ಒಬಾಮಾ ವಿಮಾನ 'ಏರ್ ಫೋರ್ಸ್ ಒನ್' ಸ್ಪೆಷಾಲಿಟಿ ಏನು?

By Nagaraja

ಗಣರಾಜ್ಯೋತ್ಸವದ ಅಂಗವಾಗಿ 2015 ಜನವರಿ 25ರಂದು ಭಾರತಕ್ಕೆ ಭೇಟಿ ಕೊಡಲಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಸೀದಾ ಸಾದಾ ವಿಮಾನವನ್ನೇರುತ್ತಾರೆ ಅಂದುಕೊಂಡರೆ ತಪ್ಪಾದಿತು. ನಿಮ್ಮಲ್ಲಿ ಹಲವರಿಗೆ ಈ ಬಗ್ಗೆ ಸ್ಪಷ್ಟ ಜ್ಞಾನವಿರದು. ಹೌದು, ಅಮೆರಿಕ ಅಧ್ಯಕ್ಷರು ತಮ್ಮ ಖಾಸಗಿ ವಿಮಾನದಲ್ಲಿ ಭಾರತದತ್ತ ಪಯಣ ಬೆಳೆಸಲಿದ್ದಾರೆ. ಅದುವೇ ಏರ್ ಫೋರ್ಸ್ ಒನ್!

ಇವನ್ನೂ ಓದಿ: ಭಾರತದಲ್ಲಿ ಒಬಾಮಾಗೆ ಸರ್ಪಗಾವಲು

ಅಂದ ಹಾಗೆ ಅಮೆರಿಕ ಅಧ್ಯಕ್ಷೀಯ ವಿಮಾನದಲ್ಲಿ ಹತ್ತು ಹಲವಾರು ವೈಶಿಷ್ಟ್ಯಗಳಿವೆ. ಅವುಗಳನ್ನು ಒಂದೊಂದಾಗಿ ಬಿಚ್ಚಿಟ್ಟರೆ ನೀವು ಬೆರಗಾಗುವೀರಾ! ಅಮೆರಿಕ ಅಧ್ಯಕ್ಷರ ಅಧಿಕೃತ ಕಾರು ಬೀಸ್ಟ್ ಹೋಲಿಸಿದಾಗ ಏರ್ ಫೋರ್ಸ್ ಒನ್ ಅತ್ಯುನ್ನತ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಅಷ್ಟು ಒಬಾಮಾ ಅವರ ಏರ್ ಫೋರ್ಸ್ ಒನ್ ವಿಮಾನದಲ್ಲಿ ಅಂತದ್ದೇನಿದೆ? ವಿವರಗಳಿಗಾಗಿ ಫೋಟೊ ಸ್ಲೈಡ್‌ನತ್ತ ಮುಂದುವರಿಯಿರಿ...

ಒಬಾಮಾ ವಿಮಾನ 'ಏರ್ ಫೋರ್ಸ್ ಒನ್' ಸ್ಪೆಷಾಲಿಟಿ ಏನು?

1953ನೇ ಇಸವಿಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಎಲ್ಸೆನ್‌ಹೋವೆರ್ ಸಂಚರಿಸುತ್ತಿದ್ದ ವಿಮಾನ ವಾಣಿಜ್ಯ ವಿಮಾನಯಾನದ ಸಮಾನ ಪ್ರದೇಶಕ್ಕೆ ಲಗ್ಗೆಯಿಟ್ಟ ಹಿನ್ನಲೆಯಲ್ಲಿ ತದಾ ಬಳಿಕ ವಿಶೇಷವಾಗಿ ಗುರುತಿಸುವ ಹಿನ್ನಲೆಯಲ್ಲಿ ಅಧಿಕೃತ ಏರ್ ಟ್ರಾಫಿಕ್ ಕಂಟ್ರೋಲ್ ಕಾಲ್ ಚಿಹ್ನೆಯನ್ನು ಬಳಕೆ ಮಾಡಲಾಗಿದೆ.

ಒಬಾಮಾ ವಿಮಾನ 'ಏರ್ ಫೋರ್ಸ್ ಒನ್' ಸ್ಪೆಷಾಲಿಟಿ ಏನು?

ಅತಿ ವಿಶೇಷ ಮಾರ್ಪಾಡುಗಳೊಂದಿಗೆ ವಿನ್ಯಾಸ ಮಾಡಲಾಗಿರುವ ಏರ್ ಫೋರ್ಸ್ ಒನ್ ವಿಮಾನವು ಕೇವಲ ಪಯಣಕ್ಕೆ ಮಾತ್ರ ಸೀಮಿತವಲ್ಲ. ಇದು ಅಮೆರಿಕ ಅಧ್ಯಕ್ಷರ ಸುಸಜ್ಜಿತ ಕಚೇರಿ ಪ್ರದೇಶವಾಗಿದ್ದು, 87 ಟೆಲಿಫೋನ್ ಹಾಗೂ 19 ಟೆಲಿವಿಷನ್ ಜೊತೆಗೆ ಮಹತ್ತರ ದೂರಸಂಪರ್ಕ ವ್ಯವಸ್ಥೆಯನ್ನು ಹೊಂದಿರುತ್ತದೆ.

ಒಬಾಮಾ ವಿಮಾನ 'ಏರ್ ಫೋರ್ಸ್ ಒನ್' ಸ್ಪೆಷಾಲಿಟಿ ಏನು?

ಎದುರಾಳಿಗಳು ಬೇಗನೇ ಟಾರ್ಗೆಟ್ ಮಾಡದಿರುವ ಅಥವಾ ಚಳ್ಳೆ ಹಣ್ಣು ತಿನಿಸುವ ಸಲುವಾಗಿ ಏರ್ ಫೋರ್ಸ್ ಒನ್‌ಗೆ ಸಮಾನವಾದ ಒಂದೇ ತರಹದ ಎರಡು ನಕಟಿ ಬೋಯಿಂಗ್ 747-200 ಬಿಎಸ್ ವಿಮಾನಗಳು ಏರ್ ಫೋರ್ಸ್ ಒನ್ ಜೊತೆ ಪಯಣ ಬೆಳೆಸುತ್ತದೆ. ಇನ್ನೊಂದು ಜಂಬೋ ಜೆಟ್ ವಿಮಾನದಲ್ಲಿ ಅಧಿಕಾರಿ ವರ್ಗ ಹಾಗೂ ಇತರ ಸುರಕ್ಷಾ ಅಧಿಕಾರಿಗಳು ಪಯಣಿಸುತ್ತಾರೆ.

ಒಬಾಮಾ ವಿಮಾನ 'ಏರ್ ಫೋರ್ಸ್ ಒನ್' ಸ್ಪೆಷಾಲಿಟಿ ಏನು?

ಇನ್ನು ವಿಮಾನದಲ್ಲಿ ಪಯಣದ ವೇಳೆ ಆಹಾರಕ್ಕೆ ಯಾವುದೇ ಅಭಾವವುಂಟಾಗುವುದಿಲ್ಲ. ಏಕೆಂದರೆ ಎರಡು ವಿಶಾಲವಾದ ಅಡುಗು ಕೋಣೆಗಳು ಇದರಲ್ಲಿದ್ದು, ಬಾಣಿಸಿಗರು ವಿಧ ವಿಧದ ಖಾದ್ಯಗಳನ್ನು ತಯಾರು ಮಾಡುತ್ತಿರುತ್ತಾರೆ.

ಒಬಾಮಾ ವಿಮಾನದಲ್ಲಿ ಏನೇನಿದೆ?

ಒಬಾಮಾ ವಿಮಾನದಲ್ಲಿ ಏನೇನಿದೆ?

ಇನ್ನು ಒಬಾಮಾ ಪಯಣದ ವೇಳೆ ವೈದ್ಯಕೀಯ ಅವಶ್ಯಕತೆಗಳಿಗಾಗಿ ದೊಡ್ಡ ಕಚೇರಿಯೇ ಸಿದ್ಧವಾಗಿರುತ್ತದೆ. ಇಲ್ಲಿ ತುರ್ತು ಸೇವೆಗಾಗಿ ಸುಸಜ್ಜಿತ ಕೋಣೆಯಿದ್ದು, ಬೇಕಾದಷ್ಟು ಔಷಧಗಳನ್ನು ಸ್ಟೋರ್ ಮಾಡಿಡಲಾಗಿದೆ.

ಒಬಾಮಾ ವಿಮಾನ 'ಏರ್ ಫೋರ್ಸ್ ಒನ್' ಸ್ಪೆಷಾಲಿಟಿ ಏನು?

ಒಬಾಮಾ ಅವರ ಏರ್ ಫೋರ್ಸ್ ಒನ್ ಎಷ್ಟೊಂದು ಶಕ್ತಿಯುತ ಸಂವಹನ ಸಾಮರ್ಥ್ಯ ಹೊಂದಿದೆ ಅಂದರೆ, 386 ಕೀ.ಮೀ. ಉದ್ದದಷ್ಟು ಎಲೆಕ್ಟ್ರೊ ಮ್ಯಾಗ್ನೆಟಿಕ್ ವೈರಿಂಗ್ ರಕ್ಷಣೆ ನೀಡಲಾಗಿದ್ದು, ಪರಮಾಣು ಸ್ಪೋಟ ಸಂಭವಿಸಿದರೂ ಸಂಪರ್ಕ ಕಡಿತವಾಗದಂತೆ ನೋಡಿಕೊಳ್ಳುತ್ತದೆ.

ಒಬಾಮಾ ವಿಮಾನ 'ಏರ್ ಫೋರ್ಸ್ ಒನ್' ಸ್ಪೆಷಾಲಿಟಿ ಏನು?

ಎಲ್ಲ ವಿಮಾನಗಳಲ್ಲೂ ವೈದ್ಯರು ಹಾಗೂ ದಾದಿಯರ ನೆರವು ನೀಡಲಾಗುತ್ತದೆ. ಅಲ್ಲದೆ ಇಲ್ಲಿಂದಲೇ ಕುಳಿತುಕೊಂಡು ಅಧ್ಯಕ್ಷರು ಇಡೀ ದೇಶವನ್ನು ಉದ್ದೇಶಿಸಿ ಮಾತನಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಒಬಾಮಾ ವಿಮಾನ 'ಏರ್ ಫೋರ್ಸ್ ಒನ್' ಸ್ಪೆಷಾಲಿಟಿ ಏನು?

ನಿದ್ದೆ ಮಾಡಲು ಐಷಾರಾಮಿ ಸೌಲಭ್ಯಗಳಿಂದ ಕೂಡಿರುವ ಕೋಣೆ, ಶೌಚಾಲಯ ಹಾಗೂ ಸ್ನಾನಗೃಹ ಮುಂತಾದ ಸೌಲಭ್ಯಗಳಿರುತ್ತದೆ.

ಒಬಾಮಾ ವಿಮಾನ 'ಏರ್ ಫೋರ್ಸ್ ಒನ್' ಸ್ಪೆಷಾಲಿಟಿ ಏನು?

ಇನ್ನು ಕಾನ್ಫೆರನ್ಸ್ ಕೊಠಡಿಯಲ್ಲಿ ಬೃಹತ್ತಾದ ಪ್ಲಾಸ್ಮಾ ಸ್ಕ್ರೀನ್ ಟಿವಿ ಕೂಡಾ ಲಗತ್ತಿಸಲಾಗಿದ್ದು, ದೂರಸಂಪರ್ಕ ಗೋಷ್ಠಿ ನಡೆಸಲು ಸಹಕಾರಿಯಾಗಿದೆ.

ರಕ್ಷಣಾ ವ್ಯವಸ್ಥೆ

ರಕ್ಷಣಾ ವ್ಯವಸ್ಥೆ

ಡೈರಕ್ಟರ್ ಇನ್ಫ್ರಾರೆಡ್ ಕೌಂಟರ್ ಮೆಷರ್ (ಡಿಐಆರ್‌ಸಿಎಂ) ರಕ್ಷಣಾ ವ್ಯವಸ್ಥೆಯನ್ನು ಇದರಲ್ಲಿ ಆಳವಡಿಸಲಾಗಿದೆ. ಇದು ಮಿಸೈಲ್ ದಾಳಿಯನ್ನೇ ಎದುರಿಸುವಷ್ಟು ಶಕ್ತವಾಗಿದೆ. ಇದರಲ್ಲಿ ಮಿಸಲ್ ದಾಳಿ ವೇಳೆ ವಿಭಿನ್ನ ಜಾಮಿಂಗ್ ಹಾಗೂ ದಿಕ್ಕು ತಪ್ಪಿಸುವ ಕ್ರಮಾವಳಿಗಳನ್ನು ಅನುಸರಿಸಲಾಗಿದೆ.

ಬೆಲೆ ಎಷ್ಟು ಗೊತ್ತೇ?

ಬೆಲೆ ಎಷ್ಟು ಗೊತ್ತೇ?

ಅಷ್ಟಕ್ಕೂ ಅಮೆರಿಕ ಒಬಾಮಾ ಬರಾಕ್ ಒಮಾಬಾ ಸಂಚರಿಸುತ್ತಿರುವ ಏರ್ ಫೋರ್ಸ್ ಒನ್ ವಿಮಾನದ ಅಂದಾಜು ಬೆಲೆ ಎಷ್ಟು ಗೊತ್ತೇ? ಬರೋಬ್ಬರಿ 2000 ಕೋಟಿ ರುಪಾಯಿಗಳು.

ಒಬಾಮಾ ವಿಮಾನ 'ಏರ್ ಫೋರ್ಸ್ ಒನ್' ಸ್ಪೆಷಾಲಿಟಿ ಏನು?

ಇನ್ನು 445ರಷ್ಟು ಗುಪ್ತಚರ ಸೇವಾ ವಿಭಾಗವನ್ನು ಅಮೆರಿಕ ಅಧ್ಯಕ್ಷರ ಜೊತೆಯಾಗಿರುತ್ತಾರೆ. ಅಲ್ಲದೆ ಇಲ್ಲಿಂದರೇ ಪ್ರತಿ ದಾಳಿ ಮಾಡುವ ವ್ಯವಸ್ಥೆಯು ಇರುತ್ತದೆ.

ತಾಂತ್ರಿಕತೆ

ತಾಂತ್ರಿಕತೆ

ವಿಧ: ಬೋಯಿಂಗ್ 747-200ಬಿ

ಸಿಬ್ಬಂದಿ: 26 (ಇಬ್ಬರು ಪೈಲಟ್ ಸೇರಿ)

ಸಾಮರ್ಥ್ಯ: 78 ಪ್ರಯಾಣಿಕರು

ಉದ್ದ: 70.6 ಮೀಟರ್

ರೆಕ್ಕೆ ಉದ್ದ: 59.8 ಮೀಟರ್

ತಾಂತ್ರಿಕತೆ

ತಾಂತ್ರಿಕತೆ

ಎತ್ತರ: 19.3 ಮೀಟರ್

ಗರಿಷ್ಠ ಭಾರ: 3,75,000 ಕೆ.ಜಿ

ಕ್ರೂಸ್ ವೇಗ: 925 ಕೀ.ಮೀ./ಗಂಟೆಗೆ

ವ್ಯಾಪ್ತಿ: 13,000 ಕೀ.ಮೀ.

ಬೆಲೆ: ಅಂದಾಜು 2000 ಕೋಟಿ ರು. (325 ಮಿಲಿಯನ್ ಅಮೆರಿಕನ್ ಡಾಲರ್)

Most Read Articles

Kannada
English summary
Barack Obama, the President of the United States will visit India during the Republic Day celebrations, as the Chief guest. He will travel to India in his Presidential flight, the Air Force One. Let us look at a few facts about his flying fortress and what makes this aircraft unique compared to the others.
Story first published: Tuesday, January 20, 2015, 12:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X