ಜೆಎಲ್‌ಆರ್ ಬ್ರಿಟನ್‌ನಲ್ಲಿ ಭಾರತದ ಅತಿ ದೊಡ್ಡ ಉದ್ಯೋಗದಾತ

By Nagaraja

ಐತಿಹಾಸಿಕ ಬ್ರಿಟನ್ ಪ್ರವಾಸ ಕೈಗೊಂಡಿರುವ ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಜಾಗ್ವಾರ್ ಲ್ಯಾಂಡ್ ರೋವರ್ (ಜೆಎಲ್‌ಆರ್) ಘಟಕಕ್ಕೆ ಭೇಟಿ ನೀಡಿದ್ದರಲ್ಲದೆ ಅಲ್ಲಿನ ಚಟುವಟಿಕೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದರು.

Also Read: ಯುಕೆ ವೆಲ್‌ಕಮ್ಸ್ ಇಂಡಿಯಾ; ಲಂಡನ್‌ನಲ್ಲಿ 'ಮೋದಿ ಎಕ್ಸ್‌ಪ್ರೆಸ್' ಬಸ್ ಮುಂದಕ್ಕೆ ಓದಿ

ಇದಕ್ಕೂ ಮೊದಲು ಬ್ರಿಟನ್ ಪ್ರಧಾನಿ ಡೇವಿಡ್ ಕೆಮರೂನ್ ಜೊತೆ ಮಾಡಿರುವ ಒಪ್ಪಂದದಲ್ಲಿ ಉಭಯ ದೇಶಗಳು ಜಂಟಿಯಾಗಿ ವಾಹನ ಅಭಿವೃದ್ಧಿ ಹಾಗೂ ಅಧ್ಯಯನ ಘಟಕ ಹಾಗೂ ಟೆಸ್ಟಿಂಗ್ ಕಾರ್ಯ ಹಮ್ಮಿಕೊಳ್ಳಲು ಸಹಮತ ಮೂಡಿಬಂದಿತ್ತು.

ಜಾಗ್ವಾರ್ ಲ್ಯಾಂಡರ್ ಬ್ರಿಟನ್‌ ಘಟಕಕ್ಕೆ ಭೇಟಿ ನೀಡಿದ ನರೇಂದ್ರ ಮೋದಿ

ಇಂಗ್ಲೆಂಡ್‌ನ ವೆಸ್ಟ್ ಮಿಡ್ ಲ್ಯಾಂಡ್ ನಲ್ಲಿ ಸ್ಥಿತಗೊಂಡಿರುವ ಜಾಗ್ವಾರ್ ಲ್ಯಾಂಡ್ ರೋವರ್ ಘಟಕಕ್ಕೆ ಭೇಟಿ ನೀಡಿದ ಮೋದಿ ಅಲ್ಲಿನ ಚಟುವಟಿಕೆಗಳನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.

ಇವನ್ನೂ ಓದಿ

ವಾಹನ ಅಧ್ಯಯನ-ಅಭಿವೃದ್ಧಿ ಘಟಕಕ್ಕೆ ಜೈ ಎಂದ ಮೋದಿ-ಕೆಮರೂನ್ ಮುಂದಕ್ಕೆ ಓದಿ

ಜಾಗ್ವಾರ್ ಲ್ಯಾಂಡರ್ ಬ್ರಿಟನ್‌ ಘಟಕಕ್ಕೆ ಭೇಟಿ ನೀಡಿದ ನರೇಂದ್ರ ಮೋದಿ

ಪ್ರಮುಖವಾಗಿಯೂ ಜಾಗ್ವಾರ್‌ನ ಅತಿ ದುಬಾರಿ ಕಾರು ಎಕ್ಸ್ ಇ ಸ್ಪೋರ್ಟ್ಸ್ ಸೆಡಾನ್ ಕಾರಿನ ನಿರ್ಮಾಣ ಘಟಕದತ್ತ ಮೋದಿ ಗಮನ ಹರಿದಿತ್ತು.

ಜಾಗ್ವಾರ್ ಲ್ಯಾಂಡರ್ ಬ್ರಿಟನ್‌ ಘಟಕಕ್ಕೆ ಭೇಟಿ ನೀಡಿದ ನರೇಂದ್ರ ಮೋದಿ

ಬಳಿಕ ಘಟಕದಿಂದಲೇ ಟ್ವೀಟ್ ಮಾಡಿರುವ ಮೋದಿ, "ಆರ್ಥಿಕ ಒಮ್ಮತದಿಂದ ಉಭಯ ದೇಶಗಳು ಬಹಳಷ್ಟು ಸಾಧಿಸಬಹುದಾಗಿದೆ" ಎಂದಿದ್ದಾರೆ.

ಜಾಗ್ವಾರ್ ಲ್ಯಾಂಡರ್ ಬ್ರಿಟನ್‌ ಘಟಕಕ್ಕೆ ಭೇಟಿ ನೀಡಿದ ನರೇಂದ್ರ ಮೋದಿ

ಈ ಸಂದರ್ಭದಲ್ಲಿ ಮೋದಿಗೆ ಟಾಟಾ ಸಂಸ್ಥೆಯ ಮುಖ್ಯಸ್ಥ ಸೈರಸ್ ಮಿಸ್ತ್ರಿ, ಜಾಗ್ವಾರ್ ಲ್ಯಾಂಡ್ ರೋವರ್ ಸಿಇಒ ರಾಲ್ಫ್ ಸ್ಪೆತ್ ಮತ್ತು ವಾರ್ವಿಕ್ ಘಟಕ ಸಂಸ್ಥೆಯ ಸ್ಥಾಪಕ ಲಾರ್ಡ್ ಕುಮಾರ್ ಬಟ್ಟಾಚಾರ್ಯ ಸಾಥ್ ನೀಡಿದ್ದರು.

ಜಾಗ್ವಾರ್ ಲ್ಯಾಂಡರ್ ಬ್ರಿಟನ್‌ ಘಟಕಕ್ಕೆ ಭೇಟಿ ನೀಡಿದ ನರೇಂದ್ರ ಮೋದಿ

ನಿಮ್ಮ ಮಾಹಿತಿಗಾಗಿ, ಜಾಗ್ವಾರ್ ಘಟಕವು ಬ್ರಿಟನ್ ಖಾಸಗಿ ವಿಭಾಗದಲ್ಲಿ ಭಾರತೀಯ ಸಂಸ್ಥೆಯೊಂದರ ಅತಿ ದೊಡ್ಡ ಹೂಡಿಕೆಯಾಗಿದೆ. ಪ್ರಸ್ತುತ ಘಟಕವು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದ್ದು, ಇದರಲ್ಲಿ ಅಲ್ಯೂಮಿನಿಯಂ ಬಾಡಿ ಬಿಲ್ಡಿಂಗ್ ಘಟಕ ಪ್ರಮುಖವೆನಿಸುತ್ತದೆ.

ಜಾಗ್ವಾರ್ ಲ್ಯಾಂಡರ್ ಬ್ರಿಟನ್‌ ಘಟಕಕ್ಕೆ ಭೇಟಿ ನೀಡಿದ ನರೇಂದ್ರ ಮೋದಿ

ಏತನ್ಮಧ್ಯೆ ಪ್ರತಿಕ್ರಿಯಿಸಿರುವ ವಿದೇಶ ಕಾರ್ಯದರ್ಶಿ ಎಸ್ ಜೈ ಶಂಕರ್, "ನನಗೆ ತಿಳಿದಿರುವಂತೆಯೇ ಜಾಗ್ವಾರ್ ಲ್ಯಾಂಡ್ ರೋವರ್ ಬ್ರಿಟನ್ ನಲ್ಲಿ ಭಾರತದ ಅತಿ ದೊಡ್ಡ ಖಾಸಗಿ ಉದ್ಯೋಗದಾತವಾಗಿದೆ. ವರ್ಷಂಪ್ರತಿ ಇಲ್ಲಿ 4,250,00 ವಾಹನಗಳನ್ನು ಉತ್ಪಾದಿಸಲಾಗುತ್ತಿದ್ದು, ವಿಶ್ವದ್ಯಾಂತ ಮಾರಾಟ ಮಾಡಲಾಗುತ್ತದೆ. ನಿಮಗಿದು ಗೊತ್ತೇ, ಮೊದಲ ಬಾರಿಗೆ 2008ರಲ್ಲಿ ಟಾಟಾ ಸಂಸ್ಥೆಯು ಖರೀದಿಸಿದಾಗ ನಷ್ಟದಲ್ಲಿದ್ದ ಜಾಗ್ವಾರ್ ಲ್ಯಾಂಡ್ ರೋವರ್ ಐದು ವರ್ಷಗಳಲ್ಲೇ ಲಾಭದಾಯಕವೆನಿಸಿದೆ" ಎಂದವರು ವಿವರಿಸಿದ್ದಾರೆ.

ಜಾಗ್ವಾರ್ ಲ್ಯಾಂಡರ್ ಬ್ರಿಟನ್‌ ಘಟಕಕ್ಕೆ ಭೇಟಿ ನೀಡಿದ ನರೇಂದ್ರ ಮೋದಿ

ಈ ಎಲ್ಲದರ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ಮುಖಛಾಯೆ ಬದಲಾಗುತ್ತಿದ್ದು, "ಕೆಲಸ ಪಡೆಯುವವರು" ಎಂಬ ಹಣೆಪಟ್ಟಿಯಿಂದ ಇದೀಗ "ಕೆಲಸ ನೀಡುವವರು" ಎಂಬುದಾಗಿ ಪರಿವರ್ತನೆಯಾಗಿದೆ.

Most Read Articles

Kannada
English summary
Narendra Modi Visits Jaguar Land Rover Plant In UK
Story first published: Tuesday, November 17, 2015, 9:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X