ಇತಿಹಾಸ ಪ್ರಸಿದ್ಧ ಧನುಷ್ಕೋಡಿಗೆ ರಸ್ತೆ ಸಂಪರ್ಕ

By Nagaraja

ಭಾರತದ ದಕ್ಷಿಣ-ಪೂರ್ವ ದಿಕ್ಕಿನಲ್ಲಿ ಸ್ಥಿತಗೊಂಡಿರುವ ಹಿಂದೂಗಳ ಪುಣ್ಯ ಸ್ಥಳ ಧುನಷ್ಕೋಡಿ. ಇಲ್ಲಿ ಕೋಡು ಎಂದರೆ ಧನುಷ್ಯದ ತುದಿ ಎಂಬುದಾಗಿದೆ. ಪುರಾಣದ ಪ್ರಕಾರ 17 ಸಾವಿಲ ವರ್ಷಗಳ ಹಿಂದೆ ಸೀತಾಪರಣದ ಬಳಿಕ ರಾವಣನ ಲಂಕಾಗೆ (ಈಗಿನ ಶ್ರೀಲಂಕಾ) ದಾಳಿ ಮಾಡಲು ಶ್ರೀರಾಮ ಇಲ್ಲಿಂದಲೇ ಇತಿಹಾಸ ಪ್ರಸಿದ್ಧ 'ರಾಮ ಸೇತು' ಸ್ಥಾನವನ್ನು ಆಯ್ದುಕೊಂಡಿದ್ದರು. ಶ್ರೀರಾಮ-ರಾವಣ ಮಹಾಯುದ್ಧದ ಮೊದಲು ಇಲ್ಲಿಯೇ ರಾವಣನ ತಮ್ಮನಾದ ವಿಭೀಷಣನು ಶ್ರೀರಾಮನಿಗೆ ಶರಣಾಗಿದ್ದರು.

ಜೀವಮಾನದಲ್ಲಿ ಸಂಚರಿಸಲೇಬೇಕಾದ ಭಾರತದ 11 ಅದ್ಭುತ ರಸ್ತೆಗಳು

1964ನೇ ಇಸವಿಯಲ್ಲಿ ಸಂಭವಿಸಿದ ಭೀಕರ ಚಂಡಮಾರುತಕ್ಕೆ ನಗರ ಸಂಪೂರ್ಣ ಧ್ವಂಸವಾಗಿತ್ತು. ಬಳಿಕ ಪುನರುಜ್ಜೀವನದ ಪ್ರಯತ್ನ ನಡೆಯದ ಹಿನ್ನೆಲೆಯಲ್ಲಿ 'ಘೋಸ್ಟ್ ಟೌನ್' ಎಂದೇ ಅಪಖ್ಯಾತಿಗೆ ಪ್ರಾಪ್ತವಾಗಿತ್ತು. ಧನುಷ್ಕೋಡಿಯ ದಕ್ಷಿಣಕ್ಕಿರುವ ಹಿಂದೂ ಮಹಾಸಾಗರವು ನೀಲಿ ಬಣ್ಣವಾಗಿದ್ದು, ಉತ್ತರದಲ್ಲಿರುವ ಬಂಗಾಳ ಕೊಲ್ಲಿ ಕಪ್ಪು ಬಣ್ಣದ್ದಾಗಿದೆ. ಹೀಗೆ ಇತಿಹಾಸ ಪ್ರಸಿದ್ಧ ಐತಿಹಾಸಿಕ ಧನುಷ್ಕೋಡಿ ನಗರವನ್ನು ವ್ಯಾಪಾರಿ ಉದ್ದೇಶದಿಂದ ಹಿಂದಿನ ಕೇಂದ್ರ ಸರಕಾರವು 'ಸೇತು ಸಮುದ್ರಂ ಶಿಪ್ಪಿಂಗ್ ಕೆನಾಲ್' ಮೂಲಕ ಧ್ವಂಸ ಮಾಡಲು ಪ್ರಯತ್ನ ನಡೆಸಿತ್ತು. ಆದರೆ ಹಿಂದೂ ಧಾರ್ಮಿಕ ಶ್ರದ್ಧೆಯ ಮೇಲೆ ಇದು ಭಾರಿ ಪ್ರಹಾರವನ್ನೇ ನಡೆಸಿದ್ದರಿಂದ ದೇಶದ ಸರ್ವೋಚ್ಛ ನ್ಯಾಯಾಲಯವು ಯೋಜನೆಯನ್ನು ಸ್ಥಗಿತಗೊಳಿಸಿತ್ತು.

ಇತಿಹಾಸ ಪ್ರಸಿದ್ಧ ಧನುಷ್ಕೋಡಿಗೆ ರಸ್ತೆ ಸಂಪರ್ಕ

ರಾಮಸೇತುವಿನ ಭಗ್ನಾವೇಷದ ರೂಪವಾದ ಬೃಹತ್ತಕಾರದ ಬಂಡೆಕಲ್ಲುಗಳು ಇಲ್ಲಿನ ದ್ವೀಪದಲ್ಲಿ ಈಗಲೂ ಕಾಣಸಿಗುತ್ತಿದ್ದು, ಪ್ರಮುಖ ಪ್ರವಾಸಿ ಆಕರ್ಷಣ ತಾಣವಾಗಿ ಮಾರ್ಪಾಟ್ಟಿದೆ. ಶ್ರೀಲಂಕಾದಿಂದ ಸರಿ ಸುಮಾರು 30 ಕೀ.ಮೀ.ಗಳಷ್ಟೇ ದೂರವಿರುವ ಧುನುಷ್ಕೋಡಿಯನ್ನು ತಲುಪಲು ಮಗದೊಂದು ಐತಿಹಾಸಿಕ ಪಂಬನ್ ಸೇತುವೆಯನ್ನು ದಾಟಬೇಕಾಗಿದೆ.

ಇತಿಹಾಸ ಪ್ರಸಿದ್ಧ ಧನುಷ್ಕೋಡಿಗೆ ರಸ್ತೆ ಸಂಪರ್ಕ

ಪ್ರಸ್ತುತ 50 ಕೋಟಿ ರು.ಗಳ ಬೃಹತ್ ಯೋಜನೆಯನ್ನು ಘೋಷಿಸಿರುವ ತಮಿಳುನಾಡು ಸರಕಾರವು, ಧನುಷ್ಕೋಡಿಯನ್ನು ಪ್ರಮುಖ ಪ್ರವಾಸಿ ತಾಣವಾಗಿ ಮಾರ್ಪಾಡುಗೊಳಿಸುವ ಯೋಜನೆಯಲ್ಲಿದೆ. ಇದರಂಗವಾಗಿ ವರ್ಷಾಂತ್ಯದೊಳಗೆ ಅತ್ಯುತ್ತಮ ಗುಣಮಟ್ಟದ ರಸ್ತೆಯನ್ನು ನಿರ್ಮಿಸಲಾಗುವುದು.

ಇತಿಹಾಸ ಪ್ರಸಿದ್ಧ ಧನುಷ್ಕೋಡಿಗೆ ರಸ್ತೆ ಸಂಪರ್ಕ

1964ರ ಚಂಡಮಾರುತಕ್ಕೆ ಸಂಪೂರ್ಣ ಛಿದ್ರಗೊಂಡಿರುವ ಮುಕುಂದರಾಯರ್ ಚಟ್ಟಿರಂನಿಂದ ಧುನಷ್ಕೋಡಿ ವರೆಗಿನ ರಸ್ತೆಯನ್ನು ಮರು ನಿರ್ಮಿಸಲಾಗುವುದು. ಇದು 'ಆದಿ ಸೇತು' (ಹಳೆಯ ರಾಮ ಸೇತು) ಎಂದು ಗುರುತಿಸಿಕೊಳ್ಳಲಿದೆ.

ಇತಿಹಾಸ ಪ್ರಸಿದ್ಧ ಧನುಷ್ಕೋಡಿಗೆ ರಸ್ತೆ ಸಂಪರ್ಕ

ರಾಮಸೇತು ಉಗಮ ಸ್ಥಾನವಾಗಿವಾಗಿರುವ ಧನುಷ್ಕೋಡಿಯ ರಾಮಂತಸ್ವಾಮಿ ಪುಣ್ಯ ತೀರ್ಥ ಕ್ಷೇತ್ರವೂ ವರ್ಷದಲ್ಲಿ ಲಕ್ಷಗಿಂತಲೂ ಹೆಚ್ಚು ಹಿಂದೂ ಭಕ್ತಾದಿಗಳನ್ನು ಆಕರ್ಷಿಸಲಿದೆ. 1975ರಲ್ಲಿ ರಸ್ತೆ ಪುನರ್ ನಿರ್ಮಿಸಿದರೂ ಹೆಚ್ಚು ಕಾಲ ಬಾಳ್ವಿಕೆ ಬಂದಿರಲಿಲ್ಲ.

ಇತಿಹಾಸ ಪ್ರಸಿದ್ಧ ಧನುಷ್ಕೋಡಿಗೆ ರಸ್ತೆ ಸಂಪರ್ಕ

1914ರಲ್ಲಿ ಬ್ರಿಟಿಷ್ ಆಳ್ವಿಕೆಯ ಕಾಲಘಟ್ಟದಲ್ಲಿ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದ ಧನುಷ್ಕೋಡಿಯಿಂದ ತಲೈಮನ್ನಾರ್ ಗೆ ಸರಕುಗಳನ್ನು ಸಾಗಿಸಲಾಗಿತ್ತು. ಆದರೆ 1975ರ ಚಂಡಮಾರುತವು ಸಂಪೂರ್ಣ ರಸ್ತೆ ಸೇರಿದಂತೆ ರೈಲ್ವೆ ಸಂಪರ್ಕವನ್ನು ಕಡಿದುಕೊಂಡಿತ್ತು.

ಪಂಬನ್ ಸೇತುವೆ

ಪಂಬನ್ ಸೇತುವೆ

ಪಂಬನ್ ಸೇತುವೆ ಪಾಲ್ಕ್ ಜಲಸಂಧಿ ಮೇಲೆ ನಿರ್ಮಿಸಲ್ಪಟ್ಟಿರುವ ಕ್ಯಾಂಟಿಲಿವರ್ ಬ್ರಿಡ್ಜ್ ರಾಮೇಶ್ವರಂ ಹಾಗೂ ಪಂಬನ್ ದ್ವೀಪದ ನಡುವೆ ಸಂಪರ್ಕ ಸಾಧಿಸುತ್ತದೆ. ಎರಡು ಬದಿಗಳಿಂದಲೂ ನೀಲಿ ಬಣ್ಣದಿದ ಜಲಾವೃತವಾಗಿರುವ ವಿಶಾಲವಾದ ಸಾಗರವು ದ್ವಿಚಕ್ರ ಸವಾರರಿಗೆ ಅದ್ಭುತ ಚಾಲನಾ ಅನುಭವ ನೀಡುತ್ತದೆ. 1914ನೇ ಇಸವಿಯಲ್ಲಿ ನಿರ್ಮಾಣವಾಗಿರುವ ಪಂಬನ್ ಸೇತುವೆ ದೇಶದ ಅತಿ ಪುರಾತನ ಹಾಗೂ ಪ್ರಪ್ರಥಮ ಸಾಗರ ಸೇತುವೆಯಾಗಿದೆ.

ಇತಿಹಾಸ ಪ್ರಸಿದ್ಧ ಧನುಷ್ಕೋಡಿಗೆ ರಸ್ತೆ ಸಂಪರ್ಕ

ಇಲ್ಲಿ ನಮ್ಮ ಪ್ರಧಾನ ಸಂಪಾದಕರು ಜೊಬೊ ಕುರುವಿಲ್ಲಾ ಅವರು ತಮ್ಮ ಕೆಟಿಎಂ 490 ಬೈಕ್ ನಲ್ಲಿ ಧನುಷ್ಕೋಡಿಗೆ ಪಯಣ ಹಮ್ಮಿಕೊಂಡಿರುವ ಚಿತ್ರವನ್ನು ನಿಮ್ಮ ಜೊತೆ ಹಂಚಿಕೊಳ್ಳಲಾಗಿದೆ.

ಕಣ್ಣಿಗೆ ಮುದ ನೀಡುವ ಜಗತ್ತಿನ 25 ಮನೋಹರ ರೈಲು ಮಾರ್ಗಗಳು

ಕಣ್ಣಿಗೆ ಹಬ್ಬ: ಜಗುತ್ತಿನ 25 ಮನೋಹರ ರೈಲು ಮಾರ್ಗಗಳು

ನಮ್ಮ ಫೇಸ್ ಬುಕ್ ಪುಟಕ್ಕೊಂದು ಲೈಕ್ ಒತ್ತಿರಿ

Most Read Articles

Kannada
English summary
Road to Dhanushkodi to be completed before year-end
Story first published: Tuesday, July 7, 2015, 12:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X