ಮಾಲ್ ಒಳಗೆ ಕಾರು ನುಗ್ಗಿಸಿ ಮೇಯರ್ ಹುಚ್ಚಾಟ- ವೀಡಿಯೋ ವೈರಲ್

Written By:

ಅದು ರಷ್ಯಾ ರಾಜಧಾನಿ ಮಾಸ್ಕೋ ನಗರದಲ್ಲಿರುವ ಅತಿದೊಡ್ಡ ಶಾಪಿಂಗ್ ಮಾಲ್. ಆದ್ರೆ ನಿನ್ನೆ ತಡರಾತ್ರಿವರೆಗೂ ಬಾಗಿಲು ತೆರೆದಿದ್ದ ಆ ಶಾಪಿಂಗ್ ಮಾಲ್ ಮಾಲೀಕರಿಗೆ ಶಾಕ್ ಕಾದಿತ್ತು. ಏಕಾಎಕಿ ಸೂಪರ್ ಕಾರುವೊಂದು ಮಾಲ್ ಒಳಗೆ ನುಗ್ಗಿ ಆತಂಕ ಸೃಷ್ಠಿಸಿತ್ತು.

ಶಾಪಿಂಗ್ ಮಾಲ್ ಬಾಗಿಲು ಬಳಿ ನಿಂತಿದ್ದ ಭದ್ರತಾ ಸಿಬ್ಬಂದಿಯನ್ನು ಲೆಕ್ಕಸದ ಆತ, ಮಾಲ್ ಒಳಗಿನ ಕಾರಿಡಾರ್‌ನಲ್ಲಿ ಅತಿವೇಗವಾಗಿ ಕಾರು ಓಡಿಸಿದ್ದಾನೆ. ಇದಷ್ಟೇ ಅಲ್ಲದೇ ತಡೆಯಲು ಬಂದ ಭದ್ರತಾ ಸಿಬ್ಬಂದಿ ಮೇಲೆಯೇ ಕಾರು ಹರಿಸಲು ಯತ್ನಿಸಿದ್ದಾನೆ.

ಕೇವಲ ಎರಡೇ ಎರಡು ನಿಮಿಷದಲ್ಲಿ ಇಷ್ಟೆಲ್ಲಾ ಘಟನೆ ನಡೆದಿದ್ದು, ಘಟನೆ ಕಾರಣವಾದ ವ್ಯಕ್ತಿ ಕೂಡಾ ಇದೀಗ ಪತ್ತೆಯಾಗಿದ್ದಾನೆ. ಕಾರು ನುಗ್ಗಿಸಿ ಹುಚ್ಚಾಟ ಮೇರೆದವನನ್ನು ಅಲೆಕ್ಸಾಂಡರ್ ಡಾನ್ಸ್ಕಾಯ್‌ ಎಂದು ಗುರುತಿಸಲಾಗಿದೆ.

ಇನ್ನು ಕಾರು ನುಗ್ಗಿಸಿ ಹುಚ್ಚಾಟ ಮೇರೆದ ಅಲೆಕ್ಸಾಂಡರ್ ಡಾನ್ಸ್ಕಾಯ್, ಮಾಸ್ಕೋ ನಗರದ ಮೇಯರ್ ಅಂತೆ. ಹೀಗಾಗಿ ಯಾವುದೇ ಕ್ರಮಕೈಗೊಳ್ಳದ ಪೊಲೀಸರು, ಇದೊಂದು ಆಕಸ್ಮಿಕ ಘಟನೆ ಎನ್ನುತ್ತಿದ್ದಾರೆ.

ಆದ್ರೆ ಕೆಲವು ವರದಿ ಪ್ರಕಾರ, ಅಲೆಕ್ಸಾಂಡರ್ ಡಾನ್ಸ್ಕಾಯ್ ಕೆಲ ದಿನಗಳ ಹಿಂದಷ್ಟೇ ದುಬಾರಿ ಬೆಲೆಯ ಫೆರಾರಿ ಕಾರು ಖರೀದಿ ಮಾಡಿದ್ದನಂತೆ. ಹೀಗಾಗಿ ದಿನಂಪ್ರತಿ ಒಂದಲ್ಲ ರಂಪಾಟ ಮಾಡುವ ಈತ, ನಿನ್ನೇ ರಾತ್ರಿ ಕುಡಿದ ಮತ್ತಿನಲ್ಲಿ ಮಾಲ್ ಒಳಗೆ ಹೊಸ ಕಾರು ನುಗ್ಗಿಸಿ ಎಲ್ಲರ ಆತಂಕಕ್ಕೆ ಕಾರಣವಾಗಿದ್ದಾನೆ.

ಇಷ್ಟೆಲ್ಲಾ ನಡೆದ್ರು ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಅಲ್ಲದೇ ನೇರವಾಗಿ ಒಳನುಗ್ಗಿ ಕಾರು ಸುತ್ತುವರಿಸಿದ ಅಲೆಕ್ಸಾಂಡರ್ ಡಾನ್ಸ್ಕಾಯ್‌, ಬಂದ ಹಾದಿಯಲ್ಲೇ ವಾಪಸ್ ಹೋಗಿದ್ದಾನೆ.

ಘಟನೆ ಕುರಿತು ರಷ್ಯಾದ ಕೆಲ ಮಾಧ್ಯಮಗಳಲ್ಲಿ ತಹರೇವಾರಿ ಸುದ್ಧಿಗಳು ಬಿತ್ತರವಾಗುತ್ತಿವೆ. ಕೆಲವರು ಈ ಘಟನೆಯನ್ನು ವಿರೋಧಿಸಿದ್ರೆ ಇನ್ನು ಕೆಲ ಮಾಧ್ಯಮಗಳು ಇದನ್ನು ನಗೆಹಬ್ಬದ ರೀತಿಯಲ್ಲಿ ವರದಿ ಪ್ರಸಾರ ಮಾಡುತ್ತಿವೆ.

ಮಾಸ್ಕೋ ಮೇಯರ್ ಮಾಡಿದ ರಂಪಾಟ ಮಾಲ್‌ನಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೀಡಿಯೋ ಇದೀಗ ವೈರಲ್ ಆಗಿದೆ.

ಇನ್ನು ಈ ಘಟನೆಯು ಆಕಸ್ಮಿಕವೋ ಅಥವಾ ಬೇಕೇಂದೆ ಮಾಡಿದ್ದಾರೋ ಗೊತ್ತಿಲ್ಲಾ. ಆದ್ರೆ ಮೇಯರ್ ಮಾಡಿದ ಹುಚ್ಚಾಟಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದ ಮಾಲ್ ಸಿಬ್ಬಂದಿ ಮಾತ್ರ ಪರದಾಡಿದ್ದು ಸುಳ್ಳಲ್ಲ.

Story first published: Thursday, April 13, 2017, 18:58 [IST]
English summary
A former Russian mayor seems to wreck havoc at a Moscow mall in a Ferrari California captured via security cameras.
Please Wait while comments are loading...

Latest Photos