ಗದ್ದೆ ಕೆಲಸಕ್ಕಾಗಿ 70 ಲಕ್ಷ ಮೌಲ್ಯದ ಲಗ್ಷುರಿ ಕಾರು ಬಳಸಿದ ರೈತರು- ವಿಡಿಯೋ ವೈರಲ್

Written By:

ಗದ್ದೆ ಕೆಲಸಕ್ಕಾಗಿ ಸಾಮಾನ್ಯವಾಗಿ ಎತ್ತುಗಳ ಅಥವಾ ಕೋಣಗಳನ್ನು ಬಳಕೆ ಮಾಡುವುದನ್ನು ನಾವು ನೀವೆಲ್ಲಾ ನೋಡಿದ್ದೇವೆ. ಇನ್ನು ಕೆಲವು ಪ್ರಗತಿಪರ ರೈತರು ವೈಜ್ಞಾನಿಕ ಬೇಸಾಯಕ್ಕಾಗಿ ಯಂತ್ರೊಪಕರಣಗಳ ಬಳಕೆ ಮಾಡುತ್ತಿರುವುದನ್ನು ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ರೈತ ಮಾತ್ರ ಐಷಾರಾಮಿ ಕಾರುವೊಂದನ್ನು ಗದ್ದೆ ಕೆಲಸಕ್ಕೆ ಬಳಸಿ ಭಾರೀ ಸುದ್ಧಿಯಲ್ಲಿದ್ದಾನೆ.

ಅಂದಹಾಗೆ ಇದೆಲ್ಲಾ ನಡೆದಿಯುವುದು ಪಂಜಾಬ್‌ನ ಸಿಂಧ್ ಪ್ರಾಂತ್ಯದಲ್ಲಿ. ಭತ್ತದ ಗದ್ದೆಯನ್ನು ಉಳುಮೆ ಮಾಡುವುದಕ್ಕಾಗಿ ಲಗ್ಷುರಿ ಮಿಸ್ಟುಬಿಸಿ ಕಾರು ಬಳಕೆ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಇನ್ನು ಐಷಾರಾಮಿ ಕಾರು ಮಾದರಿಯಾಗಿರುವ ಮಿಸ್ಟುಬಿಸಿ ಮಾಂಟೆರೋ ದೆಹಲಿ ಎಕ್ಸ್‌ಶೋರಂ ಪ್ರಕಾರ 70 ಲಕ್ಷಕ್ಕೂ ಹೆಚ್ಚು ದುಬಾರಿಯಾಗಿದ್ದು, ಟ್ರ್ಯಾಕ್ಟರ್ ಬಳಕೆ ಬದಲು ರೈತರು ಕಾರು ಬಳಕೆ ಮಾಡಿರುವುದರ ಬಗ್ಗೆ ಸಾಕಷ್ಟು ಸುದ್ಧಿಯಾಗುತ್ತಿದೆ.

ಟ್ರ್ಯಾಕ್ಟರ್ ಬದಲು ಎಸ್‌ಯುವಿ ಮಿಸ್ಟುಬಿಸಿ ಮಾಂಟೆರೋ ಬಳಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಸುದ್ಧಿಗಳು ಚಾಲ್ತಿಯಲ್ಲಿದ್ದು, ಪಂಜಾಬ್ ರೈತನ ನಡೆ ಬಗ್ಗೆ ಪರ-ವಿರೋಧ ವ್ಯಕ್ತವಾಗುತ್ತಿವೆ.

ಮಿಸ್ಟುಬಿಸಿ ಕಾರಿನ ಹಿಂಭಾಗಕ್ಕೆ ಕಬ್ಬಿಣದ ಸಲಾಕೆಗಳನ್ನು ಕಟ್ಟಿರುವ ರೈತರು, ಕೇಸರು ಗದ್ದೆಯನ್ನು ಸಮಗೊಳಿಸಲು ಬಳಕೆ ಮಾಡಿದ್ದಾರೆ.

ಈ ಮೂಲಕ ತಾವು ಟ್ರ್ಯಾಕ್ಟರ್ ಅಷ್ಟೇ ಅಲ್ಲ ಕಾರುಗಳನ್ನು ಗದ್ದೆ ಕೆಲಸಕ್ಕೆ ಬಳಕೆ ಮಾಡುವಷ್ಟು ಮುಂದುವರಿದ್ದೇವೆ ಎಂಬುವುದನ್ನು ತೊರಿಸಿಕೊಟ್ಟಿದ್ದಾರೆ.

3.0 ಪೆಟ್ರೋಲ್ ಎಂಜಿನ್ ಹೊಂದಿರುವ ಮಿಸ್ಟುಬಿಸಿ ಮಾಂಟೆರೋ ಪ್ರತಿ ಲೀಟರ್‌ಗೆ 12 ಕಿ.ಮಿ ಮೈಲೇಜ್ ಶಕ್ತಿ ಹೊಂದಿದ್ದು, ಟ್ರ್ಯಾಕ್ಟರ್ ಬದಲಾಗಿ ಕಾರು ಬಳಸಿರುವುದು ಮಿಸ್ಟುಬಿಸಿ ಕಂಪನಿಯವರಿಗೆ ಮುಜುಗರ ಉಂಟುಮಾಡಿದೆ.

ಪಂಜಾಬ್ ರೈತರು ಗದ್ದೆ ಕೆಲಸಕ್ಕೆ ಕೇವಲ ಮಿಸ್ಟುಬಿಸಿ ಅಷ್ಟೇ ಅಲ್ಲದೇ ಫಾರ್ಚೂನರ್ ಹಾಗೂ ಟೊಯೊಟಾ ಲ್ಯಾಂಡ್ ಕ್ರೂಜರ್ ಕೂಡಾ ಬಳಕೆ ಮಾಡಿದ್ದಾರಂತೆ.

ಕೇಸರು ಗದ್ದೆಯಲ್ಲಿ ಕಾರು ಬಳಕೆ ಮಾಡುತ್ತಿರುವ ಬಗ್ಗೆ ವಿಡಿಯೋ ಮಾಡಿರುವ ಮತ್ತೊಬ್ಬ ರೈತ, ನಮ್ಮ ರೈತರು ಯಾವುದಕ್ಕೂ ಕಡಿಮೆ ಇಲ್ಲ ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಿಸ್ಟುಬಿಸಿ ಕಂಪನಿಯು ಗದ್ದೆ ಕೆಲಸಕ್ಕಾಗಿ ಸುಧಾರಿತ ತಂತ್ರಜ್ಞಾನ ಹೊಂದಿರುವ ಟ್ರ್ಯಾಕ್ಟರ್‌ಗಳು ಲಭ್ಯವಿದ್ದು, ಕಾರು ಬಳಕೆ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದೆ.

ರೈತರು ಗದ್ದೆಯಲ್ಲಿ ಮಿಸ್ಟುಬಿಸಿ ಕಾರಿನೊಂದಿಗೆ ಉಳುಮೆ ಮಾಡುತ್ತಿರುವ ವಿಡಿಯೋ ಇಲ್ಲದೆ ನೋಡಿ.

ಆದ್ರೆ ಅದೇನೇ ಇರಲಿ ರೈತರು ಮಾತ್ರ ನಾವು ಯಾವುದಕ್ಕೂ ಕಡಿಮೆ ಇಲ್ಲ ಎಂಬುವುದನ್ನು ತೊರಿಸಿಕೊಟ್ಟಿದ್ದಾರೆ.

Read more on ವಿಡಿಯೋ video
English summary
Read in Kannada about punjab farmer used mitsubishi montero suv as a tractor.
Please Wait while comments are loading...

Latest Photos