವಿಶೇಷ ರೀತಿಯಲ್ಲಿ ರಚಿಸಲಾಗಿದ್ದು, ಎಲ್ಲ ರೀತಿಯ ರಾಸಾಯನಿಕ ದಾಳಿಯನ್ನು ತಡೆಯುವ ಶಕ್ತಿ ಹೊಂದಿದೆ.

ಮೋದಿ ಬಿಎಂಡಬ್ಲ್ಯು - 5. ಆಸನ

ಮೋದಿ ಬಿಎಂಡಬ್ಲ್ಯು - 5. ಆಸನ

ಬಿಎಂಡಬ್ಲ್ಯು ಫ್ಯಾಗ್‌ಶಿಪ್ ಸೆಡಾನ್ 7 ಸಿರೀಸ್ ಹೈ ಸೆಕ್ಯೂರಿಟಿ ಎಡಿಷನ್‌ನಲ್ಲಿ ಸ್ಟ್ಯಾಂಡರ್ಡ್ ಲೆಥರ್ ಸೀಟು ಆಳವಡಿಸಲಾಗಿದೆ. ಇದರ ಎರಡು 9.2 ಇಂಚಿನ ಇನ್ಮೋಟೈನ್ಮೆಂಟ್ ಸ್ಕ್ರೀನ್ ಇದ್ದು ಇಂಟರ್‌ನೆಟ್ ಸೌಲಭ್ಯ ಕೂಡಾ ಇರುತ್ತದೆ. ಮೋದಿ ಕಾರಿನಲ್ಲೂ ಸ್ಯಾಟಲೈಟ್ ಟೆಲಿಫೋನ್ ವ್ಯವಸ್ಥೆಯಿದೆ.

 ಒಬಾಮಾ ಬೀಸ್ಟ್ - 6. ಚಕ್ರಗಳು

ಒಬಾಮಾ ಬೀಸ್ಟ್ - 6. ಚಕ್ರಗಳು

ಅತ್ಯಂತ ಬಲಿಷ್ಠ ಬೀಸ್ಟ್ ಚಕ್ರಗಳು ಪಂಚರ್ ಆಗುವುದಿಲ್ಲ. ಹಾಗೊಂದು ವೇಳೆ ಚಕ್ರಗಳು ಸ್ಪೋಟಿಸಿದರೂ ಸಹ ಬರಿ ಸ್ಟೀಲ್ ರಿಮ್‌ನಲ್ಲೇ ಗಂಟೆಗೆ 80 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಮೋದಿ ಬಿಎಂಡಬ್ಲ್ಯು - 6. ಚಕ್ರಗಳು

ಮೋದಿ ಬಿಎಂಡಬ್ಲ್ಯು - 6. ಚಕ್ರಗಳು

ಒಬಾಮಾ ಕಾರು ತರಹನೇ ಮೋದಿ ಕಾರು ಸಹ ಪಂಚರ್ ಆದರೆ ಬರಿ ರಿಮ್‌ನಲ್ಲಿ ಗಂಟೆಗೆ ಗರಿಷ್ಠ 90 ಕೀ.ಮೀ. ವೇಗದಲ್ಲಿ 200 ಕೀ.ಮೀ. ವ್ಯಾಪ್ತಿಯ ವರೆಗೂ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಒಬಾಮಾ ಬೀಸ್ಟ್ - 7. ಗಾಜು

ಒಬಾಮಾ ಬೀಸ್ಟ್ - 7. ಗಾಜು

ಬಲಿಷ್ಠವಾದ ಬೀಸ್ಟ್ ಗಾಜುಗಳು ಯಾವುದೇ ಕಾರಣಕ್ಕೂ ಒಡೆಯುದಿಲ್ಲ. ಅಲ್ಲದೆ ಗುಂಡಿನ ಜೊತೆಗೆ ಗ್ರೆನೇಡ್ ದಾಳಿಯನ್ನು ಎದುರಿಸುವ ಸಾಮರ್ಥ್ಯ ಹೊಂದಿರುತ್ತದೆ. ಇದು ಐದು ವಿಭಿನ್ನ ಲಯಗಳಾಗಿ ಕನಿಷ್ಠ ಐದು ಇಂಚು ದಪ್ಪವಾದ ಆರ್ಮರ್ ಪ್ಲೇಟಿಂಗ್ ಪಡೆದುಕೊಂಡಿರುತ್ತದೆ.

ಮೋದಿ ಬಿಎಂಡಬ್ಲ್ಯು - 7. ಗಾಜು

ಮೋದಿ ಬಿಎಂಡಬ್ಲ್ಯು - 7. ಗಾಜು

ಬೀಸ್ಟ್‌ನಷ್ಟು ಶಕ್ತಿಶಾಲಿ ಅಲ್ಲದಿದ್ದರೂ ಇದರ ಮೂರು ಇಂಚಿನ ಆರ್ಮರ್ಡ್ ಗಾಜು ಭದ್ರತೆಯ ವಿಚಾರದಲ್ಲಿ ಕಂಚಿತ್ತು ಕಮ್ಮಿಯೇನಲ್ಲ. ಇದನ್ನು ರೈಫಲ್, ಗುಂಡಿನ, ರಾಸಾಯನಿಕ ಹಾಗೂ ಮರೆಯಿಂದ ಗುಂಡಿನ ದಾಳಿ ಮಾಡುವ ಮೂಲಕ ಪರೀಕ್ಷೆ ಮಾಡಲಾಗಿದೆ.

ಒಬಾಮಾ ಬೀಸ್ಟ್ - 8. ಎಂಜಿನ್

ಒಬಾಮಾ ಬೀಸ್ಟ್ - 8. ಎಂಜಿನ್

ಒಬಾಮಾ ಬೀಸ್ಟ್ ಕಾರಿನಲ್ಲಿ 6.5 ಲೀಟರ್ ಡೀಸೆಲ್ ಎಂಜಿನ್ ಆಳವಡಿಸಲಾಗಿದ್ದು, ಗಂಟೆಗೆ ಗರಿಷ್ಠ 100 ಕೀ.ಮೀ. ವೇಗದಲ್ಲಿ ಸಂಚರಿಸಲಾಗಿದೆ. ಬರೋಬ್ಬರಿ ಎಂಟು ಟನ್‌ಗಳಷ್ಟು ಭಾರ ಹೊಂದಿರುವ ಒಬಾಮಾ ಬೀಸ್ಟ್ ಕಾರು 15 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಈ ಡೀಸೆಲ್ ಕಾರು 3.4 ಕೀ.ಮೀ. ಮೈಲೇಜ್ ನೀಡಲು ಸಕ್ಷಮವಾಗಿದೆ.

ಮೋದಿ ಬಿಎಂಡಬ್ಲ್ಯು - 8. ಎಂಜಿನ್

ಮೋದಿ ಬಿಎಂಡಬ್ಲ್ಯು - 8. ಎಂಜಿನ್

ಒಬಾಮಾ ಕಾರಿಗೆ ಹೋಲಿಸಿದರೆ ಮೋದಿ ಕಾರು ಹೆಚ್ಚು ನಿರ್ವಹಣೆಯನ್ನು ನೀಡುತ್ತದೆ. ಇದರ 6 ಲೀಟರ್ 12 ಸಿಲಿಂಡರ್ ಪೆಟ್ರೋಲ್ ಎಂಜಿನ್ ಗಂಟೆಗೆ ಗರಿಷ್ಠ 210 ಕೀ.ಮೀ. ವೇಗದಲ್ಲೂ ಹಾಗೂ ಕೇವಲ 6.2 ಸೆಕೆಂಡುಗಳಲ್ಲೇ ಗಂಟೆಗೆ ಗರಿಷ್ಠ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರುತ್ತದೆ. ಅಂತೆಯೇ ಪ್ರತಿ ಲೀಟರ್‌ಗೆ ಆರು ಕೀ.ಮೀ. ಇಂಧನ ಸಾಮರ್ಥ್ಯವನ್ನು ನೀಡಲಿದೆ.

ಹಾಗೊಂದು ವೇಳೆ ಮೋದಿ ಹಾಗೂ ಒಬಾಮಾ ಕಾರು ನಡುವೆ ಡ್ರಾಗ್ ರೇಸ್ ಏರ್ಪಡಿಸಿದ್ದರೆ ಭಾರತೀಯ ಪ್ರಧಾನಿ ಗೆಲ್ಲಲಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.

ಒಬಾಮಾ ಬೀಸ್ಟ್ - 9. ಬೆಲೆ

ಒಬಾಮಾ ಬೀಸ್ಟ್ - 9. ಬೆಲೆ

ಇದೀಗ ಅತ್ಯಂತ ಮುಖ್ಯವಾದ ಘಟಕಕ್ಕೆ ನಾವು ಬಂದಿರುತ್ತೇವೆ. ಇಲ್ಲಿ ಬೆಲೆಗಿಂತಲೂ ಮಿಗಿಲಾಗಿ ಅಮೆರಿಕ ಅಧ್ಯಕ್ಷರಿಗೆ ಗರಿಷ್ಠ ಭದ್ರತೆ ನೀಡುವುದೇ ಪ್ರಮುಖ ಗುರಿಯಾಗಿದೆ. ಇದರಂತೆ ಒಬಾಮಾ ಅವರ ಬೀಸ್ಟ್ ಪ್ರಖ್ಯಾತ ಸೂಪರ್ ಕಾರುಗಳನ್ನೇ ಮೀರಿಸಿದ್ದು, ಎಂಟು ಕೋಟಿ ರು.ಗಳಷ್ಟು ದುಬಾರಿಯೆನಿಸಿದೆ.

ಮೋದಿ ಬಿಎಂಡಬ್ಲ್ಯು - 9. ಬೆಲೆ

ಮೋದಿ ಬಿಎಂಡಬ್ಲ್ಯು - 9. ಬೆಲೆ

ಒಬಾಮಾ ಕಾರಿಗಿಂತಲೂ ತುಂಬಾನೇ ಅಗ್ಗದಲ್ಲಿ ಮೋದಿ ಕಾರನ್ನು ಪಡೆಯಬಹುದಾಗಿದೆ. ಹೌದು, ಇಂತಹ ಕಾರುಗಳನ್ನು ದುಡ್ಡು ನೀಡಿದರೂ ಖರೀದಿಸಲು ಅಸಾಧ್ಯ ಎಂಬುದು ಸಹ ಅಷ್ಟೇ ಸತ್ಯ. ಅಂದ ಹಾಗೆ ಮೋದಿ ಬಿಎಂಡಬ್ಲ್ಯು ಕಾರು ಐದು ಕೋಟಿ ರು.ಗಳಷ್ಟು ದುಬಾರಿಯೆನಿಸಿದೆ.

ಒಬಾಮಾ ಬೀಸ್ಟ್ - 10. ದಳ

ಒಬಾಮಾ ಬೀಸ್ಟ್ - 10. ದಳ

ಒಬಾಮಾ ಬಿಸ್ಟ್ ಕಾರಿಗೆ ಸರಿ ಹೋಲುವ ಇನ್ನಿತರ ಕೆಲವು ನಕಲಿ ಬೀಸ್ಟ್ ವಾಹನಗಳು ಅಮೆರಿಕ ಅಧ್ಯಕ್ಷರ ಕಾರನ್ನು ಹಿಂಬಾಲಿಸುತ್ತದೆ. ಇವೆಲ್ಲದರ ಜೊತೆಗೆ ಶಸ್ತ್ರಾಸ್ತ್ರಸಜ್ಜಿತ ಷೆವರ್ಲೆ ಸಬರ್ಬನ್ ಮತ್ತು ಗ್ರೌಂಡ್ ಫೋರ್ಸ್ ಒನ್ ಎಂದರಿಯಲ್ಪಡುವ ಪ್ರಿವೊಸ್ಟ್ ಬಸ್ ಕೂಡಾ ಜೊತೆಗಿರುತ್ತದೆ.

ಮೋದಿ ಬಿಎಂಡಬ್ಲ್ಯು - 10. ದಳ

ಮೋದಿ ಬಿಎಂಡಬ್ಲ್ಯು - 10. ದಳ

ಮೋದಿ ಬಿಎಂಡಬ್ಲ್ಯು ಕಾರನ್ನು ಸಹ ಸಮಾನ ವೈಶಿಷ್ಟ್ಯಗಳನ್ನು ಹೊಂದಿರುವ ಅರ್ಧ ಡಜನ್ ಬಿಎಂಡಬ್ಲ್ಯು 7 ಸಿರೀಸ್ ಹಾಗೂ ಇನ್ನು ಅರ್ಧ ಡಜನ್ ಬಿಎಂಡಬ್ಲ್ಯು ಎಕ್ಸ್5 ಕಾರಗಳು ಹಿಂಬಾಲಿಸಲಿದೆ. ಹೀಗಾಗಿ ಮೋದಿ ಯಾವ ಕಾರಿನಲ್ಲಿ ಸಂಚರಿಸಲಿದ್ದಾರೆ ಎಂಬುದನ್ನು ಕಂಡುಹಿಡಿಯುವುದೇ ಕಷ್ಟಕರವಾಗಲಿದೆ.

ಮೋದಿ ಬಿಎಂಡಬ್ಲ್ಯು vs ಒಬಾಮಾ ಬೀಸ್ಟ್; ಫುಲ್ ಬಾಡಿ ಸ್ಕ್ಯಾನಿಂಗ್

ಮೋದಿ ಹಾಗೂ ಒಬಾಮಾ ಕಾರಿನ ವೈಶಿಷ್ಟ್ಯಗಳನ್ನು ಹೋಲಿಕೆ ಮಾಡುವ ಪ್ರಯತ್ನ ಇಲ್ಲಿ ಮಾಡಲಾಗಿದೆಯಾದರೂ ನೈಜ ವಿಶಿಷ್ಟತೆಯನ್ನು ಬೇರ್ಪಡಿಸುವುದು ಕಷ್ಟಕರ. ಏಕೆಂದರೆ ಭದ್ರತಾ ದೃಷ್ಟಿಕೋನದಲ್ಲಿ ಕಾರಿನಲ್ಲಿರುವ ಸುರಕ್ಷಾ ವೈಶಿಷ್ಟ್ಯಗಳನ್ನು ಗುಪ್ತಚರ ವಿಭಾಗವು ಗೌಪ್ಯವಾಗಿಡಲಾಗುತ್ತದೆ. ಹಾಗಾಗಿ ಎರಡು ಕಾರುಗಳು ತಮ್ಮ ತಮ್ಮ ದೇಶದ ಭದ್ರತಾ ಪಡೆಯ ಬೇಡಿಕೆಗೆ ಅನುಗುಣವಾಗಿ ತಮ್ಮದೇ ಆದ ವಿಶಿಷ್ಟತೆಯನ್ನು ಕಾಪಾಡಿಕೊಂಡಿರುತ್ತದೆ.



Most Read Articles

Kannada
English summary
Narendra Modi's BMW vs Barack Obama's Beast
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X