ರಫೇಲ್ ನಿಂದ ಭಾರತೀಯ ವಾಯಪಡೆಯತ್ತ ಒಂದು ಹಾರಾಟ

By Nagaraja

ಫ್ರಾನ್ಸ್ ಅಧ್ಯಕ್ಷ ಫ್ರಾನ್ಸ್ ವಾ ಹೊಲ್ಯಾಂಡ್ ಜೊತೆ ಭಾರತ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಬಹು ಕೋಟಿಯ ಒಪ್ಪಂದದಂತೆ ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಚುರುಕು ಮುಟ್ಟಿಸಲಾಗಿತ್ತು. ಇಲ್ಲಿ ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಎದ್ದಿರುವ ವಿವಾದಕ್ಕಿಂತಲೂ ಮಿಗಿಲಾಗಿ ಭಾರತದ ಅವಶ್ಯಕತೆಯೂ ಆಗಿತ್ತು ಎಂಬುದು ಅಷ್ಟೇ ಮಹತ್ವ ಗಿಟ್ಟಿಸುತ್ತದೆ.

ಯುದ್ಧ ವಿಮಾನಗಳ ವಿಷಯಕ್ಕೆ ಬಂದಾಗ ಎಫ್-22 ರಾಪ್ಟಾರ್, ಯುರೋ ಫೈಟರ್ ತೈಫೂನ್, ಶೆಗ್ಯಾಂಗ್ ಜೆ-11 ಹಾಗೂ ಮಿಗ್-29 ಕೆಲವು ಹೆಸರಾಂತ ಫೈಟರ್ ಜೆಟ್ ಗಳಾಗಿವೆ. ಎಷ್ಟೇ ದೊಡ್ಡ ಶತ್ರು ರಾಷ್ಟ್ರವನ್ನು ಕ್ಷಣಾರ್ಧದಲ್ಲಿ ಹೊಡೆದುಳಿರುವ ಸಾಮರ್ಥ್ಯವನ್ನು ಇದು ಹೊಂದಿದೆ. ಇವೆಲ್ಲವೂ ದುಬಾರಿಯಾಗಿರುವುದರಿಂದ ಸೀಮಿತ ಸಂಖ್ಯೆಯಲ್ಲಷ್ಟೇ ನಿರ್ಮಾಣವಾಗುತ್ತದೆ. ಇತ್ತ ಭಾರತದತ್ತ ಕಣ್ಣಾಯಿಸಿದಾಗ 'ಸುಖೋಯ್ ಸು-30ಎಂಕೆಐ' ವಾಯು ದಾಳಿಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಇದನ್ನು ಪ್ರಮುಖವಾಗಿಯೂ ಭಾರತೀಯ ವಾಯುಸೇನೆಗಾಗಿ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ (ಎಚ್ ಎಎಲ್) ಪರವಾನಗಿಯಲ್ಲಿ ರಷ್ಯಾದ ಸುಖೋಯ್ ಡಿಸೈನ್ ಬ್ಯುರೋ ನಿರ್ಮಿಸಿತ್ತು. ಇದರಂತೆ 2014ರ ವೇಳೆಯಾಗುವಾಗ 200ರಷ್ಟು ಯುದ್ಧ ವಿಮಾನಗಳು ಬಂದು ಸೇರಿವೆ.

ಹಾಗಿದ್ದರೂ ಭಾರತವು ಇನ್ನು ಹೆಚ್ಚು ಶಕ್ತಿಶಾಲಿ ದಸ್ಸಾಲ್ಟ್ ಏವಿಯೇಷನ್ ನ ರಫೇಲ್ ಯುದ್ಧ ವಿಮಾನಗಳನ್ನು ಬಯಸಿದೆ. ಈ ಟ್ವಿನ್ ಎಂಜಿನ್ ವಿಮಾನವು ಏಕಕಾಲದಲ್ಲಿ ವಾಯುವಿನಿಂದ ನೆಲಕ್ಕೆ ಹಾಗೂ ವಾಯುವಿನಿಂದ ವಾಯುನಲ್ಲೇ (air to air) ನೇರ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ. ರಫೇಲ್ ಯುದ್ಧ ವಿಮಾನ ಖರೀದಿಯು ಭಾರತೀಯ ವಾಯು ಸೇನೆಯ ತುರ್ತು ಅಗತ್ಯಯೂ ಆಗಿತ್ತು. ಇದರೊಂದಿಗೆ ಅತ್ಯಾಧುನಿಕ ವಿಮಾನಗಳ ಕೊರತೆ ಶೀಘ್ರದಲ್ಲೇ ನೀಗಲಿದೆ.

ರಫೇಲ್ ಯುದ್ಧ ವಿಮಾನ

ರಫೇಲ್ ಯುದ್ಧ ವಿಮಾನ

ಪಾತ್ರ: ಬಹುಪಾತ್ರ ಸಾಮರ್ಥ್ಯದ ಯುದ್ಧ ವಿಮಾನ

ಉಗಮ: ಫ್ರಾನ್ಸ್

ತಯಾರಕರು: ದಸ್ಸಾಲ್ಟ್ ಎವಿಯೇಷನ್ (ಫ್ರಾನ್ಸ್ ದೇಶದ ಮಿಲಿಟರಿ ಅಗತ್ಯಗಳಿಗೆ ಯುದ್ಧ ವಿಮಾನಗಳನ್ನು ನಿರ್ಮಿಸಿ ಕೊಡುವ ಸಂಸ್ಥೆ)

ಮೊದಲ ಹಾರಾಟ: 4 ಜುಲೈ 1986

ಪರಿಚಯ: 18 ಮೇ 2001

ಸ್ಥಿತಿಗತಿ: ಸಕ್ರಿಯ

ಬಳಕೆದಾರರು: ಫ್ರಾನ್ಸ್ ವಾಯುಸೇನೆ, ಫ್ರಾನ್ಸ್ ನೌಕಾದಳ, ಈಜಿಪ್ಟ್ ವಾಯುಸೇನೆ

ಇದುವರೆಗೆ ನಿರ್ಮಾಣ: 133 ಯುನಿಟ್

ಇತರೆ ಯುದ್ಧ ವಿಮಾನಗಳಿಗಿಂತ ಹೇಗೆ ಭಿನ್ನ?

ಇತರೆ ಯುದ್ಧ ವಿಮಾನಗಳಿಗಿಂತ ಹೇಗೆ ಭಿನ್ನ?

ಬಹುಪಾತ್ರದ ಈ ಯುದ್ಧ ವಿಮಾನವು ಏಕಕಾಲದಲ್ಲಿ ವಾಯುವಿನಿಂದ ನೆಲಕ್ಕೆ ಹಾಗೂ ವಾಯುವಿನಿಂದ ವಾಯುನಲ್ಲೇ (air to air) ನೇರ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಪೈಲಟ್ ಗಳಿಗೆ ಆನ್ ರೋಡ್ ಸೆನ್ಸಾರ್ ಮಾಹಿತಿಯು ಲಭ್ಯವಾಗಲಿದೆ. ಅಷ್ಟೇ ಅಲ್ಲದೆ ಆ್ಯಂಟಿ ಶಿಪ್ ದಾಳಿ (ಹಡಗು), ಅಣ್ವಸ್ತ್ರ, ಬೇಹುಗಾರಿಕೆ ಹಾಗೂ ವಾಯುವಿನಲ್ಲಿ ರಕ್ಷಣಾ ವಲಯ ರೂಪಿಸುವುದು ಇದರ ಇತರ ವಿಶೇಷತೆಗಳಾಗಿವೆ. ರಫೇಲ್ ಯುದ್ಧ ವಿಮಾನದಲ್ಲಿ ಆಮ್ಲಜನಕ ಉತ್ಪಾದನಾ ವ್ಯವಸ್ಥೆಯು (OBOGS)ಇರುತ್ತದೆ.

ರಫೇಲ್

ಗರಿಷ್ಠ ವೇಗ: ಗಂಟೆಗೆ 1912 ಕೀ.ಮೀ.

ಭಾರ ತುಂಬಿದಾಗ: 14,016 ಕೆಜಿ.

ಸುಖೋಯ್ ಸು-20ಎಂಕೆಐ

ಗರಿಷ್ಠ ವೇಗ: ಗಂಟೆಗೆ 2100 ಕೀ.ಮೀ.

ಭಾರ ತುಂಬಿದಾಗ: 24,900 ಕೆಜಿ.

ವೆರಿಯಂಟ್

ವೆರಿಯಂಟ್

ಒಟ್ಟು ಮೂರು ವೆರಿಯಂಟ್ ಗಳಲ್ಲಿ ರಫೇಲ್ ಯುದ್ಧ ವಿಮಾನ ಲಭ್ಯವಿರುತ್ತದೆ. ರಫೇಲ್ ಸಿ ಸಿಂಗಲ್ ಸೀಟರ್, ರಫೇಲ್ ಎಂ ಸಿಂಗಲ್ ಸೀಟರ್ ಮತ್ತು ರಫೇಲ್ ಬಿ ಟು ಸೀಟರ್.

ರಫೇಲ್ ನಿಂದ ಭಾರತೀಯ ವಾಯಪಡೆಯತ್ತ ಒಂದು ಹಾರಾಟ

ಸುಖೋಯ್ ಸು-30ಎಂಕೆಐ ಫೈಟರ್ ಜೆಟ್ ನ ಸರಾಸರಿ ಅಂದಾಜು ಬೆಲೆ 56 ಮಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಅದೇ ಹೊತ್ತಿಗೆ ರಫೇಲ್ 75ರಿಂದ 106 ಮಿಲಿಯನ್ ಅಮೆರಿಕನ್ ಡಾಲರ್ ಗಳಷ್ಟು ಬೆಲೆ ಬಾಳಲಿದೆ. ಒಟ್ಟಾರೆ ಒಪ್ಪಂದವೂ 20 ಮಿಲಿಯನ್ ಅಮೆರಿಕನ್ ಡಾಲರ್ ಗಳಷ್ಟು ದುಬಾರಿಯೆನಿಸಲಿದೆ.

ಏನಿದು ವಿವಾದ ?

ಏನಿದು ವಿವಾದ ?

2012ರಲ್ಲಿ ಬಹುಪಾತ್ರ ಯುದ್ಧ ವಿಮಾನಗಳ ಒಪ್ಪಂದವನ್ನು (MMRCA) ಫ್ರಾನ್ಸ್ ಗೆದ್ದುಕೊಂಡಿತ್ತು. ಇದರಂತೆ ಮೊದಲ 18 ವಿಮಾನಗಳು ಫ್ರಾನ್ಸ್ ನಲ್ಲೂ ಹಾಗೂ ಆ ಬಳಿಕ ತಾಂತ್ರಿಕ ಹಸ್ತಾಂತರದ ಮೂಲಕ 108 ವಿಮಾನಗಳನ್ನು ಭಾರತದ ಎಚ್ ಎಎಲ್ ಘಟಕದಲ್ಲಿ ಜೋಡಣೆಯಾಗಬೇಕಿತ್ತು.

ಏನಿದು ವಿವಾದ ?

ಏನಿದು ವಿವಾದ ?

ಆದರೆ ಮೇಕ್ ಇನ್ ಇಂಡಿಯಾ ಯೋಜನೆಗೆ ಫ್ರಾನ್ಸ್ ಬೆಂಬಲವಿರಲಿಲ್ಲ. ಇದರಿಂದಾಗಿ ಭಾರತದಲ್ಲಿ ಸ್ಥಳೀಯವಾಗಿ ನಿರ್ಮಾಣದ ವಿಷಯ ಬಂದಾಗ ದಸ್ಸಾಲ್ಟ್ ಜವಾಬ್ದಾರಿಯನ್ನು ವಹಿಸಲು ಹಿಂಜರಿದಿತ್ತು.

ರಫೇಲ್ ಯುದ್ಧ ವಿಮಾನದ ಅಗತ್ಯ ಏಕೆ ಬಂತು?

ರಫೇಲ್ ಯುದ್ಧ ವಿಮಾನದ ಅಗತ್ಯ ಏಕೆ ಬಂತು?

ಮಿಗ್-21 ಹಾಗೂ ಮಿಗ್ 27 ಸೇರಿದಂತೆ ಬಹುತೇಕ ಯುದ್ಧ ವಿಮಾನಗಳು ಒಂದೆರಡು ವರ್ಷಗಳಲ್ಲಿ ಕಾಲ ಮೀರಿ ಹಳೆಯದಾಗಲಿದ್ದು, ವಾಯು ಶಕ್ತಿಯಲ್ಲಿ ಭಾರತ ಹಿಂದೆ ಬೀಳಲಿದೆ.

ರಫೇಲ್ ನಿಂದ ಭಾರತೀಯ ವಾಯಪಡೆಯತ್ತ ಒಂದು ಹಾರಾಟ

ಇದರಂತೆ ಎಚ್ಚರಿಕೆಯ ನಡೆ ಅನುಸರಿಸಿದ್ದ ಭಾರತೀಯ ವಾಯು ಸೇನೆಯು 200 ತೇಜಾಸ್ ಯುದ್ಧ ವಿಮಾನಗಳನ್ನು ಪೂರೈಸುವಂತೆಯ ಎಚ್‌ಎಎಲ್ ಗೆ ಆದೇಶ ನೀಡಿತ್ತು. ಆದರೆ ಬೆಂಗಳೂರು ಮೂಲದ ತೇಜಾಸ್ ಯುದ್ಧ ವಿಮಾನಗಳು 2017-18ರ ವೇಳೆಯಲ್ಲಷ್ಟೇ ಸೇವೆಗೆ ಲಭ್ಯವಾಗಲಿದೆ.

ರಫೇಲ್ ನಿಂದ ಭಾರತೀಯ ವಾಯಪಡೆಯತ್ತ ಒಂದು ಹಾರಾಟ

ಸುಖೋಯ್ ಹಾಗೂ ಎಚ್ ಎಎಲ್ ಜಂಟಿಯಾಗಿ ನಡೆಸುತ್ತಿರುವ ಐದನೇ ಜನಾಂಗದ ಯುದ್ಧ ವಿಮಾನಗಳ ಅಭಿವೃದ್ಧಿ ವಿಳಂಬವಾಗುತ್ತಿದೆ. ಇದರಲ್ಲಿ ಅತ್ಯಂತ ಆಧುನಿಕ ತಂತ್ರಗಾರಿಕೆ ಬಳಕೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ರಫೇಲ್ ನಿಂದ ಭಾರತೀಯ ವಾಯಪಡೆಯತ್ತ ಒಂದು ಹಾರಾಟ

ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತೀಯ ವಾಯುಸೇನೆಯ ಅಗತ್ಯಗಳನ್ನು ರಫೇಲ್ ಪೂರೈಸಲಿದೆ. ಇದರಂತೆ ಏಳು ವರ್ಷಗಳ ಅವಧಿಯಲ್ಲಿ 136 ರಫೇಲ್ ಯುದ್ಧ ವಿಮಾನಗಳನ್ನು ದಸ್ಸಾಲ್ಟ್ ಪೂರೈಸಲಿದೆ. ಇತ್ತೀಚೆಗಿನ ವರದಿಗಳ ಪ್ರಕಾರ ಭಾರತವು ಮೂರು ವರ್ಷಗಳ ಅವಧಿಯಲ್ಲಿ 36 ವಿಮಾನಗಳನ್ನು ತುರಂತ್ ಆಗಿ ಖರೀದಿಸಲಿದೆ.

ರಫೇಲ್ ನಿಂದ ಭಾರತೀಯ ವಾಯಪಡೆಯತ್ತ ಒಂದು ಹಾರಾಟ

ಗುರಿಗಳನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯವನ್ನು ರಫೇಲ್ ಹೊಂದಿದೆ. ಅಲ್ಲದೆ ಎಲೆಕ್ಟ್ರಾನಿಕ್ ಸ್ಕ್ಯಾನರ್ ರಾಡಾರ್ ಬಳಕೆಯಾಗುತ್ತಿರುವ ಏಕಮಾತ್ರ ಯುರೋಪ್ ಯುದ್ಧ ವಿಮಾನ ಇದಾಗಿದೆ.

ಅಮೆರಿಕ - ಲಾಕ್ ಹೀಟ್ ಮಾರ್ಟಿನ್ / ಬೋಯಿಂಗ್ ಎಫ್-22 ರಾಪ್ಟಾರ್

ಅಮೆರಿಕ - ಲಾಕ್ ಹೀಟ್ ಮಾರ್ಟಿನ್ / ಬೋಯಿಂಗ್ ಎಫ್-22 ರಾಪ್ಟಾರ್

ಅತ್ಯಂತ ಶಕ್ತಿಶಾಲಿ ಯುದ್ಧ ಸಾಮಾಗ್ರಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಬೋಯಿಂಗ್ ಎಫ್-22 ರಾಡಾರ್ ಹೊಂದಿದೆ. ಈ ದುಬಾರಿ ಯುದ್ಧ ವಿಮಾನಗಳನ್ನು ವಿದೇಶ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳದೆ ಅಮೆರಿಕ ತನ್ನ ಬಳಿಯೇ ಇಟ್ಟುಕೊಂಡಿರುವುದು ವಿಶೇಷ.

ಯುರೋಪ್ ಒಕ್ಕೂಟ - ಯುರೋಫೈಟರ್ ತೈಫೂನ್

ಯುರೋಪ್ ಒಕ್ಕೂಟ - ಯುರೋಫೈಟರ್ ತೈಫೂನ್

ಪ್ರತಿಯೊಂದು ರಾಷ್ಟ್ರಗಳು ತನ್ನ ನೆರೆಯ ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡು ಯುದ್ಧ ತಂತ್ರಗಾರಿಕೆಯನ್ನು ಹಂಚಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ 1986ರ ಯುರೋಫೈಟರ್ ನಿರ್ಮಾಣದಲ್ಲಿ ಜರ್ಮನಿ, ಇಟಲಿ, ಬ್ರಿಟನ್ ಹಾಗೂ ಸ್ಪೇನ್ ಬಹು ಪಾತ್ರದ ಯುದ್ಧ ವಿಮಾನ ನಿರ್ಮಿಸಿತ್ತು.

ರಷ್ಯಾ - ಸುಖೋಯ್-27

ರಷ್ಯಾ - ಸುಖೋಯ್-27

ಶೀತಕಾಲ ಸಮರದ ಸಂದರ್ಭದಲ್ಲಿ ಸೋವಿಯತ್ ಒಕ್ಕೂಟಕ್ಕಾಗಿ ನಿರ್ಮಾಣವಾಗಿದ್ದ ಸುಖೋಯ್-27 ಅತ್ಯಂತ ದೀರ್ಘ ದೂರ ಆಕ್ರಮಣ ಮಾಡಬಹುದಾದ ಯುದ್ಧ ವಿಮಾನವಾಗಿದೆ. ಇದರ ಮುಂದುವರಿದ ಶ್ರೇಣಿಗಳೇ ಸು-27, ಸು-30, ಸು-35 ಆಗಿವೆ.

ಸ್ವೀಡನ್ - ಸ್ಯಾಬ್ ಜೆಎಎಸ್ 39 ಗ್ರಿಪನ್

ಸ್ವೀಡನ್ - ಸ್ಯಾಬ್ ಜೆಎಎಸ್ 39 ಗ್ರಿಪನ್

ಯುದ್ದ ವಿಮಾನ ನಿರ್ಮಾಣದಲ್ಲಿ ಸ್ವೀಡನ್ ಕೂಡಾ ಹಿಂದೆ ಬಿದ್ದಿಲ್ಲ. ಇದು ನಾಲ್ಕನೇ ತಲೆಮಾರಿನೇ ಅತ್ಯಂತ ಶಕ್ತಿಶಾಲಿ ಹಗುರ ಭಾರದ ಬಹು ಪಾತ್ರಧಾರಿ ಯುದ್ಧ ವಿಮಾನವನ್ನು ಹೊಂದಿದೆ.

ಚೀನಾ - ಚೆಂಗ್ಡು ಜೆ-10

ಚೀನಾ - ಚೆಂಗ್ಡು ಜೆ-10

ಚೀನಾ ಅಭಿವೃದ್ಧಿಪಡಿಸಿರುವ ಬಹುಕ್ರಿಯಾತ್ಮಕ ಚೆಂಗ್ಡು ಜೆ-10, ಪಾಶ್ಚಿಮಾತ್ಯ ಯುದ್ಧ ವಿಮಾನಗಳಿಗೆ ಸಮಾನವಾದ ಸಾಮರ್ಥ್ಯವನ್ನು ಹೊಂದಿದೆ. ಇದು ವಾಯು ಮಂಡಲದಲ್ಲಿ ಚೀನಾ ಶಕ್ತಿಯನ್ನು ಮತ್ತಷ್ಟು ಪ್ರಬಲವಾಗಿಸಲು ನೆರವಾಗಿತ್ತು.

ಭಾರತೀಯ ವಾಯುಪಡೆ - ರೋಚಕ ಸತ್ಯಗಳು

ಇಡೀ ವಿಶ್ವದಲ್ಲೇ ನಾಲ್ಕನೇ ಅತಿದೊಡ್ಡ ಕಾರ್ಯಾಚರಣೆಯ ವಾಯುಪಡೆ ಎಂಬ ಗೌರವಕ್ಕೆ ಭಾರತ ಪಾತ್ರವಾಗಿದೆ.

ಭಾರತೀಯ ವಾಯುಪಡೆ - ರೋಚಕ ಸತ್ಯಗಳು

ಒಂದನೇ ಮಹಾಯುದ್ಧದ ಬಳಿಕ ಬ್ರಿಟಿಷ್ ಆಡಳಿತ ಕಾಲದಲ್ಲೇ 1932 ಅಕ್ಟೋಬರ್ 8 ಭಾರತೀಯ ವಾಯುಪಡೆ ಸ್ಥಾಪನೆಯಾಗಿತ್ತು. ಭಾರತೀಯ ವಾಯುಪ್ರದೇಶದ ರಕ್ಷಣೆ ಇದರ ಪ್ರಾಥಮಿಕ ಕರ್ತವ್ಯವಾಗಿದೆ.

ಭಾರತೀಯ ವಾಯುಪಡೆ - ರೋಚಕ ಸತ್ಯಗಳು

ಭಾರತೀಯ ವಾಯುಪಡೆಯು ಇದುವರೆಗೆ ನಾಲ್ಕು ಯುದ್ಧಗಳಲ್ಲಿ ಭಾಗಿಯಾಗಿದೆ. ಅಂತೆಯೇ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ 1940ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು.

ಭಾರತೀಯ ವಾಯುಪಡೆ - ರೋಚಕ ಸತ್ಯಗಳು

ವರ್ಷಂಪ್ರತಿ ಅಕ್ಟೋಬರ್ 8ರಂದು ಭಾರತೀಯ ವಾಯುಪಡೆ ದಿನಾಚರಣೆಯಾಗಿ ದೇಶದ್ಯಾಂತ ಆಚರಿಸಲಾಗುತ್ತಿದೆ.

ಭಾರತೀಯ ವಾಯುಪಡೆ - ರೋಚಕ ಸತ್ಯಗಳು

ಸರಂಗ್ ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್ ಪ್ರದರ್ಶನ ತಂಡವಾಗಿದೆ. 13 ಸದಸ್ಯರ ಈ ತಂಡವನ್ನು 2003ರಲ್ಲಿ ಆರಿಸಲಾಗಿತ್ತು.

ಭಾರತೀಯ ವಾಯುಪಡೆ - ರೋಚಕ ಸತ್ಯಗಳು

ಅದೇ ರೀತಿ ಸೂರ್ಯ ಕಿರಣ್ ಏರೋಬ್ಯಾಟಿಕ್ ಟೀಮ್ (ಎಸ್ ಕೆಎಟಿ), ಭಾರತೀಯ ವಾಯುಪಡೆಯ ಏರೋಬ್ಯಾಟಿಕ್ಸ್ ಪ್ರದರ್ಶನ ತಂಡವಾಗಿದೆ. ಇದನ್ನು 1996ರಲ್ಲಿ ರಚಿಸಲಾಗಿತ್ತು.

ಭಾರತೀಯ ವಾಯುಪಡೆ - ರೋಚಕ ಸತ್ಯಗಳು

ಫ್ಲೈಯಿಂಗ್ ಆಫೀಸರ್ ನಿರ್ಮಲ್ ಜಿಟ್ ಸಿಂಗ್ ಸೆಖೋನ್ ಅವರು ದೇಶದ ಸೇನಾ ಸೇವೆಗೆ ನೀಡುವ ಅತ್ಯುನ್ನತ ಪ್ರಶಸ್ತಿ ಪರಮ ವೀರ ಚಕ್ರ ಗೌರವಾನ್ವಿತ ಪದವಿಗೆ ಭಾಜನರಾದ ಭಾರತೀಯ ವಾಯುಪಡೆಯ ಏಕಮಾತ್ರ ಅಧಿಕಾರಿಯಾಗಿದ್ದಾರೆ.

ಭಾರತೀಯ ವಾಯುಪಡೆ - ರೋಚಕ ಸತ್ಯಗಳು

ಪದ್ಮಾವತಿ ಬಂಧೋಪಾದ್ಯಾಯ ಅವರು ಭಾರತೀಯ ವಾಯುಪಡೆಯ ಮೊದಲ ಮಹಿಳಾ ಏರ್ ಮಾರ್ಷಲ್ ಪದವಿ ಆಲಂಕರಿಸಿದ್ದರು.

ಭಾರತೀಯ ವಾಯುಪಡೆ - ರೋಚಕ ಸತ್ಯಗಳು

ಅದೇ ರೀತಿ ಏರ್ ಮಾರ್ಷಲ್ ಸರ್ ಥಾಮಸ್ ಎಲ್ಮಿರ್ಸ್ಟ್ (Elmhirst) ಅವರು ಮೊದಲ ಕಮಾಂಡರ್ ಇನ್ ಚೀಫ್ ಆಗಿದ್ದಾರೆ. ಅವರು 1947 ಅಗಸ್ಟ್ 15ರಿಂದ 1950 ಫೆಬ್ರವರಿ 21ರ ವರೆಗೆ ಸೇವೆ ಸಲ್ಲಿಸಿದ್ದರು.

ಭಾರತೀಯ ವಾಯುಪಡೆಯ ಜನಕ

ಭಾರತೀಯ ವಾಯುಪಡೆಯ ಜನಕ

ಇನ್ನು ಭಾರತೀಯ ವಾಯುಪಡೆಯ ಮೊದಲ 'ಚೀಫ್ ಆಫ್ ದಿ ಏರ್ ಸ್ಟಾಫ್' ಪದವಿಯನ್ನು ಏರ್ ಮಾರ್ಷಲ್ ಸುಬ್ರಟೊ ಮುಖರ್ಜಿ ಅವರು ಆಲಂಕರಿಸಿದ್ದರು. ಇವರನ್ನೇ 'ಭಾರತೀಯ ವಾಯುಪಡೆಯ ಜನಕ' ಎಂದು ಕರೆಯಲಾಗುತ್ತದೆ.

Most Read Articles

Kannada
English summary
So is the French multirole fighter the ultimate when it boils down to air supremacy, interdiction, aerial reconnaissance, and nuclear strike missions?
Story first published: Saturday, May 2, 2015, 17:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X