ಅಸ್ವಸ್ಥ ಡ್ರೈವರ್‌ ಬದಲು ತಾನೇ ಬಸ್ ಓಡಿಸಿದ ಮುಸ್ಲಿಂ ವಿದ್ಯಾರ್ಥಿನಿ..!!

Written By:

ಶಾಲೆಯಿಂದ ಹಿಂದಿರುಗುವಾಗ ಬಸ್ ಚಾಲಕನೊಬ್ಬ ಅಸ್ವಸ್ಥಗೊಂಡಿದ್ದ ಈ ಹಿನ್ನೆಲೆ ಶಾಲಾ ಬಾಲಕಿಯೊಬ್ಬಳು ತಾನೇ ಬಸ್ ಚಾಲನೆ ಮಾಡಿರುವ ಘಟನೆ ನಡೆದಿದೆ.

ಘಟನೆಯ ಹಿನ್ನೆಲೆ

ಶಾಲೆಯಿಂದ ಹಿಂದಿರುಗುವಾಗ ಬಸ್ ಡ್ರೈವರ್ ಅಸ್ವಸ್ಥಗೊಂಡಿದ್ದನ್ನು ನೋಡಿದ ವಿದ್ಯಾರ್ಥಿನಿಯೂ ತಾನೇ ಬಸ್ ಚಾಲನೆ ಮಾಡುವುದಾಗಿ ಹೇಳಿದ್ದಾಳೆ.

ಮೊದಮೊದಲು ಬಾಲಕಿಯ ನಿರ್ಧಾರಕ್ಕೆ ಬಸ್ ಡ್ರೈವರ್ ಕೂಡಾ ತಬ್ಬಿಬ್ಬಾಗಿದ್ದು, ಬಾಲಕಿಯ ಡ್ರೈವಿಂಗ್ ಕೌಶಲ್ಯ ಕಂಡು ಬೆರಗಾಗಿದ್ದಾನೆ.

ದುಬೈನಲ್ಲಿ ಘಟನೆ

ಅಂದಹಾಗೆ ಇದೆಲ್ಲಾ ನಡೆದಿದ್ದು ದುಬೈನಲ್ಲಿ. ಸಾಹಸಿ ಬಾಲಕಿಯ ಕಾರ್ಯಕ್ಕೆ ಇದೀಗ ಎಲ್ಲಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಕೇವಲ ಬಸ್ ಚಾಲನೆ ಮಾಡುವುದಷ್ಟೇ ಅಲ್ಲದೇ ಅಸ್ವಸ್ಥ ಚಾಲಕನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಮಾನವೀತೆ ಕೂಡಾ ಮೆರೆದಿದ್ದಾಳೆ.

ಘಟನೆ ಕುರಿತಂತೆ ಶಾಲಾ ಮಂಡಳಿಗೆ ವಿಷಯ ತಿಳಿಸಿರುವ ಬಸ್ ಚಾಲಕ, ವಿದ್ಯಾರ್ಥಿಯ ಸಾಹಸ ಕಾರ್ಯಕ್ಕೆ ಕೃತಜ್ಞತೆ ತಿಳಿಸಿದ್ದಾನೆ.

ಬಸ್ ಚಾಲನೆ ಮಾಡಿ ಡ್ರೈವರ್ ಪ್ರಾಣ ಉಳಿಸಿದ ಕಾರ್ಯಕ್ಕೆ ವಿದ್ಯಾರ್ಥಿನಿಯನ್ನು ಸನ್ಮಾಸಿರುವ ಶಾಲಾ ಆಡಳಿತ ಮಂಡಳಿಯು, ಮಾನವೀಯ ಕಾರ್ಯಗಳನ್ನು ಮುಂದುವರೆಸುವಂತೆ ಪ್ರೋತ್ಸಾಹಿಸಿದೆ.

ಹೇಲ್ ವಿಶ್ವವಿದ್ಯಾನಿಲಯದ ಅಶ್ವಾಕ್ ಅಲ್ ಶಮರಿಯೇ ಬಸ್ ಚಾಲಕನ ಪ್ರಾಣ ಉಳಿಸಿದ ವಿದ್ಯಾರ್ಥಿನಿ.

ವಿದ್ಯಾರ್ಥಿನಿಯ ಸಾಹಸ ಕಾರ್ಯದ ಕುರಿತಂತೆ ಆನ್ಹಾ ಆನ್ಲೈನ್ ಪತ್ರಿಕೆಯಲ್ಲಿ ವರದಿಯಾಗಿದ್ದು, ಅಶ್ವಾಕ್ ಅಲ್ ಶಮರಿ ಅವರ ಧೈರ್ಯದ ಕಾರ್ಯವನ್ನು ಹಾಡಿಹೊಗಳಿದೆ.

ಇನ್ನು ಅಶ್ವಾಕ್ ಅಲ್ ಶಮರಿ ಓದುತ್ತಿರುವ ಶಾಲೆಯಲ್ಲಿ ತುರ್ತು ಸೇವೆಗಳು ಮತ್ತು ಪ್ರಥಮ ಚಿಕಿತ್ಸೆಯನ್ನು ನಡೆಸುವ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ.

ಇದರ ಪ್ರೇರಣೆಯಿಂದಲೇ ಅಶ್ವಾಕ್ ಬಸ್ ಚಾಲನೆ ಮಾಡಿ ಬಸ್ ಚಾಲಕನ ಜೀವ ಉಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ.

ಇದಷ್ಟೇ ಅಲ್ಲ ಇಂತಹ ಹಲವಾರು ಸಾಹಸ ಕಾರ್ಯಗಳನ್ನು ಮಾಡಿರುವ ಅಶ್ವಾಕ್, ಈ ಹಿಂದೆಯೂ ಹತ್ತಾರು ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಿದ್ದಾಳೆ.

ಆದ್ರೆ ಅದೇನೆ ಇರಲಿ ತುರ್ತುಸಂದರ್ಭದಲ್ಲಿ ಬಸ್ ಚಾಲನೆ ಮಾಡಿ, ಡ್ರೈವರ್ ಜೀವ ಉಳಿಸಿದ ಅಶ್ವಾಕ್ ಕಾರ್ಯವನ್ನು ಪ್ರತಿಯೊಬ್ಬರು ಮೆಚ್ಚುವಂತದ್ದೇ.

Read more on ಬಸ್ bus
English summary
A girl in Saudi Arabia recently helped save the life of a bus driver by driving the bus herself and averted an accident.
Please Wait while comments are loading...

Latest Photos