ಅಬ್ಬಾ!! ಕನ್ನಡ ಚಿತ್ರರಂಗದ ಸ್ಟಾರ್‌‌‌‌ಗಳ ಕಾರುಗಳು ಕಣ್ಣು ಕುಕ್ಕುವಂತಿವೆ

Written By:

ಕಾರು ನಮಗೆಲ್ಲರಿಗೂ ಒಂದು ಆಕರ್ಷಣೆ ವಸ್ತು ಎಂಬುದು ಸತ್ಯ ಸಂಗತಿ, ಅದರಲ್ಲಿಯೂ ಸೆಲಿಬ್ರೆಟಿಗಳ ಕಾರುಗಳೆಂದರೆ ಎಲ್ಲಿಲ್ಲದ ಆಸಕ್ತಿ. ಕನ್ನಡ ಚಿತ್ರರಂಗದ ಸ್ಟಾರ್ ನಟರ ಕಾರುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ದರ್ಶನ್ ತೂಗುದೀಪ :

ಕನ್ನಡದ ಪ್ರತಿಯೊಬ್ಬ ಸ್ಟಾರ್ ಕೂಡ ಬೆಲೆಬಾಳುವ ಐಷಾರಾಮಿ ಕಾರುಗಳನ್ನು ಹೊಂದಿದ್ದು, ಅದರಲ್ಲಿಯೂ ಚಾಲೆಂಜಿಂಗ್ ಸ್ಟಾರ್ ಕನ್ನಡ ಚಿತ್ರರಂಗದ ಪ್ರೀತಿಯ ದಾಸ ಎನ್ನಿಸಿಕೊಂಡಿರುವ ದರ್ಶನ್ ತೂಗುದೀಪ ಅತ್ಯಂತ ಬೆಲೆಬಾಳುವ ಕಾರುಗಳನ್ನು ಹೊಂದಿರುವ ಸ್ಟಾರ್ ಪಟ್ಟಿಯಲ್ಲಿ ಮೊದಲು ನಿಲ್ಲುತ್ತಾರೆ.

ಪ್ರಾಣಿ ಪಕ್ಷಿ ಪ್ರಿಯರು ಎನ್ನಿಸಿಕೊಂಡಿರುವ ದರ್ಶನ್ ಸದ್ಯ ತಮ್ಮ ಬಳಿ ಬೆಲೆಬಾಳುವ ಹಮ್ಮರ್ ಎಚ್3 ಕಾರು ಹೊಂದಿದ್ದು, ಸದ್ಯ ಕನ್ನಡ ಚಿತ್ರರಂಗದಲ್ಲಿ ಹಮ್ಮರ್ ಹೊಂದಿರುವ ಏಕೈಕ ನಟ ದರ್ಶನ್.

ಹಮ್ಮರ್ ಕಾರಿನ ಜೊತೆಗೆ ಆಡಿ ಎ6, ಕೆಂಪು ಬಣ್ಣದ ಆರ್8, ಟೊಯಾಟಾ ಫಾರ್ಚುನರ್, ರೇಂಜ್ ರೋವರ್, ತಮ್ಮ ಧರ್ಮ ಪತ್ನಿ ಉಡುಗೊರೆಯಾಗಿ ನೀಡಿದ್ದ ಜಾಗ್ವಾರ್, ಸಂದೇಶ್ ನಾಗರಾಜ್ ಉಡುಗೊರೆ ಕೊಟ್ಟ 'ಪೋರ್ಷೆ' ಮತ್ತು ತಮ್ಮ ತಂದೆಯವರ ಹಳೆ ಅಂಬಾಸಿಡಾರ್ ಕಾರು ತಮ್ಮ ಬಳಿ ಹೊಂದಿದ್ದಾರೆ.

ಕಿಚ್ಚ ಸುದೀಪ್ :

ಇನ್ನು ಕನ್ನಡ ಚಿತ್ರರಂಗದ ಹೆಮ್ಮೆಯ ಕುವರ, ದಕ್ಷಿಣ ಭಾರತದ ಜನಪ್ರಿಯ ನಟ ಕಿಚ್ಚ ಸುದೀಪ ಅವರು ಕಾರುಗಳ ಬಗ್ಗೆ ಮೃಧು ಧೋರಣೆ ಹೊಂದಿದ್ದಾರೆ.

 

ಕಿಚ್ಚ ಸುದೀಪ್ ಬಳಿ ರೇಂಜ್ ರೋವರ್ ಎಸ್ ಯುವಿ, ಫೋರ್ಡ್ ಕಂಪನಿಯ ಎಂಡೇವರ್,ಫಾರ್ಚುನರ್,  ಜಾಗ್ವಾರ್ ಎಕ್ಸ್ಎಲ್ ಎಲ್, ಬಿಎಂಡಬ್ಲ್ಯೂ ಎಕ್ಸ್6, ಸ್ಪೋರ್ಟ್ ಝೆಡ್4 ಕಾರುಗಳನ್ನು ಹೊಂದಿದ್ದಾರೆ.

ಪುನೀತ್ ರಾಜಕುಮಾರ್ :

ರಾಜಕುಮಾರ್ ಅವರ ಕಿರಿಯ ಪುತ್ರ, ಕನ್ನಡ ಚಿತ್ರರಂಗದ ರಾಜರತ್ನ ಪುನೀತ್ ರಾಜಕುಮಾರ್ ಅವರ ಮನೆಯಲ್ಲಿ ಕಾರುಗಳ ಅತಿ ದೊಡ್ಡ ಗ್ಯಾರೇಜು ಹೊಂದಿದ್ದು, ಸದ್ಯ ಅವರ ಬಳಿ ಹೊಚ್ಚ ಹೊಸ ಮಾದರಿಯ ರೇಂಜ್ ರೋವರ್ Rogue, ಆಡಿ ಕ್ಯೂ7, ಬಿಎಂಡಬ್ಲ್ಯೂ ಎಕ್ಸ್6, ಜಾಗ್ವಾರ್ ಎಕ್ಸ್ಎಫ್ ಕಾರುಗಳಿದ್ದು, ಸಾಮಾನ್ಯವಾಗಿ ತಿರುಗಾಡಲು ತಮ್ಮ ನೆಚ್ಚಿನ ಟೊಯಾಟಾ ಫಾರ್ಚುನರ್ ಕಾರನ್ನು ಉಪಯೋಗಿಸುತ್ತಾರೆ.

 

ಉಪೇಂದ್ರ :

ಚಾಣಾಕ್ಷ ನಿರ್ದೇಶಕ ಮತ್ತು ನಟ ಉಪೇಂದ್ರ ಕಾರುಗಳ ಬಗ್ಗೆ ಎಲ್ಲಾ ನಟರಂತೆ ಹೆಚ್ಚು ಒಲವು ಹೊಂದಿಲ್ಲದಿದ್ದರೂ ತಮ್ಮ ಪತ್ನಿ ಹುಟ್ಟುಹಬ್ಬದಂದು ಉಡುಗೊರೆಯಾಗಿ ನೀಡಿದ ಜಾಗ್ವಾರ್ ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಇನ್ನು ದಿನಬಳಕೆಗೆ ಕ್ರೀಡಾ ಬಳಕೆಯ ಮಿಟ್ಸುಬಿಸಿ ಪಜೆರೊ ಎಸ್ಎಫ್ಎಕ್ಸ್ ಕಾರನ್ನು ಉಪಯೋಗಿಸುತ್ತಾರೆ.

ಶಿವರಾಜ್ ಕುಮಾರ್

ಕನ್ನಡ ಚಿತ್ರರಂಗದ ನೆಚ್ಚಿನ ಜೋಗಿ ಶಿವಣ್ಣ, ಸಿಂಪಲ್ ಶಿವಣ್ಣ ಕಾರುಗಳ ವಿಚಾರದಲ್ಲಿಯೂ ಸಿಂಪಲ್ ಎನ್ನಬಹುದು, ತನ್ನ ತಮ್ಮನ ಬಳಿ ಇರುವ ಐಷಾರಾಮಿ ಕಾರುಗಳಂತೆ ತಮ್ಮ ಬಳಿ ಹೆಚ್ಚಿನ ಕಾರುಗಳನ್ನು ಇಟ್ಟುಕೊಳ್ಳದ ಶಿವಣ್ಣ, ಸೊನಾಟಾ, ಟೊಯಾಟಾ ಫೋರ್ಟ್, ಫಾರ್ಚುನರ್, ಹ್ಯುಂ‌‌‌‌‌‌‌‌‌‌‌‌‌‌‌‌‌‌‌‌‌‌ಡೈ ಕಾರುಗಳನ್ನು ಹೊಂದಿದ್ದಾರೆ.

ಯಶ್

ಯುವ ಜನತೆಯ ನೆಚ್ಚಿನ ಅಣ್ತಮ್ಮ ರಾಕಿಂಗ್ ಸ್ಟಾರ್ ಯಶ್ ಕಾರುಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದು, ಅತಿ ಹೆಚ್ಚು ಸಂಭಾವನೆ ಪಡೆಯುವ ಈ ನಟ ತಮ್ಮ ಬಳಿ ಆಡಿ ಎ4 ಮತ್ತು ಎ7 ಹೊಂದಿದ್ದು, ಪಜೆರೊ ಸ್ಪೋರ್ಟ್, ಮರ್ಸಿಡಿಸ್ ಜಿಎಲ್ 350 ಮತ್ತು ಹೊಸ ರೇಂಜ್ ರೋವರ್ ಎವೋಕ್ ಕಾರು ಹೊಂದಿದ್ದಾರೆ.

ಗಣೇಶ್
ಸ್ಯಾಂಡಲ್‌ವುಡ್ ಗೋಲ್ಡನ್ ಸ್ಟಾರ್ ಗಣೇಶ್ ಮರ್ಸಿಡೀಸ್ ಬೆಂಜ್ ಕಾರನ್ನು ಹೊಂದ್ದಿದಾರೆ.

ರಕ್ಷಿತ್ ಶೆಟ್ಟಿ :

ಅತಿ ಹೆಚ್ಚು ಬೇಡಿಕೆಯ ನಟ, ಕಿರಿಕ್ ಪಾರ್ಟಿ ಹೀರೋ ರಕ್ಷಿತ್ ಶೆಟ್ಟಿ ತಮ್ಮ ನೆಚ್ಚಿನ ಆಡಿ ಕಾರಿನಲ್ಲಿ ಅತಿ ಹೆಚ್ಚು ಬಾರಿ ಕಾಣಿಸಿಕೊಂಡಿದ್ದಾರೆ.

 

ದುನಿಯಾ ವಿಜಯ್ :

ಕನ್ನಡ ಚಿತ್ರರಂಗದ ಕರಿ ಚಿರತೆ ದುನಿಯಾ ವಿಜಯ್ ಎಂದಿನಂತೆ ತಮಗಿಷ್ಟವಾದ ರೇಂಜ್ ರೋವರ್ ಕಾರಿನ ಒಡೆಯರಾಗಿದ್ದಾರೆ, ರೇಂಜ್ ರೋವರ್ ಕೊಳ್ಳುವುದಕ್ಕೂ ಮೊದಲು ಪಜೆರೊ ಸ್ಪೋರ್ಟ್ಸ್ ಕಾರನ್ನು ಹೊಂದಿದ್ದರು.

 

Story first published: Friday, March 24, 2017, 19:15 [IST]
English summary
sandalwood stars are very much passionate about the cars. every stars from kannada film industry are having laxury cars.
Please Wait while comments are loading...

Latest Photos