ಹರಾಜಿಗಿದೆ ಹಾಲಿವುಡ್ ಚಿತ್ರದಲ್ಲಿ ಮಿಂಚಿದ ಮೊದಲ ವೆಸ್ಪಾ ಸ್ಕೂಟರ್- ಇದರ ಬೆಲೆ ಎಷ್ಟು ಗೊತ್ತಾ?

ವಿಶ್ವದ ಐಷಾರಾಮಿ ಸ್ಕೂಟರ್ ಎಂದೇ ಖ್ಯಾತಿಯಾಗಿದ್ದ ವೆಸ್ಪಾ ಸ್ಕೂಟರ್ ಆವೃತ್ತಿ ಹಳೆಯ ಮಾದರಿಯೊಂದು ಹರಾಜಿಗಿಡಲಾಗಿದ್ದು, ಇದರ ಬೆಲೆಯನ್ನು ಬರೋಬ್ಬರಿ 2.2 ಕೋಟಿಗೆ ನಿಗದಿ ಮಾಡಲಾಗಿದೆ.

Written By:

ಇಟಾಲಿಯನ್ ಮೂಲದ ಪಿಯಾಗ್ಗಿಯೋ ಸಂಸ್ಥೆಯು 1946ರಲ್ಲಿ ಮೊಟ್ಟಮೊದಲ ಬಾರಿಗೆ ನಿರ್ಮಾಣ ಮಾಡಿದ್ದ ವೆಸ್ಪಾ ಸ್ಕೂಟರ್ ಹಳೆಯ ಮಾದರಿಯೊಂದು ಹರಾಜಿಗಿಡಲಾಗಿದ್ದು, ವಿಶ್ವಾದ್ಯಂತ ಭಾರೀ ಸುದ್ಧಿಯಾಗುತ್ತಿದೆ.

ಹ್ಯಾಂಡ್ ಮೆಡ್‌ನಿಂದಲೇ ಅಭಿವೃದ್ಧಿಗೊಂಡಿದ್ದ ಹಳೇ ಮಾದರಿಯ ಈ ವೆಸ್ಪಾ ಸ್ಕೂಟರ್‌, ಅನೇಕ ಹಾಲಿವುಡ್ ಚಿತ್ರಗಳಲ್ಲಿ ಮಿಂಚಿ ಹತ್ತಾರು ದಾಖಲೆಗಳಿಗೆ ಕಾರಣವಾಗಿತ್ತು. ಅದೇ ಸ್ಕೂಟರ್ ಇದೀಗ ಹರಾಜಿಗಿಡಲಾಗಿದ್ದು, ಸ್ಕೂಟರ್ ಖರೀದಿಗೆ ವಿಶ್ವದ ಗಣ್ಯಾತಿಗಣ್ಯರು ಮುಗಿಬಿದ್ದಾರೆ.

ಪಿಯಾಗ್ಗಿಯೋ "0 ಸೀರಿಸ್" ವೆಸ್ಪಾ ಸ್ಕೂಟರ್ ಇದೀಗ ಎಲ್ಲಡೆ ಸುದ್ಧಿಯಾಗುತ್ತಿದೆ. ಅಲ್ಲದೇ ಹರಾಜಿನಲ್ಲಿ ಹಳೆಯ ಮಾದರಿಯ ಸ್ಕೂಟರ್‌ಗೆ 30 ಸಾವಿರ ಯುರೋ ನಿಗದಿ ಪಡಿಸಲಾಗಿದ್ದು, ಇದು ಇನ್ನು ಹೆಚ್ಚಾಗುವ ಸಾಧ್ಯತೆಗಳು ಕೂಡಾ ಇವೆ.

1946ರಲ್ಲೇ ಸಿದ್ಧಗೊಂಡಿದ್ದರು ವೆಸ್ಪಾ ಸ್ಕೂಟರ್ ಇದುವರೆಗೂ ತನ್ನ ಮೆರಗು ಕಳೆದುಕೊಂಡಿಲ್ಲ. ಜೊತೆಗೆ ಧೂಳು ಮತ್ತು ನೀರಿನಿಂದ ತುಕ್ಕು ಹಿಡಿಯದಂತೆ ಮ್ಯೂಜಿಯಂಯೊಂದರಲ್ಲಿ ಸಂರಕ್ಷಣೆ ಮಾಡಲಾಗಿದ್ದು, "1003" ನಂಬರ್ ಪ್ಲೇಟ್ ಕೂಡಾ ಯಾವುದೇ ರೀತಿಯಾಗಿ ಕಳೆಗುಂದಿಲ್ಲಾ.   

ಅಂದಿನ ಕಾಲದಲ್ಲೇ ಹತ್ತಾರು ವೈಶಿಷ್ಟ್ಯತೆಗಳಿಂದ ಕೂಡಿದ್ದ ವೆಸ್ಪಾ ಸ್ಕೂಟರ್, ಅನೇಕ ಹಾಲಿವುಡ್ ಚಿತ್ರಗಳಲ್ಲಿ ಬಳಕೆಯಾಗಿತ್ತು. ಬ್ಯಾಕ್ ಬಸ್ಟರ್ ರೋಮನ್ ಹಾಲಿಡೇ ಚಿತ್ರದಲ್ಲಿ ನಾಯಕ ನಾಯಕಿಯ ನೆಚ್ಚಿನ ಸ್ಕೂಟರ್ ಇದಾಗಿದ್ದು, ಅಂದಿನಿಂದಲೇ ವೆಸ್ಪಾ ಮಾದರಿಯ ಸ್ಕೂಟರ್‌ಗಳು ವಿಶ್ವಾದ್ಯಂತ ಭರ್ಜರಿ ಮಾರಾಟಗೊಂಡಿದ್ದವು.

1953ರಲ್ಲಿ ತೆರೆಕಂಡ ರೋಮನ್ ಹಾಲಿಡೇ ಚಿತ್ರದ ನಂತರ ವೆಸ್ಪಾ ಮಾದರಿಗಳಿಗೆ ಭಾರೀ ಬೇಡಿಕೆ ಸೃಷ್ಠಿಯಾಗಿತ್ತು. ಆದ್ರೆ ಇದೀಗ ಮೊಟ್ಟ ಬಾರಿಗೆ ಸಿದ್ಧಗೊಂಡಿದ್ದ ಸ್ಕೂಟರ್ ಹರಾಜಿಗಿಡಲಾಗಿದ್ದು, ಭಾರೀ ಬೆಲೆಗೆ ಮಾರಾಟವಾಗಲಿದೆ ಎನ್ನಲಾಗುತ್ತಿದೆ.

40ರ ದಶಕದಲ್ಲೇ ಆಟೋ ಉದ್ಯಮ ವಲಯದಲ್ಲಿ ಭಾರೀ ಸುದ್ದಿಯಾಗಿದ್ದ ವಿನೂತನ ರೀತಿಯ ವಿನ್ಯಾಸದ ವೆಸ್ಪಾ ಸ್ಕೂಟರ್, ದೊಡ್ಡದಾದ ಸೈಕಲ್ ಮಾದರಿಯನ್ನು ಹೊಲುವಂತಿದೆ. ಜೊತೆಗೆ ಓರ್ವ ವ್ಯಕ್ತಿ ಮಾತ್ರ ಸ್ಕೂಟರ್ ಚಾಲನೆ ಮಾಡಬುಹುದಾದ ಅನುಕೂಲತೆಯಿದೆ.

ಸದ್ಯ ಇಟಾಲಿಯ ರಾಜಧಾನಿ ರೋಮ್ ನಗರದಲ್ಲಿ ವೆಸ್ಪಾ ಹಳೆಯ ಮಾದರಿಯನ್ನು ಹರಾಜಿಗಿಡಲಾಗಿದ್ದು, ಖರೀದಿಗಾಗಿ ಜನ ಮುಗಿಬಿದ್ದಿದ್ದಾರೆ. ಜೊತೆಗೆ ಹತ್ತಾರು ಹಾಲಿವುಡ್ ನಟರು ಕೂಡಾ ವೆಸ್ಪಾ ಸ್ಕೂಟರ್ ಮೇಲೆ ಕಣ್ಣು ನೆಟ್ಟಿದ್ದು, ಖರೀದಿಗೆ ಎದುರು ನೋಡುತ್ತಿದ್ದಾರೆ.

ಆದ್ರೆ ಅದೇನೇ ಇರಲಿ ಒಂದೇ ಒಂದು ಚಿತ್ರದಿಂದ ವಿಶ್ವವಿಖ್ಯಾತಿಯಾದ ವೆಸ್ಪಾ ಸ್ಕೂಟರ್ ಹರಾಜಿಗಿಟ್ಟಿರುವುದು ಪರ-ವಿರೋಧಕ್ಕೂ ಕಾರಣವಾಗಿವೆ. 

ಆದ್ರೆ ಹರಾಜಿಗಿಟ್ಟಿರುವ ಬಗ್ಗೆ ಸ್ಪಷ್ಟನೆ ನೀಡಿರುವ ಪಿಯಾಗ್ಗಿಯೋ ಸಂಸ್ಥೆಯು, ಹರಾಜಿನಿಂದ ಬಂದ ಹಣದಲ್ಲಿ ಸಾಮಾಜಿಕ ಅಭಿವೃದ್ಧಿಗೆ ಬಳಕೆ ಮಾಡುವ ಇರಾದೆ ವ್ಯಕ್ತಪಡಿಸಿದೆ. ಹೀಗಾಗಿ ಇದರ ಬೆಲೆ 10 ಕೋಟಿಗೂ ಅಧಿಕವಾದ್ರೂ ಅಶ್ಚರ್ಯಪಡಬೇಕಿಲ್ಲ.

ಎಪ್ರಿಲಿಯಾ ರೇಸ್ ಎಸ್ಆರ್ 150 ಸ್ಕೂಟರ್ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಫೋಟೋ ಗ್ಯಾಲರಿಯನ್ನು ಕ್ಲಿಕ್ ಮಾಡಿ.

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳು ನಿಮಗಾಗಿ

Click to compare, buy, and renew Car Insurance online

Buy InsuranceBuy Now

Read more on ವೆಸ್ಪಾ vespa
Story first published: Saturday, March 25, 2017, 17:43 [IST]
English summary
The World’s oldest Vespa scooter was hand-built in 1946 and is in working condition; is expected to fetch between €250,000 and €300,000 (approx. Rs 1.76 crores to Rs 2.2 crores) in the auction.
Please Wait while comments are loading...

Latest Photos