ವಿಮಾನವನ್ನೇ ವಾಸಸ್ಥಳವಾಗಿ ಪರಿವರ್ತಿಸಿದ ಅಮೆರಿಕ ದಿಗ್ಗಜ

By Nagaraja

ಅಮೆರಿಕದ ನೈಋತ್ಯ ಫೆಸಿಫಿಕ್ ತೀರ ಪ್ರದೇಶದಲ್ಲಿ ಸ್ಥಿತಗೊಂಡಿರುವ ಓರೆಗನ್, ಕೃಷಿ, ಅರಣ್ಯ, ಪರ್ವತಗಳು ಮತ್ತು ಕಡಲತೀರಗಳ ವೈವಿಧ್ಯಮ ಪ್ರದೇಶವಾಗಿದೆ. ಇಲ್ಲಿಂದ ಬಂದಿರುವ ಸ್ವಾರಸ್ಯಕರ ಸುದ್ದಿಯೊಂದರಲ್ಲಿ ಬ್ರೂಸ್ ಕ್ಯಾಂಪ್‌ಬೆಲ್ ಎಂಬ ವ್ಯಕ್ತಿ ಇಲ್ಲಿ ಕಳೆದ 15 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬೋಯಿಂಗ್ 727 ವಿಮಾನದಲ್ಲಿ ವಾಸಿಸುತ್ತಿದ್ದಾರೆ.

ತನ್ಮೂಲಕ ವಿಮಾನವನ್ನೇ ವಾಸಸ್ಥಾನವಾಗಿ ಪರಿವರ್ತಿಸಿರುವ ಈತ ಈಗ ಜಪಾನ್ ನಲ್ಲೂ ಇದಕ್ಕೆ ಸಮಾನವಾದ ರೀತಿಯಲ್ಲಿ ವಿಮಾನ ಮನೆ ನಿರ್ಮಿಸುವ ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ.

ಹಿನ್ನಲೆ...

ಹಿನ್ನಲೆ...

1999ನೇ ಇಸವಿಯಲ್ಲಿ ಬ್ರೂಸ್ ಕ್ಯಾಂಪ್ ಬೆಲ್, ಬೋಯಿಂಗ್ 727 ವಿಮಾನವನ್ನು ಖರೀದಿಸಿದ್ದರು. ಪೋರ್ಟ್ ಲ್ಯಾಂಡ್ ಕಾಡಿನಲ್ಲಿರುವ 10 ಎಕರೆ ಜಮೀನಿನಲ್ಲಿ ವಿಮಾನ ಸಂಚಾರ ಯೋಗ್ಯವಲ್ಲದೆ ಸ್ಥಗಿತಗೊಂಡಿದೆ.

ವಿಮಾನವನ್ನೇ ವಾಸಸ್ಥಳವಾಗಿ ಪರಿವರ್ತಿಸಿದ ಅಮೆರಿಕ ದಿಗ್ಗಜ

ತದಾ ಬಳಿಕ ಬ್ರೂಸ್ ಕ್ಯಾಂಪ್ ಬೆಲ್ ವಿಮಾನವನ್ನು ವಾಸಿಸಲು ಯೋಗ್ಯಕರವಾದ ಜಾಗವಾಗಿ ಪರಿವರ್ತಿಸಿದ್ದಾರೆ. ಇದು ವಿಚಿತ್ರವಾದರೂ ಸತ್ಯವೆನಿಸಿದೆ.

ವಿಮಾನವನ್ನೇ ವಾಸಸ್ಥಳವಾಗಿ ಪರಿವರ್ತಿಸಿದ ಅಮೆರಿಕ ದಿಗ್ಗಜ

ಬೋಯಿಂಗ್ 727 ಬಗ್ಗೆ ಮಾತನಾಡಬೇಕಾದರೆ, 1960ರಲ್ಲಿ ಸೇವೆಗೆ ಬಿಡುಗಡೆಯಾಗಿರುವ ಈ ವಿಮಾನವು ಇದುವರೆಗೆ 1832 ಯುನಿಟ್ ಗಳಷ್ಟು ನಿರ್ಮಿಸಲಾಗಿದೆ.

ವಿಮಾನವನ್ನೇ ವಾಸಸ್ಥಳವಾಗಿ ಪರಿವರ್ತಿಸಿದ ಅಮೆರಿಕ ದಿಗ್ಗಜ

1984ನೇ ಇಸವಿಯಲ್ಲಿ ಬೋಯಿಂಗ್ 727 ವಿಮಾನದ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು.

ವಿಮಾನವನ್ನೇ ವಾಸಸ್ಥಳವಾಗಿ ಪರಿವರ್ತಿಸಿದ ಅಮೆರಿಕ ದಿಗ್ಗಜ

ಕ್ಯಾಂಪ್ ಬೆಲ್ ಹೇಳುವ ಪ್ರಕಾರ, ವಿಮಾನದ ಒಟ್ಟಾರೆ ವಿನ್ಯಾಸವು ಪರಿಣಾಮಕಾರಿ ಎನಿಸಿಕೊಂಡಿದ್ದು, ಮನೆಯ ಆಕಾರಕ್ಕೆ ಹೊಂದುಕೊಳ್ಳುವಂತಿದೆ ಎಂದಿದ್ದಾರೆ.

ವಿಮಾನವನ್ನೇ ವಾಸಸ್ಥಳವಾಗಿ ಪರಿವರ್ತಿಸಿದ ಅಮೆರಿಕ ದಿಗ್ಗಜ

ಮಾತು ಮುಂದುವರಿಸಿದ ಅವರು, ಸಣ್ಣ ಕುಟುಂಬ ಅಥವಾ ವೈಯಕ್ತಿಕವಾಗಿ ವಾಸಿಸುವವರಿಗೆ ಅತ್ಯುತ್ತಮ ಆಯ್ಕೆಯಾಗಿರಲಿದೆ ಎಂದಿದ್ದಾರೆ.

ವಿಮಾನವನ್ನೇ ವಾಸಸ್ಥಳವಾಗಿ ಪರಿವರ್ತಿಸಿದ ಅಮೆರಿಕ ದಿಗ್ಗಜ

ಸಾಮಾನ್ಯ ಮನೆಯಲ್ಲಿರುವಂತೆಯೇ ಇದರಲ್ಲಿ ಅಡುಗೆ ಕೋಣೆ, ಮಗಲು ಕೋಣೆ, ಶೌಚಾಲಯ ಇತ್ಯಾದಿ ವ್ಯವಸ್ಥೆಗಳನ್ನು ಒದಗಿಸಲಾಗಿದೆ.

ವಿಮಾನವನ್ನೇ ವಾಸಸ್ಥಳವಾಗಿ ಪರಿವರ್ತಿಸಿದ ಅಮೆರಿಕ ದಿಗ್ಗಜ

ವರ್ಷದಲ್ಲಿ ಆರು ತಿಂಗಳುಗಳಷ್ಟು ಕಾಲವನ್ನು ಜಪಾನ್ ನಲ್ಲಿ ಕಳೆಯುತ್ತಿರುವ ಕ್ಯಾಂಪ್ ಬೆಲ್ ಈಗ, ಜಪಾನ್ ನಲ್ಲೂ ಸೇವೆಯಿಂದ ನಿವೃತ್ತಿಯಾಗಿರುವ ಬೋಯಿಂಗ್ 747-400 ವಿಮಾನದ ಹುಡುಕಾಟದಲ್ಲಿದ್ದಾರೆ.

ವಿಮಾನವನ್ನೇ ವಾಸಸ್ಥಳವಾಗಿ ಪರಿವರ್ತಿಸಿದ ಅಮೆರಿಕ ದಿಗ್ಗಜ

ಅಮೆರಿಕದಲ್ಲಿರುವುದಕ್ಕೆ ಸಮಾನವಾದ ರೀತಿಯಲ್ಲಿ ವಿಮಾನವನ್ನು ಮನೆಯಾಗಿ ಪರಿವರ್ತಿಸುವುದು ಅವರ ಇರಾದೆಯಾಗಿದೆ.

ವಿಮಾನವನ್ನೇ ವಾಸಸ್ಥಳವಾಗಿ ಪರಿವರ್ತಿಸಿದ ಅಮೆರಿಕ ದಿಗ್ಗಜ

ಬೋಯಿಂಗ್ 727 ವಿಮಾನಕ್ಕೆ ಹೋಲಿಸಿದಾಗ ಮೂರು ಪಟ್ಟು ದೊಡ್ಡದಾಗಿರುವ ಬೋಯಿಂಗ್ 747-400, 660 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುತ್ತದೆ.

ವಿಮಾನವನ್ನೇ ವಾಸಸ್ಥಳವಾಗಿ ಪರಿವರ್ತಿಸಿದ ಅಮೆರಿಕ ದಿಗ್ಗಜ

ಹಾಗೆ ನೋಡಿದರೆ ಬೋಯಿಂಗ್ 747-400 ವಿಮಾನವು, ಅಮೆರಿಕ, ಬ್ರಿಟನ್ ಮತ್ತು ಡೆಲ್ಟಾ ಏರ್ ಲೈನ್ಸ್ ಗಳ ಸೇವೆಯಲ್ಲಿದೆ.

ವಿಮಾನವನ್ನೇ ವಾಸಸ್ಥಳವಾಗಿ ಪರಿವರ್ತಿಸಿದ ಅಮೆರಿಕ ದಿಗ್ಗಜ

ಜಪಾನ್‌ನ ಮಿಯಝಾಕಿ ನಗರದಲ್ಲಿ ಹೊಸ ವಿಮಾನ ಮನೆ ನಿರ್ಮಿಸುವುದು ಕ್ಯಾಂಪ್ ಬೆಲ್ ಗುರಿಯಾಗಿದೆ. ಅವರ ಕನಸು ಬಹುಬೇಗನೇ ನನಸಾಗಲಿ ಎಂಬುದು ನಮ್ಮ ಆಶಯವಾಗಿದೆ.

Most Read Articles

Kannada
Read more on ವಿಮಾನ plane
English summary
Oregon man lives in a decommissioned Boeing 727 airplane
Story first published: Thursday, June 23, 2016, 9:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X