ಜಪಾನ್ ಹೈ ಸ್ಪೀಡ್ ಶಿಂಕಾನ್ಸೆನ್ ಬುಲೆಟ್ ರೈಲಿನಲ್ಲಿ ಮೋದಿ ಹವಾ!

ಮುಂಬೈ-ಅಹಮದಬಾದ್ ನಗರಗಳ ಮಧ್ಯೆಯು ಜಪಾನ್ ತಂತ್ರಜ್ಞಾನದ ಹೈ ಸ್ಪೀಡ್ ಶಿಂಕಾನ್ಸೆನ್ ಬುಲೆಟ್ ರೈಲು ನಿರ್ಮಾಣವಾಗಲಿದೆ.

By Nagaraja

ಭಾರತ-ಜಪಾನ್ ದ್ವಿಪಕ್ಷೀಯ ವಾರ್ಷಿಕ ಸಮಾವೇಶಕ್ಕಾಗಿ ಮೂರು ದಿನಗಳ ಜಪಾನ್ ಪ್ರವಾಸ ಕೈಗೊಂಡಿರುವ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಶಿಂಜೊ ಅಬೆ ಜೊತೆ ವಿಶ್ವದ ಅತಿ ವೇಗದ ಶಿಂಕಾನ್ಸೆನ್ ಬುಲೆಟ್ ರೈಲಿನಲ್ಲಿ ಪ್ರಯಾಣಿಸುವ ಮೂಲಕ ಗಮನ ಸೆಳೆದಿದ್ದಾರೆ. ಭಾರತದ ಅತಿ ವೇಗದ ರೈಲು ಮಾರ್ಗ ಗುತ್ತಿಗೆ ಸಂಬಂಧ ಚೀನಾ ಮತ್ತು ಜಪಾನ್ ನಡುವೆ ಭಾರಿ ಪೈಪೋಟಿ ಏರ್ಪಟ್ಟಿರುವ ಮಧ್ಯೆ ಇಂತಹದೊಂದು ಬೆಳವಣಿಗೆ ಕಂಡುಬಂದಿದೆ.

ಜಪಾನ್ ಹೈ ಸ್ಪೀಡ್ ಶಿಂಕಾನ್ಸೆನ್ ಬುಲೆಟ್ ರೈಲಿನಲ್ಲಿ ಮೋದಿ ಹವಾ!

ಮುಂಬೈ-ಅಹಮದಾಬಾದ್ ನಡುವಣ ಅತಿ ವೇಗದ ರೈಲು ನಿರ್ಮಾಣಕ್ಕಾಗಿ ನರೇಂದ್ರ ಮೋದಿ ಅವರು ಜಪಾನ್ ನ ಶಿಂಕಾನ್ಸೆನ್ ರೈಲನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜಪಾನ್ ಸಹಾಯದಿಂದ ಭವಿಷ್ಯದಲ್ಲಿ ಮತ್ತಷ್ಟು ರೈಲು ಮಾರ್ಗವನ್ನು ನಿರ್ಮಿಸುವುದು ಕೇಂದ್ರ ಸರಕಾರದ ಇರಾದೆಯಾಗಿದೆ.

ಜಪಾನ್ ಹೈ ಸ್ಪೀಡ್ ಶಿಂಕಾನ್ಸೆನ್ ಬುಲೆಟ್ ರೈಲಿನಲ್ಲಿ ಮೋದಿ ಹವಾ!

ಉಭಯ ದೇಶದ ಪ್ರಧಾನ ಮಂತ್ರಿಗಳು ಶಿಂಕಾನ್ಸೆನ್ ರೈಲಿನಲ್ಲಿ ಸಂಚರಿಸುವ ಮೂಲಕ ಸ್ನೇಹ ಸಂಬಂಧವನ್ನು ಮತ್ತಷ್ಟು ಗಟ್ಟಿಪಡಿಸಿಕೊಂಡರು. ಈ ವೇಳೆ ಜಪಾನ್ ಬುಲೆಟ್ ರೈಲು ತಂತ್ರಗಾರಿಕೆಯ ಬಗ್ಗೆ ಮಾಹಿತಿಯನ್ನು ಶಿಂಜೊ ಅಬೆ ಹಂಚಿಕೊಂಡರು.

ಜಪಾನ್ ಹೈ ಸ್ಪೀಡ್ ಶಿಂಕಾನ್ಸೆನ್ ಬುಲೆಟ್ ರೈಲಿನಲ್ಲಿ ಮೋದಿ ಹವಾ!

ಬುಲೆಟ್ ರೈಲಿನಲ್ಲಿ ಓಸಕಾ ಬೇ ನಗರದಲ್ಲಿ ಕೋಬೆ ವರೆಗೆ ಸಂಚರಿಸಲಾಯಿತು. ಇದೇ ತಂತ್ರಜ್ಞಾನದ ಶಿಂಕಾನ್ಸೆನ್ ರೈಲು ಮುಂಬೈ-ಅಹಮದಾಬಾದ್ ನಡುವೆ ತಲೆಯೆತ್ತಲಿದೆ ಎಂಬುದಿಲ್ಲಿ ಗಮನಾರ್ಹವೆನಿಸುತ್ತದೆ.

ಜಪಾನ್ ಹೈ ಸ್ಪೀಡ್ ಶಿಂಕಾನ್ಸೆನ್ ಬುಲೆಟ್ ರೈಲಿನಲ್ಲಿ ಮೋದಿ ಹವಾ!

ಕಳೆದೆರಡು ವರ್ಷಗಳಲ್ಲಿ ಎರಡನೇ ಬಾರಿಗೆ ಜಪಾನ್ ಭೇಟಿ ಮಾಡುತ್ತಿರುವ ನರೇಂದ್ರ ಮೋದಿ, ಶಿಂಕಾನ್ಸೆನ್ ಬುಲೆಟ್ ರೈಲಿನ ಬಗ್ಗೆ ಮತ್ತಷ್ಟು ಆಳವಾಗಿ ಅರಿಯಲು ಉತ್ಸುಕತೆ ವ್ಯಕ್ತಪಡಿಸಿದ್ದರು.

ಜಪಾನ್ ಹೈ ಸ್ಪೀಡ್ ಶಿಂಕಾನ್ಸೆನ್ ಬುಲೆಟ್ ರೈಲಿನಲ್ಲಿ ಮೋದಿ ಹವಾ!

ಶಿಂಕಾನ್ಸೆನ್ ಬುಲೆಟ್ ರೈಲು ಗಂಟೆಗೆ 240 ಕೀ.ಮೀ. ಗಳಿಂದ 320 ಕೀ.ಮೀ. ವೇಗದಲ್ಲಿ ಸಂಚರಿಸುತ್ತದೆ. ಈ ಸಂಬಂಧ ತಮ್ಮ ಟ್ವಿಟರ್ ಪೇಜ್ ನಲ್ಲೂ ಮಾಹಿತಿ ಹಾಗೂ ಚಿತ್ರಗಳನ್ನು ಮೋದಿ ಹಂಚಿಕೊಂಡಿದ್ದಾರೆ.

ಜಪಾನ್ ಹೈ ಸ್ಪೀಡ್ ಶಿಂಕಾನ್ಸೆನ್ ಬುಲೆಟ್ ರೈಲಿನಲ್ಲಿ ಮೋದಿ ಹವಾ!

ಮುಂಬೈ-ಅಹಮದಾಬಾದ್ ನಡುವಣ ಭಾರತದ ಅತಿ ವೇಗದ ಬುಲೆಟ್ ರೈಲು ಯೋಜನೆ 2018ರಲ್ಲಿ ಆರಂಭವಾಗಲಿದ್ದು, 2023ರಲ್ಲಿ ಕಾರ್ಯಾಚರಣೆ ಆರಂಭವಾಗಲಿದೆ.

ಈ ಸಂಬಂಧ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತಾನಾಡಿದ ಮೋದಿ, ವರ್ಷಾಂತ್ಯದೊಳಗೆ ಯೋಜನೆಯ ವಿನ್ಯಾಸಗೊಳಿಸಲಾಗುವುದು ಎಂದಿದ್ದಾರೆ.

ಜಪಾನ್ ಹೈ ಸ್ಪೀಡ್ ಶಿಂಕಾನ್ಸೆನ್ ಬುಲೆಟ್ ರೈಲಿನಲ್ಲಿ ಮೋದಿ ಹವಾ!

ಮುಂಬೈ-ಅಹಮದಬಾದ್ ನಡುವಣ ಮಹತ್ವಾಕಾಂಕ್ಷೆಯ ಬುಲೆಟ್ ರೈಲು ಯೋಜನೆಯು ಉಭಯ ದೇಶಗಳ ನಡುವಣ ಸಂಬಂಧಕ್ಕೆ ಹೊಸ ಆಯಾಮ ದೊರಕಲಿದೆ. ಹೈಸ್ಪೀಡ್ ರೈಲು ಕನಸು ನನಸಾಗುವುದರೊಂದಿಗೆ ದೇಶದ ಆರ್ಥಿಕ ಬೆಳವಣಿಗೆಗೆ ಮತ್ತಷ್ಟು ಆವೇಗವನ್ನು ತುಂಬಲಿದೆ.

ಜಪಾನ್ ಹೈ ಸ್ಪೀಡ್ ಶಿಂಕಾನ್ಸೆನ್ ಬುಲೆಟ್ ರೈಲಿನಲ್ಲಿ ಮೋದಿ ಹವಾ!

ಇದರೊಂದಿಗೆ ಮುಂಬೈ-ಅಹಮದಾಬಾದ್ ನಡುವಣ ಪ್ರಯಾಣ ಅವಧಿ ಏಳು ತಾಸಿನಿಂದ ಬರಿ ಎರಡು ಗಂಟೆಗಳಿಗೆ ಇಳಿಕೆಯಾಗಲಿದೆ. ಈ ಎರಡು ನಗರಗಳ ಅಂತರ 534 ಕೀ.ಮೀ.ಗಳಾಗಿವೆ.

ಜಪಾನ್ ಹೈ ಸ್ಪೀಡ್ ಶಿಂಕಾನ್ಸೆನ್ ಬುಲೆಟ್ ರೈಲಿನಲ್ಲಿ ಮೋದಿ ಹವಾ!

97,636 ಕೋಟಿ ರುಪಾಯಿಗಳ ಈ ಮಹತ್ತರ ಯೋಜನೆಯ ಬಹುಪಾಲು ಅಂದರೆ ಶೇಕಡಾ 81ರಷ್ಟು (ಅಂದಾಜು 79,380 ಕೋಟಿ ರು. ) ಆರ್ಥಿಕ ನೆರವನ್ನು ನೀಡಲಿರುವ ಜಪಾನ್ ಇಂಟರ್ ನ್ಯಾಷನಲ್ ಕಾರ್ಪೋರೇಷನ್ ಏಜೆನ್ಸಿ 'ಸಾಫ್ಟ್ ಲೋನ್' ಪ್ರಕಾರ ಶೇಕಡಾ 0.1 ರಷ್ಟು ಬಡ್ಡಿದರವನ್ನು ಈಡು ಮಾಡಲಿದೆ.

ಜಪಾನ್ ಹೈ ಸ್ಪೀಡ್ ಶಿಂಕಾನ್ಸೆನ್ ಬುಲೆಟ್ ರೈಲಿನಲ್ಲಿ ಮೋದಿ ಹವಾ!

ಸಾಲ ಮರುಪಾವತಿ ಅವಧಿ 50 ವರ್ಷಗಳಾಗಿದ್ದು, ಯೋಜನೆ ಆರಂಭಗೊಂಡ 16ನೇ ವರ್ಷದಿಂದ ಸಾಲ ಮರುಪಾವತಿಯು ಶೇಕಡಾ 0.1ರಲ್ಲಿ ಆರಂಭಗೊಳ್ಳುತ್ತದೆ.

ಜಪಾನ್ ಹೈ ಸ್ಪೀಡ್ ಶಿಂಕಾನ್ಸೆನ್ ಬುಲೆಟ್ ರೈಲಿನಲ್ಲಿ ಮೋದಿ ಹವಾ!

ಉಳಿದ ಶೇಕಡಾ 20ರಷ್ಟು ಸಾಲವನ್ನು ಕೇಂದ್ರ ಸರಕಾರ (20,000 ಕೋಟಿ ರು.) ಒದಗಿಸಲಿದೆ. ಮೊದಲ 15 ವರ್ಷಗಳಲ್ಲಿ ಸಾಲ ಮರು ಪಾವತಿಗೆ ಜಪಾನ್ ರಿಯಾಯಿತಿ ನೀಡಿರುವುದರಿಂದ 16ನೇ ವರ್ಷದಿಂದ ಭಾರತೀಯ ರೈಲ್ವೆ ನಿಜವಾದ ಸವಾಲು ಎದುರಾಗಲಿದೆ.

ಜಪಾನ್ ಹೈ ಸ್ಪೀಡ್ ಶಿಂಕಾನ್ಸೆನ್ ಬುಲೆಟ್ ರೈಲಿನಲ್ಲಿ ಮೋದಿ ಹವಾ!

ಇದು ಕೂಡಾ ಮೇಕ್ ಇನ್ ಇಂಡಿಯಾ ಭಾಗವಾಗಿದ್ದು, ಶೇಕಡಾ 20ರಷ್ಟು ಬಿಡಿಭಾಗಗಳನ್ನು ಮಾತ್ರ ಜಪಾನ್ ನಿಂದ ಆಮದು ಮಾಡಿಕೊಳ್ಳಲಾಗುವುದು. ಬುಲೆಟ್ ರೈಲಿಗೆ ಸಂಬಂಧಪಟ್ಟ ಎಲ್ಲ ತಾಂತ್ರಿಕ ವಿಜ್ಞಾನ, ಪರಿಣಿತ ಕೆಲಸಗಾರರು, ತಯಾರಕ ಯಂತ್ರ ಮತ್ತು ನಿರ್ವಹಣೆಯನ್ನು ಜಪಾನ್ ಭಾರತದ ಜೊತೆ ಹಂಚಿಕೊಳ್ಳಲಿದೆ.

ಜಪಾನ್ ಹೈ ಸ್ಪೀಡ್ ಶಿಂಕಾನ್ಸೆನ್ ಬುಲೆಟ್ ರೈಲಿನಲ್ಲಿ ಮೋದಿ ಹವಾ!

1964ನೇ ಇಸವಿಯಲ್ಲಿ ಜಪಾನ್ ನಲ್ಲಿ ಮೊದಲ ಬಾರಿಗೆ ಹೈ ಸ್ಪೀಡ್ ರೈಲನ್ನು ಪರಿಚಯಿಸಲಾಗಿತ್ತು. 1964ನೇ ಇಸವಿಯಲ್ಲಿ 515.4 ಕೀ.ಮೀ. ದೂರದ ಟೊಕೈಡೊ ಶಿಂಕಾನ್ಸೆನ್‌ನಿಂದ (tokaido shinkansen)ಆರಂಭವಾಗಿದ್ದ ಈ ಜಾಲ ಪ್ರಸ್ತುತ 2,387.7 ಕೀ.ಮೀ. ಉದ್ದದ ವರಗೆ ವರೆಗೆ ಹರಡಿದೆ.

ಜಪಾನ್ ಹೈ ಸ್ಪೀಡ್ ಶಿಂಕಾನ್ಸೆನ್ ಬುಲೆಟ್ ರೈಲಿನಲ್ಲಿ ಮೋದಿ ಹವಾ!

ಶಿಂಕಾನ್ಸೆನ್ ಎಂಬ ಪದವು 'ನೇರ ಮಾರ್ಗ' ಎಂಬ ಅರ್ಥವನ್ನು ಹೊಂದಿದೆ. ಪ್ರಸ್ತುತ ಪದವು ಜಪಾನ್‌ನಲ್ಲಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ಇನ್ನು ಟೊಕೈಡೊ ಶಿಂಕಾನ್ಸೆನ್ ಜಗತ್ತಿನ ಬಿಡುವಿಲ್ಲದ ಹೈ ಸ್ಪೀಡ್ ರೈಲ್ವೇ ಹಳಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಜಪಾನ್ ಹೈ ಸ್ಪೀಡ್ ಶಿಂಕಾನ್ಸೆನ್ ಬುಲೆಟ್ ರೈಲಿನಲ್ಲಿ ಮೋದಿ ಹವಾ!

ಜಪಾನ್ ಬುಲೆಟ್ ಟ್ರೇನ್‌ ಜಾಲದ ಪ್ರಯೋಜನವನ್ನು 10 ಬಿಲಿಯನ್ ಪ್ರಯಾಣಿಕರು ಪಡೆಯುತ್ತಾರೆ. ಈ ಪೈಕಿ ಟೊಕೈಡೊ ಶಿಂಕಾನ್ಸೆನ್ ಜಾಲದಲ್ಲಿ ಮಾತ್ರವಾಗಿ 5 ಬಿಲಿಯನ್ ಯಾತ್ರಿಕರು ಪಯಣಿಸುತ್ತಾರೆ.

ಜಪಾನ್ ಹೈ ಸ್ಪೀಡ್ ಶಿಂಕಾನ್ಸೆನ್ ಬುಲೆಟ್ ರೈಲಿನಲ್ಲಿ ಮೋದಿ ಹವಾ!

ವಿಶ್ವದರ್ಜೆಯ ಸೌಲಭ್ಯಗಳಿರುವುದು ಬುಲೆಟ್ ಟ್ರೇನ್‌ಗಳು ಮತ್ತೊಂದು ವಿಶೇಷತೆಯಾಗಿದೆ. ಹಾಗೆಯೇ ಕೆಲವೇ ಗಂಟೆಗಳಲ್ಲಿ ಪ್ರಮುಖ ನಗರಗಳನ್ನು ಬಂಧಿಸುವಲ್ಲಿ ಬುಲೆಟ್ ಟ್ರೇನ್‌ಗಳು ಯಶಸ್ವಿಯಾಗಲಿದೆ.

ಜಪಾನ್ ಹೈ ಸ್ಪೀಡ್ ಶಿಂಕಾನ್ಸೆನ್ ಬುಲೆಟ್ ರೈಲಿನಲ್ಲಿ ಮೋದಿ ಹವಾ!

ಪ್ರಸ್ತುತ ಯೋಜನೆಯು ಮುಂಬೈ ಹಾಗೂ ಅಹಮಾದಾಬಾದ್ ನಡುವಣ ಪ್ರಮುಖ ನಗರಗಳಾದ ಥಾಣೆ, ವಿರಾರ್, ಸೂರತ್, ಭರುಚ್ ಮತ್ತು ವಡೋದರಾ ಸೇರಿದಂತೆ 11 ನಿಲ್ದಾಣಗಳನ್ನು ಸಂಪರ್ಕಿಸಲಿದೆ.

Most Read Articles

Kannada
Read more on ಭಾರತ india
English summary
PM Narendra Modi And Shinzo Abe Ride On Japans Shinkansen Bullet Train
Story first published: Saturday, November 12, 2016, 14:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X