ಮೋದಿ ಮೇಕ್ ಇನ್ ಇಂಡಿಯಾ ಭಾಗವಾಗಿ ಸ್ಯಾಬ್ 'ಗ್ರಿಪನ್ ಇ' ಭಾರತಕ್ಕೆ

By Nagaraja

ಸ್ವೀಡನ್ ಮೂಲದ ರಕ್ಷಣಾ ಉದ್ಯಮ ಸಂಸ್ಥೆ ಸ್ಯಾಬ್ (Saab) 'ಮೇಕ್ ಇನ್ ಇಂಡಿಯಾ' ಯೋಜನೆಯ ಭಾಗವಾಗಿ ಮುಂದಿನ ಜನಾಂಗದ ಫೈಟರ್ ಯುದ್ಧ ವಿಮಾನಗಳನ್ನು ಭಾರತದಲ್ಲಿ ನಿರ್ಮಿಸಲಿದೆ.

ಈ ಸಂಬಂಧ ಹೇಳಿಕೆಯನ್ನು ಕೊಟ್ಟಿರುವ ಸ್ಯಾಬ್, ಮೇಕ್ ಇನ್ ಇಂಡಿಯಾದ ಭಾಗವಾಗಿ ಅತ್ಯಂತ ಶಕ್ತಿಶಾಲಿ 'ಗ್ರಿಪನ್ ಇ' ಯುದ್ಧ ವಿಮಾನದ ತಂತ್ರಜ್ಞಾನವನ್ನು ಭಾರತದ ಜೊತೆ ಹಂಚಿಕೊಳ್ಳಲಾಗುವುದು ಎಂದಿದೆ.

ಮೋದಿ ಮೇಕ್ ಇನ್ ಇಂಡಿಯಾ ಭಾಗವಾಗಿ ಸ್ಯಾಬ್ 'ಗ್ರಿಪನ್ ಇ' ಭಾರತಕ್ಕೆ

ವ್ಯೋಮಯಾನ ತಂತ್ರಜ್ಞಾನದಲ್ಲಿ ಅತಿ ನೂತನ ತಂತ್ರಜ್ಞಾನಗಳನ್ನು ಒಳಗೊಂಡಿರುವ ಗ್ರಿಪನ್ ಇ ಹಿಂದಿನಕ್ಕಿಂತಲೂ ಹೆಚ್ಚು ಶಕ್ತಿಶಾಲಿ ಎನಿಸಿಕೊಳ್ಳಲಿದೆ. ಇದು ಹೆಚ್ಚು ಯುದ್ಧ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ, ಸುಧಾರಿತ ವ್ಯಾಪ್ತಿ, ಮತ್ತಷ್ಟು ಶಕ್ತಿಶಾಲಿ ಎಂಜಿನ್ ಮತ್ತು ಹೆಚ್ಚು ಇಂಧನವನ್ನು ಸಾಗಿಸುವಷ್ಟು ಸಮರ್ಥವಾಗಿರಲಿದೆ.

ಮೋದಿ ಮೇಕ್ ಇನ್ ಇಂಡಿಯಾ ಭಾಗವಾಗಿ ಸ್ಯಾಬ್ 'ಗ್ರಿಪನ್ ಇ' ಭಾರತಕ್ಕೆ

ಆಕ್ಟಿವ್ ಎಲೆಕ್ಟ್ರಾನಿಕಲಿ ಸ್ಕಾನ್ಡ್ ಆರೇ (ಎಇಎಸ್ ಎ) ರಾಡಾರ್, ಇನ್ಪ್ರಾ ರೆಡ್ ಸರ್ಚ್ ಆಂಡ್ ಟ್ರ್ಯಾಂಕ್ (ಐಆರ್ ಎಸ್ ಟಿ), ಎಲೆಕ್ಟ್ರಾನಿಕ್ ವಾರ್ ಫೇರ್ (ಇಡಬ್ಲ್ಯು) ಸ್ಯೂಟ್ ಮತ್ತು ಡಾಟಾಲಿಂಕ್ ಅತ್ಯಾಧುನಿಕ ಸೆನ್ಸಾರ್ ತಂತ್ರಜ್ಞಾನಗಳನ್ನು ಒಳಗೊಂಡಿರಲಿದೆ.

ಮೋದಿ ಮೇಕ್ ಇನ್ ಇಂಡಿಯಾ ಭಾಗವಾಗಿ ಸ್ಯಾಬ್ 'ಗ್ರಿಪನ್ ಇ' ಭಾರತಕ್ಕೆ

ಪ್ರಸ್ತುತ ಸ್ವೀಡನ್ ಸೇರಿದಂತೆ ಐದು ರಾಷ್ಟ್ರಗಳಲ್ಲಿ ಗ್ರಿಪನ್ ತಂತ್ರಜ್ಞಾನವಿದೆ. ಇವುಗಳಲ್ಲಿ ದಕ್ಷಿಣ ಆಫ್ರಿಕಾ, ಜೆಕ್ ಗಣರಾಜ್ಯ, ಹಂಗೇರಿ ಮತ್ತು ಥಾಯ್ಲೆಂಡ್ ಸೇರಿದೆ. ಬ್ರೆಜಿಲ್ ಸಹ ಸ್ಯಾಬ್ ತಂತ್ರಜ್ಞಾನ ಪಡೆಯಲು ಉತ್ಸುಕತೆ ತೋರಿದೆ.

ಮೋದಿ ಮೇಕ್ ಇನ್ ಇಂಡಿಯಾ ಭಾಗವಾಗಿ ಸ್ಯಾಬ್ 'ಗ್ರಿಪನ್ ಇ' ಭಾರತಕ್ಕೆ

2011ರಲ್ಲಿ ಭಾರತೀಯ ವಾಯುಪಡೆಯ ಜೊತೆಗಿನ ಬಹು ಪಾತ್ರಧಾರಿ ಯುದ್ಧ ವಿಮಾನ ಒಪ್ಪಂದವನ್ನು ಗೆಲ್ಲುವಲ್ಲಿ ಸ್ಯಾಬ್ ವಿಫಲವಾಗಿತ್ತು. ಬಳಿಕ ಇದನ್ನು ಫ್ರಾನ್ಸ್ ನ ದಸ್ಸಾಲ್ಟ್ ಎವಿಯೇಷನ್ ಗೆ ನೀಡಲಾಗಿತ್ತು.

ಮೋದಿ ಮೇಕ್ ಇನ್ ಇಂಡಿಯಾ ಭಾಗವಾಗಿ ಸ್ಯಾಬ್ 'ಗ್ರಿಪನ್ ಇ' ಭಾರತಕ್ಕೆ

ಭಾರತದಲ್ಲಿ ನೆಲೆ ಸ್ಥಾಪಿಸಲು ಯೋಜನೆ ಹೊಂದಿರುವ ಸ್ಯಾಬ್, ಮುಂದಿನ 100 ವರ್ಷಗಳಿಗೆ ವ್ಯೋಮಯಾನ ಸಾಮರ್ಥ್ಯವನ್ನು ಹೆಚ್ಚಿಸುವ ಇರಾದೆ ಹೊಂದಿದೆ. ಭಾರತದಲ್ಲೇ ದೇಶೀಯವಾಗಿ ನಿರ್ಮಾಣವಾಗುವ ತೇಜಸ್ ವಿಮಾನ ಅಭಿವೃದ್ಧಿಗೂ ನೆರವಾಗಲು ಉತ್ಸುಕತೆ ವ್ಯಕ್ತಪಡಿಸಿದೆ.

ಮೋದಿ ಮೇಕ್ ಇನ್ ಇಂಡಿಯಾ ಭಾಗವಾಗಿ ಸ್ಯಾಬ್ 'ಗ್ರಿಪನ್ ಇ' ಭಾರತಕ್ಕೆ

ಸ್ಯಾಬ್ ಅನಾರಣಗೊಳಿಸಿರುವ ಅತ್ಯಾಧುನಿಕ ಗ್ರಿಪನ್ ಇ ಪ್ರೊಟೊಟೈಪ್ 39-8 'ಸ್ಮಾರ್ಟ್ ಫೈಟರ್', ಪ್ರಮುಖವಾಗಿಯೂ ಲಾಕ್ ಹೀಡ್ ಮಾರ್ಟಿನ್ ಎಫ್-35 ಜಂಟಿ ಫೈಟರ್ ವಿಮಾನಕ್ಕೆ ಎದುರಾಳಿಯಾಗಿರಲಿದೆ.

ಮೋದಿ ಮೇಕ್ ಇನ್ ಇಂಡಿಯಾ ಭಾಗವಾಗಿ ಸ್ಯಾಬ್ 'ಗ್ರಿಪನ್ ಇ' ಭಾರತಕ್ಕೆ

ಹಳೆಯ ಜನಾಂಗಕ್ಕಿಂತಲೂ ದೊಡ್ಡದಾಗಿರುವ ಸ್ಯಾಬ್ ಗ್ರಿಪನ್ ಇ, ಶಕ್ತಿಶಾಲಿ ಎಂಜಿನ್ ಮತ್ತು ಸುಧಾರಿತ ರಾಡಾರ್ ವ್ಯವಸ್ಥೆಗಳನ್ನು ಪಡೆದಿದೆ. ಇದು ಅನೇಕ ಅಪಾಯಗಳನ್ನು ಟ್ರ್ಯಾಕ್ ಮಾಡಬಹುದಾಗಿದೆ.

ಮೋದಿ ಮೇಕ್ ಇನ್ ಇಂಡಿಯಾ ಭಾಗವಾಗಿ ಸ್ಯಾಬ್ 'ಗ್ರಿಪನ್ ಇ' ಭಾರತಕ್ಕೆ

15.2 ಮೀಟರ್ ಉದ್ದದ ದೇಹ ಹಾಗೂ 8.6 ಮೀಟರ್ ಅಗಲವಾಗ ರೆಕ್ಕೆಗಳನ್ನು ಇದು ಪಡೆದಿದೆ. ಅಲ್ಲದೆ 16,500 ಕೀ.ಮೀ.ಗಳಷ್ಟು ಟೇಕ್ ಆಫ್ ಭಾರವನ್ನು ಹೊರುವ ಸಾಮರ್ಥ್ಯ ಹೊಂದಿದೆ.

ಮೋದಿ ಮೇಕ್ ಇನ್ ಇಂಡಿಯಾ ಭಾಗವಾಗಿ ಸ್ಯಾಬ್ 'ಗ್ರಿಪನ್ ಇ' ಭಾರತಕ್ಕೆ

ಸ್ಯಾಬ್ ಗ್ರಿಪನ್ ಇ, ಮ್ಯಾಕ್ 2 ವೇಗಕ್ಕಿಂತ ಹೆಚ್ಚು ಅಂದರೆ ಗಂಟೆಗೆ 2450 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಅಲ್ಲದೆ ಹೆಚ್ಚು ಯುದ್ಧ ಸಾಮಾಗ್ರಿಗಳು ಹೊತ್ತೊಯ್ಯುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಮೋದಿ ಮೇಕ್ ಇನ್ ಇಂಡಿಯಾ ಭಾಗವಾಗಿ ಸ್ಯಾಬ್ 'ಗ್ರಿಪನ್ ಇ' ಭಾರತಕ್ಕೆ

ಗೈಡಡ್ ಗ್ಲೈಡ್ ಬಾಂಬ್, ಲಾಂಗ್ ರೇಜ್ ಏರ್-ಟು-ಏರ್ ಮಿಸೈಲ್, ಹೆವಿ ಆ್ಯಂಟಿ-ಶಿಪ್ ಶಸ್ತ್ರಾಸ್ತ ಮತ್ತು ಸಮುದ್ರ ಮತ್ತು ನೆಲವನ್ನು ಗುರಿ ಮಾಡಬಹಬಲ್ಲ 27ಎಂಎಂ ಮೌಸರ್ ಬಿಕೆ27 ಗನ್ ಹೊತ್ತೊಯ್ಯಲಿದೆ.

ಮೋದಿ ಮೇಕ್ ಇನ್ ಇಂಡಿಯಾ ಭಾಗವಾಗಿ ಸ್ಯಾಬ್ 'ಗ್ರಿಪನ್ ಇ' ಭಾರತಕ್ಕೆ

ಇತರೆ ದೀರ್ಘ ವ್ಯಾಪ್ತಿ ಯುದ್ಧ ವಿಮಾನಗಳಂತೆ ಡೆಲ್ಟಾ ವಿಂಗ್ ಮತ್ತು ಫ್ಲೈ-ಬೈ-ವೈರ್ ಫ್ಲೈಟ್ ಏವಿಯಾನಿಕ್ಸ್ ತಂತ್ರಗಾರಿಕೆಯೂ ಇದರಲ್ಲಿದೆ. ಅಲ್ಲದೆ ಹೆಚ್ಚಿನ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ.

Most Read Articles

Kannada
Read more on ವಿಮಾನ plane
English summary
Saab's Gripen E Joins The Next Generation Fighter War
Story first published: Wednesday, May 25, 2016, 10:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X