ಅದ್ಭುತ, ಅಮೋಘ; ಕಾಗದದ ಸೇತುವೆಯಲ್ಲಿ ರೇಂಜ್ ರೋವರ್ ಸವಾರಿ

By Nagaraja

ವಾಹನ ಜಗತ್ತಿನ ಇತಿಹಾಸದಲ್ಲೇ ನೂತನ ಅವಿಷ್ಕಾರವೆಂದೇ ಬಿಂಬಿಸಬೇಕಾಗಿರುವ ಬೆಳವಣಿಗೆಯಲ್ಲಿ ರೇಂಜ್ ರೋವರ್ ಕ್ರೀಡಾ ಬಳಕೆಯ ವಾಹನದ 45ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಬ್ರಿಟನ್‌ನ ಐಕಾನಿಕ್ ಲ್ಯಾಂಡ್ ರೋವರ್ ಕಾಗದದಿಂದ ನಿರ್ಮಿಸಲಾಗಿರುವ ಸೇತುವೆ ಮೇಲೆ ಈ ಐಕಾನಿಕ್ ಕಾರನ್ನು ಸಂಚರಿಸುವ ಮೂಲಕ ಹೊಸ ದಾಖಲೆ ಬರೆದಿದೆ.

Also Read: ಟಾಟಾದ ಹೊಸ ಉತ್ಪನ್ನ ಟಾಟಾ ಕೈಟ್

ವಿಶೇಷವಾಗಿ ಸಜ್ಜೀಕರಿಸಲಾದ ಕಾಗದದ ಸೇತುವೆಯಲ್ಲಿ ರೇಂಜ್ ರೋವರ್ ಈ ವಿಶಿಷ್ಟ ಸಾಧನೆಯನ್ನು ಮಾಡಿದೆ. ಈ ಅಮೋಘ, ಅದ್ಭುತ, ಅಚ್ಚರಿ ಹಾಗೂ ಅಶ್ವಸನೀಯ ದಾಖಲೆಯ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಲು ಹಾಗೂ ಆಕರ್ಷಕ ವಿಡಿಯೋ ವೀಕ್ಷಿಸಲು ಚಿತ್ರಪುಟದತ್ತ ಮುಂದುವರಿಯಿರಿ

ಅದ್ಭುತ, ಅಮೋಘ; ಕಾಗದದ ಸೇತುವೆಯಲ್ಲಿ ರೇಂಜ್ ರೋವರ್ ಸವಾರಿ

ಚೀನಾದ ಸುಜೊ (Suzhou) ದಲ್ಲಿ ಏರ್ಪಡಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ಈ ದಾಖಲೆ ಸ್ಥಾಪನೆಯಾಗಿದೆ. ಇದಕ್ಕಾಗಿ ಸಾಕಷ್ಟು ಪೂರ್ವ ತಯಾರಿಗಳನ್ನು ಮಾಡಲಾಗಿದೆ.

ಅದ್ಭುತ, ಅಮೋಘ; ಕಾಗದದ ಸೇತುವೆಯಲ್ಲಿ ರೇಂಜ್ ರೋವರ್ ಸವಾರಿ

ಸೇತುವೆ ಕಟ್ಟಲು 54,390 ಕಾಗದದ ತಂಡುಗಳನ್ನು ಬಳಕೆ ಮಾಡಲಾಗಿದೆ. ಕಾರ್ಯಕರ್ತರು ಇದನ್ನು ಕೈಯಿಂದಲೇ ನಿರ್ಮಿಸಿರುವುದು ಮಗದೊಂದು ವಿಶೇಷ.

ಅದ್ಭುತ, ಅಮೋಘ; ಕಾಗದದ ಸೇತುವೆಯಲ್ಲಿ ರೇಂಜ್ ರೋವರ್ ಸವಾರಿ

ಲ್ಯಾಂಡ್ ರೋವರ್‌ನ ಐಕಾನಿಕ್ ಮಾದರಿ ರೇಂಜ್ ರೋವರ್ 45ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ವಿಶಿಷ್ಟ ದಾಖಲೆ ಸ್ಥಾಪಿಸಲಾಗಿದೆ.

ಅದ್ಭುತ, ಅಮೋಘ; ಕಾಗದದ ಸೇತುವೆಯಲ್ಲಿ ರೇಂಜ್ ರೋವರ್ ಸವಾರಿ

ಇದು ರೇಂಜ್ ರೋವರ್‌ನ ಆರು ದಶಲಕ್ಷದ ವಾಹನವಾಗಿದ್ದು, "ವೆಹಿಕಲ್ ಆಫ್ ಈಸ್ಟ್" ಎಂಬ ಅಕ್ಕರೆಯ ಹೆಸರನ್ನು ಪಡೆದುಕೊಂಡಿದೆ.

ಅದ್ಭುತ, ಅಮೋಘ; ಕಾಗದದ ಸೇತುವೆಯಲ್ಲಿ ರೇಂಜ್ ರೋವರ್ ಸವಾರಿ

2,374 ಕೆ.ಜಿ ತೂಕದ ರೇಂಜ್ ರೋವರ್ ಐದು ಮೀಟರ್ ಗಳಷ್ಟು ದೂರ ಹರಡಿರುವ ಕಾಗದದ ಸೇತುವೆಯನ್ನು ಯಶಸ್ವಿಯಾಗಿ ದಾಟಿ ಬಂದಿದೆ.

ಅದ್ಭುತ, ಅಮೋಘ; ಕಾಗದದ ಸೇತುವೆಯಲ್ಲಿ ರೇಂಜ್ ರೋವರ್ ಸವಾರಿ

ಮೂರು ದಿನಗಳ ನಿರಂತರ ಪ್ರಯತ್ನದ ಬಳಿಕ ಕಾಗದದ ಸೇತುವೆ ನಿರ್ಮಿಸಲಾಗಿದೆ. ಅಲ್ಲದೆ ವಿಶಿಷ್ಟ ವರ್ಣಾಲಂಕಾರವನ್ನು ಮಾಡಲಾಗಿತ್ತು.

ಅದ್ಭುತ, ಅಮೋಘ; ಕಾಗದದ ಸೇತುವೆಯಲ್ಲಿ ರೇಂಜ್ ರೋವರ್ ಸವಾರಿ

ಪರಿಸರ ಕಲಾವಿದ ಸ್ಟೀವ್ ಮೆಸ್ಸಮ್ ಎಂಬವರು ತಮ್ಮ ತಂಡದ ಸಹಾಯದಿಂದ ಕಾಗದದ ಸೇತುವೆಯನ್ನು ನಿರ್ಮಿಸಿದ್ದಾರೆ.

ಅದ್ಭುತ, ಅಮೋಘ; ಕಾಗದದ ಸೇತುವೆಯಲ್ಲಿ ರೇಂಜ್ ರೋವರ್ ಸವಾರಿ

ಆರಂಭದಲ್ಲಿ ಮರದ ಆಧಾರಸ್ತಂಭದ ನೆರವಿನೊಂದಿಗೆ ಮೇಲ್ಪಾಗದಲ್ಲಿ ಪೇಪರ್ ಬ್ರಿಡ್ಜ್ ನಿರ್ಮಿಸಲಾಗಿತ್ತು. ಬಳಿಕ ಕೆಳಗಡೆಯಿಂದ ಮರದ ಆಧಾರಸ್ತಂಭವನ್ನು ಹೊರತೆಗೆಯಲಾಗಿತ್ತು.

ಅದ್ಭುತ, ಅಮೋಘ; ಕಾಗದದ ಸೇತುವೆಯಲ್ಲಿ ರೇಂಜ್ ರೋವರ್ ಸವಾರಿ

ಲ್ಯಾಂಡ್ ರೋವರ್ ಎಕ್ಸ್‌ಪೀರಿಯನ್ಸ್ ಮುಖ್ಯ ಭೋಧಕ ಕ್ರಿಸ್ ಝೋ (Chris Zhou) ಬಹಳ ಜಾಗರೂಕತೆಯಿಂದ ಎಲ್ಲ ಅಲ್ಯೂಮಿನಿಯಂನಿಂದ ಕೂಡಿದ ರೇಂಜ್ ರೋವರ್ ಕ್ರೀಡಾ ಬಳಕೆಯ ಕಾರನ್ನು ಚಾಲನೆ ಮಾಡಿದ್ದರು.

ಅದ್ಭುತ, ಅಮೋಘ; ಕಾಗದದ ಸೇತುವೆಯಲ್ಲಿ ರೇಂಜ್ ರೋವರ್ ಸವಾರಿ

34.7 ಡಿಗ್ರಿ ಕೋನದಲ್ಲಿ ಸೇತುವೆಯನ್ನು ಸಮೀಪಿಸಿದ್ದ (approach angle) ರೇಂಜ್ ರೋವರ್ 29.6 ಡಿಗ್ರಿ ಕೋನದಲ್ಲಿ (departure angle) ನಿರ್ಗಮಿಸಿತ್ತು.

ರೋಚಕ ವಿಡಿಯೋ ವೀಕ್ಷಿಸಿ

Most Read Articles

Kannada
English summary
Range Rover Drives Over A Paper Bridge In China — A World-First!
Story first published: Friday, November 20, 2015, 10:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X