ಪುತಿನ್ ಚುರುಕುಬುದ್ಧಿ; ಸೂಪರ್ ಪವರ್ ರಷ್ಯಾದಿಂದ ರೋಬೋಟ್ ಜಲಾಂತರ್ಗಾಮಿ ಯುದ್ಧ ನೌಕೆ

ಸೂಪರ್ ಪವರ್ ರಷ್ಯಾ ದೇಶವು ವ್ಲಾದಿಮರ್ ಪುತಿನ್ ನೇತೃತ್ವದಲ್ಲಿ ಮಗದೊಂದು ರೋಬೋಟ್ ಜಲಾಂತರ್ಗಾಮಿ ಯುದ್ಧ ನೌಕೆಯನ್ನು ಅಭಿವೃದ್ಧಿಪಡಿಸಿದೆ.

By Nagaraja

ರಕ್ಷಣಾ ವಿಭಾಗದಲ್ಲಿ ನಿರಂತರ ಅಧ್ಯಯನ ಹಾಗೂ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ರಷ್ಯಾ ಮಗದೊಂದು ರೋಬೋಟ್ ಜಲಾಂತರ್ಗಾಮಿ ಯುದ್ಧ ನೌಕೆಯೊಂದನ್ನು ಅಭಿವೃದ್ಧಿಪಡಿಸುತ್ತಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಸಾರಥ್ಯದಲ್ಲಿ ರಷ್ಯಾ ಸೂಪರ್ ಪವರ್ ಶಕ್ತಿಯಾಗಿ ಹೊರಹೊಮ್ಮಲಿದೆ.

ಪುತಿನ್ ಚುರುಕುಬುದ್ಧಿ; ಸೂಪರ್ ಪವರ್ ರಷ್ಯಾದಿಂದ ರೋಬೋಟ್ ಜಲಾಂತರ್ಗಾಮಿ ಯುದ್ಧ ನೌಕೆ

ನೂತನ ರೋಬೋಟ್ ಜಲಾಂತರ್ಗಾಮಿ ಯುದ್ಧ ನೌಕೆಯು ಸಮುದ್ರ ಮಟ್ಟದಿಂದ 1800 ಅಡಿ ಆಳದಲ್ಲಿ 965 ಕೀ.ಮೀ. (600 ಮೈಲು) ದೂರದ ವರೆಗೂ ಬೇಹುಗಾರಿಕಾ ಕಾರ್ಯಾಚರಣೆ ನಡೆಸುವಷ್ಟು ಸಮರ್ಥವಾಗಿದೆ.

ಪುತಿನ್ ಚುರುಕುಬುದ್ಧಿ; ಸೂಪರ್ ಪವರ್ ರಷ್ಯಾದಿಂದ ರೋಬೋಟ್ ಜಲಾಂತರ್ಗಾಮಿ ಯುದ್ಧ ನೌಕೆ

ಇದು ಪುತಿನ್ ಅವರ ಚುರುಕುಬುದ್ಧಿಯ ಭಾಗವಾಗಿದ್ದು, ಕಳೆದ ವರ್ಷವಷ್ಟೇ ಕಪ್ಪು ಕಡಲಿನಲ್ಲಿ ಜಲಾಂತರ್ಗಾಮಿ ನೌಕೆಯಲ್ಲಿ ಕೆಚ್ಚೆದೆಯೊಂದಿಗೆ ಸಂಚರಿಸಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದು.

ಪುತಿನ್ ಚುರುಕುಬುದ್ಧಿ; ಸೂಪರ್ ಪವರ್ ರಷ್ಯಾದಿಂದ ರೋಬೋಟ್ ಜಲಾಂತರ್ಗಾಮಿ ಯುದ್ಧ ನೌಕೆ

ಈ ಬಲಿಷ್ಠ ಜಲಾಂತರ್ಗಾಮಿ ಯುದ್ಧ ನೌಕೆಗೆ 'ಸುರೋಗ್ಯಾಟ್' ಎಂದು ಹೆಸರಿಸಲಾಗಿದೆ. ಅಲ್ಲದೆ ರಷ್ಯಾ ಮಿಲಿಟರಿ ವಿನ್ಯಾಸಗಾರರ ಪ್ರಕಾರ ಗಂಟೆಗೆ 24 ನಾಟ್ ವೇಗದಲ್ಲಿ ಸಂಚರಿಸಲಿದೆ.

ಪುತಿನ್ ಚುರುಕುಬುದ್ಧಿ; ಸೂಪರ್ ಪವರ್ ರಷ್ಯಾದಿಂದ ರೋಬೋಟ್ ಜಲಾಂತರ್ಗಾಮಿ ಯುದ್ಧ ನೌಕೆ

ಲಿಥಿಯಂ ಇಯಾನ್ ಬ್ಯಾಟರಿಯಿಂದ ನಿಯಂತ್ರಿತ ಈ ಯಂತ್ರವು, ಸಾಂಪ್ರದಾಯಿಕ ಮತ್ತು ನ್ಯೂಕ್ಲಿಯರ್ ಆಧಾರಿತ ಜಲಾಂತರ್ಗಾಮಿ ನೌಕೆಗಳನ್ನು ಅನುಕರಿಸಬಲ್ಲದು.

ಪುತಿನ್ ಚುರುಕುಬುದ್ಧಿ; ಸೂಪರ್ ಪವರ್ ರಷ್ಯಾದಿಂದ ರೋಬೋಟ್ ಜಲಾಂತರ್ಗಾಮಿ ಯುದ್ಧ ನೌಕೆ

ಇದರಲ್ಲಿರುವ ಮೊಡ್ಯುಯಲ್ ವಿನ್ಯಾಸವು ತನ್ನ ಕ್ರಿಯಾತ್ಮಕತೆಯನ್ನು ಬದಲಾಯಿಸುವಂತೆ ನೆರವಾಗಲಿದೆ.

ಪುತಿನ್ ಚುರುಕುಬುದ್ಧಿ; ಸೂಪರ್ ಪವರ್ ರಷ್ಯಾದಿಂದ ರೋಬೋಟ್ ಜಲಾಂತರ್ಗಾಮಿ ಯುದ್ಧ ನೌಕೆ

ಯುರೋಪ್ ಗಡಿ ಪ್ರದೇಶದಲ್ಲಿ ಆತಂಕದ ಪರಿಸ್ಥಿತಿ ಮಡುಗಟ್ಟಿರುವ ಹಿನ್ನಲೆಯಲ್ಲಿ ಪುತಿನ್ ವಿಶೇಷ ಆಸಕ್ತಿಯೊಂದಿಗೆ ಜಲಾಂತರ್ಗಾಮಿ ನೌಕೆ ಅಭಿವೃದ್ಧಿಪಡಿಸಲಾಗಿದೆ ಎನ್ನಲಾಗಿದೆ.

ಪುತಿನ್ ಚುರುಕುಬುದ್ಧಿ; ಸೂಪರ್ ಪವರ್ ರಷ್ಯಾದಿಂದ ರೋಬೋಟ್ ಜಲಾಂತರ್ಗಾಮಿ ಯುದ್ಧ ನೌಕೆ

ರಷ್ಯಾ ನಾವಿಕ ಪಡೆಯ ತರಬೇತಿಯ ಜೊತೆಗೆ ಮ್ಯಾಪಿಂಗ್ ಮತ್ತು ಸ್ಥಳಾನ್ವೇಷಣೆ ಮಿಷನ್ ಗಳಿಗಾಗಿಯೂ ಬಳಕೆ ಮಾಡಲಿದೆ.

ಪುತಿನ್ ಚುರುಕುಬುದ್ಧಿ; ಸೂಪರ್ ಪವರ್ ರಷ್ಯಾದಿಂದ ರೋಬೋಟ್ ಜಲಾಂತರ್ಗಾಮಿ ಯುದ್ಧ ನೌಕೆ

ಮಾನವರಹಿತ ಇಂತಹ ರೋಬೋಟ್ ಜಲಾಂತರ್ಗಾಮಿ ನೌಕೆಗಳ ನಿರ್ಮಾಣದೊಂದಿಗೆ ತರಬೇತಿ ವೆಚ್ಚವನ್ನು ಕಡಿಮೆ ಮಾಡಬಹುದಾಗಿದೆ.

ಪುತಿನ್ ಚುರುಕುಬುದ್ಧಿ; ಸೂಪರ್ ಪವರ್ ರಷ್ಯಾದಿಂದ ರೋಬೋಟ್ ಜಲಾಂತರ್ಗಾಮಿ ಯುದ್ಧ ನೌಕೆ

ಅಂತೆಯೇ ನೈಜ ಪರಿಸ್ಥಿತಿಯನ್ನು ಅವಲೋಕಿಸಿದಾಗ ಸಿಬ್ಬಂದಿ ರಹಿತ ಜಲಾಂತರ್ಗಾಮಿ ನೌಕೆಗಳು ಪ್ರಾಣ ಹಾನಿಯನ್ನುಂಟು ಮಾಡುವ ಭೀತಿ ಇರಲಾರದು.

ಪುತಿನ್ ಚುರುಕುಬುದ್ಧಿ; ಸೂಪರ್ ಪವರ್ ರಷ್ಯಾದಿಂದ ರೋಬೋಟ್ ಜಲಾಂತರ್ಗಾಮಿ ಯುದ್ಧ ನೌಕೆ

ಇದರ ನಿರ್ವಹಣಾ ಮತ್ತು ನವೀಕರಣಗೊಳಿಸುವ ವೆಚ್ಚವೂ ಕಡಿಮೆ ಆಗಿರಲಿದೆ ಎಂದು ರಷ್ಯಾದ ರುಬಿನ್ ಸೆಂಟ್ರಲ್ ಡಿಸೈನ್ ಬ್ಯುರೋ ವಿವರಿಸಿದೆ.

ಪುತಿನ್ ಚುರುಕುಬುದ್ಧಿ; ಸೂಪರ್ ಪವರ್ ರಷ್ಯಾದಿಂದ ರೋಬೋಟ್ ಜಲಾಂತರ್ಗಾಮಿ ಯುದ್ಧ ನೌಕೆ

ರೋಬೋಟ್ ಜಲಾಂತರ್ಗಾಮಿ ನೌಕೆಯ ಮೂಲಕ ಸಾಗರಾಳದಲ್ಲಿ ರಷ್ಯಾ ನಾವಿಕ ಸೇನೆಯ ಎಲ್ಲ ರೀತಿಯ ಬೇಡಿಕೆಗಳನ್ನು ಈಡೇರಿಸುವುದು ಗುರಿಯಾಗಿದೆ.

ಪುತಿನ್ ಚುರುಕುಬುದ್ಧಿ; ಸೂಪರ್ ಪವರ್ ರಷ್ಯಾದಿಂದ ರೋಬೋಟ್ ಜಲಾಂತರ್ಗಾಮಿ ಯುದ್ಧ ನೌಕೆ

40 ಟನ್ ಭಾರ ಹೊರುವ ಪುತಿನ್ ಅವರ ಜಲಾಂತರ್ಗಾಮಿ ನೌಕೆಯು 600 ಮೈಲು ವ್ಯಾಪ್ತಿಯಲ್ಲಿ 5 ನಾಟ್ ವೇಗದಲ್ಲಿ ಕಾರ್ಯಾಚರಣೆ ನಡೆಸಬಲ್ಲದ್ದು.

ಪುತಿನ್ ಚುರುಕುಬುದ್ಧಿ; ಸೂಪರ್ ಪವರ್ ರಷ್ಯಾದಿಂದ ರೋಬೋಟ್ ಜಲಾಂತರ್ಗಾಮಿ ಯುದ್ಧ ನೌಕೆ

ಅದೇ ಹೊತ್ತಿಗೆ ಭವಿಷ್ಯದಲ್ಲಿ ಈ ಮಹತ್ತರ ತಂತ್ರಜ್ಞಾನವನ್ನು ವಿದೇಶಿ ರಾಷ್ಟ್ರಗಳಿಗೆ ಮಾರಾಟ ಮಾಡುವ ಇರಾದೆಯನ್ನು ಹೊಂದಲಾಗಿದೆ. ಇದು ದೀರ್ಘ ಕಾಲ ಬಾಂಧವ್ಯ ಹೊಂದಿರುವ ಭಾರತದಂತಹ ದೇಶಗಳಿಗೆ ಪ್ರಯೋಜನವಾಗಲಿದೆ.

ಪುತಿನ್ ಚುರುಕುಬುದ್ಧಿ; ಸೂಪರ್ ಪವರ್ ರಷ್ಯಾದಿಂದ ರೋಬೋಟ್ ಜಲಾಂತರ್ಗಾಮಿ ಯುದ್ಧ ನೌಕೆ

ಅತಿ ಮುಂದುವರಿದ ನೂತನ ಸ್ಥಳಾನ್ವೇಷನಣೆಯ ಡ್ರೋನ್ ಬಿಡುಗಡೆ ಮಾಡಿರುವ ಬೆನ್ನಲ್ಲೇ ನೂತನ ರೋಬೋಟ್ ಜಲಾಂತರ್ಗಾಮಿ ನೌಕೆಯ ಘೋಷಣೆಯಾಗಿದೆ.

ಪುತಿನ್ ಚುರುಕುಬುದ್ಧಿ; ಸೂಪರ್ ಪವರ್ ರಷ್ಯಾದಿಂದ ರೋಬೋಟ್ ಜಲಾಂತರ್ಗಾಮಿ ಯುದ್ಧ ನೌಕೆ

ಬಹಳ ಹಿಂದಿನಿಂದಲೇ ಜಲಾಂತರ್ಗಾಮಿ ನೌಕೆಗಳ ಅಭಿವೃದ್ಧಿಯಲ್ಲಿ ರಷ್ಯಾ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ರಷ್ಯಾ ಅಧ್ಯಕ್ಷ ವ್ಲಾದಿಮರ್ ಪುತಿನ್ ವಿಶೇಷ ಆಸಕ್ತಿಯನ್ನು ತೋರುತ್ತಿರುವುದು ಇಲ್ಲಿ ಗಮನಾರ್ಹವೆನಿಸುತ್ತದೆ.

ಪುತಿನ್ ಚುರುಕುಬುದ್ಧಿ; ಸೂಪರ್ ಪವರ್ ರಷ್ಯಾದಿಂದ ರೋಬೋಟ್ ಜಲಾಂತರ್ಗಾಮಿ ಯುದ್ಧ ನೌಕೆ

ಕಳೆದ ವರ್ಷ ರಷ್ಯಾದ ಸಾಹಸ ಪ್ರಿಯ ಅಧ್ಯಕ್ಷರಾಗಿರುವ ಪುತಿನ್ ಆಗ್ನೇಯ ಯುರೋಪ್ ಮತ್ತು ಪಶ್ಚಿಮ ಏಷ್ಯಾದ ಮಧ್ಯೆ ಸ್ಥಿತಗೊಂಡಿರುವ ಕಪ್ಪು ಸಾಗರದಲ್ಲಿ (Black Sea) ಮೂರು ಸೀಟುಗಳ ಜಲಾಂತರ್ಗಾಮಿ ನೌಕೆಯಲ್ಲಿ ಸಾಗರದೊಳಗೆ ಧುಮುಕಿದ್ದರು.

ಪುತಿನ್ ಚುರುಕುಬುದ್ಧಿ; ಸೂಪರ್ ಪವರ್ ರಷ್ಯಾದಿಂದ ರೋಬೋಟ್ ಜಲಾಂತರ್ಗಾಮಿ ಯುದ್ಧ ನೌಕೆ

ರಷ್ಯಾದ ಜಿಯೋಗ್ರಾಫಿಕಲ್ ಸೊಸೈಟಿಯ 170ನೇ ವರ್ಷಾಚರಣೆಯ ಅಂಗವಾಗಿ ಪುತಿನ್ ವಿಶೇಷವಾಗಿ ಸಿದ್ಧಪಡಿಸಲಾದ ಜಲಾಂತರ್ಗಾಮಿ ನೌಕೆಯಲ್ಲಿ ಸಾಗರಕ್ಕಿಳಿದು ಪ್ರಾಚೀನ ಹಡಗುಗಳನ್ನು ಪರೀಶಿಲಿಸಿದ್ದರು.

ಪುತಿನ್ ಚುರುಕುಬುದ್ಧಿ; ಸೂಪರ್ ಪವರ್ ರಷ್ಯಾದಿಂದ ರೋಬೋಟ್ ಜಲಾಂತರ್ಗಾಮಿ ಯುದ್ಧ ನೌಕೆ

ಅಷ್ಟಕ್ಕೂ ರಷ್ಯಾ ಅಧ್ಯಕ್ಷರು ಇದೇ ಮೊದಲ ಬಾರಿಯೇನಲ್ಲ ಸಾಹಸ ಯಾತ್ರೆ ಹಮ್ಮಿಕೊಳ್ಳುತ್ತಿರುವುದು. ಈ ಮೊದಲು 2009ರಲ್ಲಿ ಜಲಾಂತರ್ಗಾಮಿ ನೌಕೆಯಲ್ಲಿ ಹಾಗೂ 2011ರಲ್ಲಿ ಸ್ಕೂಬಾ ಡೈವಿಂಗ್‌ ನಡೆಸಿದ್ದರು.

ವಿ.ಸೂ.: ಸಾಂದರ್ಭಿಕ ಚಿತ್ರಗಳ ಬಳಕೆ

Most Read Articles

Kannada
English summary
Russian unveils design of a submarine called Surrogat
Story first published: Wednesday, December 7, 2016, 10:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X